ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishweshwar Bhat Column: ಕಳ್ಳತನವೇ ಮಂಗಮಾಯ !

ಅರ್ಧ ಪರ್ವತವನ್ನು ಏರುತ್ತಿದ್ದಂತೆ ಆಯಾಸವಾಯಿತು. ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ಅಲ್ಲಿಂದ ಇಳಿದು ಬರುವುದು ಮತ್ತು ಎರಡನೆ ಯದು, ಬ್ಯಾಗನ್ನು ಅಲ್ಲಿಯೇ ಬಿಟ್ಟು ಪರ್ವತ ವೇರುವುದು. ಆಗ ಅವರ ಜಪಾನಿ ಸಹೋದ್ಯೋಗಿ ಮಿತ್ರ ಹೇಳಿದನಂತೆ “ಈ ಮರದ ಕೆಳಗೆ ನಿನ್ನ ಬ್ಯಾಗನ್ನು ಇಡು. ಯಾರೂ ಅದನ್ನು ಮುಟ್ಟುವುದಿಲ್ಲ. ಈ ಜಾಗದಲ್ಲಿ ಯಾರೂ ತಮ್ಮದಲ್ಲದ ವಸ್ತುಗಳನ್ನು ಮುಟ್ಟುವುದಿಲ್ಲ

ಕಳ್ಳತನವೇ ಮಂಗಮಾಯ !

ಸಂಪಾದಕರ ಸದ್ಯಶೋಧನೆ

ಜಪಾನಿನಲ್ಲಿ ಮೌಂಟ್ ಮಿವಾ ಎಂಬ ಒಂದು ಪವಿತ್ರ ಸ್ಥಳವಿದೆ. ಅಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಾರೆ. ಬರುವವರೆಲ್ಲ ಮೌಂಟ್ ಮಿವಾ ಪರ್ವತದ ಶಿಖರವನ್ನು ಏರುತ್ತಾರೆ. ಅಲ್ಲಿಗೆ ಸಾಮಾನ್ಯವಾಗಿ ಜನ ಬಸ್ಸಿನಲ್ಲಿ ಬರುವುದು. ಆ ಪರ್ವತ ಏರುವುದು ಸುಲಭವಲ್ಲ. ನನ್ನ ಸ್ನೇಹಿತರಾದ ಪಿ.ವಿ.ಕುಮಾರ ಅವರು ತಮ್ಮ ಜಪಾನಿ ಸಹೋದ್ಯೋಗಿ ಮಿತ್ರರೊಂದಿಗೆ ಅಲ್ಲಿಗೆ ತಮ್ಮ ಕಾರಿನಲ್ಲಿ ಹೋಗಿದ್ದರು. ಅವರ ಹೆಗಲಿಗೆ ಒಂದು ಬ್ಯಾಗ್ ಇತ್ತು. ಸಾಮಾನ್ಯವಾಗಿ ಆ ಪರ್ವತ ವನ್ನು ಏರುವವರು ನೀರಿನ ಬಾಟಲಿ ಹೊರತಾಗಿ ಮತ್ತೇನನ್ನೂ ಇಟ್ಟುಕೊಳ್ಳುವುದಿಲ್ಲ.

ತಮ್ಮ ಬ್ಯಾಗುಗಳನ್ನು ಬಸ್ ಸ್ಟಾಪ್‌ನಲ್ಲಿ ಇಟ್ಟು ಬರುತ್ತಾರೆ. ಆ ಬ್ಯಾಗುಗಳನ್ನು ಕಾಯಲು ಯಾರೂ ಇರುವುದಿಲ್ಲ. ಬ್ಯಾಗನ್ನು ಇಡೀ ದಿನ ಎಲ್ಲಿಯೇ ಇಟ್ಟರೂ ಯಾರೂ ಅದನ್ನು ನೋಡುವುದೂ ಇಲ್ಲ, ಮುಟ್ಟಲೂ ಹೋಗುವುದಿಲ್ಲ. ನನ್ನ ಸ್ನೇಹಿತರಿಗೆ ಈ ಸಂಗತಿ ಗೊತ್ತಿರಲಿಲ್ಲ. ಅವರು ಕೆಮರಾ, ಲ್ಯಾಪ್ಟಾಪ್, ಒಂದು ಜತೆ ಡ್ರೆಸ್ ಮತ್ತು ಇನ್ನಿತರ ವಸ್ತುಗಳನ್ನು ತಮ್ಮ ಬ್ಯಾಗಿನಲ್ಲಿ ಹಾಕಿ ತಂದಿ ದ್ದರು. ಅರ್ಧ ಪರ್ವತವನ್ನು ಏರುತ್ತಿದ್ದಂತೆ ಆಯಾಸವಾಯಿತು. ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು, ಅಲ್ಲಿಂದ ಇಳಿದು ಬರುವುದು ಮತ್ತು ಎರಡನೆ ಯದು, ಬ್ಯಾಗನ್ನು ಅಲ್ಲಿಯೇ ಬಿಟ್ಟು ಪರ್ವತವೇರುವುದು. ಆಗ ಅವರ ಜಪಾನಿ ಸಹೋದ್ಯೋಗಿ ಮಿತ್ರ ಹೇಳಿದನಂತೆ “ಈ ಮರದ ಕೆಳಗೆ ನಿನ್ನ ಬ್ಯಾಗನ್ನು ಇಡು. ಯಾರೂ ಅದನ್ನು ಮುಟ್ಟುವುದಿಲ್ಲ. ಈ ಜಾಗದಲ್ಲಿ ಯಾರೂ ತಮ್ಮದಲ್ಲದ ವಸ್ತುಗಳನ್ನು ಮುಟ್ಟುವುದಿಲ್ಲ.

ಇದನ್ನೂ ಓದಿ: Vishweshwar Bhat column: ಅಮೆರಿಕದಲ್ಲಿ ಹಿಸ್ಪಾನಿಕ್‌ ಸಮುದಾಯ

ಹೀಗಿರುವಾಗ ಕಳೆದುಹೋಗುವ ಸಾಧ್ಯತೆಯೇ ಇಲ್ಲ. ನಾನು ನಿನಗೆ ಗ್ಯಾರಂಟಿ ಕೊಡ್ತೇನೆ". ಆದರೆ ಕುಮಾರ್ ಅವರಿಗೆ ನಂಬಿಕೆ ಬರಲಿಲ್ಲ. “ನೀನು ಹೇಳುವುದು ನಿಜವಿರಬಹುದು. ಇಲ್ಲಿಗೆ ಒಬ್ಬ ಭಾರತೀಯ ಬರಬಹುದು. ಆತ ನನ್ನ ಬ್ಯಾಗನ್ನು ಎತ್ತಿಕೊಂಡು ಹೋಗಬಹುದಲ್ಲ?" ಎಂದು ಕುಮಾರ್ ಹೇಳಿದಾಗ, “ಸಾಧ್ಯವೇ ಇಲ್ಲ. ಇಲ್ಲಿ ಯಾರೂ ಕಳ್ಳತನ ಮಾಡುವುದಿಲ್ಲ.

ಆ ಭರವಸೆಯನ್ನು ನಾನು ಕೊಡ್ತೇನೆ" ಎಂದು ಜಪಾನಿ ಸ್ನೇಹಿತ ಹೇಳಿದ. ಸ್ವಲ್ಪ ದೂರ ಕುಮಾರ್ ಬ್ಯಾಗನ್ನು ಹೊತ್ತುಕೊಂಡೇ ಹೊರಟರು. ನಂತರ ಸುಸ್ತಾದಾಗ, “ಆಯ್ತು, ನೋಡೇ ಬಿಡೋಣ.. ಬ್ಯಾಗನ್ನು ಯಾರಾದರೂ ಕzಯ್ದರೆ ಹೋಗಲಿ, ಅದೂ ಆಗಿಯೇ ಹೋಗಲಿ" ಎಂದು ಅಲ್ಲಿಯೇ ಇದ್ದ ಒಂದು ಮರದ ಕೆಳಗೆ ಆ ಬ್ಯಾಗನ್ನು ಇಟ್ಟು ಪರ್ವತವನ್ನೇರಲಾರಂಭಿಸಿದರು. ಸುಮಾರು ೪ ಗಂಟೆ ನಂತರ, ಕುಮಾರ್ ತಮ್ಮ ಸಹೋದ್ಯೋಗಿ ಮಿತ್ರನೊಂದಿಗೆ ಅದೇ ಸ್ಥಳಕ್ಕೆ ವಾಪಸ್ ಆದರು.

ಅವರ ಬ್ಯಾಗ್ ಅಲ್ಲಿಯೇ ಇತ್ತು. ಅದು ಹೇಗಿತ್ತೋ, ಹಾಗೆಯೇ ಇತ್ತು. ಅವರು ಬರುವಾಗ ಬಸ್ ನಿಲ್ದಾಣದಲ್ಲಿಟ್ಟ ಬ್ಯಾಗುಗಳು ಸಹ ಹಾಗೆಯೇ ಇದ್ದವು. ಅವುಗಳಿಗೆ ವಾರಸುದಾರರೇ ಇರಲಿಲ್ಲ. ದಾರಿಯ ಮೇಲೆ ಬೆಲೆಬಾಳುವ ವಸ್ತು ಬಿದ್ದಿದ್ದನ್ನು ಕಂಡರೆ, ಸುತ್ತಲೂ ಕಣ್ಣು ಹಾಯಿಸಿದಾಗ ಯಾರೂ ನೋಡದಿದ್ದರೆ, ಯಾರೂ ಜೇಬಿಗೆ ಇಳಿಸುವುದಿಲ್ಲ. ಒಂದು ವಸ್ತು ತಮ್ಮದಲ್ಲ ಎಂದಾದರೆ, ಯಾರೂ ಅದರ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಬಯಸುವುದಿಲ್ಲ.

ಹೆಚ್ಚೆಂದರೆ ಹಾಗೆ ಬಿದ್ದ ವಸ್ತುವನ್ನು ಎತ್ತಿಕೊಂಡು ಹತ್ತಿರದ ಪೊಲೀಸರಿಗೆ ತಲುಪಿಸಬಹುದೇ ಹೊರತು ಯಾರೂ ಮನೆಗೆ ಎತ್ತಿಕೊಂಡು ಹೋಗುವುದಿಲ್ಲ. ಅಲ್ಲಿಯೇ ಸನಿಹದಲ್ಲಿ ಏರ್ ಬಿಎನ್‌ಬಿ ಮನೆಗಳಿದ್ದವು. ಆಶ್ಚರ್ಯವೆಂದರೆ, ಆ ಮನೆಗಳ ಬಾಗಿಲುಗಳಿಗೆ ಬೀಗವೇ ಇರಲಿಲ್ಲ. ಕುಮಾರ್ ವಿಚಾರಿಸಿದಾಗ, “ಇಲ್ಲಿನ ಮನೆಗಳಿಗೆ ಯಾರೂ ಬೀಗ ಹಾಕುವುದಿಲ್ಲ. ಕಾರಣ ಯಾರೂ ಮನೆಯೊಳಗೆ ನುಗ್ಗಿ ಕಳ್ಳತನ ಮಾಡುವುದಿಲ್ಲ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಆರಂಭದಲ್ಲಿ ಇದು ವಿಚಿತ್ರ ವಾಗಿ ಕಾಣುತ್ತದೆ. ಅವರು ಬಾಗಿಲಿಗೆ ಬೀಗ ಹಾಕದೇ ಕದಲುವುದಿಲ್ಲ. ಆದರೆ ಒಂದೆರಡು ದಿನಗಳ ಬಳಿಕ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ.

ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನಿಟ್ಟರೂ ಯಾರೂ ಮುಟ್ಟುವುದಿಲ್ಲ" ಎಂಬ ವಿಷಯ ತಿಳಿಯಿತು. ಇದು ಅದೊಂದೇ ಊರಿನಲ್ಲಿರುವ ವೈಶಿಷ್ಟ್ಯವಲ್ಲ. ಸಾಮಾನ್ಯವಾಗಿ ಇಡೀ ಜಪಾನಿನಲ್ಲಿ ಇಂಥದೇ ವಾತಾವರಣವನ್ನು ಕಾಣಬಹುದು. ಜಪಾನಿನಲ್ಲಿ ನೀವು ಏನನ್ನಾದರೂ ಕಳೆದುಕೊಳ್ಳ ಬಹುದು. ಕಳೆದುಕೊಂಡರೆ ಅದು ಸಿಕ್ಕೇ ಸಿಗುತ್ತದೆ. ಆದರೆ ಯಾರೂ ನಿಮ್ಮ ವಸ್ತುಗಳನ್ನು ಕಳವು ಮಾಡುವುದಿಲ್ಲ.