Keshav Prasad B Column: ವೇದೋಪನಿಷತ್ತುಗಳ ಸ್ವಾರಸ್ಯಗಳು

ನಾರಾಯಣ ಯಾಜಿಯವರ ಅಂಕಣಗಳನ್ನು ಒಳಗೊಂಡಿರುವ ನೂತನ ಕೃತಿಯ ಹೆಸರು ‘ಧವಳ ಧಾರಿಣಿ’. ಇದಕ್ಕೆ ಹರೀಶ್ ಕೇರ ಅವರ ಸೊಗಸಾದ ಮುನ್ನುಡಿಯಿದೆ. ಇದು ಅಂಕಣ ಬರಹಗಳಾದರೂ

image-cada851c-27cc-4179-9459-048b1f877236.jpg
Profile Ashok Nayak January 12, 2025
ಕೇಶವ ಪ್ರಸಾದ್ ಬಿ. ವೇದೋಪನಿಷತ್ತುಗಳ ಸ್ವಾರಸ್ಯಗಳ ಜತೆಯಲ್ಲೇ, ನಮ್ಮ ದೇಶದ ಜ್ಞಾನ, ಪರಂಪರೆಯ ಕುರಿತು ಇಲ್ಲಿನಬರಹಗಳು ಬೆಳಕು ಚೆಲ್ಲುತ್ತವೆ. ಅಂಕಣಕಾರ ನಾರಾಯಣ ಯಾಜಿಯವರು ಬಹು ಮೂಲಗಳಿಂದ ಜ್ಞಾನವನ್ನು ಪಡೆಯುತ್ತಾ, ಅದನ್ನು ಓದುಗರಿಗೆ ಸಕಾಲಿಕವಾಗಿ ರಸವತ್ತಾಗಿ ನೀಡುತ್ತಾರೆ. ಬ್ಯಾಂಕಿಂಗ್, ಷೇರು, ಮ್ಯೂಚುವಲ್ ಫಂಡ್‌ಗಳಿಂದ ವೇದೋಪನಿಷತ್ತು, ಪುರಾಣಾದಿಗಳ ತನಕ ಅವರ ಲೇಖನಗಳು ವೈವಿಧ್ಯಮಯ. ಹಣಕಾಸು ಜಗತ್ತಿನಲ್ಲೊಂದು ಮಾತು ಹೀಗಿದೆ- ಎಲ್ಲ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿಡಬೇಡಿ, ಒಳ್ಳೆಯ ರಿಟನ್ ಸಿಗುವುದಿಲ್ಲ. ಅದೇ ರೀತಿ ನಾರಾಯಣ ಯಾಜಿಯವರ ಸಾಹಿತ್ಯ ಕೃಷಿ ಒಂದೇ ವಿಷಯಕ್ಕೆ ಸೀಮಿತವಾಗಿಲ್ಲ. ಅವರ ಜತೆಗಿನ ಮಾತುಕತೆಯೂ ಸ್ವಾರಸ್ಯಗಳ ಹೂರಣ. ನಾರಾಯಣ ಯಾಜಿಯವರ ಅಂಕಣಗಳನ್ನು ಒಳಗೊಂಡಿರುವ ನೂತನ ಕೃತಿಯ ಹೆಸರು ‘ಧವಳ ಧಾರಿಣಿ’. ಇದಕ್ಕೆ ಹರೀಶ್ ಕೇರ ಅವರ ಸೊಗಸಾದ ಮುನ್ನುಡಿಯಿದೆ. ಇದು ಅಂಕಣ ಬರಹಗಳಾದರೂ ಇದಕ್ಕೆ ಸಾಹಿತ್ಯದ ಸ್ಪರ್ಶವಿದೆ. ಇಲ್ಲಿ ಸಮಕಾಲೀನತೆಯನ್ನು ಮೀರಿ ನಿಲ್ಲಬಲ್ಲ ಸಾರ್ವತ್ರಿಕತೆಯನ್ನು ಗಮನಿಸಬಹುದು. ‘ವೇದ, ಉಪನಿಷತ್ತು, ಪುರಾಣ, ಇತಿಹಾಸಗಳು ನನ್ನ ಪಾಲಿಗೆ ಹೊತ್ತು ಕಳೆಯುವ ಸಾಧನವಲ್ಲ. ಅದರಲ್ಲಿರುವತತ್ತ್ವಗಳು ಮನುಷ್ಯನ ಬದುಕಿಗೆ ತೋರುವ ದಾರಿ ದೀವಿಗೆಗಳು’ ಎಂದು ನಂಬಿದವ ನಾನು ಎಂದು ನಾರಾಯಣ ಯಾಜಿಯವರು ವಿನಮ್ರತೆಯಿಂದ ಪ್ರಸ್ತಾಪಿಸುತ್ತಾರೆ. ಭಗವದ್ಗೀತೆ, ಉಪನಿಷತ್ತು, ಭಾಗವತಗಳನ್ನು ಓದಿದರೆ, ಅದರಲ್ಲಿ ಅಡಕವಾಗಿರುವ ಸಂದೇಶಗಳು ಎಂಥ ಮಾನವನನ್ನೂ ಉದ್ಧರಿಸಬಲ್ಲುದು. ಚೈತನ್ಯಶಾಲಿ, ಕ್ರಿಯಾಶೀಲ ಮತ್ತು ಸಮಗ್ರ ವ್ಯಕ್ತಿತ್ವವನ್ನೇ ಕಡೆದು ನಿಲ್ಲಿಸಬಲ್ಲುದು. ಅಂಥ ಪ್ರೇರಣೆಯನ್ನು ಸನಾತನ ಸಾಹಿತ್ಯ ನೀಡುವು ದರಿಂದಲೇ ಅವುಗಳು ಸಾರ್ವಕಾಲಿಕವಾಗಿವೆ. ನಿರ್ವಿಕಲ್ಪ ಉಪಾಸನೆಯ ಮಾರ್ಗ: ಗಣಪತಿ, ಅಳುವ ಇಳೆಯ ಉಳಿಸಿದ ಕೃಷ್ಣಾವತರಣ, ಜಗದ್ವಂದ್ವನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ ದೇವಕಿ, ವೇದಾಂತ ಆಧಾರಿತ ಸಮಾಜವಾದವನ್ನು ಕೊಟ್ಟ ದಾರ್ಶನಿಕ, ದುಷ್ಟವಿನಾಶಿನಿ ದುರ್ಗೆ, ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ..ಹೀಗೆ ಇಪ್ಪತ್ತೈದು ಲೇಖನಗಳು ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತವೆ. ಶಂಕರಾಚಾರ್ಯರ ಜೀವನ ಮತ್ತು ಗಹನ ವಿಚಾರಗಳ ಬಗ್ಗೆ ಸರಳವಾಗಿ ಯಾಜಿಯವರು ವಿವರಿಸುತ್ತಾರೆ-ಸನಾತನ ಧರ್ಮವನ್ನು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ತಳಹದಿಯ ಮೇಲೆ ಪುನಃಸ್ಥಾಪಿಸಿ ದವರು ಶಂಕರಾಚಾರ್ಯರು. ರಾಜಾಶ್ರಯ ತಪ್ಪಿದ ಧರ್ಮ ರಕ್ಷಣೆಯ ಹೊಣೆಯನ್ನು ನಾಲ್ಕುಆಮ್ನಾಯಗಳ ಮೂಲಕ ಮಠಗಳಿಗೆ ನೀಡಿದರು.ಧರ್ಮಕ್ಕೆ ಒಂದು ಸಾಂಕ ರೂಪವನ್ನು ಕೊಟ್ಟಿರುವುದು ಶಂಕರರಹಿರಿಮೆ. ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ, ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ ಎಂಬುದನ್ನು ತೋರಿಸಿಕೊಟ್ಟವರು. ಮಾನವ ಪಾಪದ ಕೂಸು ಎನ್ನುವ ಕಲ್ಪನೆಯು ಗಾಢವಾಗಿದ್ದ ಪಾಶ್ಚಾತ್ಯ ಸಿದ್ಧಾಂತಿಗಳಿಗೆ ಅದ್ವೈತದ ತುರೀಯವಾದ ಜೀವವೇ ಬ್ರಹ್ಮ ಎಂಬುದು ಅರ್ಥವಾಗದ ಸಂಗತಿ ಎಂದು ಮನೋಜ್ಞವಾಗಿ ವಿವರಿಸಿದ್ದಾರೆ ನಾರಾಯಣ ಯಾಜಿ. ಪುಸ್ತಕದುದ್ದಕ್ಕೂ ಭಾರತದ ಭವ್ಯ ಇತಿಹಾಸ, ಸಂಸ್ಕೃತಿ, ಜ್ಞಾನ ಪರಂಪರೆ, ರಾಷ್ಟ್ರೀಯತೆಯ ಬಗ್ಗೆ ಲೇಖನಗಳು ಬೆಳಕು ಚೆಲ್ಲುತ್ತವೆ. ಅದನ್ನು ಓದಿಕೊಳ್ಳುವುದೇ ಸ್ಪೂರ್ತಿಯ ಸೆಲೆ. ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ