ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MarilingaGowda Malipatil: ಕೈ ಕೊಡುತ್ತಿರುವ ಹೃದಯ...

ಆರೋಗ್ಯವಂತರಾಗಿಯೇ ಇರುವ ಎಳೆಯ ಪ್ರಾಯದವರನ್ನೂ ಜವರಾಯ ಕೈ ಬೀಸಿ ಕರೆಯುತ್ತಿದ್ದಾ ನೆ. ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಯುವಜನರ ಸಂಖ್ಯೆ ಕಳವಳ ಮೂಡಿಸುವಷ್ಟು ಹೆಚ್ಚಾಗಿದೆ. 25ರ ಹರೆಯದ ವರನೊಬ್ಬ ತನ್ನ ಮದುವೆಯ ಶಾಸ್ತ್ರಗಳು ನಡೆಯುತ್ತಿರುವಾಗಲೇ ಮೃತಪಟ್ಟ ಎಂದರೆ ಅದಕ್ಕಿಂತ ದುರ್ದೈವವಿದೆಯೇ? ಹಿಂದೆಲ್ಲಾ ಅಕಾಲಿಕ ಸಾವುಗಳಿಗೆ ಸ್ಪಷ್ಟ ಕಾರಣಗಳಿರುತ್ತಿದ್ದವು.

ಕೈ ಕೊಡುತ್ತಿರುವ ಹೃದಯ...

Profile Ashok Nayak Jul 2, 2025 11:50 AM

ಹೃದಯ ರಂಗೋಲಿ

ಮರಿಲಿಂಗಗೌಡ ಮಾಲಿಪಾಟೀಲ್

ಬಾಗಲಕೋಟೆಯ ಶಿಕ್ಷಕ ಕಾಶೀರಾಯ ಹಿಪ್ಪರಗಿ ಅವರಿಗೆ ವಯಸ್ಸು 48. ಕರ್ತವ್ಯದಲ್ಲಿದ್ದ ಅವರಿಗೆ ಬೆಳಗ್ಗೆ ಪ್ರಾರ್ಥನಾ ಸಮಯದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿತು. ಆಸ್ಪತ್ರೆಗೆ ಕರೆದು‌ ಕೊಂಡು ಹೋದರೂ ಚಿಕಿತ್ಸೆ ಫಲಿಸಲಿಲ್ಲ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ ಹಾಸನದ ಸುಪ್ರಿಯಾಗೆ 2 ವರ್ಷ. ಕೆಲಸದ ಜತೆಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡು ತ್ತಾ, ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಈಕೆಗೆ ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತು.

ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಜವರಾಯ ಆಕೆಯನ್ನು ತನ್ನೊಂದಿಗೆ ಕರೆದೊಯ್ದ... ಮೇಲಿನ 2 ಸುದ್ದಿಗಳು ಸ್ಯಾಂಪಲ್ ಮಾತ್ರ. ಹಾಸನ ಜಿಲ್ಲೆಯೊಂದರ ಕಳೆದೊಂದು ತಿಂಗಳಲ್ಲಿ, 20ರಿಂದ 38ರವರೆಗಿನ ಹರೆಯದ 21 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ವರದಿಯ ಪ್ರಕಾರ ಕಳೆದ 2 ವರ್ಷ ಗಳಲ್ಲಿ 507 ಹೃದಯಾಘಾತಗಳು ಸಂಭವಿಸಿದ್ದು, ಇದರಲ್ಲಿ 140 ಪ್ರಕರಣಗಳು ಸಾವಿನಲ್ಲಿ ಪರ್ಯವ ಸಾನಗೊಂಡಿವೆ. ವಯಸ್ಸಿನ ಭೇದವಿಲ್ಲದೆ, ಬಡವ-ಬಲ್ಲಿದ ತಾರತಮ್ಯವಿಲ್ಲದೆ ಹೃದಯಾಘಾತ ಸಂಭವಿಸಿದೆ. 9ನೇ ತರಗತಿಯ ವಿದ್ಯಾರ್ಥಿಯೂ ಇಂಥ ಸಾವಿಗೀಡಾಗುವುದಕ್ಕಿಂತ ದೊಡ್ಡ ದುರಂತ ಇನ್ನೇನಿದೆ? ಪ್ರತಿದಿನವೂ ಹೃದಯಾಘಾತದ ಸುದ್ದಿ ಅಪ್ಪಳಿಸುತ್ತಿದೆ.

ಇದನ್ನೂ ಓದಿ: Lokesh Kaayarga Column: ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?

ಆರೋಗ್ಯವಂತರಾಗಿಯೇ ಇರುವ ಎಳೆಯ ಪ್ರಾಯದವರನ್ನೂ ಜವರಾಯ ಕೈ ಬೀಸಿ ಕರೆಯುತ್ತಿದ್ದಾ ನೆ. ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಯುವಜನರ ಸಂಖ್ಯೆ ಕಳವಳ ಮೂಡಿಸುವಷ್ಟು ಹೆಚ್ಚಾಗಿದೆ. 25ರ ಹರೆಯದ ವರನೊಬ್ಬ ತನ್ನ ಮದುವೆಯ ಶಾಸ್ತ್ರಗಳು ನಡೆಯುತ್ತಿರುವಾಗಲೇ ಮೃತಪಟ್ಟ ಎಂದರೆ ಅದಕ್ಕಿಂತ ದುರ್ದೈವವಿದೆಯೇ? ಹಿಂದೆಲ್ಲಾ ಅಕಾಲಿಕ ಸಾವುಗಳಿಗೆ ಸ್ಪಷ್ಟ ಕಾರಣಗಳಿರುತ್ತಿದ್ದವು.

ಅಪಘಾತದಿಂದಾದ ಸಾವುಗಳಿಗೆ ಹಾಗೆ ಸತ್ತವರ ನಿರ್ಲಕ್ಷ್ಯವೂ ಕಾರಣವಾಗಿರುತ್ತಿತ್ತು. ಧೂಮಪಾನ, ಮದ್ಯಪಾನ, ಸ್ಥೂಲಕಾಯದಿಂದಾಗಿ ಹೃದಯಾಘಾತ ಸಂಭವಿಸಿದ ಬಗ್ಗೆ ಕೇಳುತ್ತಿದ್ದೆವು. ಆಗೆಲ್ಲಾ, ‘ವ್ಯಾಯಾಮ ಮಾಡಿ, ದೈಹಿಕ ಚಟುವಟಿಕೆಗಳತ್ತ ಗಮನಕೊಡಿ’ ಎನ್ನುವ ಸಲಹೆಗಳಿಗೆ ಬೆಲೆ ಇರುತ್ತಿತ್ತು.

‘ಮಾನವಜನ್ಮ ದೊಡ್ಡದು, ಅದನ್ನು ಕೈಯಾರೆ ಹಾಳುಮಾಡಿಕೊಳ್ಳಬೇಡಿ’ ಎಂಬ ಹಿರಿಯರ ಮಾತನ್ನು ಉದಾಹರಿಸಿ ನಾವು ಯಾರಿಗಾದರೂ ಸಲಹೆಯಿತ್ತರೆ ಅದಕ್ಕೊಂದು ಅರ್ಥವಿರುತ್ತಿತ್ತು. ಈಗ ಎಲ್ಲವೂ ಪಲ್ಲಟವಾಗಿದೆ. ‘ಫಿಟ್‌ನೆಸ್‌ಗೆ ಉದಾಹರಣೆ’ ಎಂಬಂತಿದ್ದವರೇ, ಜವರಾಯ ಕರೆದಾಗ ಚಿಕಿತ್ಸೆಗೂ ಅವಕಾಶವಿಲ್ಲದಂತೆ ಬದುಕಿಗೆ ‘ಗುಡ್‌ಬೈ’ ಹೇಳಿ ನಡೆದುಬಿಟ್ಟರು.

Screenshot_2 ok'

ಧೂಮಪಾನ, ಮದ್ಯಪಾನಗಳ ಗೋಜಿಗೆ ಹೋಗದವರು ಕೂಡ ಹೃದಯಾಘಾತಕ್ಕೊಳಗಾಗಿ ಇಹಲೋಕದ ವ್ಯಾಪಾರ ಮುಗಿಸಿದರು. ಆಗಷ್ಟೇ ಜವಾಬ್ದಾರಿಗಳಿಗೆ ತೆರೆದುಕೊಳ್ಳುತ್ತಿದ್ದವರೂ 40ರ ಹರೆಯಕ್ಕೇ ನಿರ್ಗಮಿಸಿ, ತಮ್ಮನ್ನೇ ನೆಚ್ಚಿದ್ದವರನ್ನು ಬದುಕಿನ ಅರ್ಧದಾರಿಯಲ್ಲಿ ಬಿಟ್ಟುಹೋದರು. ಇದಕ್ಕೆಲ್ಲ ಬದುಕಿನ ಸಹಜ ಒತ್ತಡವೇ ಕಾರಣವೇನೋ ಎಂದುಕೊಂಡರೆ, ಬದುಕಿನ ಸವಾಲುಗಳಿಗೆ ಒಡ್ಡಿಕೊಳ್ಳುವ ಮುನ್ನವೇ ೨೦ರ ಹರೆಯದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಅಸುನೀಗುವವರ ಪ್ರಕರಣಗಳಿಗೆ ಏನನ್ನುವುದು? ಒಟ್ಟಿನಲ್ಲಿ ಜವರಾಯನಿಗೆ ಕಾರಣ ಬೇಕಿಲ್ಲ, ಹೃದಯಾಘಾತ ಒಂದು ನೆಪವಷ್ಟೇ ಎಂಬ ವೇದಾಂತದ ಮಾತಿಗೆ ಶರಣಾಗುವುದರ ಹೊರತಾಗಿ ಬೇರೇನು ದಾರಿಯಿದೆ?

“ಹಿಂದೆಯೂ ಸಾವುಗಳು ಸಂಭವಿಸುತ್ತಿದ್ದವು, ಆದರೆ ಅವು ವರದಿಯಾಗುತ್ತಿರಲಿಲ್ಲ ಅಥವಾ ವರದಿ ಯಾಗಿದ್ದನ್ನು ಜನರು ಗಮನಿಸುತ್ತಿರಲಿಲ್ಲ. ಆದರೆ ಕರೋನಾ ಮಹಾಮಾರಿಯ ಬಳಿಕ ಸಾವಿನ ಸುದ್ದಿಗಳ ಬಗ್ಗೆ ಜನರು ಹೆಚ್ಚೆಚ್ಚು ಸ್ಪಂದಿಸುತ್ತಿದ್ದಾರೆ, ಮಾಧ್ಯಮಗಳೂ ಅವನ್ನು ‘ಹೈಪ್’ ಮಾಡು ತ್ತಿವೆ.

ಹೀಗಾಗಿ ಸಾವಿನ ಸುದ್ದಿಗಳು ಜನರ ಮನಸ್ಸಿಗೆ ಲಗ್ಗೆ ಹಾಕುತ್ತಿವೆ. ಈಗ ಸಾವಿನ ಸುದ್ದಿಗಳಿಗೆ ಸ್ಪಂದನೆ ಹೆಚ್ಚಾಗಿದೆಯಷ್ಟೇ ಹೊರತು, ಸಾವುಗಳ ಸಂಖ್ಯೆ ಮೊದಲಿನಂತೇ ಇದೆ" ಎಂದು ಕೆಲವರು ಹೇಳು ತ್ತಾರೆ. ಆದರೆ, ವರ್ತಮಾನದ ಪ್ರಕರಣಗಳನ್ನು ಗಮನಿಸಿದರೆ, ಸಾವಿನ ಸಂಖ್ಯೆ ಹೆಚ್ಚಾಗಿರುವುದೇ ಸತ್ಯ ಎನಿಸುತ್ತದೆ. ಮುಂಚೆಯೆಲ್ಲಾ, ಸಾವಿನ ಸುದ್ದಿಗಳು ದೂರದೂರದಿಂದ ವರದಿಯಾಗುತ್ತಿದ್ದವು. ಆದರೀಗ, ಸನಿಹದಿಂದಲೇ ಬರಲಾರಂಭಿಸಿವೆ.

ನಮಗೆ ತಿಳಿದವರೇ, ನಿನ್ನೆ-ಮೊನ್ನೆ ಒಡನಾಡಿದವರೇ, ಮುಂದಿನವಾರ ಸೇರೋಣ ಎಂದವರೇ ಇದ್ದಕ್ಕಿದ್ದಂತೆ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಹೃದಯಾಘಾತವೇ ವಿನಾ, ದೀರ್ಘಕಾಲಿಕ ಅನಾ ರೋಗ್ಯವಲ್ಲ. ಹೀಗಿರುವಾಗ, ‘ಇದು ಮಾಧ್ಯಮದ ಹೈಪ್’ ಎಂಬ ಮಾತಿಗೆ ಅರ್ಥವಿಲ್ಲ.

ವೈದ್ಯರೊಂದಿಗಿನ ಖಾಸಗಿ ಮಾತುಕತೆಗಳಲ್ಲಿ, ಜಾಲತಾಣಗಳಲ್ಲಿ, ಸಂಜೆಯ ಹರಟೆಗಳಲ್ಲಿ ಇಂಥ ಸಾವುಗಳಿಗಿರುವ ವಿವಿಧ ಕಾರಣಗಳ ಬಗ್ಗೆ ಚರ್ಚೆಯಾಗುತ್ತಿದೆ. ಅತಿಯಾದ ವ್ಯಾಯಾಮ, ಧೂಮ ಪಾನ, ಮದ್ಯಪಾನ, ಜಂಕ್-ಡ್ ಸೇವನೆ ಮಾತ್ರವಲ್ಲದೆ, ವೈದ್ಯರ ಶಿಫಾರಸಿಲ್ಲದೆ ಮೆಡಿಕಲ್ ಶಾಪ್‌ ಗಳಲ್ಲಿ ಔಷಧಿ ಕೊಂಡು ಸೇವಿಸುವುದೂ ಇಂಥ ಸಾವಿಗೆ ಒಂದು ಕಾರಣ ಎನ್ನುವವರಿದ್ದಾರೆ.

ವೈದ್ಯರ ಶಿಫಾರಸು ಚೀಟಿಯಿಲ್ಲದೆ ಔಷಽ ಕೊಡುವುದು/ ತೆಗೆದುಕೊಳ್ಳುವುದು ಎರಡೂ ಆಪತ್ತಿಗೆ ಆಹ್ವಾನವೇ. ಇನ್ನು, ಅನಾರೋಗ್ಯಕರ ಜೀವನಶೈಲಿ, ಆಹಾರದ ವಿಷಯದಲ್ಲಿ ‘ರುಚಿ’ಯ ಹಿಂದೆ ಬಿದ್ದಿರುವಿಕೆ/ಅಸಮತೋಲಿತ ಆಹಾರ, ಬದಲಾಗಿರುವ ಔದ್ಯೋಗಿಕ ಜಗತ್ತು, ಅದರಿಂದಾಗಿ ಉದ್ಭವಿಸಿರುವ ಉದ್ಯೋಗದ ಅಸ್ಥಿರತೆ ಮತ್ತು ಯುವಜನರ ಮೇಲಿನ ಒತ್ತಡ ಇವೆಲ್ಲವೂ ಹೃದಯಾ ಘಾತಕ್ಕೆ ಮುನ್ನುಡಿಯಾಗುತ್ತವೆ ಎನ್ನಲಾಗುತ್ತಿದೆ.

‘ಹಸಿವು ನೀಗಿಸಿಕೊಳ್ಳುವುದಕ್ಕಾಗಿ ಆಹಾರ ತಿನ್ನಿ, ಬಾಯಿಚಪಲಕ್ಕಾಗಿ/ರುಚಿಗಾಗಿ ತಿನ್ನಬೇಡಿ. ರುಚಿ ನೀಡಲೆಂದು ಬಳಸುವ ಮಸಾಲೆಗಳು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಆಹಾರವಸ್ತುವನ್ನು ಅದರ ನೈಸರ್ಗಿಕ ಸ್ವರೂಪದಲ್ಲೇ ತಿನ್ನಿ’ ಎನ್ನುವವರೂ ಇದ್ದಾರೆ. ಆದರೆ, ‘ಉಪ್ಪು-ಹುಳಿ-ಖಾರ-ಸಕ್ಕರೆ ಏನನ್ನೂ ಬಳಸದಿದ್ದರೆ, ನಮಗೂ ಪ್ರಾಣಿಗಳಿಗೂ ವ್ಯತ್ಯಾಸವೇನು?’ ಎಂಬ ವಾದವೂ ಇದೆ.

ಆದ್ದರಿಂದ, ಆರೋಗ್ಯವನ್ನು ಕೆಡಿಸದ ರುಚಿ ಯಾವುದು ಎಂಬುದನ್ನು ತಿಳಿದು ಬಳಸಿ, ಮಿಕ್ಕಿದ್ದನ್ನು ದೂರವಿಡುವುದೇ ಕ್ಷೇಮ. ಹೃದಯಾಘಾತದ ಸುದ್ದಿಗಳು ಅದೆಷ್ಟು ಪುನರಾವರ್ತನೆಯಾಗು ತ್ತವೆಂದರೆ, ಕೇಳಿದವನಿಗೇ ಹೃದಯದಲ್ಲಿ ಸಣ್ಣಗೆ ನೋವು ಕಾಣಿಸಿಕೊಳ್ಳುತ್ತದೆ. ಹೃದಯಾಘಾತಕ್ಕೆ ಒಳಗಾದವನ ಕುಟುಂಬವು ಅತಂತ್ರವಾಗುವುದರಿಂದ, ಅದೊಂದು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ.

ಹೀಗಾಗಿ, ಕೇಂದ್ರಮತ್ತು ರಾಜ್ಯ ಸರಕಾರಗಳು ಈ ವಿಷಯವನ್ನು ‘ಆರೋಗ್ಯ ಸಂಬಂಧಿತ ತುರ್ತು ಸ್ಥಿತಿ’ ಎಂಬಂತೆ ಗಂಭೀರವಾಗಿ ಪರಿಗಣಿಸಿ, ತಲಸ್ಪರ್ಶಿ ಅವಲೋಕನವನ್ನು ನಡೆಸಬೇಕಿದೆ ಹಾಗೂ ಇದರಲ್ಲಿ ಅನುಭವಿ ವೈದ್ಯರನ್ನು ತೊಡಗಿಸಿಕೊಳ್ಳಬೇಕಿದೆ. ಆರೋಗ್ಯ ಇಲಾಖೆಯು ತಜ್ಞರಿಂದ ಸಂಶೋಧನೆ ಕೈಗೊಂಡು, ಹೃದಯಾಘಾತದ ತಡೆಗೆ ಎಲ್ಲಾ ಯತ್ನಗಳನ್ನೂ ಮಾಡ ಬೇಕಿದೆ ಹಾಗೂ ತನ್ಮೂಲಕ ಸಮಾಜವನ್ನು ಆತಂಕದಿಂದ ಪಾರು ಮಾಡಬೇಕಿದೆ.

ಹೃದಯಾಘಾತಕ್ಕೆ ಒಳಗಾಗದಂತೆ ಬದುಕುವುದು ಹೇಗೆ ಎಂಬುದಕ್ಕೆ ತಜ್ಞ ವೈದ್ಯರು ಮಾರ್ಗಸೂಚಿ ಗಳನ್ನು ಘೋಷಿಸಬೇಕಿದೆ.

(ಲೇಖಕರು ಸಾಮಾಜಿಕ ಕಾರ್ಯಕರ್ತರು)