ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸುಮಾರು ವರ್ಷಗಳಿಂದ ಪುರಾತನ ಕಾಲದ ಸ್ಮಶಾನಕ್ಕಾಗಿ ಹೋರಾಟ ಮಾಡುತ್ತಿರುವ ಗ್ರಾಮಸ್ಥರು

ಪುರಾತನ ಕಾಲದಿಂದಲೂ ಸ್ಮಶಾನವಿದ್ದು ಸ್ಮಶಾನದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೂಣಲು ಅವಕಾಶ ಮಾಡಿಕೊಡದೆ ಇರುವ ಕಾರಣಕ್ಕೆ ರಸ್ತೆಯಲ್ಲಿ ಶವ ವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸ್ಮಶಾನ ವಿಚಾರ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಪುರಾತನ ಕಾಲದಿಂದಲೂ ಸ್ಮಶಾನವಿದ್ದು ಸ್ಮಶಾನದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೂಣಲು ಅವಕಾಶ ಮಾಡಿಕೊಡದೆ ಇರುವ ಕಾರಣಕ್ಕೆ ರಸ್ತೆಯಲ್ಲಿ ಶವ ವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Ashok Nayak Ashok Nayak Aug 1, 2025 11:54 PM

ಚಿಂತಾಮಣಿ: ಪುರಾತನ ಕಾಲದಿಂದಲೂ ಸ್ಮಶಾನವಿದ್ದು ಸ್ಮಶಾನದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೂಣಲು ಅವಕಾಶ ಮಾಡಿಕೊಡದೆ ಇರುವ ಕಾರಣಕ್ಕೆ ರಸ್ತೆಯಲ್ಲಿ ಶವ ವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Chikkanayakanahalli News: ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ಸದರಿ ಗ್ರಾಮದ ಸರ್ವೆ ನಂ:೮ ರಲ್ಲಿ ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಲ್ಲಿಯೇ ಹೂಣಲಾಗುತ್ತಿತ್ತು,ಆದರೆ ಕೆಲ ದಿನಗಳಿಂದ ಆ ಜಮೀನಿನಲ್ಲಿ ಬೇರೆ ವ್ಯಕ್ತಿಗಳು ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆ ಇಂದು ಸದರಿ ಗ್ರಾಮದ ಕೊಂಡಪ್ಪ(೬೦ ವರ್ಷ)ಎಂಬುವರು ಮೃತಪಟ್ಟಿದ್ದು ಅವರನ್ನು ಸದರಿ ಜಮೀನಿನಲ್ಲಿ ಹುತ್ತಕ್ಕೆ ಗುಣಿ ಅಗಿಯಲು ಹೋದಾಗ ಕೆಲ ವ್ಯಕ್ತಿಗಳು ಅಡ್ಡಿಪಡಿಸಿದ ಕಾರಣ ಕಂದಾಯ ಇಲಾಖೆಯ ಅಧಿಕಾರಿಗಳು ಭೂ ಮಾಪನ ಇಲಾಖೆಯ ಅಧಿಕಾರಿಗಳೊಂದಿಗೆ ಪೊಲೀಸರ ಸೂಕ್ತ ಬಂದೋಬಸ್ತು ನಲ್ಲಿ ಸ್ಥಳಕ್ಕೆ ಬಂದು ಸ್ಮಶಾನ ಜಾಗ ಗುರುತಿಸಿ ಕೊಡುವ ಕಾರಣಕ್ಕೆ ಸರ್ವೆ ಕಾರ್ಯ ನಡೆಸಿದರು.

shava

ಅಷ್ಟೇ ಅಲ್ಲದೆ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ರವೀಶ್,ನರಸಿಂಹಮೂರ್ತಿ, ಸ್ಥಳಕ್ಕೆ ಬಂದು ಕಾನೂನು ರೀತಿಯಲ್ಲಿ ಸ್ಮಶಾನ ಜಾಗ ಎಲ್ಲಿ ಬರುತ್ತೆ ಅಲ್ಲಿ ಗುರುತಿಸಿ ಕೊಡುತ್ತೇವೆ ಎಂದು ಹೇಳಿದರು ಸದರಿ ಗ್ರಾಮದವರು ಅವರ ಮಾತಿಗೆ ಒಪ್ಪಲಿಲ್ಲ.ಮತ್ತು ಸರ್ವೆ ಕಾರ್ಯ ಸೂಕ್ತ ರೀತಿಯಲ್ಲಿ ನಡೆದಿಲ್ಲ ಹಾಗೂ ಸ್ಮಶಾನದ ಜಮೀನು ಸರ್ವೆ ನಂ:೦೮ ರಲ್ಲಿ ಬರುತ್ತದೆ ಅಲ್ಲಿಯೇ ಮೃತಪಟ್ಟ ವ್ಯಕ್ತಿಗಳನ್ನು ಹೂಣಲು ಅನುಕೂಲ ಮಾಡಿಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.