Raghavendra Jois Column: ಬ್ಯಾಂಕಿಂಗ್ʼನಲ್ಲಿ ನಾವೀನ್ಯ
ಖಾತೆ ತೆರೆಯಲು, ಠೇವಣಿ ಇರಿಸಲು, ಮುಂಗಡ ಪಡೆಯಲು, ಡಿಡಿ ತೆಗೆಸಲು, ಇನ್ನೊಬ್ಬರಿಗೆ ಹಣ ಕಳಿಸಲು ಹೀಗೆ ಎಲ್ಲಾ ಕೆಲಸಗಳಿಗೂ ಬಿಡುವು ಮಾಡಿಕೊಂಡು ಬ್ಯಾಂಕಿಗೇ ಹೋಗಬೇಕಿತ್ತು. ಅದನ್ನು ಕೂಡ ಬ್ಯಾಂಕು ಕಾರ್ಯನಿರ್ವಹಿಸುವ ದಿನದಂದು, ಅದರ ನಿಗದಿತ ಕಾರ್ಯಾವಧಿಯೊಳಗೇ ಮುಗಿಸಿ ಕೊಳ್ಳಬೇಕಿತ್ತು.


ದುಡ್ಡು-ಕಾಸು
ರಾಘವೇಂದ್ರ ಜೋಯಿಸ್, ಮೈಸೂರು
ಈ ಕಾಲಘಟ್ಟದಲ್ಲಿ ತಂತ್ರಜ್ಞಾನವೆಂಬ ಶಕ್ತಿಯು ಎಲ್ಲ ಕ್ಷೇತ್ರಗಳನ್ನೂ ಬದಲಾಯಿಸುತ್ತಿದೆ. ಈ ಬದಲಾವಣೆಯ ಪ್ರಭಾವಕ್ಕೆ ಬ್ಯಾಂಕಿಂಗ್ ಕ್ಷೇತ್ರವೂ ಹೊರತಾಗಿಲ್ಲ. ಹಣಕಾಸು ಸೇವಾ ವ್ಯವಸ್ಥೆ ಯಲ್ಲಿ ನಡೆದುಬಂದ ಪರಂಪರಾನುಗತ ಪದ್ಧತಿಗಳ ಜತೆಗೆ ನವೀನ ತಂತ್ರಜ್ಞಾನಗಳ ಶ್ರೇಣಿಯು ಈಗ ನವೋದ್ಯಮದ ಮಾರ್ಗವನ್ನು ತೆರೆದಿದೆ.
ಇದನ್ನು ನಾವು ‘ಬ್ಯಾಂಕಿಂಗ್‌ನಲ್ಲಿನ ನಾವೀನ್ಯ’ ಎಂದು ಹೇಳಬಹುದು. ಬ್ಯಾಂಕ್‌ನಲ್ಲಿ ಹೊಸ ಸೇವೆ ಗಳ ಪರಿಚಯ, ಗ್ರಾಹಕ ಅನುಭವದ ಸುಧಾರಣೆ, ಕಾರ್ಯಕ್ಷಮತೆಯ ವೃದ್ಧಿಯ ಮೂಲಕ ಇದು ವ್ಯಕ್ತವಾಗುತ್ತದೆ. ಸುಮಾರು 25-30 ವರ್ಷದ ಹಿಂದೆ ಬ್ಯಾಂಕಿನ ಸೇವೆ ಪಡೆಯಲು ಗ್ರಾಹಕರು ಬ್ಯಾಂಕಿ ಗೇ ಭೇಟಿ ನೀಡಬೇಕಿತ್ತು.
ಉದಾಹರಣೆಗೆ, ಖಾತೆ ತೆರೆಯಲು, ಠೇವಣಿ ಇರಿಸಲು, ಮುಂಗಡ ಪಡೆಯಲು, ಡಿಡಿ ತೆಗೆಸಲು, ಇನ್ನೊಬ್ಬರಿಗೆ ಹಣ ಕಳಿಸಲು ಹೀಗೆ ಎಲ್ಲಾ ಕೆಲಸಗಳಿಗೂ ಬಿಡುವು ಮಾಡಿಕೊಂಡು ಬ್ಯಾಂಕಿಗೇ ಹೋಗಬೇಕಿತ್ತು. ಅದನ್ನು ಕೂಡ ಬ್ಯಾಂಕು ಕಾರ್ಯನಿರ್ವಹಿಸುವ ದಿನದಂದು, ಅದರ ನಿಗದಿತ ಕಾರ್ಯಾವಧಿಯೊಳಗೇ ಮುಗಿಸಿಕೊಳ್ಳಬೇಕಿತ್ತು.
ಇದನ್ನೂ ಓದಿ: Roopa Gururaj Column: ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ
ಅದೇ ರೀತಿ, ಉಳಿತಾಯ ಖಾತೆ, ಠೇವಣಿಗಳ ಮೇಲೆ ಬಡ್ಡಿ ಜಮೆ ಮಾಡುವುದು, ಸಾಲಗಳಿಗೆ ಬಡ್ಡಿ ಹಾಕುವುದು ಸೇರಿದಂತೆ ಎಲ್ಲಾ ಕೆಲಸಗಳನ್ನೂ ಬ್ಯಾಂಕಿನ ಸಿಬ್ಬಂದಿಯೇ ಮಾಡುತ್ತಿದ್ದರು. ಇದು ಕ್ಲಿಷ್ಟಕರ ಕೆಲಸವಾಗಿತ್ತು. ಆದರೀಗ ಈ ಚಿತ್ರಣ ಬದಲಾಗಿದೆ. ನಡೆದಿರುವ-ನಡೆಯುತ್ತಲೇ ಇರುವ ತಾಂತ್ರಿಕ ಆವಿಷ್ಕಾರಗಳಿಂದಾಗಿ, ಬ್ಯಾಂಕಿನಲ್ಲಿ ದೊರೆಯುವ ಬಹುತೇಕ ಸೇವೆಗಳನ್ನು ಗ್ರಾಹಕರು ಈಗ ತಾವಿರುವ ಜಾಗದಿಂದಲೇ ಯಾವ ಸಮಯದಲ್ಲಿ ಬೇಕಾದರೂ ಪಡೆದುಕೊಳ್ಳಬಹುದು.
ಬ್ಯಾಂಕಿಂಗ್ ವಲಯದಲ್ಲಾಗಿರುವ ಒಂದಿಷ್ಟು ಆವಿಷ್ಕಾರಗಳತ್ತ ಕಣ್ಣುಹಾಯಿಸೋಣ.. ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್: ಈಗ ಸಾಮಾನ್ಯ ಗ್ರಾಹಕರು ಕೂಡ ತಮ್ಮ ಮೊಬೈಲ್/ಕಂಪ್ಯೂ ಟರ್/ಟ್ಯಾಬ್/ಲ್ಯಾಪ್‌ಟಾಪ್ ಮೂಲಕ ಹಣ ವರ್ಗಾವಣೆ, ಖಾತೆ ಪರಿಶೀಲನೆ, ಠೇವಣಿ ಖಾತೆ ತೆರೆಯು ವಿಕೆ, ಠೇವಣಿ ವಾಪಸ್ ಪಡೆಯುವಿಕೆ, ಠೇವಣಿ ಮೇಲೆ ಸಾಲ ಪಡೆಯುವಿಕೆ, ಇತರ ಸಾಲಗಳಿಗೆ ಕೋರಿಕೆ ಸಲ್ಲಿಕೆ, ಬಿಲ್ ಪಾವತಿ, ಟಿಕೆಟ್ ಬುಕಿಂಗ್, ಮೊಬೈಲ್ ರೀಚಾರ್ಜ್ ಮುಂತಾದ ಸೇವೆಗಳನ್ನು ಮನೆಯಿಂದಲೇ ತಮ್ಮ ಅನುಕೂಲದ ಸಮಯದಲ್ಲಿ ಮಾಡಬಹುದು.
ಡಿಜಿಟಲ್ ವಾಲೆಟ್ ಮತ್ತು ಯುಪಿಐ: ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಮುಂತಾದ ಸೇವೆಗಳು ವ್ಯವಹಾರಗಳನ್ನು ಸುಲಭಗೊಳಿಸಿವೆ. ಈಗ ಎಲ್ಲೇ ಏನೇ ಖರೀದಿಸಿದರೂ ಹಣವನ್ನು ಕೊಂಡೊ ಯ್ಯುವ ಅವಶ್ಯಕತೆಯಿಲ್ಲ. ಚಿಲ್ಲರೆಯ ಸಮಸ್ಯೆಯಿಲ್ಲ. ಸಣ್ಣ ವ್ಯಾಪಾರಸ್ಥರು ಕೂಡ ಈಗ ಗೂಗಲ್ ಪೇ ಮೂಲಕ ಹಣ ಸ್ವೀಕರಿಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಮುಂದೆ ಅವರಿಗೆ ತಮ್ಮ ವ್ಯಾಪಾರದ ಅಭಿವೃದ್ಧಿಗೋ ಅಥವಾ ವೈಯಕ್ತಿಕ ಅಗತ್ಯ ಗಳಿಗೋ ಬ್ಯಾಂಕಿನಿಂದ ಸುಲಭವಾಗಿ ಸಾಲ ಸಿಗಬಹುದು.
ಎಟಿಎಂ ಮತ್ತಿತರ ಸೌಲಭ್ಯಗಳು: ಗ್ರಾಹಕರು ಸಮಯ ಮತ್ತು ಸ್ಥಳದ ನಿರ್ಬಂಧವಿಲ್ಲದೆ ತಮ್ಮ ಖಾತೆಗೆ ಎಟಿಎಂ ಮೂಲಕ ಹಣವನ್ನು ಜಮಾ ಮಾಡಬಹುದು ಮತ್ತು ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಇನ್ನು, V-CIP (Video based Customer Identification Process) ವ್ಯವಸ್ಥೆ ಯ ಮೂಲಕ ಮನೆಯಿಂದಲೇ ಖಾತೆ ತೆರೆಯುವ ಅವಕಾಶವೂ ಇದೆ.
ಗ್ರಾಹಕ ಸಹಾಯಕ ಕೇಂದ್ರಗಳಲ್ಲಿ ಚಾಟ್‌ಬಾಟ್‌ಗಳು, ಡೇಟಾ ಅನಲಿಟಿಕ್ಸ್ ಮುಂತಾದವುಗಳ ನೆರವಿನಿಂದ ನಿಖರವಾದ ಸೇವೆಗಳನ್ನು ಪಡೆಯಬಹುದು, ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳ ಬಹುದು. ‘ಬ್ಲ್ಯಾಕ್ ಚೈನ್’ ತಂತ್ರಜ್ಞಾನವು ಸುರಕ್ಷಿತ ಹಣಕಾಸು ವ್ಯವಹಾರಗಳಿಗೆ ಮತ್ತು ಡಿಜಿಟಲ್ ದಾಖಲೆಗಳ ನಿರ್ವಹಣೆಗೆ ಸಹಾಯಕವಾಗಿದೆ.
ಈ ಹೊಸ ಆವಿಷ್ಕಾರಗಳು/ತಂತ್ರಜ್ಞಾನಗಳಿಂದಾಗಿ ಬ್ಯಾಂಕಿನ ಗ್ರಾಹಕರು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಸೇವೆಗಳನ್ನು ಪಡೆಯುವುದು ಸಾಧ್ಯವಾಗಿದೆ. ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಸೇವೆ ನೀಡುವುದಕ್ಕೆ ಬ್ಯಾಂಕುಗಳಿಗೆ ಸಾಧ್ಯವಾಗುತ್ತಿದೆ. ಬ್ಯಾಂಕಿನ ಶಾಖೆಗಳು ಇಲ್ಲದ ಜಾಗಗಳಿಗೂ ಬ್ಯಾಂಕ್ ಸೇವೆಗಳು ಈಗ ತಲುಪುವಂತಾಗಿದೆ. ಆದರೆ, ಈ ಹೊಸ ತಂತ್ರಜ್ಞಾನಗಳ ಬಳಕೆಗೆ ದಾಂಗುಡಿಯಿಡುವ ಗ್ರಾಹಕರನ್ನು ಸೈಬರ್ ವಂಚಕರಿಂದ ರಕ್ಷಿಸಬೇಕಾದ ಜವಾಬ್ದಾರಿಯೂ ಬ್ಯಾಂಕಿನ ಮೇಲಿದೆ.
ಗ್ರಾಹಕರ ಖಾತೆಯ ಡಾಟಾ ಭದ್ರತೆಯ ಬಗ್ಗೆಯೂ ಬ್ಯಾಂಕುಗಳು ಹೆಚ್ಚಿನ ಕ್ರಮ ಕೈಗೊಳ್ಳ ಬೇಕಾಗು ತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಆವಿಷ್ಕಾರಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರಭಾ ವಿತಗೊಳಿಸಲಿವೆ. ಆದರೆ, ಡಿಜಿಟಲ್ ಬ್ಯಾಂಕಿಂಗ್ ನಡುವೆಯೂ ಬ್ಯಾಂಕುಗಳು ತಮ್ಮ ಗ್ರಾಹಕರ ಜತೆಗೆ ಒಂದು ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕಿದೆ.
(ಲೇಖಕರು ಬ್ಯಾಂಕ್ ಅಧಿಕಾರಿ)