ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಬಿಡಿಸಲಾಗದ ದ್ವಿಪಕ್ಷೀಯ ಸಂಬಂಧದ ಗಂಟುಗಳು

2019ರ ಆಗಸ್ಟ್ 7ರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆ ಯಲು ಸಂವಿಧಾನದ 370ನೇ ವಿಧಿಯನ್ನು ಭಾರತ ಸರಕಾರ ರದ್ದುಗೊಳಿಸಿದ ನಂತರ ಪಾಕಿಸ್ತಾನವು ಭಾರತದ ಜೊತೆಗಿನ ವ್ಯಾಪಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿತು.

ಸಂಗತ

ಕಳೆದ ವಾರ ಭಾರತದ 61 ಗಣ್ಯರು ಹಾಗೂ ಪಾಕಿಸ್ತಾನದ 56 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀ- ಅವರನ್ನುದ್ದೇಶಿಸಿ ಜಂಟಿ ಪತ್ರವೊಂದನ್ನು ಬರೆದಿದ್ದರು. ಅದು ಸಾಕಷ್ಟು ಸುದ್ದಿಯಾಗಿತ್ತು. ಪತ್ರಕ್ಕೆ ಸಹಿ ಹಾಕಿದವರು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮಾತುಕತೆ ಪುನಾರಂಭ ಆಗಬೇಕೆಂದೂ, ಸಹಜ ಸ್ಥಿತಿ ನೆಲೆಸುವಂತೆ ಸಂಬಂಧವನ್ನು ಸುಧಾರಿಸಿಕೊಳ್ಳಬೇಕೆಂದೂ, ಶಾಂತಿ ಸ್ಥಾಪನೆಗೆ ಮಾತುಕತೆಯೇ ಏಕೈಕ ಪರಿಹಾರವೆಂದೂ ಅಭಿಪ್ರಾಯಪಟ್ಟಿದ್ದರು. ವೈಯಕ್ತಿಕವಾಗಿ ನಾನು ಕೂಡ ಉಭಯ ದೇಶಗಳ ನಡುವೆ ಶಾಂತಿ ನೆಲೆಸಬೇಕೆಂದು ಬಯಸುತ್ತೇನೆ. ಆದರೆ ಇಲ್ಲೊಂದು ಮೂಲಭೂತ ಪ್ರಶ್ನೆಯಿದೆ. ಈ ಎರಡು ದೇಶಗಳ ನಡುವಿನ ಸಂಬಂಧ ಹಳಿ ತಪ್ಪುವಂತೆ ಮಾಡಿದವರು ಯಾರು? ಗಂಟುಗಳು ಸಂಕೀರ್ಣವಾಗುವಂತೆ ಮಾಡಿದವರು ಯಾರು? ಉತ್ತರ ಹುಡುಕಲು ಆಳಕ್ಕಿಳಿಯುವ ಮುನ್ನ ಎರಡೂ ದೇಶಗಳ ನಡುವೆ ಕೆಲ ವರ್ಷಗಳಿಂದ ಅತ್ಯಂತ ಪ್ರಮುಖ ಸಮಸ್ಯೆಯಾದ ಸಂಗತಿಗಳನ್ನು ನೋಡೋಣ.

2019ರ ಆಗಸ್ಟ್ 7ರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧ ಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯಲು ಸಂವಿಧಾನದ 370ನೇ ವಿಧಿಯನ್ನು ಭಾರತ ಸರಕಾರ ರದ್ದುಗೊಳಿಸಿದ ನಂತರ ಪಾಕಿಸ್ತಾನವು ಭಾರತದ ಜೊತೆಗಿನ ವ್ಯಾಪಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿತು. ಜೊತೆಗೆ, ರಾಜತಾಂತ್ರಿಕ ಸಂಬಂಧವನ್ನು ಬಿಗಿಗೊಳಿಸಿತು. ಬಳಿಕ ಇಸ್ಲಾಮಾಬಾದ್‌ ನಲ್ಲಿದ್ದ ಭಾರತದ ಹೈಕಮಿಷನರ್‌ರನ್ನು ಉಚ್ಚಾಟಿಸಿತು.

ಹೀಗಾಗಿ, ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ಮೊದಲು ಕೈಗೊಂಡವರು ಯಾರು ಎಂಬ ಪ್ರಶ್ನೆಗೆ ಉತ್ತರ ಪಾಕಿಸ್ತಾನ. ಅಂದು ಪಾಕಿಸ್ತಾನದ ಪ್ರಧಾನಿಯಾಗಿದ್ದವರು ಇಮ್ರಾನ್ ಖಾನ್. ದೇಶದ ವಿದೇಶಾಂಗ ಸಚಿವ, ರಕ್ಷಣಾ ಸಚಿವ, ಗೃಹ ಸಚಿವ ಹಾಗೂ ಹಿರಿಯ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳ ಜೊತೆಗೆ ಅವರು ಸಭೆ ನಡೆಸಿಯೇ ಈ ನಿರ್ಧಾರವನ್ನು ಕೈಗೊಂಡಿದ್ದರು.

ಅದೇ ಸಭೆಯಲ್ಲಿ, ಭಾರತದ ಸ್ವಾತಂತ್ರ್ಯೋತ್ಸವದ ದಿನವಾದ ಆಗಸ್ಟ್ 15ನ್ನು ಕರಾಳ ದಿನವೆಂದು ಗುರುತಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು. ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನ ಅದನ್ನು ಮಾಡಿತ್ತು. ಅಂತಹ ದೇಶದ ಜೊತೆಗೆ ಸಂಬಂಧವನ್ನು ಮರುಸ್ಥಾಪನೆ ಮಾಡಿಕೊಳ್ಳಬೇಕು ಎಂಬ ಚರ್ಚೆ ಶುರುವಾದರೆ ಎಂತಹ ಭಾರತೀಯನಿಗೂ ರಕ್ತ ಕುದಿಯುವುದಿಲ್ಲವೇ? ಸಂಬಂಧ ಹಾಳಾಗು ವುದು ಅಲ್ಲಿಗೇ ನಿಲ್ಲಲಿಲ್ಲ. ಭಾರತೀಯ ಚಿತ್ರರಂಗವು ಪಾಕಿಸ್ತಾನದ ಕಲಾವಿದರಿಗೆ ಬಾಗಿಲು ಬಂದ್ ಮಾಡಿತು.

ಇದನ್ನೂ ಓದಿ: Dr Vijay Darda Column: ನಂಬಿಕೆಯ ಗರ್ಭಗುಡಿಗೇ ಕೆಸರು ಚೆಲ್ಲಿದ ವಂಚಕರು!

ಹಾಗೇಕೆ ಮಾಡಬೇಕಿತ್ತು ಎಂದು ಇವತ್ತಿಗೂ ಪ್ರಶ್ನೆ ಕೇಳುವವರಿದ್ದಾರೆ. ಉತ್ತರ ಸ್ಪಷ್ಟವಾಗಿದೆ; 2016ರಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಉರಿಯಲ್ಲಿ 19 ಭಾರತೀಯ ಯೋಧರನ್ನು ಹತ್ಯೆಗೈದಿ ದ್ದಕ್ಕೆ ನಮ್ಮ ಚಿತ್ರರಂಗ ನೀಡಿದ್ದ ದಿಟ್ಟ ಉತ್ತರವದು. 2012-13ರಿಂದಲೇ ಭಾರತ ಮತ್ತು ಪಾಕಿಸ್ತಾನ ದ ನಡುವೆ ಕ್ರಿಕೆಟ್ ಸಂಬಂಧ ಕೂಡ ಕಡಿದುಹೋಗಿದೆ. ಏಕೆಂದರೆ, ಭಯೋತ್ಪಾದನೆ ಮತ್ತು ಕ್ರಿಕೆಟ್ ಆಟ ಏಕಕಾಲಕ್ಕೆ ನಡೆಯಲು ಸಾಧ್ಯವಿಲ್ಲ.

ಎರಡೂ ದೇಶಗಳ ಆಟಗಾರರು ಏಷ್ಯಾ ಕಪ್‌ನಂತಹ ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಈಗಲೂ ಮುಖಾ ಮುಖಿ ಆಗುತ್ತಿದ್ದಾರೆ. ಏಕೆಂದರೆ ಭಾರತವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಂಬಂಧಿಸಿದ ಸಂಸ್ಥೆಗಳನ್ನು ಗೌರವಿಸುತ್ತದೆ. ಆದರೂ ಭಾರತ ಮತ್ತು ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತದೆ ಅಂದರೆ ಅಲ್ಲೊಂದು ಬಿಗುವಿನ ವಾತಾವರಣ ಇದ್ದೇ ಇರುತ್ತದೆ. ಅದನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ.

2025ರ ಏಷ್ಯಾ ಕಪ್ ಇದಕ್ಕೆ ಒಳ್ಳೆಯ ಉದಾಹರಣೆ. ಭಾರತ ಆ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭ ವಿವಾದಕ್ಕೀಡಾಯಿತು. ಭಾರತೀಯ ಆಟಗಾರರು ಅಂದಿನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸೀನ್ ನಕ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿ, ಬೇರೆ ಯಾರಿಂದಲಾದರೂ ಟ್ರೋಫಿ ಕೊಡಿಸುವಂತೆ ಕೇಳಿಕೊಂಡರು. ಭಾರತದ ಆಕ್ಷೇಪ ಕ್ರಿಕೆಟ್‌ನ ಶಿಷ್ಟಾಚಾರಗಳಿಗೆ ಸಂಬಂಧಿಸಿದ್ದಾಗಿರಲಿಲ್ಲ, ಬದಲಿಗೆ ಅದು ರಾಜಕಾರಣಕ್ಕೆ ಸಂಬಂಧಿಸಿದ್ದಾಗಿತ್ತು.

ಏಕೆಂದರೆ ನಕ್ವಿ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದರು. ಯಾವ ದೇಶ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ಭಾರತ ಆರೋಪಿಸುತ್ತದೆಯೋ ಅದೇ ದೇಶದ ಸರಕಾರದಲ್ಲಿ ಆತ ಮಂತ್ರಿಯಾಗಿದ್ದರು. ಕುತೂಹಲಕರ ಸಂಗತಿಯೆಂದರೆ ನಕ್ವಿ ಆ ಟ್ರೋಫಿ ತೆಗೆದುಕೊಂಡು ಓಡಿಬಿಟ್ಟರು!

ಭಾರತ ಏನು ತಪ್ಪು ಮಾಡಿತ್ತು? ನಾನು ಆಶಾವಾದಿ. ಒಂದಲ್ಲಾ ಒಂದು ದಿನ ಈ ಎರಡೂ ದೇಶಗಳು ಶಾಂತಿ ಯಿಂದ ಸಹಬಾಳ್ವೆ ನಡೆಸಲು ಆರಂಭಿಸುತ್ತವೆ, ಎರಡೂ ದೇಶಗಳು ಪರಸ್ಪರರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತವೆ, ಒಬ್ಬರ ಮೇಲೊಬ್ಬರು ವಿಷ ಕಾರುವುದನ್ನು ನಿಲ್ಲಿಸುತ್ತವೆ ಎಂದು ಬಹಳ ವರ್ಷಗಳ ಕಾಲ ನನ್ನೊಳಗೆ ಭರವಸೆಯಿತ್ತು. ಪಾಕಿಸ್ತಾನಕ್ಕೆ ನಾನು ಹೋಗಿ ಬಂದ ಮೇಲಂತೂ ಆ ನಂಬಿಕೆ ಇನ್ನೂ ದೃಢವಾಗಿತ್ತು.

ಪ್ರತಿ ಬಾರಿ ಆ ದೇಶಕ್ಕೆ ಹೋದಾಗಲೂ ಅಲ್ಲಿನ ಜನರು ಬಹಳ ಸ್ನೇಹ ಮತ್ತು ಪ್ರೀತಿ ತೋರುತ್ತಿದ್ದರು. ಭಾರತೀಯರ ಬಗ್ಗೆ ಔದಾರ್ಯದಿಂದ ಮಾತನಾಡುತ್ತಿದ್ದರು. ಬೇರೆ ಬೇರೆ ಕ್ಷೇತ್ರದಲ್ಲಿರುವ ಪಾಕಿಸ್ತಾನೀಯರನ್ನು ನಾನು ಮಾತನಾಡಿಸು ತ್ತಿದ್ದೆ. ಆ ಮಾತುಕತೆಗಳಲ್ಲಿ ನನಗೆ ಅರ್ಥವಾದ ಸಂಗತಿ ಏನೆಂದರೆ, ಸಾಮಾನ್ಯ ಪಾಕಿಸ್ತಾನೀಯರಿಗೆ ಭಾರತದ ಜೊತೆಗೆ ಒಳ್ಳೆಯ ಮತ್ತು ರಚನಾತ್ಮಕ ಸಂಬಂಧವೇ ಬೇಕಿದೆ.

ಹಾಗಿದ್ದರೆ ದ್ವೇಷ ಮುಂದುವರೆಯಲು ಕಾರಣ ಯಾರು? ರಾಜಕಾರಣಿಗಳು. ಅವರಿಂದಾಗಿಯೇ ದ್ವಿಪಕ್ಷೀಯ ಸಂಬಂಧ ಗಂಟುಗಂಟಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಜೊತೆಗೆ ಆರಂಭಿಸಿದ ಶಾಂತಿ ಮಾತುಕತೆಯನ್ನು ಇವತ್ತಿಗೂ ಜನರು ನೆನಪಿಸಿಕೊಳ್ಳು ತ್ತಾರೆ. ಅಂದು ಅಟಲ್‌ಜೀ ಸ್ವತಃ ಲಾಹೋರ್ ಬಸ್ಸಿನಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದರು. ಅವರ ಜೊತೆಗೆ ಭಾರತದ ಅನೇಕ ಪ್ರಮುಖರು ಹಾಗೂ ಗಣ್ಯರಿದ್ದರು. ಬಾಲಿವುಡ್‌ನ ದಂತಕತೆ ದಿಲೀಪ್ ಕುಮಾರ್ ಕೂಡ ಹೋಗಿದ್ದರು. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಆ ಪ್ರವಾಸ ಬಹಳ ದೊಡ್ಡ ಭರವಸೆಯನ್ನು ಮೂಡಿಸಿತ್ತು. ಆದರೆ ನಂತರ ಆಗಿದ್ದೇನು? ಕಾರ್ಗಿಲ್!

ಆ ಯುದ್ಧದಿಂದಾಗಿ ಭಾರತೀಯರಿಗೆ ತಾವು ಮೋಸ ಹೋದೆವು ಎಂಬ ಭಾವನೆ ಮೂಡಿತ್ತು. ತುಂಬಾ ಸಿಟ್ಟುಗೊಂಡಿದ್ದ ದಿಲೀಪ್ ಕುಮಾರ್ ಅವರು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀ- ಅವರಿಗೆ -ನ್ ಮಾಡಿ, ‘ನೀವು ಭಾರತದ ಬೆನ್ನಿಗೆ ಚೂರಿ ಇರಿದಿರಿ’ ಎಂದು ಹೇಳಿದ್ದರು. ನವಾಜ್ ಷರೀಫ್‌ʼರಂತಹ ನಾಯಕನಿಂದ ಅವರು ಇದನ್ನು ನಿರೀಕ್ಷಿಸಿರಲಿಲ್ಲ! ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಎಲ್ಲರೂ ಆಶ್ಚರ್ಯಪಡುವಂತೆ ನವಾಜ್ ಷರೀಫ್ ಅವರ ಮನೆಗೆ ಆಮಂತ್ರಣವಿಲ್ಲದೆ ಹೋಗಿ ಸ್ನೇಹಹಸ್ತ ಚಾಚಿದ್ದರು. ಆದರೆ ಆ ಪ್ರಯತ್ನ ಕೂಡ ಮುಂದೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವಲ್ಲಿ ವಿ-ಲವಾಯಿತು. ಇಮ್ರಾನ್ ಖಾನ್ ಅವರೂ ಭಾರತದ ಜೊತೆಗೆ ಸಂಬಂಧ ಸುಧಾರಿಸಿ ಕೊಳ್ಳಬೇಕು ಎಂದು ಅನೇಕ ಬಾರಿ ಹೇಳಿದ್ದರು.

ಎರಡೂ ದೇಶಗಳ ಮುಖ್ಯಸ್ಥರೇ ಶಾಂತಿ ಹಾಗೂ ಸ್ನೇಹಕ್ಕೆ ಕೈಚಾಚಿದರೂ ಅದು ಇವತ್ತಿಗೂ ಮರೀಚಿಕೆಯಾಗಿಯೇ ಉಳಿದಿರುವುದೇಕೆ? ಪಾಕಿಸ್ತಾನದ ಜೊತೆಗೆ ಶಾಂತಿ ಮತ್ತು ಸ್ನೇಹ ಎರಡೂ ಸಾಧ್ಯವಿಲ್ಲ, ಏಕೆಂದರೆ ಆ ದೇಶದ ಸೇನೆ ಮತ್ತು ಗುಪ್ತಚರ ಸಂಸ್ಥೆಯಾಗಿರುವ ಐಎಸ್‌ಐಗೆ ಅದು ಬೇಕಿಲ್ಲ. 117ರ ಬದಲು 1017 ಅಥವಾ 100017 ಜನರು ಪತ್ರ ಬರೆದರೂ ಜನರಲ್ ಆಸಿಮ್ ಮುನಿರ್‌ಗೆ ಅದರಿಂದ ಏನೂ ಆಗುವುದಿಲ್ಲ!

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಕೊಳೆಯುವಂತೆ ಮಾಡಿದ ದೇಶ ಅದು. ಜನರ ಕೂಗನ್ನು ಕೇಳಿಸಿಕೊಳ್ಳುವವರು ಅಲ್ಲಿ ಯಾರೂ ಇಲ್ಲ. ಹಾಗಿರುವಾಗ ಯಾರೋ ಪತ್ರ ಬರೆದರೆ ಅದಕ್ಕೆ ಯಾರು ತಾನೇ ಕೇರ್ ಮಾಡುತ್ತಾರೆ? ಕೊಲಂಬೋದಲ್ಲಿ ಇತ್ತೀಚೆಗೆ ಲಂಡನ್ ಮೂಲದ ಚಿಂತಕರ ಚಾವಡಿಯೊಂದು ಪ್ರಾದೇಶಿಕ ಭದ್ರತೆ ಕುರಿತ ಸಮಾವೇಶ ಆಯೋಜಿಸಿತ್ತು. ಅದರ ಬಗ್ಗೆಯೂ ಸಾಕಷ್ಟು ಚರ್ಚೆಯಾಯಿತು. ಗಮನಿಸಬೇಕಾದ ಸಂಗತಿಯೆಂದರೆ, ಅದು ಅಧಿಕೃತವಾದ ದ್ವಿಪಕ್ಷೀಯ ಸಭೆಗಳು ನಡೆಯುವ ಸಮಾವೇಶ ಆಗಿರಲಿಲ್ಲ. ಅಲ್ಲಿ ಭಾರತ, ಪಾಕಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ಭಾಗವಹಿಸಿದ್ದವು. ಅಲ್ಲಿ ನಡೆದ ಮಾತುಕತೆ ಗಳನ್ನು ರಾಜತಾಂತ್ರಿಕ ಮಾತುಕತೆ ಎಂದು ಪರಿಗಣಿಸಿದರೆ ತಪ್ಪಾಗುತ್ತದೆ. ಈ ಹಿಂದೆಯೂ ಅಂತಹ ಸಾಕಷ್ಟು ಸಮಾವೇಶಗಳು ನಡೆದಿವೆ.

ಅಂತ್ಯಕ್ರಿಯೆಯಲ್ಲಿ ಮಗನೇಕಿಲ್ಲ?

ಉರ್ದು ಗೊತ್ತಿಲ್ಲದಿದ್ದರೆ ಫರ್ಜಾಂದ್ ಎಂಬ ಪದವೂ ಅರ್ಥವಾಗುವುದಿಲ್ಲ. ಆ ಪದದ ಅರ್ಥ ‘ಮಗ’ ಎಂದು. ಇರಾನ್‌ನಲ್ಲಿ ಹತ್ಯೆಗೀಡಾದ ಪರಮೋಚ್ಚ ನಾಯಕ ಅಯೋತೊಲ್ಲಾ ಅಲಿ ಖಮೇನಿಯ ಅಂತ್ಯಕ್ರಿಯೆಯಲ್ಲಿ ಮಗ ಸೆಯ್ಯೆದ್ ಮೊಜ್ತಬಾ ಹೊಸೇನಿ ಖಮೇನಿಯೇ ಭಾಗವಹಿಸಿರ ಲಿಲ್ಲ ಎಂಬುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಏಕೆ ಮಗ ತನ್ನ ತಂದೆಯ ಅಂತ್ಯಕ್ರಿಯೆಗೆ ಹೋಗಿಲ್ಲ? ವರದಿಗಳ ಪ್ರಕಾರ, ಅಂತ್ಯಕ್ರಿಯೆಗೆ ಹೋದರೆ ಆತನನ್ನು ಇಸ್ರೇಲ್ ಮತ್ತು ಅಮೆರಿಕದವರು ಹತ್ಯೆ ಗೈಯಬಹುದು ಎಂದು ಇರಾನ್‌ನ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ತಂದೆಯ ಮೇಲೆ ನಡೆದ ದಾಳಿಯಲ್ಲೇ ಮಗ ಕೂಡ ಗಂಭೀರವಾಗಿ ಗಾಯಗೊಂಡು ಈಗಾಗಲೇ ಅಜ್ಞಾತವಾಸ ದಲ್ಲಿದ್ದಾರೆ ಎಂಬ ವದಂತಿಗಳಿವೆ. ಶತ್ರುಗಳು ಈಗಲೂ ಅವರನ್ನು ಹುಡುಕುತ್ತಿದ್ದಾರೆ ಎಂಬುದು ಇರಾನ್‌ನ ಗುಪ್ತಚರ ಸಂಸ್ಥೆಗಳ ನಂಬಿಕೆ.

ಡಾ.ವಿಜಯ್‌ ದರಡಾ

View all posts by this author