#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

M J Akbar Column: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಾವಿರ ದಿನಗಳು

ಇತಿಹಾಸದಲ್ಲಿ ಆಗಾಗ ಹೀಗಾಗುತ್ತದೆ. ಅಲ್ಲೊಬ್ಬ ಇಲ್ಲೊಬ್ಬ ಇಂಥ ಜಾಗತಿಕ ನಾಯಕ ಧುತ್ತನೆ ಎದ್ದು ಬರುತ್ತಾನೆ. ಅವನ ವ್ಯಕ್ತಿತ್ವವೇ ಆ ದೇಶದ ನೀತಿ ಅಥವಾ ಕಾಯ್ದೆಯಾಗುತ್ತದೆ. ಅಂಥ ವ್ಯಕ್ತಿ ಸೂಪರ್‌ ಪವರ್ ರಾಷ್ಟ್ರದ ನಾಯಕನಾಗಿ ಬಂದರೆ ಅಪವಾದಗಳೇ ರಾಷ್ಟ್ರೀಯ ನೀತಿಯಾಗುತ್ತವೆ ಮತ್ತು ಹಾಲಿ ವ್ಯವಸ್ಥೆಯನ್ನು ಗಲಗಲ ಅಲುಗಾಡಿಸುವುದೇ ಆ ನೀತಿಗಳನ್ನು ಜಾರಿಗೊಳಿಸುವ ಮಾರ್ಗವಾಗುತ್ತದೆ

M J Akbar Column: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಾವಿರ ದಿನಗಳು

ಲೇಖಕರು, ಹಿರಿಯ ಪತ್ರಕರ್ತರು, ಅಂಕಣಕಾರ ಎಂ.ಜೆ.ಅಕ್ಬರ್

Profile Ashok Nayak Jan 28, 2025 10:58 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಕೆಲವರಿಗೆ ಇದು ಅಚ್ಚರಿ ತರಬಹುದು ಅಥವಾ ದೊಡ್ಡ ನಿರಾಳತೆಯನ್ನೂ ಉಂಟುಮಾಡಬಹುದು. ಇತ್ತೀಚೆಗೆ, ಗಡಗಡ ನಡುಗಿಸುವ ಚಳಿಯಲ್ಲಿ 78 ವರ್ಷದ ಡೊನಾಲ್ಡ್ ಟ್ರಂಪ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರೇ ಹೊರತು ಡಿಸ್‌ ಯುನೈಟೆಡ್ ಸ್ಟೇಟ್ಸ್ ಆಫ್ ದಿ ವರ್ಲ್ಡ್‌ನ ಅಧ್ಯಕ್ಷರಾಗಿ ಅಲ್ಲ!‌

ಇತಿಹಾಸದಲ್ಲಿ ಆಗಾಗ ಹೀಗಾಗುತ್ತದೆ. ಅಲ್ಲೊಬ್ಬ ಇಲ್ಲೊಬ್ಬ ಇಂಥ ಜಾಗತಿಕ ನಾಯಕ ಧುತ್ತನೆ ಎದ್ದು ಬರುತ್ತಾನೆ. ಅವನ ವ್ಯಕ್ತಿತ್ವವೇ ಆ ದೇಶದ ನೀತಿ ಅಥವಾ ಕಾಯ್ದೆಯಾಗುತ್ತದೆ. ಅಂಥ ವ್ಯಕ್ತಿ ಸೂಪರ್‌ಪವರ್ ರಾಷ್ಟ್ರದ ನಾಯಕನಾಗಿ ಬಂದರೆ ಅಪವಾದಗಳೇ ರಾಷ್ಟ್ರೀಯ ನೀತಿಯಾಗುತ್ತವೆ ಮತ್ತು ಹಾಲಿ ವ್ಯವಸ್ಥೆಯನ್ನು ಗಲಗಲ ಅಲುಗಾಡಿಸುವುದೇ ಆ ನೀತಿಗಳನ್ನು ಜಾರಿಗೊಳಿಸುವ ಮಾರ್ಗವಾಗುತ್ತದೆ. ಅಥವಾ ಇದನ್ನು ಈಗಾಗಲೇ ಚಾಲ್ತಿಯಲ್ಲಿರುವ ಇನ್ನೂ ಆಕರ್ಷಕ ಮಾತು ಗಳಲ್ಲಿ ಹೇಳುವುದಾದರೆ, ಇಂಥ ಸಂದರ್ಭದಲ್ಲಿ ಅಸಾಧ್ಯವೇ ಹೊಸ ‘ಸಾಮಾನ್ಯ’ ಸ್ಥಿತಿಯಾಗುತ್ತದೆ.

ಸಾಮಾನ್ಯವಾಗಿ ಜಗತ್ತಿನಲ್ಲಿ ಬಲಾಢ್ಯರು ತಮ್ಮದೇ ಕಾನೂನಿಗೆ ತಕ್ಕಂತೆ ಬದುಕುತ್ತಾರೆ. ದೈತ್ಯನೊಬ್ಬ ಸಿಟ್ಟಿಗೆದ್ದರೆ ಅದೊಂದು ತಂತ್ರಗಾರಿಕೆಯಾಗಿರುತ್ತದೆ. ಆದರೆ ಸಣ್ಣ ವ್ಯಕ್ತಿ ಸಿಟ್ಟಿಗೆದ್ದರೆ ಅವನೇ ಸಿಡುಕಿ ಸುಮ್ಮನಾಗಬೇಕಾಗುತ್ತದೆ. ಬಡವನ ಕೋಪ ದವಡೆಗೆ ಮೂಲ. ಅಮೆರಿಕದ ಹಿತ ಕಾಪಾಡಲು ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಬಳಸಿಕೊಳ್ಳುವುದೆಂದರೆ ಟ್ರಂಪ್‌ಗೆ ಬಹಳ ಖುಷಿ.

ಅದು ತಾಪ್ಡ್ ತೋಪ್ಡ್ ಪರಿಣಾಮ ಕೂಡ ಬೀರುತ್ತದೆ. ಅದರಲ್ಲೂ, ಎಲ್ಲಿ ಈವರೆಗೆ ಯಾವ ತಂತ್ರವೂ ಕೆಲಸ ಮಾಡಿಲ್ಲವೋ ಅಲ್ಲೂ ಅದು ಕೆಲಸ ಮಾಡುತ್ತದೆ. ಟ್ರಂಪ್‌ಗೆ ಆರಂಭದಲ್ಲೇ ಮಂಡಿಯೂರಿ ದವರೆಂದರೆ ಸಿರಿಯಾದ ಅಸ್ಥಿರ ರಾಜಕೀಯ ವ್ಯವಸ್ಥೆಯ ಹಾಲಿ ಮುಖ್ಯಸ್ಥ ಅಹಮದ್ ಅಲ್ ಶರಾ (ಅಬು ಮೊಹಮ್ಮದ್ ಅಲ್ ಜುಲಾನಿ). ಈತ ಈ ಹಿಂದೆ ಅಲ್ ಖೈದಾದಲ್ಲೂ ಇದ್ದ.

ಈತನ ರಾಜಕೀಯ ಪಕ್ಷ ಹಯಾತ್ ತಹ್ರೀರ್ ಅಲ್ ಶಾಮ್ ಬಹುಶಃ ಈಗಲೂ ವಾಷಿಂಗ್ಟನ್‌ನ ಭಯೋತ್ಪಾದಕ ಪಟ್ಟಿಯಲ್ಲಿ ಇರಬೇಕು. ಆದರೆ ಈತ ತಾನು ತಟಸ್ಥನೆಂದು ತೋರಿಸಿಕೊಳ್ಳಲು ಹವಣಿಸುತ್ತಿದ್ದಾನೆ. ರಷ್ಯಾದ ಪರ ಇದ್ದ ಬಷರ್ ಅಲ್ ಅಸದ್‌ನ ಕೈಯಿಂದ ಡಮಾಸ್ಕಸ್ ನಗರವನ್ನು ವಶಪಡಿಸಿಕೊಂಡ ಮೇಲೆ ಈತನಿಗೀಗ ಮಧ್ಯ ಪ್ರಾಚ್ಯದಲ್ಲಿ ಶಾಂತಿಸ್ಥಾಪನೆ ಮಾಡುವ ತಾಕತ್ತಿರುವ ಏಕೈಕ ವ್ಯಕ್ತಿ ಡೊನಾಲ್ಡ್ ಟ್ರಂಪ್ ಎನ್ನಿಸಿದೆ.

ಯಾವುದೇ ವ್ಯಕ್ತಿಯ ತಾಳ್ಮೆಯನ್ನು ನಾವು ಮೆಚ್ಚಿಕೊಳ್ಳಬೇಕು, ಅಪಹಾಸ್ಯ ಮಾಡಬಾರದು. ಅಮೆರಿ ಕಕ್ಕಿರುವ ಶಕ್ತಿಯ ಬಗ್ಗೆ ಯಾರೂ ಜಾಹೀರಾತು ಕೊಡುವ ಅಗತ್ಯವಿಲ್ಲ. ಅಮೆರಿಕದ ಒಂದು ಇಶಾರೆ ಅಥವಾ ಒಂದು ಸ್ಥಳೀಯ ನಿರ್ಧಾರ ಕೂಡ ಸಾಕಷ್ಟು ಅಂತಾರಾಷ್ಟ್ರೀಯ ಪರಿಣಾಮ ಗಳನ್ನು ಹೊಂದಿರುತ್ತದೆ. ಇನ್ನಷ್ಟು ಭೂಮಿ ಅಗೆದು ತೈಲ ತೆಗೆಯುವ ಟ್ರಂಪ್ ನಿರ್ಧಾರ ಡಜನ್‌ ಗಟ್ಟಲೆ ದ್ವಿಪಕ್ಷೀಯ ಸಭೆ ನಡೆಸುವುದಕ್ಕಿಂತ ಹೆಚ್ಚಿನ ಪರಿಣಾಮವನ್ನು ರಷ್ಯಾ ಕುರಿತಾದ ಅಮೆರಿಕದ ನೀತಿಯ ಮೇಲೆ ಉಂಟುಮಾಡುತ್ತದೆ.

ತಕ್ಷಣ ಆಗುವ ಪರಿಣಾಮವೆಂದರೆ, ರಷ್ಯಾದ ತೈಲಕ್ಕೆ ಬೆಲೆ ಕುಸಿಯುತ್ತದೆ. ಅದರಿಂದಾಗಿ ಮಾಸ್ಕೋಗೆ ಯುದ್ಧ ಮಾಡಲು ಹಣಕಾಸಿನ ಕೊರತೆ ಉಂಟಾಗುತ್ತದೆ. ರಷ್ಯಾದ ಆಂತರಿಕ ಆರ್ಥಿಕತೆಯೂ ಸಂಕ ಷ್ಟಕ್ಕೆ ಸಿಲುಕುತ್ತದೆ. ಟ್ರಂಪ್ ತಮಗೆ ಬೇಕಾದ ರೀತಿಯಲ್ಲಿ ಜಗತ್ತನ್ನು ಬಗ್ಗಿಸಲು ‘ಆತಂಕ ಸೃಷ್ಟಿಸುವ’ ರಣತಂತ್ರ ಬಳಸುತ್ತಾರೆ.

ಆದರೆ, ತಾವು ಹೀರೋ ಎನ್ನಿಸಿಕೊಳ್ಳಲು ಅಶಾಂತಿ ಸೃಷ್ಟಿಸುವ ಬಯಕೆ ಅವರಿಗಿಲ್ಲ. ಏಕೆಂದರೆ ಹಾಗೆ ಮಾಡಿದರೆ ಅಮೆರಿಕದ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠವಾಗಿಸುವ ಅವರ ಪ್ರಾಥಮಿಕ ಉದ್ದೇಶ ಈಡೇರುವುದಿಲ್ಲ. ಟ್ರಂಪ್ Zಜಛ್ಟಿ ಠಿeZ ಜ್ಛಿಛಿ ವ್ಯಕ್ತಿ ಹೌದು, ಆದರೆ ಅವರು ಅಮೆರಿಕಕ್ಕಿಂತ ದೊಡ್ಡವರಲ್ಲ. ಅವರು ಜಗತ್ತಿನಿಂದಾಗಲೀ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದಾಗಲೀ ದೂರ ಹೋಗುತ್ತಿಲ್ಲ; ಬದಲಿಗೆ ಅಮೆರಿಕ ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಕೇಳುತ್ತಿದ್ದಾರೆ.

ಅವರಿಗೆ ವಿಶ್ವ ಆರೋಗ್ಯ ಸಂಸ್ಥೆಯ ನೀತಿ ನಿರೂಪಕರನ್ನು ಬದಲಿಸಬೇಕಿದೆ. ಅಷ್ಟು ಮಾಡಿದರೆ ಅಮೆರಿಕದಿಂದ ಅಲ್ಲಿಗೆ ಎಷ್ಟು ಹಣ ಕೊಡಬೇಕೋ ಅಷ್ಟು ಕೊಡಲು ಸಿದ್ಧರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಖರ್ಚುವೆಚ್ಚಗಳಿಗೆ ಶೇ.18ರಷ್ಟು ಹಣವನ್ನು ಅಮೆರಿಕ ನೀಡುತ್ತದೆ. ಆದ್ದರಿಂದಲೇ ‘ಡಬ್ಲ್ಯು ಎಚ್‌ಒ ನಮ್ಮನ್ನು ಇಷ್ಟು ವರ್ಷಗಳ ಕಾಲ ಚೆನ್ನಾಗಿ ಸುಲಿದಿದೆ. ಎಲ್ಲರೂ ಸೇರಿಕೊಂಡು ಅಮೆರಿಕವನ್ನು ಸುಲಿಯುತ್ತಿದ್ದಾರೆ. ಇನ್ನುಮುಂದೆ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಟ್ರಂಪ್ ಗುಡುಗಿದ್ದು.

‘ನನ್ನ ದಾರಿಗೆ ಬನ್ನಿ, ಇಲ್ಲಾ ದುಡ್ಡಿಲ್ಲದ ದಾರಿಯಲ್ಲಿ ಹಾಳಾಗಿಹೋಗಿ’ ಎಂಬುದು ಅವರ ನಿಲುವು. ಮುಂದಿನ ದಿನಗಳಲ್ಲಿ ವಿಶ್ವ ಬ್ಯಾಂಕ್ ನ ಕತೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ.ಭಾಷಣ ಬರೆಯುವವರಿಗೆ ಈಗಾಗಲೇ ಚೆನ್ನಾಗಿರುವುದನ್ನು ಇನ್ನಷ್ಟು ಸುಧಾರಿಸಲು ಹೋಗಿ ಕೆಡಿಸುವು ದೆಂದರೆ ತುಂಬಾ ಇಷ್ಟ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಟ್ರಂಪ್ ಮಾಡಿದ ಭಾಷಣದಲ್ಲಿ ಈ ಹಿಂದೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರು.

ಅದು ನಮಗೆ ಕ್ಲೀಶೆ ಅನ್ನಿಸಬಹುದು. ಆದರೆ ಟ್ರಂಪ್ ಹೇಳಿದರೆ ಅದು ಕ್ಲೀಶೆಯಲ್ಲ. ‘ಅಮೆರಿಕದ ಸುವರ್ಣ ಯುಗ ಆರಂಭವಾಗಿದೆ’ ಎಂದು ಅವರು ಹೇಳಿದರು. ಆದರೆ, 1945ರ ನಂತರ ಅಮೆರಿಕಕ್ಕೆ ಬೆಳ್ಳಿ ಯುಗ ಬಂದಿದ್ದಾದರೂ ಯಾವಾಗ? ವಿಯೆಟ್ನಾಂ ಯುದ್ಧದ ನಂತರ ಉಂಟಾದ ಅಸ್ಥಿರತೆಯ ಸಮಯವನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಶಕ ಎಂದು ಹೇಳಲಾಗಿತ್ತು. ಆದರೆ, ಆಗಲೂ ಹೆನ್ರಿ ಕಿಸ್ಸಿಂಜರ್ ಜಗತ್ತಿನ ಯುದ್ಧಭೂಮಿಯ ಕೀಲಿಯನ್ನು ತಮ್ಮ ಕಚೇರಿಯ ಕಪಾಟಿ ನಲ್ಲಿ ಇರಿಸಿಕೊಂಡಿದ್ದರು.

ಎಲ್ಲಾ ಅಧಿಕಾರಕ್ಕೂ ಒಂದು ಕೊನೆಯಿದೆ. ಹೀಗಾಗಿ ಅಮೆರಿಕಕ್ಕೂ ಅಪಾಯವಿರುವುದು ನಿಶ್ಚಿತ. ಹೀಗಾಗಿ ಅಮೆರಿಕದ ಶಕ್ತಿಯನ್ನು ಟ್ರಂಪ್ ಬಹಳ ನಾಜೂಕಾಗಿ ಬಳಸಬೇಕಾದ ಅಗತ್ಯವಿದೆ. ಅಮೆರಿಕ ದಲ್ಲಿ ಅಧಿಕಾರ ನಡೆಸಿದ 20ನೇ ಶತಮಾನದ ಮೊದಲ ಅಧ್ಯಕ್ಷ ಟೆಡ್ಡಿ ರೂಸ್‌ವೆಲ್ಟ್ ಆಡಿದ ಒಂದು ಮಾತು ಬಹಳ ಪ್ರಸಿದ್ಧವಾಗಿತ್ತು.

‘ಕೆಳಗೆ ಹಿಡಿದು ಅಮುಕಿದರೆ ಹೃದಯ ಮತ್ತು ಮನಸ್ಸು ದಾರಿಗೆ ಬರುತ್ತವೆ’ ಎಂಬ ಅವರ ಮಾತು ಕೆಲವರಿಗೆ ಸಿದ್ಧಾಂತವೇ ಆಗಿಹೋಯಿತು. ಇಲ್ಲಿ ಅವರು ಅಂದರೆ ವಂಚಕರು. ಅವರಲ್ಲೇ ಸ್ನೇಹಿತ ರೂ ಸೇರಿರುತ್ತಾರೆ. ಈ ಸಿದ್ಧಾಂತವನ್ನು ಟ್ರಂಪ್ ಶಿರಸಾ ಪಾಲಿಸುತ್ತಾರೆ. ಟ್ರಂಪ್ ಕೈಗೊಳ್ಳುತ್ತಿರುವ ಮೊದಮೊದಲ ನಿರ್ಧಾರಗಳು ಅವರ ಸ್ನೇಹಿತ ರಾಷ್ಟ್ರಗಳಲ್ಲೇ ದೊಡ್ಡ ಕೋಲಾಹಲಕ್ಕೆ ಕಾರಣ ವಾಗಿವೆ.

ನಿಮಗೇನಾದರೂ ಮರೆತಿದ್ದರೆ ನೆನಪಿಸಿಕೊಳ್ಳಿ. ಟ್ರಂಪ್ ಈಗಾಗಲೇ ನಾರ್ತ್ ಅಮೆರಿಕನ್ ಫ್ರೀ ಟ್ರೇಡ್ ಅಗ್ರಿಮೆಂಟ್ (ನಾಫ್ಠಾ) ಪಾಲುದಾರ ಸ್ನೇಹಿತ ರಾಷ್ಟ್ರಗಳ ಮೇಲೆ ಸೇನೆ-ರಹಿತ ಯುದ್ಧ ಘೋಷಿಸಿ ದ್ದಾರೆ. ಅವುಗಳಲ್ಲಿ ಕೆನಡಾ, ಮೆಕ್ಸಿಕೋ ದೇಶಗಳು ಸೇರಿವೆ. ಕೆನಡಾವನ್ನು ಕಬಳಿಸುವುದು ಮತ್ತು ಮೆಕ್ಸಿಕೋವನ್ನು ದೂರ ತಳ್ಳುವುದು ಅವರ ಗುರಿ. ಇನ್ನು, ಯುರೋಪಿನ ನಾಯಕರಿಗೆ ಹೇಗೆ ಒಗ್ಗಟ್ಟಾಗಬೇಕು ಎಂಬುದೇ ಮರೆತುಹೋಗಿದೆ.

ಇದಕ್ಕೆ ಅವರು ದಿನೇದಿನೆ ಸಾಕ್ಷ್ಯ ಒದಗಿಸುತ್ತಿದ್ದಾರೆ. ಎರಡು ತಲೆಮಾರುಗಳ ಕಾಲ ಅವರ ದೇಶಗಳು ಅಮೆರಿಕದ ಖರ್ಚಿನಲ್ಲಿ ಭದ್ರತೆಯ ಸೌಕರ್ಯ ಪಡೆದು ಪೊಗದಸ್ತಾಗಿ ಬೆಳೆದಿದ್ದವು. ಅದಕ್ಕೆ ಅವು ನಯಾಪೈಸೆ ಹಣ ನೀಡುತ್ತಿರಲಿಲ್ಲ. ಈಗ ಟ್ರಂಪ್‌ಗೆ ಹಣ ಬೇಕು. ಅವರಿಗೆ ಅದನ್ನು ಅಮೆರಿಕನ್ನರ ಮೇಲೆ ಖರ್ಚು ಮಾಡಬೇಕು.

ಅದಕ್ಕೆಂದೇ ಅವರು ಚುನಾವಣೆಯನ್ನು ಗೆದ್ದಿರುವುದು. ನೀವು ಮಾಸ್ಕೋ ಅಥವಾ ಬೀಜಿಂಗ್ ಅಥವಾ ತೆಹರಾನ್‌ನಿಂದ ನೋಡುತ್ತಿದ್ದರೆ ಇದೊಳ್ಳೆ ಮಜವಾಗಿರುತ್ತದೆ. ಈ ಮುನ್ನುಡಿಯೇ ಮುಂದೆ ದೊಡ್ಡ ನಾಟಕಕ್ಕೆ ಕಾರಣವಾಗುತ್ತದೆ. ರಷ್ಯಾ ಮತ್ತು ಚೀನಾ ಈಗಾಗಲೇ ಟ್ರಂಪ್ ಜತೆಗೆ ಸಂಪರ್ಕ ಸಾಧಿಸಿವೆ.

ಚೀನಾ ಬಹಳ ಜಾಣ. ಅದರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದರೂ ಈಗಾಗಲೇ ಟ್ರಂಪ್ ಜತೆಗೆ ಮಾತನಾಡಿದ್ದಾರೆ. ಇದು ಅವರ ರಾಜ ತಾಂತ್ರಿಕರಿಗೆ ಪ್ಲಸ್ ಪಾಯಿಂಟ್. ಬಹುಶಃ ಅವರು ಟಿಕ್‌ಟಾಕ್ ಉಳಿಸುವ ಒಪ್ಪಂದಕ್ಕೆ ಬಂದಿರ ಬಹುದು. ಅಲ್ಲದೆ, ಚೀನಾದ ಸರಕುಗಳಿಗೆ ಶೇ.20ರಷ್ಟು ತೆರಿಗೆ ವಿಧಿಸುತ್ತೇನೆಂಬ ಟ್ರಂಪ್ ಬೆದರಿಕೆ ಈಗ ಶೇ.10ಕ್ಕೆ ಇಳಿದಿದೆ.

ವ್ಲಾದಿಮಿರ್ ಪುಟಿನ್ ಜತೆಗಿನ ಮಾತುಕತೆಯ ರೂಪರೇಷೆ ಹಾಗೂ ದಿನಾಂಕದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಟ್ರಂಪ್‌ಗೆ ಪುಟಿನ್ ಜತೆಗೆ ಒಳ್ಳೆಯ ನೆನಪುಗಳಿವೆ. ಹೀಗಾಗಿ ರಷ್ಯಾ ವಿಷಯದಲ್ಲಿ ಅಪರೂಪಕ್ಕೊಂದು ಖಾರವಾದ ಮಾತನಾಡಲು ಅವರು ಹಿಂದೆಮುಂದೆ ಯೋಚಿಸುವುದಿಲ್ಲ. ‘ನಾನು ಪುಟಿನ್ ಜತೆಗೆ ಒಳ್ಳೆಯ ಸ್ನೇಹ ಹೊಂದಿದ್ದೆ. ಅವರಿಗೂ ನನಗೂ ಹೊಂದಾಣಿಕೆಯಿದೆ. ನಮ್ಮ ಜತೆಗೆ ಒಪ್ಪಂದ ಮಾಡಿಕೊಳ್ಳಲು ಅವರು ಹಿಂಜರಿಯುವುದಿಲ್ಲ ಎಂಬ ನಂಬಿಕೆಯಿದೆ’ ಎಂದು ಟ್ರಂಪ್ ಹೇಳಿದ್ದಾರೆ. ಪುಟಿನ್ ಕೂಡ ಇದನ್ನೇ ಯೋಚಿಸುತ್ತಿದ್ದಾರೆ.

ಹಿಂದೆ ಉಕ್ರೇನ್ ಯುದ್ಧದ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ಅವರೀಗ 2022ರ ಗಡಿ ಒಪ್ಪಂದಕ್ಕೆ ಅನುಸಾರವಾಗಿ ಸಂಧಾನ ಮಾಡಿಕೊಳ್ಳೋಣ ಎಂದು ಗೋಗರೆಯುತ್ತಿದ್ದಾರೆ. ಮಾಸ್ಕೋ ಮತ್ತು ಬೀಜಿಂಗ್‌ನಲ್ಲಿರುವ ಇನ್ನೂ ಹೆಚ್ಚಿನ ಅನುಭವಿ ಆಟಗಾರರು ಇದನ್ನೆಲ್ಲ ನೋಡುತ್ತಾ, ಕಾಯುತ್ತಾ, ಪರಸ್ಪರರ ಜತೆಗೆ ವಿಡಿಯೋ ಕಾನರೆನ್ಸ್‌ನಲ್ಲಿ ಚರ್ಚಿಸುತ್ತಾ ಇದ್ದಾರೆ. ಅವರು ಇನ್ನೇನೂ ತುಂಬಾ ದಿನ ಕಾಯುವ ಅಗತ್ಯವಿಲ್ಲ. ಏಕೆಂದರೆ ಟ್ರಂಪ್ ಅವಸರದಲ್ಲಿದ್ದಾರೆ.

ಆ ಅವಸರಕ್ಕೂ ಕಾರಣವಿದೆ. ಡೊನಾಲ್ಡ್ ಟ್ರಂಪ್ ಬಳಿ ಇನ್ನು ಸಾವಿರ ದಿನಗಳು ಮಾತ್ರ ಉಳಿದಿವೆ. ಅವರೇನು ಮಾಡುವುದಿದ್ದರೂ ಅಷ್ಟು ದಿನದೊಳಗೇ ಮಾಡಿ ತೋರಿಸಬೇಕು. ಅಮೆರಿಕದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆ ನಡೆಯಲು ಸುಮಾರು 1200 ದಿನಗಳಿವೆ. ಆ ಚುನಾವಣೆಯ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಈಗಿನ ಅಧ್ಯಕ್ಷರು ಕೈಕಟ್ಟಿ ಕುಳಿತುಕೊಳ್ಳಬೇಕು. ಅವರು ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವಂತಿಲ್ಲ.

ಅವರ ಜತೆಗಿರುವ ಅಽಕಾರಿಗಳೆಲ್ಲ ಮಾತು ಕೇಳುವುದನ್ನು ನಿಲ್ಲಿಸುತ್ತಾರೆ. ಅಧಿಕಾರಸ್ಥ ಸ್ನೇಹಿತರು ನಿಷ್ಕ್ರಿಯರಾಗುತ್ತಾರೆ. ಹೀಗಾಗಿ ಮುಂದಿನ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಟ್ರಂಪ್ ಇತಿಹಾ ಸಕ್ಕೆ ಸೇರುತ್ತಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಎಷ್ಟೊಂದು ಸಂಕೀರ್ಣ ಮತ್ತು ಸುದೀರ್ಘ ಅಂದರೆ, ಅದು ಆರಂಭಗೊಂಡು ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸುವುದಕ್ಕೆ 200 ಕ್ಕೂ ಹೆಚ್ಚು ದಿನಗಳ ಅಂತರವಿರುತ್ತದೆ.

ಅಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಗತ್ತಿನ ಅತ್ಯಂತ ಪ್ರಬಲ ವ್ಯಕ್ತಿ ತನ್ನೆಲ್ಲಾ ಕ್ತಿಯನ್ನೂ ಕಳೆದುಕೊಂಡು ವಿಷಣ್ಣನಾಗಿ ಕುಳಿತು ಅಖಾಡವನ್ನು ನೋಡುತ್ತಿರುವ ಮುದಿ ಕುಸ್ತಿ ಪೈಲ್ವಾನ ನಂತಾಗಿಬಿಡುತ್ತಾನೆ. ಅಧ್ಯಕ್ಷೀಯ ಚುನಾವಣೆಯ ಹಣಾಹಣಿಯು ಯುದ್ಧದ ಕಾರ್ಮೋಡ ಕ್ಕಿಂತ ಲೂ ಹೆಚ್ಚು ದಟ್ಟವೂ, ತೀವ್ರವೂ ಆಗಿರುತ್ತದೆ. ಆ ಸಮಯದಲ್ಲಿ ದೊಡ್ಡಣ್ಣ ತನ್ನ ವಿರೋಧಿ ಯಿಂದ ಸೋಲನುಭವಿಸುವುದಿಲ್ಲ, ಬದಲಾಗಿ ಕಾಲದ ಓಟದಲ್ಲಿ ಅನಿವಾರ್ಯವಾಗಿ ಹಿಂದೆ ಬಿದ್ದಿರುತ್ತಾನೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ಪಶ್ಚಿಮ ಏಷ್ಯಾದಲ್ಲಿ ಸ್ಥಿರತೆಯನ್ನು ತರುವುದು, ಜಗಳ ಗಂಟಿ ಚೀನಾದ ಜತೆಗಿನ ಸಂಬಂಧಗಳು ಹಾಗೂ ವಾಷಿಂಗ್ಟನ್‌ನಲ್ಲಿ ಹರಡಿರುವ ದಿಗ್ಗಜ ಡೆಮಾಕ್ರೆಟ್‌ ಗಳಾದ ಬೈಡೆನ್ ಮತ್ತು ಒಬಾಮಾ ಜೋಡಿಯ ಪ್ರಭಾವವನ್ನು ಮೀರಿ ತನ್ನನ್ನು ಸ್ಥಾಪಿಸಿಕೊಳ್ಳು ವುದು ಇವು ಡೊನಾಲ್ಡ್ ಟ್ರಂಪ್ ಅವರ ತಕ್ಷಣದ ನಾಲ್ಕು ಆದ್ಯತೆಗಳು. ಟ್ರಂಪ್ ಒಬ್ಬ ಜಗಳಗಂಟನೇ ಹೊರತು ನುರಿತ ರಾಜತಾಂತ್ರಿಕನಲ್ಲ.

ಏನನ್ನೂ ನಯವಾಗಿ ಮಾಡುವುದು ಟ್ರಂಪ್ ಗೆ ಗೊತ್ತಿಲ್ಲ. ಒಂಥರಾ ರಫ್ ಆಂಡ್ ಟಫ್ ವ್ಯಕ್ತಿ. ಬೆಣ್ಣೆಯ‌ಲ್ಲಿ ಕೂದಲು ತೆಗೆದಂತೆ ಆಡಳಿತ ನಡೆಸುತ್ತಿದ್ದ ಒಬಾಮಾ ಮತ್ತು ಬೈಡೆನ್‌ರನ್ನು ನೋಡಿ ನೋಡಿ ಅಭ್ಯಾಸವಾಗಿದ್ದ ಅಮೆರಿಕನ್ನರಿಗೆ ತಕ್ಷಣ ಟ್ರಂಪ್‌ರ ಅಟಾಟೋಪವನ್ನು ಅರಗಿಸಿ ಕೊಳ್ಳು ವುದು ಕಷ್ಟವಾಗಬಹುದು. ಟ್ರಂಪ್ ಪ್ರಕಾರ ಬೈಡೆನ್ ಸರಕಾರ ಅತ್ಯಂತ ಅದಕ್ಷ ಮತ್ತು ಭ್ರಷ್ಟ ಸರಕಾರವಾಗಿತ್ತು. ಹೀಗಾಗಿ ಅದು ಬೈಡೆನ್ ಕಾಲದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದನ್ನು ರಿಪಬ್ಲಿಕನ್ನರಿಗೆ ಅನಿವಾರ್ಯವಾಗಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಬದಲಾವಣೆಯನ್ನು ನೀವು ಯಾವಾಗಲೂ ಫೋಟೋದಲ್ಲಿ ಸೆರೆ ಹಿಡಿಯಬಹುದು. ಅದು ಮುಖ ಗಳ ಮೇಲೆ ಗಪ್ಪನೆ ಕುಳಿತುಬಿಡುತ್ತದೆ. ಅಮೆರಿಕದಲ್ಲಿ ನಡೆದ ಈ ಅಧಿಕಾರ ಹಸ್ತಾಂತರದ ಪರ್ವ ವನ್ನು ಸಂಭ್ರಮಿಸಲು ಟ್ರಂಪ್ ಜತೆಗೆ ಹಾಜರಿದ್ದ ರಾಜಕೀಯ ಸೆಲೆಬ್ರಿಟಿಗಳ ದಂಡನ್ನೇ ಒಮ್ಮೆ ಫೋಟೋದಲ್ಲಿ ನೋಡಿ. ನಂತರ ಆ ಕೃತಕ ಸಮಾರಂಭದ ಸಂಭ್ರಮಗಳು ಮುಗಿದ ಮೇಲೆ ಅಲ್ಲಿದ್ದ ಜನರ ಮುಖದ ಭಾವನೆಗಳನ್ನೂ ಗಮನಿಸಿ. ಕ್ಯಾಮೆರಾಗಳ ಎದುರು ನಗಬೇಕಾದ ಅಗತ್ಯ ಇಲ್ಲದಿರುವ ಸಮಯದಲ್ಲಿ ಅವರ ಮುಖಗಳು ಹೇಗಿವೆ ಎಂಬುದು ಕಾಣಿಸುತ್ತದೆ.

ತನ್ನ ಮುಖದಲ್ಲಿನ ನೋವು ಮತ್ತು ಸಿಟ್ಟನ್ನು ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ ಎಂದೇ ಮಿಶೇಲ್ ಒಬಾಮಾ ಈ ಪದಗ್ರಹಣ ಸಮಾರಂಭ ಮುಗಿಯುತ್ತಿದ್ದಂತೆ ದೀರ್ಘ ಪ್ರವಾಸಕ್ಕೆ ಹೋಗಿಬಿಟ್ಟಿದ್ದಾರೆ. ಬೈಡೆನ್ ಸರಕಾರದ ಅವಧಿಯಲ್ಲಿ ಸೂಪರ್ ಪ್ರೆಸಿಡೆಂಟ್ ಆಗಿ ತೆರೆಯ ಮರೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಬರಾಕ್ ಒಬಾಮಾಗೆ ಕಳೆದ 11 ವಾರಗಳಲ್ಲಿ ಎಷ್ಟೊಂದು ವಯಸ್ಸಾಗಿಬಿಟ್ಟಿದೆ ಎಂಬುದನ್ನು ನೋಡಿದ್ದೀರಾ? ಇದೇ ಅವಧಿಯಲ್ಲಿ ಟ್ರಂಪ್ ವಯಸ್ಸು ಎಷ್ಟು ವರ್ಷ ಕಡಿಮೆ ಯಾಗಿದೆ ಗೊತ್ತಾ? ಅಧಿಕಾರವೇ ಹಾಗೆ. ಅದು ಕನ್ನಡಿಯೊಳಗಿನ ಪ್ರತಿಬಿಂಬದಂತೆ. ಯಾವುದು ನಿಜ, ಯಾವುದು ಬಿಂಬವೆಂಬುದನ್ನು ಗುರುತಿಸುವುದು ಕಷ್ಟ.

(ಲೇಖಕರು ಹಿರಿಯ ಪತ್ರಕರ್ತರು)