ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Utkarsh K S Column: ಸೇವೆ ಸಹಬಾಳ್ವೆಯ ಪ್ರತೀಕ ಧರ್ಮಸ್ಥಳ

ವ್ಯಾಪಕ ಶ್ರೇಣಿಯ ದತ್ತಿ ಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕ ಉಪಕ್ರಮಗಳಿಗೆ ಹೆಸರುವಾಸಿ ಯಾಗಿರುವ ಹೆಗ್ಗಡೆಯವರು, ಧಾರ್ಮಿಕ ವಲಯಗಳನ್ನೂ ಮೀರಿದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಆದರೆ, ಶ್ರೀಕ್ಷೇತ್ರದ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಸಾರ್ವಜನಿಕ ಅರ್ಜಿಗಳ ಸ್ವರೂಪ ದಲ್ಲಿ ಹೊಮ್ಮಿದ ಹಠಾತ್ ಆರೋಪಗಳು ಭಕ್ತರನ್ನು ಕ್ಷಣಕಾಲ ಬೆಚ್ಚಿ ಬೀಳಿಸಿದ್ದು ನಿಜ.

Utkarsh K S Column: ಸೇವೆ ಸಹಬಾಳ್ವೆಯ ಪ್ರತೀಕ ಧರ್ಮಸ್ಥಳ

-

Ashok Nayak Ashok Nayak Sep 2, 2025 9:51 AM

ಧರ್ಮೋತ್ಕರ್ಷ

ಉತ್ಕರ್ಷ್‌ ಕೆ.ಎಸ್

ಧಾರ್ಮಿಕ ನಂಬಿಕೆ, ಸಂಪ್ರದಾಯ ಮತ್ತು ಸಾಮಾಜಿಕ ಸೇವೆಗಳಿಗೆ ಹೆಸರುವಾಸಿಯಾಗಿರುವ ‘ದೇಗುಲ ಪಟ್ಟಣ’ ಧರ್ಮಸ್ಥಳವು ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿ ಸಾಕಷ್ಟು ವರ್ಷಗಳಿಂದ ತನ್ನದೇ ಆದ ಛಾಪನ್ನು ಮೂಡಿಸಿದೆ. ಶ್ರೀ ಮಂಜುನಾಥ ದೇವಾಲಯದ ಧರ್ಮಾಧಿ‌ ಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಸ್ತುತ ‘ಚಂಡಮಾರುತದ ಕೇಂದ್ರ’ದಲ್ಲಿ ನಿಂತಿದ್ದಾರೆ.

ವ್ಯಾಪಕ ಶ್ರೇಣಿಯ ದತ್ತಿ ಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕ ಉಪಕ್ರಮಗಳಿಗೆ ಹೆಸರುವಾಸಿ ಯಾಗಿರುವ ಹೆಗ್ಗಡೆಯವರು, ಧಾರ್ಮಿಕ ವಲಯಗಳನ್ನೂ ಮೀರಿದ ಗೌರವಾನ್ವಿತ ವ್ಯಕ್ತಿಯಾಗಿ ದ್ದಾರೆ. ಆದರೆ, ಶ್ರೀಕ್ಷೇತ್ರದ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಸಾರ್ವಜನಿಕ ಅರ್ಜಿಗಳ ಸ್ವರೂಪದಲ್ಲಿ ಹೊಮ್ಮಿದ ಹಠಾತ್ ಆರೋಪಗಳು ಭಕ್ತರನ್ನು ಕ್ಷಣಕಾಲ ಬೆಚ್ಚಿ ಬೀಳಿಸಿದ್ದು ನಿಜ.

ಗಣನೀಯ ವರ್ಷಗಳಿಂದ ಧಾರ್ಮಿಕ ಸಾಮರಸ್ಯಕ್ಕೆ ಮತ್ತು ಲೋಕೋಪಕಾರಕ್ಕೆ ಸಂಕೇತವಾಗಿ ನಿಂತಿರುವ ಶ್ರೀಕ್ಷೇತ್ರದ ಖ್ಯಾತಿಯ ಮೇಲೆ ಬಕಪಕ್ಷಿಗಳು ಕರಿನೆರಳನ್ನು ಬೀರಿದ್ದರ ಪರಿಣಾಮವಿದು. ನೂರಾರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರವನ್ನು ಮಾಡಿ, ತಲೆಬುಡ ವಿಲ್ಲದ ಆರೋಪಗಳನ್ನು ಮುಂಚೂಣಿಗೆ ತರುವ ಮುಖಾಂತರ, ಶ್ರೀಕ್ಷೇತ್ರವನ್ನು ಕೊಲೆಗಳಿಗೆ ಮತ್ತು ಬುರುಡೆಗಳಿಗೆ ಸೀಮಿತವಾಗಿ ಇಡಬೇಕೆಂದು ಕೆಲವಷ್ಟು ವಿಕ್ಷಿಪ್ತರು ವ್ಯವಸ್ಥಿತವಾಗಿ ಪ್ರಯತ್ನಿಸು ತ್ತಿರುವುದು ದುರ್ದೈವದ ಸಂಗತಿ.

ವಾಸ್ತವದಲ್ಲಿ, ಧಾರ್ಮಿಕ ನಂಬಿಕೆಗಳು ಮತ್ತು ಶ್ರೀಕ್ಷೇತ್ರದ ಮಹಿಮೆಯಿಂದ ಮಾತ್ರವಲ್ಲದೆ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಲೇ ಬಂದಿರುವ ಅನೇಕ ಸಾಮಾಜಿಕ ಮತ್ತು ಸೇವಾಚಟುವಟಿಕೆಗಳಿಂದ ಧರ್ಮಸ್ಥಳವು ಹೆಸರುವಾಸಿಯಾಗಿದೆ.

ಇದನ್ನೂ ಓದಿ: Dharmasthala Chalo: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ; ಇಂದಿನಿಂದ ಜೆಡಿಎಸ್ ಪಾದಯಾತ್ರೆ

ಈ ಕುರಿತಾದ ಪಕ್ಷಿನೋಟ ಇಲ್ಲಿದೆ: ಆರೋಗ್ಯ ಸೇವೆಗಳು: ವೈದ್ಯರ ಪ್ರಯೋಗಾಲಯ, ಔಷಧಿ ಮತ್ತು ತಪಾಸಣಾ ವ್ಯವಸ್ಥೆಗಳನ್ನು ಹೊಂದಿರುವ ಸಂಚಾರಿ ಆಸ್ಪತ್ರೆಗಳ ಮೂಲಕ ವೈದ್ಯಕೀಯ ಸೇವೆಗಳು ಗ್ರಾಮೀಣ ಪ್ರದೇಶವನ್ನೂ ತಲುಪುತ್ತಿವೆ. ಮಿಕ್ಕಂತೆ ಎಸ್‌ಡಿಎಂ ಟ್ರಸ್ಟ್ ಅಡಿಯಲ್ಲಿ ಬರುವ ಸಾಮಾನ್ಯ ಆಸ್ಪತ್ರೆಗಳು, ದಂತ ಆಸ್ಪತ್ರೆಗಳು, ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸಾ ಕೇಂದ್ರಗಳು, ನೇತ್ರ ಚಿಕಿತ್ಸಾ ಆಸ್ಪತ್ರೆಗಳು ಕೂಡ ಸಾಕಷ್ಟು ವರ್ಷಗಳಿಂದ ಅನನ್ಯ ಸೇವೆಯನ್ನು ನೀಡುತ್ತಿವೆ.

ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸದಾಶಯದ ಭಾಗವಾಗಿ ಧರ್ಮಸ್ಥಳದಲ್ಲಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಕಣ್ಣಿನ ತಪಾಸಣೆ ಮತ್ತು ಶಸಚಿಕಿತ್ಸೆ ಮುಂತಾದ ಚಟುವಟಿಕೆ ಗಳನ್ನು ಅನೇಕ ವರ್ಷಗಳಿಂದ ನಿಯತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ದಾನಧರ್ಮ ಮತ್ತು ಅನ್ನದಾನ: ಧರ್ಮಸ್ಥಳದಲ್ಲಿ ಪ್ರತಿದಿನ ಲಕ್ಷಾಂತರ ಯಾತ್ರಿಕರಿಗೆ/ಭಕ್ತರಿಗೆ ಅನ್ನಪೂರ್ಣ ಭವನದಲ್ಲಿ ಸ್ವಚ್ಛ ಮತ್ತು ಪುಷ್ಟಿದಾಯಕ ಊಟವನ್ನು ಉಚಿತವಾಗಿ ನೀಡಲಾಗು ತ್ತದೆ. ತೊಂದರೆಗೀಡಾದವರಿಗೆ ಆರ್ಥಿಕ, ವೈದ್ಯಕೀಯ, ಶೈಕ್ಷಣಿಕ ವಿಷಯಗಳಲ್ಲಿ ಸಹಾಯ ಮಾಡ ಲಾಗುತ್ತದೆ. ವೃದ್ಧರು, ಅಂಗವಿಕಲರು ಮತ್ತು ದೈನ್ಯಾವಸ್ಥೆಯಲ್ಲಿರುವವರಿಗೆ ಮಾಸಿಕ ಪಿಂಚಣಿ ಮತ್ತು ನೆರವನ್ನು ನೀಡಲಾಗುತ್ತದೆ.

ಶಿಕ್ಷಣ ಮತ್ತು ಕೌಶಲಾಭಿವೃದ್ಧಿ: ಶ್ರೀಕ್ಷೇತ್ರವು ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯ ವನ್ನು ನೀಡುತ್ತಿದೆ. ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ 50ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಆಯುರ್ವೇದ, ಕಾನೂನು, ಮ್ಯಾನೇಜ್‌ಮೆಂಟ್ ಮುಂತಾದ ವಿಭಾಗಗಳಿವೆ.

ಸಿದ್ಧವನ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ನೀಡಲಾಗುತ್ತದೆ ಮತ್ತು ಯೋಗ, ಸಂಸ್ಕೃ ತ, ಧಾರ್ಮಿಕ, ಸಾಂಸ್ಕೃತಿಕ ಶಿಕ್ಷಣವನ್ನು ನೀಡಲಾಗುತ್ತದೆ. ಈ ಉಪಕ್ರಮದಿಂದಾಗಿ ಸಾವಿರಾರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿದೆ. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ, ಪಠ್ಯಪುಸ್ತಕ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ: ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಒದಗಿಸಲೆಂದು ಧರ್ಮಸ್ಥಳ ಟ್ರಸ್ಟ್ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ‘ರುಡ್‌ಸೆಟ್’ ತರಬೇತಿ ಕೇಂದ್ರಗಳಲ್ಲಿ ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳಲ್ಲಿ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುತ್ತಿದೆ ಮತ್ತು ಇವು 17 ರಾಜ್ಯಗಳಲ್ಲಿ 27 ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಇದರಿಂದಾಗಿ ಲಕ್ಷಾಂತರ ಯುವಜನರಿಗೆ ಪ್ರಯೋಜನವಾಗುತ್ತಿದೆ. ‘ಎಸ್‌ಕೆಡಿಆರ್‌ಡಿಪಿ’ ಯೋಜನೆ ಯ ಮೂಲಕ ಸ್ವಸಹಾಯ ಗುಂಪುಗಳನ್ನು ಬಲಪಡಿಸಿ ಮಹಿಳಾ ಸಬಲೀಕರಣ, ಮೈಕ್ರೋಫೈನಾನ್ಸ್, ಆರೋಗ್ಯ, ಶಿಕ್ಷಣ, ಗೃಹನಿರ್ಮಾಣ ಮತ್ತು ಇಂಧನ ಸಂಬಂಧಿತ ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ಜತೆಗೆ ಬ್ಯಾಂಕುಗಳ ಸಹಯೋಗದಲ್ಲಿ ಯುವಕರಿಗೆ ಸಾಲಸೌಲಭ್ಯ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ನೀಡಲಾಗುತ್ತಿದೆ.

ಪರಿಸರ ಸಂರಕ್ಷಣೆ: ಶ್ರೀಕ್ಷೇತ್ರದ ವತಿಯಿಂದ ಸಂಸ್ಕೃತಿ, ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ವಿಶೇಷ ಪ್ರಾಮುಖ್ಯವನ್ನು ನೀಡಲಾಗುತ್ತಿದೆ. ೨೨೪ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರವು ಟೊಂಕ ಕಟ್ಟಿದೆ. ಪ್ರತಿವರ್ಷವೂ ನಡೆಸಲಾಗುವ ಸರ್ವಧರ್ಮ ಸಮಾವೇಶದಲ್ಲಿ ವಿವಿಧ ಧರ್ಮಗಳ ನಾಯಕರು, ಪಂಡಿತರು ಮತ್ತು ಸಮಾಜ ಸೇವಕರು ಪಾಲ್ಗೊಂಡು, ಸಹಾನುಭೂತಿ-ಸಹಬಾಳ್ವೆ-ಸಾಮಾಜಿಕ ಜಾಗೃತಿಯ ಬಗ್ಗೆ ಚರ್ಚಿಸುತ್ತಾರೆ.

ಯಕ್ಷಗಾನ, ನವಲಗುಂದ ಕಲೆ, ಕಸ್ತೂರಿ ಎಂಬ್ರಾಯ್ಡರಿ ಮುಂತಾದ ಕಲೆಗಳಿಗೆ ಉತ್ತೇಜನ ನೀಡಲಾ ಗುತ್ತಿದೆ. ಮಂಜುಶ್ರೀ ಕಲಾಸಂಗ್ರಹಾಲಯ ಮುಂತಾದವುಗಳ ಮೂಲಕ ಭಾರತೀಯ ಪರಂಪರೆ ಮತ್ತು ಕಲಾಪ್ರಕಾರಗಳನ್ನು ಸಂರಕ್ಷಿಸಲಾಗುತ್ತಿದೆ. ಜತೆಗೆ ಗಿಡ-ಮರಗಳನ್ನು ನೆಡುವಿಕೆ, ನದಿ-ತೀರ್ಥಗಳ ಶುದ್ಧೀಕರಣ ಮತ್ತು ಪರಿಸರ ಜಾಗೃತಿ ಅಭಿಯಾನಗಳನ್ನು ನಿರಂತರವಾಗಿ ನಡೆಸ ಲಾಗುತ್ತಿದೆ.

ಕರ್ನಾಟಕದ ಪಾಲಿನ ಅಚ್ಚಳಿಯದ ಸೇವಾಧಾಮವಾಗಿರುವ ಧರ್ಮಸ್ಥಳದಲ್ಲಿ ಧರ್ಮ ಮತ್ತು ದಯೆಯ ಆಚರಣೆಯೊಂದಿಗೆ ಸಮಾಜಸೇವೆಯಂಥ ಮಹೋನ್ನತ ಕಾರ್ಯವೂ ನಡೆಯುತ್ತಿದೆ. ಆದರೆ ಇವುಗಳನ್ನರಿಯದೆ, ಅರ್ಥವಿಲ್ಲದೆ ಮತ್ತು ಅಸಂಬದ್ಧವಾಗಿ ಟೀಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ. ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಇಲ್ಲಿನ ಸಂಸ್ಥೆಗಳನ್ನು

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವವರು, ಸಮಾಜಸೇವೆಯ ಅರ್ಥವನ್ನೇ ಅರಿಯ ದವರಂತೆ ಕಾಣುತ್ತಾರೆ. ಸಮಾಜದ ಪ್ರಗತಿಗೆ ದಾರಿದೀಪವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಅಲ್ಲಿನ ವ್ಯವಸ್ಥೆಗೆ ಕಳಂಕವನ್ನು ಮೆತ್ತಲು ಯತ್ನಿಸುವುದು ಕೇವಲ ಅಜ್ಞಾನ ಮತ್ತು ಅಸೂಯೆಯ ಪ್ರತೀಕವಾಗಿದೆ. ಅದೇನೇ ಇರಲಿ, ಕೊನೆಗೆ ಗೆಲುವಾಗುವುದು ಧರ್ಮದ್ದೇ...

(ಲೇಖಕರು ಹವ್ಯಾಸಿ ಬರಹಗಾರರು)