ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S R S Murthy Column: ಕನ್ನಡವೇ ಗಾಯತ್ರಿ ಮಂತ್ರ, ಧೀ ಶಕ್ತಿಯನ್ನು ಪ್ರಚೋದಿಸುವ ತಂತ್ರ

ಸಾವಿರಾರು ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ, ಮತ್ತೆ ಕೆಲ ಸಿರಿಕಂಠದ ಕೋಗಿಲೆ ಗಳು ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ದಿದ್ದಾರೆ. ನಮ್ಮ ಸಂಸ್ಕೃತಿಯ ಶಿಲ್ಪಕಲೆಗಳನ್ನು ಹೊತ್ತು ನಿಂತಿರುವ ಗುಡಿಗೋಪುರಗಳು, ಚಿತ್ರಕಲೆಗಳು ಇವೆಲ್ಲವೂ ನಮ್ಮ ಇತಿಹಾಸವನ್ನು ಪುನಃ ಪುನಃ ಓದಿಸು ತ್ತವೆ. ಭವ್ಯ ಪರಂಪರೆಯುಳ್ಳನಮ್ಮ ‘ಕರ್ಣಾಟ’ ಪ್ರದೇಶವು ರಾಜಕೀಯದ ಕಾರಣಗಳಿಂದ ಅಲ್ಲ ತುಂಡಾಗಿ ಹರಿದು ಹೋಗಿ ಆನಂತರದಲ್ಲಿ ಏಕೀಕೃತಗೊಂಡು ‘ಕರ್ನಾಟಕ’ ವಾಯ್ತು.

ಕನ್ನಡ ಕಸ್ತೂರಿ

ಎಸ್.ಆರ್.ಎಸ್.ಮೂರ್ತಿ

ಕನ್ನಡದ ವಾರಸುದಾರನು ಮೊದಲು ಕನ್ನಡಕ್ಕಾಗಿ ತಾನೇನು ಸೇವೆ ಮಾಡಿದೆ? ಎಂದು ಸ್ವತಃ ಕೇಳಿಕೊಳ್ಳಬೇಕು. ಎಷ್ಟು ಪುಸ್ತಕ ಓದಿದ್ದೇನೆ? ಯಾವ್ಯಾವ ಕೃತಿಗಳು ಇಷ್ಟವಾದವು? ಸೌಂದರ್ಯ ತಾಣಗಳು, ಆಧ್ಯಾತ್ಮಿಕ ಕೇಂದ್ರಗಳು, ಮಠ-ಮಂದಿರಗಳು, ಕರಾವಳಿ ಸೇರಿದಂತೆ ಕರ್ನಾಟಕದ ಉದ್ದಗಲಕ್ಕೂ ಯಾವ್ಯಾವ ಜಾನಪದ ಸಂಸ್ಕೃತಿ ಇದೆ? ಯಾವ್ಯಾವ ಕಾಡು ಮೇಡುಗಳನ್ನು ಅಲೆದಿದ್ದೇನೆ? ಯಾವ್ಯಾವ ಕಾಡುಗಳಲ್ಲಿ ಎಂಥಾ ಔಷಧಿ ಗಿಡಗಳಿವೆ? ಎಂದು ಆತ ಅರಿಯಲು ಯತ್ನಿಸಬೇಕು.

ಗಾಯತ್ರಿ ಮಂತ್ರ’ ಸಾಧಾರಣ ಮಂತ್ರವಲ್ಲ. ನಮ್ಮ ಶಕ್ತಿಯನ್ನು ಉಜ್ವಲಗೊಳಿಸಿ, ‘ಧಿ ಶಕ್ತಿ’ಯನ್ನು ಪ್ರಚೋದಿಸುವಂಥ ಸಾಧನವದು. ಅದನ್ನು ಭಕ್ತಿಯಿಂದ ಜಪಿಸಲು, ಶಕ್ತಿಯ ಅಧಿದೇವತೆಯಾದ ಸವಿತೃ ಅಂದರೆ ಸೂರ್ಯ ನಮ್ಮೊಳಗಿನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತಾನೆ ಮತ್ತು ನಮ್ಮ ‘ಧಿ ಶಕ್ತಿ’ಯನ್ನು ಹೆಚ್ಚಿಸುತ್ತಾನೆ.

ಆದ್ದರಿಂದ ಗಾಯತ್ರಿಯನ್ನು ಪಠಣ ಮಾಡುತ್ತಾ ಬ್ರಹ್ಮಶಕ್ತಿಯನ್ನು ಪಡೆಯಬಹುದು ಎಂಬುದು ಹಿಂದೂಗಳ ನಂಬಿಕೆ. ಅನೇಕ ಸಾಧು-ಸಂತರು, ಋಷಿ-ಮುನಿಗಳು ಆ ಶಕ್ತಿಯನ್ನು ಪಡೆದಿದ್ದರು ಎಂಬುದು ಕೂಡಾ ನಿಜ. ಅದರಂತೆಯೇ, ಕನ್ನಡಿಗರು ಕನ್ನಡ ನುಡಿಯನ್ನೇ ಗಾಯತ್ರಿ ಮಂತ್ರದಂತೆ ಜಪಿಸಿದರೆ ಸಾಕು, ಕನ್ನಡಕ್ಕೆ ಕರ್ನಾಟಕಕ್ಕೆ ಹಾಗೂ ಈ ನಾಡಿನೊಳಗಿರುವ ನಮಗೆ, ಕನ್ನಡದ ಕೈಂಕರ್ಯಕ್ಕೆ ಧಿ ಶಕ್ತಿಯು ಬಂದೇ ಬರುತ್ತದೆಂಬ ಆಶಯದಿಂದ ಸಾಲಿ ರಾಮಚಂದ್ರರಾಯರು ‘ಕನ್ನಡ ನುಡಿಯೆನಗೆ ಗಾಯತ್ರೀ ಮಂತ್ರ’ ಎಂಬ ಈ ನುಡಿಯನ್ನು ರಚಿಸಿದ್ದಲ್ಲದೇ ಅವರು ಕೂಡಾ ಕನ್ನಡದ ಧಿ ಶಕ್ತಿಯನ್ನು ಪಡೆದು ಕನ್ನಡದ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದಾರೆ.

ಅವರು ರಚಿಸಿದ ಈ ಕವನ ಅದ್ಭುತವಾಗಿದೆ. ಕನ್ನಡಿಗನಿಗೆ ಕನ್ನಡ ನುಡಿಯೇ ಗಾಯತ್ರಿ ಮಂತ್ರ ಕನ್ನಡದ ನೆಲದ ಪುನಗೆ ಪಾವನ ತುಲಸಿ ಕನ್ನಡದ ನೆಲದ ನೀರ್ವೋನೆಲೆನಗೆ ಜೀವನದಿ ಕನ್ನಡದ ಶಬ್ದಮೆನಗೋಂಕಾರವು ಈ ಎನ್ನ ಕನ್ನಡದ ನುಡಿಯೇ ಗಾಯತ್ರಿಯದ್ಭುತ ಮಂತ್ರ ಅಂಥ ‘ಧಿ ಶಕ್ತಿ’ಯನ್ನು ನಾವು ಪಡೆಯಬೇಕಾದರೆ ನಾವು ಕೂಡಾ ಕನ್ನಡ ನುಡಿಯ ಗಾಯತ್ರಿಯನ್ನು ಅನುಷ್ಠಾನ ಮಾಡಬೇಕಲ್ಲವೇ? ಅದನ್ನು ಆನುಷ್ಠಾನ ಮಾಡಲು ಕನ್ನಡ ಭೂಮಿಯೇ ಪೀಠ, ಆ ಪೀಠದಲ್ಲಿ ಎಲ್ಲಿ ಬೇಕಾದರೂ ಕುಳಿತು, ನಿಂತು ಕನ್ನಡ ನುಡಿಯ ಮಂತ್ರವನ್ನು ಜಪಿಸಿದ್ದೇ ಆದರೆ ಕನ್ನಡದ ಧಿ ಶಕ್ತಿಯು ಕನ್ನಡಿಗನ ಆಸ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದು ಪ್ರತಿ ಕನ್ನಡಿಗನಿಗೆ ಅತ್ಯವಶ್ಯವಾಗಿದೆ. ಕಾರಣ, ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ನಾಡು, ನಡೆ, ನುಡಿ, ಗುಡಿ, ಗಡಿ ಇವೆಲ್ಲವನ್ನೂ ಹೊಂದಿರುವ ವಿಶಾಲವಾದ ಕರ್ಣಾಟ ಪ್ರದೇಶ ವನ್ನು ಹಲವಾರು ಧೀ ವೀರ ಶೂರರೆನಿಸಿಕೊಂಡ ರಾಜರುಗಳು ಆಳಿದ್ದಾರೆ.

ಇದನ್ನೂ ಓದಿ: Basavaraj Shivappa Giraganvi Column: ಮಾರಕವಾಗದಿರಲಿ ಕೇಂದ್ರದ ಎಥೆನಾಲ್‌ ನೀತಿ

ನೂರಾರು ಸಾಧುಸಂತರು ದಾಸವರೇಣ್ಯರು ಹುಟ್ಟಿ ಅಧ್ಯಾತ್ಮದ ತಿರುಳನ್ನು ಉಣಬಡಿಸಿzರೆ. ಹಲವಾರು ಕ್ರಾಂತಿ ಪುರುಷರು ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ ಮತ್ತು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಗುಲಾಮಿತನದಿಂದ ನಮ್ಮನ್ನು ಮುಕ್ತಿಗೊಳಿಸಿದ್ದಾರೆ.

ಸಾವಿರಾರು ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ, ಮತ್ತೆ ಕೆಲ ಸಿರಿಕಂಠದ ಕೋಗಿಲೆಗಳು ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ದಿದ್ದಾರೆ. ನಮ್ಮ ಸಂಸ್ಕೃತಿಯ ಶಿಲ್ಪಕಲೆ ಗಳನ್ನು ಹೊತ್ತು ನಿಂತಿರುವ ಗುಡಿಗೋಪುರಗಳು, ಚಿತ್ರಕಲೆಗಳು ಇವೆಲ್ಲವೂ ನಮ್ಮ ಇತಿಹಾಸವನ್ನು ಪುನಃಪುನಃ ಓದಿಸುತ್ತವೆ. ಭವ್ಯ ಪರಂಪರೆಯುಳ್ಳನಮ್ಮ ‘ಕರ್ಣಾಟ’ ಪ್ರದೇಶವು ರಾಜಕೀಯದ ಕಾರಣಗಳಿಂದ ಅಲ್ಲ ತುಂಡಾಗಿ ಹರಿದು ಹೋಗಿ ಆನಂತರದಲ್ಲಿ ಏಕೀಕೃತಗೊಂಡು ‘ಕರ್ನಾಟಕ’ ವಾಯ್ತು. ಅಧಿಕೃತವಾಗಿ ಸುಂದರ ಭಾಷೆಯ, ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ರಾಜ್ಯವೆಂದು ಇದು ಹೆಸರುಗಳಿಸಿದೆ. ಹುಯಿಲಗೊಳ ನಾರಾಯಣ ರಾಯರು ರಚಿಸಿದ ಕವನ ಇಂದಿನ ಜನಮಾನಸಕ್ಕೆ ಅದು ಅತಿ ಹೆಚ್ಚು ಪ್ರಸ್ತುತವೆನ್ನಿಸಿದೆ. ಯಾಕೆಂದರೆ ಕನ್ನಡಿಗರು ಈ ನೆಲದಲ್ಲಿ ಹುಟ್ಟಿ ಬೆಳೆದರೂ ಇಲ್ಲಿನ ಸಂಸ್ಕೃತಿಯನ್ನು ಮೈಗೆ ಅಂಟಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಎಲ್ಲಾ ಕಡೆಯಲ್ಲೂ ಔದ್ಯೋಗಿಕ/ಆರ್ಥಿಕ ಕ್ರಾಂತಿಯಾದಂತೆ ಎಲ್ಲಾ ಭಾಷಿಕರು ಇರುವಂಥ ಪರಿಸ್ಥಿತಿ ನಿರ್ಮಾಣವಾಗಿ ತಮ್ಮತನವನ್ನು ತೋರ್ಪಡಿಸುವ ಗೋಜಿಗೆ ಹೋಗುತ್ತಿಲ್ಲವಾದ್ದರಿಂದ, ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮುಂತಾದ ನಗರಗಳಲ್ಲಿ ಕನ್ನಡೇತರರು ತುಂಬಿ ತುಳುಕುತ್ತಿರುವ ಕಾರಣದಿಂದಾಗಿ ಕನ್ನಡವನ್ನು ಹುಡುಕ ಬೇಕಿದೆ.

Karnataka R

ಬೆಂಗಳೂರಲ್ಲಿ ತಮಿಳು, ಹುಬ್ಬಳ್ಳಿ-ಬೆಳಗಾವಿಗಳಲ್ಲಿ ಮರಾಠಿ ಮತ್ತು ಹಿಂದಿ, ಕಲಬುರ್ಗಿಯಲ್ಲಿ ಮರಾಠಿ-ಉರ್ದು ಹಾಗೂ ಈಗೀಗ ಉತ್ತರ ಭಾರತೀಯರು ವಲಸೆ ಬರತೊಡಗಿದ್ದು ನಮ್ಮ ವಾಸಿಸು ತ್ತಿದ್ದಾರೆ.

ಈ ಕಾರಣ ಹಿಂದಿಯನ್ನು ಜನರು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬಂತಾಗಿದೆ. ಇಲ್ಲಿರುವರೆಲ್ಲರೂ ಕನ್ನಡಿಗರೇ ಆದರೂ ಅದ್ಯಾಕೋ ಬೇರೆ ಭಾಷೆಗೆ ಮನಸ್ಸನ್ನು ನೀಡುತ್ತಾರೆ.

ಹಾಗೆ ನೋಡಿದರೆ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕನ್ನಡ ಮಾತಾಡುವರು ಅತಿ ಕಡಿಮೆ ಎನ್ನು ವಂಥಾ ಸ್ಥಿತಿ ನಿರ್ಮಾಣವಾಗಿದೆ. ನಮ್ಮೆದುರಿಗೆ ಕರ್ನಾಟಕದ ನಕ್ಷೆಯನ್ನು ಹಿಡಿದುಕೊಂಡರೆ, ಒಂದೊಂದೇ ಜಿಯನ್ನು ಅವಲೋಕಿಸಿದಾಗ, ಮೊದಲು ಮೈಸೂರನ್ನು ಗಮನಿಸಿದರೆ ಇತ್ತೀಚೆಗೆ ಅಲ್ಲಿ ತಮಿಳು ಹೆಚ್ಚಾಗುತ್ತಿದೆ.

ಇನ್ನು ಚಾಮರಾಜನಗರ ಜಿಯಂತೂ ತಮಿಳುನಾಡಿಗೆ ಒತ್ತಿಕೊಂಡಿರುವುದರ ಪರಿಣಾಮ ಅಲ್ಲಿ ತಮಿಳ್ಗನ್ನಡವನ್ನೇ ಹೆಚ್ಚಾಗಿ ನುಡಿಯುತ್ತಾರೆ. ಕನ್ನಡವನ್ನು ಬಿಟ್ಟು ಉಳಿದೆ ಭಾಷೆಯನ್ನು ಆಡುವವರೇ ಬೆಂಗಳೂರು ಕನ್ನಡಿಗರು, ಬೇರೇ ಮಾತೇ ಇಲ್ಲ. ನಾನು ಸಾಮಾಜಿಕ ಜಾಲತಾಣಗಳಲ್ಲಿ ‘ಗಾಂಚಾಲಿ ಬಿಡಿ-ಕನ್ನಡ ಮಾತಾಡಿ’ ಎಂಬ ನುಡಿಗಟ್ಟು ಜನಪ್ರಿಯವಾಗಿದೆ.

ನಾವು ಕೂಡಾ ಅವರೊಂದಿಗೆ ಸೇರೋಣ. ಕನ್ನಡ ಮಾತಾಡೋಣ ಕನ್ನಡದ ವ್ಯವಹರಿಸೋಣ ಎಂದು ನಿರ್ಧರಿಸಿಕೊಂಡರೆ ನಮ್ಮತನವನ್ನು ನಾವೇ ಕಾಪಾಡಿಕೊಂಡಂತಾಗುತ್ತದೆ. ಕನ್ನಡದ ವಾರಸುದಾರ ಮೊದಲು ಕನ್ನಡಕ್ಕಾಗಿ ತಾನೇನು ಸೇವೆ ಮಾಡಿದೆ? ಎಂದು ಸ್ವತಃ ಕೇಳಿಕೊಳ್ಳಬೇಕು. ಎಷ್ಟು ಪುಸ್ತಕ ಓದಿದ್ದೇನೆ? ಯಾವ್ಯಾವ ಕೃತಿಗಳು ಇಷ್ಟವಾದವು? ಸಾಹಿತಿಗಳು ಯಾರ‍್ಯಾರು ಇಷ್ಟ ವಾದರು? ಕರ್ನಾಟಕದ ಯಾವ್ಯಾವ ಪ್ರವಾಸಿತಾಣಗಳನ್ನು ನೋಡಿದ್ದೇನೆ? ಸೌಂದರ್ಯ ತಾಣಗಳು,

ಆಧ್ಯಾತ್ಮಿಕ ಕೇಂದ್ರಗಳು, ಬೆಂಗಳೂರು ಕನ್ನಡಿಗ ಎಂದು ಯಾರಾದರೂ ಹೇಳಿಕೊಂಡರೆ ಆತನಿಗೆ ಕನ್ನಡ ತೊದಲು ನುಡಿ, ಉಳಿದ ಎಲ್ಲವೂ ಮೊದಲ ನುಡಿ! ಎಂಥಾ ಸ್ಥಿತಿ ನಿರ್ಮಾಣವಾಗಿದೆ! ಈ ಪರಿಸ್ಥಿತಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಕೇಳಿದರೆ ತಪ್ಪೇ ಇಲ್ಲ ಎನಿಸುತ್ತದೆ.

ನಂತರ ಕೋಲಾರದ ಸ್ಥಿತಿಯೆಂದರೆ ತಮಿಳುನಾಡಿನ ಭಾಗ ನಮ್ಮ ಕರ್ನಾಟಕದಲ್ಲಿದೆ ಎಂದುಕೊಳ್ಳ ಬೇಕು. ಹಾಗೇ ಮೇಲೆ ಬಂದರೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಚಿತ್ರಗುರ್ಗ ಆ ಜಿಗಳ ಪೂರ್ವ ಭಾಗದ ಎಲ್ಲಾ ತಾಲೂಕುಗಳು ಆಂಧ್ರಮಯ. ಅದರಲ್ಲೂ ಪಾವಗಡವಂತೂ ಆಂಧ್ರದೊಳಗೇ ಹೊಕ್ಕಿದೆ. ಅಲ್ಲಿ ‘ತೆಲುಗುಗನ್ನಡ’ ಮಾತಾಡುವರೇ ಜಾಸ್ತಿ. ನಂತರ ರಾಯಚೂರು, ಬಳ್ಳಾರಿ, ಕೊಪ್ಪಳಗಳ ಗಡಿಭಾಗದಲ್ಲೂ ಅದೇ ಸ್ಥಿತಿ. ಅಲ್ಲಿ ಕನ್ನಡಿಗರಿದ್ದರೂ ತೆಲುಗನ್ನು ಆವಾಹನೆ ಮಾಡಿಕೊಂಡಿರುತ್ತಾರೆ.

ಕಲಬುರ್ಗಿ, ಬೀದರ್‌ನಲ್ಲಂತೂ ಮಿಶ್ರಭಾಷೆ, ಅಂದರೆ ಕನ್ನಡ-ತೆಲುಗು-ಉರ್ದು ಎಲ್ಲವೂ ಸಿಗುವ ಪ್ರದೇಶವಾಗಿದೆ. ವಿಜಯಪುರ, ಬಾಗಲಕೋಟೆಗಳಲ್ಲಿ ಕನ್ನಡವಿದ್ದರೂ ಮರಾಠಿ ಪ್ರಭಾವ ಕನ್ನಡದ ಮೇಲೆ ಇದ್ದೇ ಇದೆ. ಇನ್ನು ಬೆಳಗಾವಿ, ಚಿಕ್ಕೋಡಿಯಲ್ಲಂತೂ ಕನ್ನಡಿಗರು ಅಲ್ಪಸಂಖ್ಯಾತರಾಗು ತ್ತಿದ್ದಾರೆ.

ಕರಾವಳಿಯ ಭಾಗದಲ್ಲಿ ಕೊಂಕಣಿ-ತುಳು ಭಾಷೆಗಳದೇ ನಾಡಿಮಿಡಿತ. ಮಡಿಕೇರಿಯಲ್ಲಿ ಕೊಡವ ಭಾಷೆಯದೇ ಪಾರುಪತ್ಯ. ಈ ಎಲ್ಲಾ ಗಡಿಜಿಲ್ಲೆಗಳಲ್ಲಿ ಕನ್ನಡಿಗರೆಲ್ಲರೂ ಪಕ್ಕದ ರಾಜ್ಯದ ಭಾಷೆ ಯನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದ ಮಧ್ಯಭಾಗದ ಜಿಲ್ಲೆಗಳಲ್ಲಿ ಒಂದಿಷ್ಟು ಕನ್ನಡದ ವಾತಾವರಣವನ್ನು ನೋಡಬಹುದಾಗಿದೆ. ಇಷ್ಟೆ ಬೆಳವಣಿಗೆಗಳನ್ನು ಕಾಣುತ್ತಿದ್ದರೂ ಕನ್ನಡ ಶಾಲೆಗಳು ಮುಚ್ಚುತ್ತಿವೆ.

ಮಠ-ಮಂದಿರಗಳು, ಕರಾವಳಿ ಸೇರಿದಂತೆ ಕರ್ನಾಟಕದ ಉದ್ದಗಲಕ್ಕೂ ಯಾವ್ಯಾವ ಜಾನಪದ ಸಂಸ್ಕೃತಿ ಇದೆ? ಯಾವ್ಯಾವ ಕಾಡುಮೇಡುಗಳನ್ನು ಅಲೆದಿದ್ದೇನೆ? ಯಾವ್ಯಾವ ಕಾಡುಗಳಲ್ಲಿ ಎಂಥಾ ಔಷಽ ಗಿಡಗಳಿವೆ? ಎಂದು ಅರಿಯಲು ಆತ ಯತ್ನಿಸಬೇಕು. ಇಲ್ಲಿ ಎಲ್ಲವೂ ರಮ್ಯತಾಣ. ಕರ್ನಾಟಕದ ಮೂಲೆ ಮೂಲೆಯಲ್ಲೂ ಏನೇನಿದೆ ಎಂದು ತಿಳಿದುಕೊಳ್ಳಲು ಇಡೀ ಕರ್ನಾಟಕವನ್ನು ಕನ್ನಡ ಶಾಲೆಗೆ ಯಾರೂ ಬರುತ್ತಿಲ್ಲ ಎಂದು ವಾದ ಮಾಡುತ್ತಾರೆ. ಇತ್ತೀಚಿನ ಬೆಳವಣಿಗೆಗಳೆಂದರೆ ಎ ಕಡೆಯಲ್ಲೂ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿರುವುದರಿಂದ, ಎಲ್ಲೂ ಇಂಗ್ಲಿಷ್ ವ್ಯಾಪಿಸಿಕೊಂಡು ಎಲ್ಲವೂ ಇಂಗ್ಲಿಷ್ ಮಯವಾಗುತ್ತಿದೆ.

ಹೀಗಾಗಿ ಕನ್ನಡ ಸಂಸ್ಕೃತಿ ಮಾಯವಾಗುತ್ತಿದೆ. ಯಾಕೆಂದರೆ ಭಾಷೆಯಂತೆ ಭಾವ, ಭಾವದಂತೆ ಜೀವ. ನಮ್ಮ ಜೀವರಸಗಳು ಹೊರಹೊಮ್ಮುವುದೇ ನಮ್ಮ ಮನಸ್ಸಿನೊಳಗಿನ ಭಾವನೆಗಳಂತೆ, ನಮ್ಮ ಮನಸ್ಸಿನೊಳಗೆ ಕನ್ನಡತನ ತುಡಿಯದಿದ್ದರೆ ಹೇಗೆ ತಾನೇ ಕನ್ನಡ ಎನೆ ಕಿವಿ ನಿಮಿರುವುದು, ಕನ್ನಡ ಕಾರ್ಯಕ್ಕೆ ತೊಡಗುವುದು? ಮೊಬೈಲ್ ಬಂದ ಮೇಲೆ ಪ್ರತಿಯೊಬ್ಬರೂ ಇಂಗ್ಲಿಷನ್ನು ಸ್ವಯಂಶಿಕ್ಷಕರಾಗಿ ಕಲಿಯುತ್ತಿದ್ದಾರೆ.

ಈಗಂತೂ ಅವುಗಳ ತಿರುಗಾಡಿದರೆ ನಮ್ಮ eನಭಂಡಾರ ತುಂಬುತ್ತದೆ. ಯಾಕೆಂದರೆ ಕನ್ನಡ ಎಂದರೆ ಬರೀ ಭಾಷೆಯಲ್ಲ; ಅದು ಕನ್ನಡ ಜನರ ಬೆವರು-ಉಸಿರು, ಈ ನೆಲದೊಳಗಿನ ಬಸಿರು ಎಂದು ತಿಳಿದು ಪ್ರತಿ ಕನ್ನಡಿಗನೂ ‘ಕನ್ನಡತನ’ವನ್ನು ಬೆಳೆಸಿಕೊಂಡು, ‘ಏನೇ ಆದರೂ ನಾನು ಎಲ್ಲೇ ಇದ್ದರೂ ಯಾರೊಂದಿಗಾದರೂ ಕನ್ನಡದ ಮಾತನ್ನು ಆರಂಭಿಸುತ್ತೇನೆ’ ಎಂಬ ಶಪಥಗೈದರೆ ಮಾತ್ರ ಕನ್ನಡ ಮಾತಾಡುತ್ತಾನೆ ಮತ್ತು ಕನ್ನಡವನ್ನು ಬೇರೆಯವರಿಗೆ ಕಲಿಸುತ್ತಾನೆ.

ಆಗ ಕನ್ನಡಿಗನು ಕನ್ನಡಮ್ಮನ ಋಣವನ್ನು ತೀರಿಸುತ್ತಾನೆ. ಕನ್ನಡ ಬೇರೆಯವರಿಗೆ ಅರ್ಥ ವಾಗುವು ದಿಲ್ಲವೆಂಬ ಕಾರಣಕ್ಕೆ ನಾವು ಅವರ ಭಾಷೆಯನ್ನು ಕಲಿತು ಅವರೊಡನೆ ಮಾತಾಡಿದರೆ, ಅವರ ಭಾಷೆಯನ್ನು ಬೆಳೆಸಿದಂತಾಗುತ್ತದೆ. ಕನ್ನಡಿಗನು ಕನ್ನಡ ಭಾಷೆಯನ್ನು ಬೆಳೆಸಬೇಕೆಂದಲ್ಲಿ, ಮೆರೆಸ ಬೇಕೆಂದಲ್ಲಿ ಕನ್ನಡ ಭಾಷೆಯನ್ನು ಬಾಯ್ತುಂಬಾ ನುಡಿಯಬೇಕು. ಆಗ ಸಾಲಿ ರಾಮಚಂದ್ರ ರಾಯರ ಕವನಕ್ಕೆ ನಿಜವಾದ ಅರ್ಥ ಬರುತ್ತದೆ ಮತ್ತು ಕನ್ನಡದ ಋಣಭಾರ ಕಡಿಮೆಯಾಗುತ್ತದೆ ಹಾಗೂ ಕನ್ನಡಿಗನ ಸ್ವಾಭಿಮಾನ ಹೆಚ್ಚುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)