ಪದಸಾಗರ
ನಮ್ಮ ಮನೆಯಂದು ಅಕ್ವೇರಿಯಂ ಬೌಲ್ ಇತ್ತು. ಅದರಲ್ಲಿ ಒಂದೆರಡು ಮೀನುಗಳನ್ನು ತಂದಿಟ್ಟಿದ್ದೆ. ಪ್ರತಿದಿನ ಬೆಳಗ್ಗೆ ಅಮ್ಮ ಆ ಬೌಲ್ ಪಕ್ಕದಲ್ಲಿ ಮೊಬೈಲ್ ಇಟ್ಟು ವಿಷ್ಣುಸಹಸ್ರನಾಮ ಹಾಕುತ್ತಿದ್ದರು. ‘ಮೀನುಗಳು ವಿಷ್ಣುಸಹಸ್ರನಾಮ ಕೇಳ್ತಾ ನಿಂತ್ಕೋತವೆ. ಅದು ಮುಗಿದ ಮೇಲೆ ಮತ್ತೆ ಲಗುಬಗೆಯಿಂದ ಓಡಾಡತೊಡಗುತ್ತವೆ’. ಹೀಗಂತ ಅಮ್ಮ ಹೇಳಿದಾಗ, ಅಮ್ಮನಿಗೇನೋ ಭ್ರಾಂತಿ.. ಮೀನುಗಳು ವಿಷ್ಣುಸಹಸ್ರ ನಾಮ ಕೇಳೋದಂತೆ, ತಲೆದೂಗೋದಂತೆ.. ಮತ್ತೇನಿಲ್ವಾ ಅಂದು ಕೊಂಡು ನಕ್ಕಿದ್ದೆ.
ಅಮ್ಮ ಮತ್ತೆ ಮತ್ತೆ ಹೇಳಿದಾಗ, ವಾದಕ್ಕಿಳಿದಿದ್ದೆ. ಹಾಗೊಮ್ಮೆ ಅದು ಕೇಳೋದೇ ಆದರೆ ಯಾವ ಹಾಡು ಹಾಕಿಟ್ಟರೂ ಬಂದು ನಿಂತು ಕೇಳುತ್ತದೆ. ವಿಷ್ಣುಸಹಸ್ರನಾಮವೇ ಆಗಬೇಕೆಂದಿಲ್ಲ ಅಂದೆ. ಅಮ್ಮ ವಾದ ನಿಲ್ಲಿಸಲಿಲ್ಲ. ನೀನೇ ಫ್ಯಾಕ್ಟ್ ಚೆಕ್ ಮಾಡು ಅಂದರು. ನನ್ನನ್ನು ಚಕಿತಗೊಳಿಸಿ ಬಿಟ್ಟಿತು ಮೀನು ಮತ್ತು ವಿಷ್ಣುಸಹಸ್ರನಾಮದ ಆ ದೃಶ್ಯ. ಬೇರೆ ಹಾಡುಗಳಿಗೆ ಕ್ಯಾರೇ ಅನ್ನದೆ ಓಡಾಡಿಕೊಳ್ಳುತ್ತಾ, ನನ್ನ ಅಪನಂಬಿಕೆಗೆ ಕಪಾಳಮೋಕ್ಷವನ್ನೂ ಮಾಡಿಬಿಟ್ಟಿತ್ತು.
ನಾನೇನೂ ನಾಸ್ತಿಕನಲ್ಲ. ಆದರೆ ಎಲ್ಲವನ್ನೂ ಹಿಂದುಮುಂದು ನೋಡದೆ ನಂಬುವ ಕುರುಡು ಆಸ್ತಿಕನೂ ಅಲ್ಲ. ಹೀಗಾಗಿ ಈ ಘಟನೆ ಸಾಕಷ್ಟು ಚಿಂತನೆಗೆ ತಳ್ಳಿತ್ತು. ಅಭಿಮನ್ಯು ಹೊಟ್ಟೆಯಲ್ಲಿರು ವಾಗಲೇ ಚಕ್ರವ್ಯೂಹದ ಕಥೆ ಕೇಳಿದ್ದರಿಂದ ಹಿಡಿದು, ಭಗವದ್ಗೀತೆಗೆ, ಓಂಕಾರ ಘೋಷಕ್ಕೆ ಹೊಟ್ಟೆಯಲ್ಲಿರುವ ಮಗು ಒದೆಯುವ ಇಂದಿನ ಕಾಲದ ವಿಡಿಯೋಗಳ ತನಕ ಹಲವು ಘಟನೆಗಳು ನನ್ನನ್ನು ಆಲೋಚನೆಗೆ ಒಡ್ಡಿಕೊಳ್ಳುವಂತೆ ಮಾಡಿದ್ದವು.
ಇದನ್ನೂ ಓದಿ: Naveen Sagar Column: ರಾಮನ ತಾತನ ಮುತ್ತಾತನ ಹೆಸರೇನು ಹೇಳುವಿರಾ ?
ಇದು ಶಬ್ದಕ್ಕಿರುವ ಶಕ್ತಿಯಾ? ಕಂಪನದಿಂದ ಉಂಟಾಗುವ ಪರಿಣಾಮವಾ? ಅಸಲಿಗೆ ಏನಿದು ಅಂತ. ಇಂಥ ಸಂದರ್ಭದ ವಿನೋದ್ ಎಂಬ ಅಧ್ಯಯನಕಾರ ಮಾಡಿದ ಆ ಒಂದು ವಿಡಿಯೋ ನನ್ನ ಪ್ರಶ್ನೆಗಳಿಗೆ ತಕ್ಕ ಮಟ್ಟಿಗಿನ ಉತ್ತರ ನೀಡಿತ್ತು. ದೇವಸ್ಥಾನದ ಗರ್ಭಗುಡಿಯಲ್ಲಿ ಏನಿರುತ್ತದೆ? ಒಂದು ಕಲ್ಲು. ಆರೇಳು ಅಡಿ ಎತ್ತರದ, ಪೀಠವೂ ಸೇರಿದರೆ ಸುಮಾರು ಒಂಬತ್ತು ಅಡಿಯ ಕಲ್ಲು. ಅದನ್ನು ನಾವು ದೇವರು ಎಂದು ಪೂಜಿಸುತ್ತೇವೆ. ಆದರೆ ನಾಸ್ತಿಕರು ಮತ್ತು ಮೂರ್ತಿಪೂಜೆಯ ವಿರೋಧಿಗಳು ಇದಕ್ಕೆ ಏನನ್ನುತ್ತಾರೆ? ‘ಕಲ್ಲಿಗೆ ಪೂಜೆ ಬೇಕಾ? ಅಲಂಕಾರ ಬೇಕಾ? ಕಲ್ಲಲ್ಲಿ ದೇವರಿದ್ದಾನಾ? ಇದೆಲ್ಲ ಮೂಢನಂಬಿಕೆ ಅಲ್ವಾ’ ಎಂಬ ಅಪಹಾಸ್ಯ ಶುರುಮಾಡುತ್ತಾರೆ.
ಉತ್ತರಕ್ಕಾಗಿ ದೇವರನ್ನು ಸ್ವಲ್ಪ ಪಕ್ಕಕ್ಕಿಟ್ಟು, ಅವರೇ ನಂಬುವ ಸೈ ಆಧಾರವಾಗಿಟ್ಟುಕೊಂಡು ಮಾತನಾಡೋಣ. ದೇವರನ್ನು ಕಗಿಯೇ ನೋಡೋಣ. ಕಲ್ಲು ಎಂದರೆ ಏನು? ಲೋಹಗಳು ಮತ್ತು ಖನಿಜಗಳಿಂದ ಮಾಡಲ್ಪಟ್ಟದ್ದು. ನೀವು ಒಂದು ಕಣಿವೆಯಲ್ಲಿ ಹೋಗಿ ಕೂಗಿದರೆ ಏನಾಗುತ್ತದೆ? ಪ್ರತಿಧ್ವನಿ ಮೊಳಗುತ್ತದೆ. ಆ ತೆರೆದ ಜಾಗದಲ್ಲಿ ಶಬ್ದ ಹೋಗಿ ಕಲ್ಲಿಗೆ ಬಡಿದು ವಾಪಸ್ ಬರುತ್ತದೆ.
ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ. ನೀವು ಎಷ್ಟು ಜೋರಾಗಿ ಶಬ್ದ ಕಳುಹಿಸು ತ್ತೀರೋ, ಅಷ್ಟೇ ಜೋರಾಗಿ ಕಲ್ಲು ಶಬ್ದವನ್ನು ವಾಪಸ್ ಕಳಿಸುತ್ತದೆ. ಶಬ್ದ ಕಣ್ಣಿಗೆ ಕಾಣುವುದಿಲ್ಲ, ಆದರೆ ಕಿವಿಗೆ ಕೇಳಿಸುತ್ತದೆ.
ಒಂದು ಓಪನ್ ಸ್ಪೇಸ್ನಲ್ಲಿ ಇಷ್ಟು ಪ್ರತಿಧ್ವನಿ ಬರುವುದು ಸಾಧ್ಯ ಅನ್ನುವುದಾದರೆ, ಮುಚ್ಚಿದ ಜಾಗದಲ್ಲಿ ಹೇಗಿರಬಹುದು? ಖಂಡಿತ ತೆರೆದ ಜಾಗಕ್ಕಿಂತ ತುಂಬಾ ಜಾಸ್ತಿಯೇ ಇರುತ್ತದೆ. ಬಯಲು ಪ್ರದೇಶದ ಒಂದು ಬಂಡೆ ಇಷ್ಟೊಂದು ಶಬ್ದವನ್ನು ಪ್ರತಿಫಲಿಸಬಲ್ಲದು ಎಂದಾದರೆ, ಸಂಪೂರ್ಣ ವಾಗಿ ಮುಚ್ಚಿದ ಒಂದು ಕೋಣೆಯೊಳಗೆ ಶಬ್ದದ ತರಂಗಗಳ ಪ್ರಭಾವ ಹೇಗಿರಬಹುದು ಊಹಿಸಿ!
ಓಕೆ, ದೇವಸ್ಥಾನದ ಒಳಗೆ ಒಮ್ಮೆ ಗಮನಿಸಿ. ಅಲ್ಲಿ ಒಂದು ಲಿಂಗ ಅಥವಾ ಕಲ್ಲಿನ ವಿಗ್ರಹ ಇರುತ್ತದೆ. ಅದು ಮುಚ್ಚಿದ ಗರ್ಭಗುಡಿಯಲ್ಲಿ ಇರುತ್ತದೆ. ಮೇಲೆ ಗೋಪುರದ ಅಥವಾ ಪಿರಮಿಡ್ ಥರದ ತುದಿ ಆಕಾಶದ ಕಡೆ ಮುಖ ಮಾಡಿರುತ್ತದೆ. ವೆಂಟಿಲೇಷನ್ ಇರುವುದಿಲ್ಲ. ಬಿಗಿಯಾಗಿ ಪ್ಯಾಕ್ ಆಗಿ, ಕಲ್ಲಿನ ಗೋಡೆಗಳಿಂದ ಮುಚ್ಚಿರುತ್ತದೆ, ಬೆಳಕು ಕೂಡ ಒಳಗೆ ಬರುವುದಿಲ್ಲ. ಅಂಥ ಜಾಗದಲ್ಲಿ ಜನರು ಶಬ್ದವನ್ನು ಆ ಕಲ್ಲಿಗೆ ಕಳಿಸುತ್ತಾರೆ.
ಇಂದು ನಿನ್ನೆಯಿಂದಲ್ಲ. ಸಾವಿರಾರು ವರ್ಷಗಳಿಂದ. ಪ್ರತಿದಿನ ನಿರಂತರವಾಗಿ ಶಬ್ದವನ್ನು ಕಳುಹಿಸುತ್ತಲೇ ಇದ್ದಾರೆ. ಈ ಶಬ್ದವೇ ಮಂತ್ರ-ಶ್ಲೋಕ-ಪ್ರಾರ್ಥನೆ. ಶಬ್ದಕ್ಕೆ ಒಂದು ರೂಪ ಇದೆ ಎಂದು ನಮಗೆಲ್ಲ ಗೊತ್ತು. ವಿವಿಧ ಶಬ್ದಗಳಿಂದ ಕಣಗಳು ಹೇಗೆ ಬೇರೆ ಬೇರೆ ಪ್ಯಾಟರ್ನ್, ರೂಪಗಳನ್ನು ತಾಳುತ್ತವೆ ಎಂಬುದನ್ನು ತೋರಿಸುವ ಪ್ರಯೋಗಗಳಿವೆ.
ನೀರು, ಬೆಂಕಿ, ಕಣಗಳು ಶಬ್ದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತೋರಿಸುವ ಸುಂದರ ಪ್ರಯೋಗ ವಿದೆ. ಅದನ್ನೇ ಸೈಮ್ಯಾಟಿಕ್ ಫ್ರೀಕ್ವೆನ್ಸಿಗಳ ಪರಿಣಾಮ ಎನ್ನುತ್ತಾರೆ. ಪಂಚಭೂತ ಎಂಬ ಕಾನ್ಸೆಪ್ಟಿನ ಪ್ರಕಾರ ನಮ್ಮ ದೇಹದಲ್ಲಿ 72% ನೀರು, 12% ಭೂಮಿ, 6% ಗಾಳಿ, 4% ಬೆಂಕಿ, ಉಳಿದದ್ದು ಆಕಾಶ ಎನ್ನಲಾಗುತ್ತದೆ. ಹಾಗಾದರೆ ಈ ಶಬ್ದ ನಮ್ಮ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವು ದಿಲ್ಲವೇ? ನೀರು ಶಬ್ದಕ್ಕೆ ಎಷ್ಟು ತೀವ್ರವಾಗಿ ಪ್ರತಿಕ್ರಿಯಿಸುತ್ತದೆಯೋ ಬೆಂಕಿ ಕೂಡ ಹಾಗೆಯೇ ಪ್ರತಿಕ್ರಿಯಿಸುತ್ತದೆ.
ವಾಸ್ತವದಲ್ಲಿ ಬ್ರಹ್ಮಾಂಡದಲ್ಲಿರುವ ಎಲ್ಲವೂ ಶಬ್ದಕ್ಕೆ ಪ್ರತಿಕ್ರಿಯಿಸುತ್ತವೆ. ಅದೇ ಕಾರಣದಿಂದ ಯೋಗಿಗಳು ‘ಶಬ್ದವೇ ಅಸ್ತಿತ್ವದ ಮೂಲ’ ಎಂದು ಹೇಳಿದ್ದಾರೆ. ಪ್ರತಿಯೊಂದು ರೂಪವೂ ಶಬ್ದದ ಒಂದು ನಿರ್ದಿಷ್ಟ ಪ್ರತಿಧ್ವನಿಯೇ. ಶಬ್ದದ ಮೇಲೆ ಹಿಡಿತ ಸಾಧಿಸಿದರೆ, ಪಂಚಭೂತಗಳ ಜೊತೆ ಆಟವಾಡಬಹುದು. ಅಂದಿನ ಕಾಲದಲ್ಲಿ ಋಷಿಗಳು ನೀರಿನ ಮೇಲೆ ನಡೆಯುವುದು, ಗಾಳಿಯಲ್ಲಿ ಕಣ್ಮರೆಯಾಗುವುದು, ಗೋಡೆಗಳ ಮೂಲಕ ಹೋಗುವುದು ಮಾಡುತ್ತಿದ್ದದ್ದು ಖಂಡಿತವಾಗ್ಯೂ ಕಟ್ಟುಕಥೆ ಅಲ್ಲ.
ಹ್ಯಾರಿ ಪಾಟರ್ ಸಿನಿಮಾದಲ್ಲಿ ನೋಡಿದ್ದು ಕಾಲ್ಪನಿಕ ಇರಬಹುದು. ಆದರೆ ನಮ್ಮಲ್ಲಿ ನಿಜವಾಗಲೂ ಅದನ್ನು ಮಾಡಿದ ಯೋಗಿ ಗಳಿದ್ದಾರೆ. ಶಬ್ದದ ಮೇಲೆ ಒಂದು ನಿರ್ದಿಷ್ಟ ಹಿಡಿತ ಸಾಧಿಸಿದರೆ ನಮ್ಮಿಂದಲೂ ಅದು ಸಾಧ್ಯ. ಆದರೆ ಅದಕ್ಕೆ ಇಂದ್ರಿಯಗಳನ್ನು ಮೀರಿದ ಗ್ರಹಿಕೆ ಬೇಕು. ಅದಕ್ಕೆ ಬೇರೆ ಮಟ್ಟದ ಸಾಧನೆ ಬೇಕು. ಅದನ್ನು ಲ್ಯಾಬೊರೇಟರಿಯಲ್ಲಿ ಮಾಡಲು ಸಾಧ್ಯವಿಲ್ಲ.
ಕೇವಲ ವಿಜ್ಞಾನ ಎಂಬ ಉಡಾಫೆಯಲ್ಲಿ ಪ್ರಯತ್ನಿಸಿದ ಹಲವರು ನರಗಳ ಕಾಯಿಲೆಗೆ ತುತ್ತಾದ ಅಥವಾ ಸತ್ತ ಉದಾಹರಣೆಗಳಿವೆ. ಇದರ ಸಾಧನೆಗೆ ಧ್ಯಾನ ಬಿಟ್ಟರೆ ಬೇರೆ ದಾರಿ ಇಲ್ಲ. ದೇವಸ್ಥಾನದ ಒಳಗೆ ಮಂತ್ರಗಳನ್ನು ಜಪಿಸುತ್ತಾರೆ. ಶಬ್ದ ಕಲ್ಲಿಗೆ ತಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಪುಟಿಯುತ್ತದೆ. ಅದು ಮುಚ್ಚಿದ ಕೋಣೆಯಾದ್ದರಿಂದ, ಶಬ್ದ ಮುಖ್ಯ ಬಾಗಿಲಿನ ಮೂಲಕ ಹೊರಗೆ ಹೋಗಲೇಬೇಕು.
ಮುಂದೆ ನಿಂತಿರುವವರು ಸಂಪೂರ್ಣವಾಗಿ ಆ ಶಕ್ತಿಯಲ್ಲಿ ಮುಳುಗುತ್ತಾರೆ. ಇದು ಭಕ್ತಿಶಕ್ತಿಯ ಹಿಂದಿನ ಸೈ. ಅಲ್ಲಿ ಜಪಿಸುವ ಬೆಳಗಿನ ಸುಪ್ರಭಾತ, ವಿಷ್ಣು ಸಹಸ್ರನಾಮ, ಸಂಧ್ಯಾಕಾಲದ ನಂತರದ ಲಲಿತಾ ಸಹಸ್ರನಾಮ, ಶಿವ ಪಂಚಾಕ್ಷರಿ ಮಂತ್ರ, ಲಿಂಗಾಷ್ಟಕಂ, ಓಂ ನಮಃ ಶಿವಾಯ, ನಿರ್ವಾಣ ಷಟ್ಕಂ ಇವೆಲ್ಲವೂ ಮಾನವ ದೇಹ ಮತ್ತು ಮನಸಿನ ವ್ಯವಸ್ಥೆಯ ಮೇಲೆ ಬೇರೆ ಬೇರೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.
ಲಲಿತಾ ಸಹಸ್ರನಾಮ ಕೇಳಿಸಿಕೊಂಡ ಮೂರುನಾಲ್ಕು ನಿಮಿಷಗಳಲ್ಲಿ ನರಮಂಡಲದಲ್ಲಿ ವ್ಯತ್ಯಾಸ ಗಳು ಕಾಣಿಸಿದ್ದನ್ನು ನರರೋಗ ತಜ್ಞರೇ ಗುರುತಿಸಿದ್ದಕ್ಕೆ ದಾಖಲೆಗಳಿವೆ. ಲಲಿತಾ ಸಹಸ್ರನಾಮದ ಶಬ್ದಗಳ ಲಯವು ಪ್ಯಾರಾಸಿಂಪಥೆಟಿಕ್ ನರಮಂಡಲದ ಒಳಗೆ ಹೋಗಿ ಮನುಷ್ಯನನ್ನು ನಿದ್ರೆಗೆ ಜಾರಿಸಿದ್ದನ್ನು ವೈದ್ಯರೇ ಗಮನಿಸಿದ್ದಾರೆ.
ಪ್ರಾಚೀನ ಋಷಿಗಳಿಗೆ ಈ ಶಬ್ದಗಳು ಪ್ಯಾರಾಸಿಂಪಥೆಟಿಕ್ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ ಎಂದು ಗೊತ್ತಾಗಿzದರೂ ಹೇಗೆ? ಇಂದಿಗೂ ರಾತ್ರಿ ಲಲಿತಾ ಸಹಸ್ರನಾಮ ಹೇಳಿ ಮಲಗಿದಾಗ ಒಳ್ಳೆಯ ನಿದ್ರೆ ಆಗುವುದು ಎಷ್ಟೋ ಮಂದಿಯ ಅನುಭವದಲ್ಲಿ ಕೇಳಿದ್ದೇವೆ. ಲಲಿತಾ ಸಹಸ್ರನಾಮ ಕೇಳಿಸಿಕೊಳ್ಳುತ್ತಾ ಮಲಗಿದರೂ ಸುಲಭವಾಗಿ ಸುಖನಿದ್ರೆಗೆ ಜಾರುತ್ತೇವೆ. ಅಂತೆಯೇ ಬೆಳಗ್ಗೆ ವಿಷ್ಣು ಸಹಸ್ರನಾಮದ ಪಠಣ ಅಥವಾ ಶ್ರವಣ ನಮ್ಮ ಬೆಳಗನ್ನು ಸೂಪರ್ ಫ್ರೆಶ್ ಆಗಿಸುತ್ತದೆ.
ಇಂದಿಗೂ ತಿರುಪತಿಯಲ್ಲಿ ಬೆಳಗ್ಗೆ ವಿಷ್ಣು ಸಹಸ್ರನಾಮ, ರಾತ್ರಿ ಲಲಿತಾ ಸಹಸ್ರನಾಮ ಕಿವಿಗಳನ್ನು ತಲುಪುತ್ತವೆ. ಇದು ಮೂಢನಂಬಿಕೆ ಅಲ್ಲ. ವಿಜ್ಞಾನ. ಆದರೆ ಈಗ ಬಹುತೇಕ ದೇವಸ್ಥಾನಗಳಲ್ಲಿ ಯಾಕೆ ಮಾಡುತ್ತಿದ್ದೇವೆ ಎಂದು ಗೊತ್ತಿಲ್ಲದೇ ಮಾಡುತ್ತಿದ್ದಾರೆ. ಅರ್ಚಕರನ್ನು ಕೇಳಿದರೆ ‘ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.. ಮುಂದುವರಿಸುತ್ತಿದ್ದೇವೆ’ ಎನ್ನುತ್ತಾರೆ ಅಥವಾ ಆಯುಷ್ಯ, ಆರೋಗ್ಯ, ಐಶ್ವರ್ಯಕ್ಕೋಸ್ಕರ ಎಂದು ಒಟ್ರಾಶಿಯಾಗಿ ಹೇಳಿ ಬಿಡುತ್ತಾರೆ.
ಮನಮುಟ್ಟುವಂತೆ ವಿವರಿಸಿ ಹೇಳಲು ಬಾರದಿರುವುದಕ್ಕೆ ಇವುಗಳನ್ನು ಮೂಢನಂಬಿಕೆ ಎನ್ನುವ ನಾಸ್ತಿಕವಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರ ಹಿಂದಿನ ವಿಜ್ಞಾನದ ಸಮೇತ ಮಾತನಾಡಿದರೆ ಅಂಥ ಬಾಯಿಗಳು ತಂತಾನೇ ಮುಚ್ಚುತ್ತವೆ. ದೇವಸ್ಥಾನದ ವಿನ್ಯಾಸವನ್ನೇ ಒಮ್ಮೆ ಗಮನಿಸಿ. ಮೇಲೆ ಕಳಶ ಇರುತ್ತದೆ.
ಸಾಮಾನ್ಯವಾಗಿ ಚಿನ್ನ, ತಾಮ್ರ ಅಥವಾ ಹಿತ್ತಾಳೆಯಿಂದ ಮಾಡಿರುತ್ತಾರೆ. ಹಿತ್ತಾಳೆ ಶಬ್ದದ ಉತ್ತಮ ವಾಹಕ. ಚಿನ್ನ ವಿದ್ಯುತ್ತಿನ ಅತ್ಯುತ್ತಮ ವಾಹಕ ಮತ್ತು ಶಕ್ತಿಯನ್ನು ಹೆಚ್ಚು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಗೋಪುರದಿಂದ ಪ್ರತಿಧ್ವನಿಸುವ ಶಕ್ತಿ ತರಂಗಗಳು ನೇರವಾಗಿ ಹೋಗಿ ಈ ಆಂಟೆನಾ ಥರದ ವ್ಯವಸ್ಥೆಯನ್ನು ತಾಕಿ ಶಕ್ತಿ ರೂಪದಲ್ಲಿ ಸಂಗ್ರಹವಾಗುತ್ತವೆ. ಕಂಬ ಮುಟ್ಟಿ ನಮಸ್ಕರಿಸಿ ಕಲ್ಲಿನ ದೇವಾಲಯದೊಳಗೆ ನಡೆದರೆ ಆಗುವ ಪರಿಣಾಮ ಎಷ್ಟು ಶಕ್ತಿಶಾಲಿ ಎಂಬುದು ಆ ನಿಮಿಷ ಗಳಲ್ಲಿ ಅರಿವಿಗೆ ಬರುವಂಥದ್ದು. ದೇವಸ್ಥಾನದ ಇಂಜಿನಿಯರಿಂಗ್ ಎಂಬುದು ಇತರೆ ಎಂಜಿನಿಯ ರಿಂಗ್ನಂತಲ್ಲ.
ಅದೊಂದು ಅದ್ಭುತ. ಇತ್ತೀಚೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಆಗುತ್ತಿದೆ ಎಂದಾಗ ಕಮ್ಯುನಿಸ್ಟರು, ನಾಸ್ತಿಕರು, ಪ್ರಗತಿಪರರು ಅದನ್ನು ಹೀಯಾಳಿಸಿದ್ದರು. ನಾಸ್ತಿಕರ ಪ್ರಕಾರ ಕಲ್ಲು ಯಾವತ್ತಿಗೂ ನಿರ್ಜೀವ ವಸ್ತು. ಆದರೆ ಪ್ರಾಣಪ್ರತಿಷ್ಠೆ ಎಂಬುದು ಮೂಢನಂಬಿಕೆ ಅಲ್ಲ. ಆದರೆ ಕಲ್ಲನ್ನು ದೇವರಾಗಿ ಪ್ರತಿಷ್ಠಾಪಿಸುವ ಹಿಂದೆ ದೊಡ್ಡ ವಿeನ ಇದೆ. ಜೀವ ಶಕ್ತಿಗಳನ್ನು ಕಲ್ಲಿನೊಳಗೆ ತುಂಬಿ ಅದನ್ನು ಜೀವಂತ ಜೀವಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬುದು ಪ್ರೂವ್ ಆಗಿದೆ.
ಸಿದ್ಧಪುರುಷರು ಮತ್ತು ಯೋಗಿಗಳು ತಮ್ಮ ಪ್ರಾಣಶಕ್ತಿಯನ್ನು ಒಂದು ಶಿಲೆಯೊಳಗೆ ತುಂಬಿ, ಅದನ್ನು ಜೀವಂತ ಅಸ್ತಿತ್ವದಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ. ಸದ್ಗುರು ಧ್ಯಾನಲಿಂಗ ವನ್ನು ಪ್ರತಿಷ್ಠಾಪಿಸಿದ್ದು ಒಂದು ಅತ್ಯುತ್ತಮ ಉದಾಹರಣೆ. ದೇವರೊಂದಿಗೆ ಸಂವಾದಿಸುವ ಅರ್ಚಕರು, ಭಕ್ತರು ಮೂಢರೂ ಅಲ್ಲ ವಂಚಕರೂ ಅಲ್ಲ. ಆ ಶಕ್ತಿ ಸಾಧಿಸಿದವರು. ವೈದ್ಯರು ಪರಿಹರಿಸಲಾಗದ ಸಮಸ್ಯೆಗಳು, ಮಾನಸಿಕ ಅಸಮತೋಲನ, ಬೈಪೋಲಾರ್, ನ್ಯೂರೋಟಿಕ್ ಸೇರಿದಂತೆ ಹಲವು ಕಾಯಿಲೆಗಳು ದೇವರಿಗೆ ಇಟ್ಟ ಹರಕೆಯಿಂದ ವಾಸಿಯಾದ ಉದಾಹರಣೆ ಇದೆ. ಅದು ನಂಬದವರ ಪಾಲಿಗೆ ಮೂಢನಂಬಿಕೆ.
ನಂಬುವವರ ಪಾಲಿಗೆ ಭಕ್ತಿ. ಆದರೆ ಅಸಲಿಗೆ ಅದು ಊಹೆಗೂ ಮೀರಿದ ಡಿವೈನ್ ಸೈ. ಈ ವಾದಗಳಿಂದ ಜಿಜ್ಞಾಸೆಗಳು ಹುಟ್ಟಬಹುದು. ಪ್ರಶ್ನೆಗಳು ಏಳಬಹುದು. ಆದರೆ ಅಲ್ಟಿಮೇಟ್ ಉತ್ತರವಾಗಿ ಸಿಗುವುದು ದೈವಿಕ ವಿಜ್ಞಾನವೇ. ನಮ್ಮ ಮನೆಯ ಮೀನುಗಳು ವಿಷ್ಣು ಸಹಸ್ರನಾಮಕ್ಕೆ ತಲೆದೂಗಿದ್ದು ಕೆಲವರಿಗೆ ಆಕಸ್ಮಿಕ ಅನಿಸಬಹುದು. ಉತ್ಪ್ರೇಕ್ಷಿತ ಕಾಲ್ಪನಿಕ ಕಥನ ಅನಿಸಬಹುದು. ಸಾರ್ವತ್ರಿಕವಾಗಿ ಮೀನುಗಳು ಹಾಗೆ ವರ್ತಿಸದೆಯೂ ಇರಬಹುದು. ಹಾಗಂತ ವಿಷ್ಣು ಸಹಸ್ರನಾಮ ದ ಬಲ ಸುಳ್ಳಾಗುವುದಿಲ್ಲ.
ಅದರಲ್ಲಿರುವ ವೈಜ್ಞಾನಿಕ ಅಂಶಗಳು ಯಾರಿಗೋ ಅನುಭವಕ್ಕೆ ಬಂದಿಲ್ಲದ ಮಾತ್ರಕ್ಕೆ ಅಸತ್ಯ ವಾಗುವುದಿಲ್ಲ. ‘ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರದ ದೇವರು ದೇವರಲ್ಲ, ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ. ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯತೀರ್ಥ ಕ್ಷೇತ್ರಗಳಲ್ಲಿರುವ ದೇವರುಗಳು ದೇವರಲ್ಲ. ತನ್ನ ತಾನರಿತು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ..’ ಅಂತ ಬಸವಣ್ಣನವರು ಬರೆದಿರು ವುದು ಮೂರ್ತಿಪೂಜೆಯ ವಿರುದ್ಧ ಎಂದು ಭಾವಿಸುವುದು ಬುದ್ಧಿಗೇಡಿತನವಷ್ಟೆ. ಅವರ ಮಾತಿನ ಅರ್ಥ ಅದೇ ಆಗಿದ್ದಿದ್ದರೆ ಬಸವಣ್ಣನವರು ಲಿಂಗಪೂಜೆ ಮಾಡುತ್ತಿರಲಿಲ್ಲ.