ಪದಸಾಗರ
ಎಷ್ಟು ಕೃತಘ್ನರಲ್ಲವೇ ನಾವು? ರಾಷ್ಟ್ರಧ್ವಜ ಕೊಟ್ಟ ಮಹಾತ್ಮನನ್ನು ಬರೋಬ್ಬರಿ ಎಪ್ಪತ್ತೈದು ವರ್ಷಗಳ ನಂತರ ನೆನಪಿಸಿಕೊಳ್ಳುತ್ತಿದ್ದೇವೆ. ಗಾಂಧಿ ನೆಹರೂಗಳಿಗೆ ದೇಶದ ತುಂಬ ರಸ್ತೆಗಳು, ಕ್ರೀಡಾಂಗಣಗಳು. ಏನೇನಕ್ಕೆಲ್ಲ ಅವರ ಹೆಸರಿಡಬಹುದೋ ಇಟ್ಟಿದ್ದೇವೆ. ಎಲ್ಲಿ ಪ್ರತಿಮೆ ನಿರ್ಮಿಸಬಹುದೋ ನಿರ್ಮಿಸಿದ್ದೇವೆ. ಆದರೆ ಪಿಂಗಳಿ ವೆಂಕಯ್ಯನವರನ್ನು ನೆನಪಿಸಿಕೊಳ್ಳೋಕೆ ಪುಸ್ತಕದಂದು ಪಾಠವಿಲ್ಲ.
ಏರುತಿಹುದು ಹಾರುತಿಹುದು.. ನೋಡು ನಮ್ಮ ಬಾವುಟ..
ತೋರುತಿಹುದು ಹೊಡೆದು ಹೊಡೆದು..ಬಾನಿನಗಲ ಪಟಪಟ.
ಕೇಸರಿ ಬಿಳಿ ಹಸಿರು ಮೂರು.. ಬಣ್ಣ ನಡುವೆ ಚಕ್ರವು.. ಸತ್ಯ
ಶಾಂತಿ ತ್ಯಾಗ ಮೂರ್ತಿ.. ಗಾಂಧಿ ಹಿಡಿದ ಚರಕವು
ಇಂಥ ಧ್ವಜವು ನಮ್ಮ ಧ್ವಜವು..ನೋಡು ಹಾರುತಿರುವುದು..
ಧ್ವಜದ ಶಕ್ತಿ ನಮ್ಮ ಭಕ್ತಿ.. ನಾಡ ಸಿರಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ.. ಹೊನ್ನ ಬಣ್ಣವಾಗಿದೆ.. ನಮ್ಮ
ನಾಡ ಗುಡಿಯ ಬಣ್ಣ.. ನೋಡಿರಣ್ಣ ಹೇಗಿದೆ
-ಕಯ್ಯಾರ ಕಿಞ್ಞಣ್ಣ ರೈ
ಕೈಕಟ್ಟಿಕೊಂಡು ಮುಂದಕ್ಕೆ ಹಿಂದಕ್ಕೆ ಮೈ ತೂಗಿಸುತ್ತಾ ಟಿಪಿಕಲ್ ಪದ್ಯ ವಾಚನ ಶೈಲಿಯಲ್ಲಿ ಬಾಯಿಪಾಠ ಮಾಡಿಕೊಂಡು ಬಂದು ಹಾಡುತ್ತಿದ್ದ ‘ನಮ್ಮ ಬಾವುಟ’ ಪದ್ಯ ಇದು.
ಎರಡನೇ ತರಗತಿಯ ಕನ್ನಡ ಭಾರತಿ ಪುಸ್ತಕದಲ್ಲಿತ್ತು. ಪೂರ್ತಿ ಪದ್ಯ ಓದಿ ಕಯ್ಯಾರ ಕಿಞ್ಞಣ್ಣ ರೈ ಹೆಸರು ಹೇಳಿದರೇನೇ ಸಮಾಧಾನ. ಆ ಪದ್ಯದ ಜತೆಗೆ ಒಂದು ಬಾವುಟದ ಚಿತ್ರವಿತ್ತು. ಇಡೀ ಪುಸ್ತಕ ದಲ್ಲಿ ಪದೇಪದೆ ನೋಡುತ್ತಿದ್ದ ಫೋಟೋ ಅದು. ಮೂರು ಗೋಲಾಕಾರದ ಮೆಟ್ಟಿಲುಗಳ ಮೇಲೊಂದು ಕಂಬ. ಕಂಬದ ತುದಿಯಲ್ಲಿ ಗಾಳಿಯಲ್ಲಿ ಅಲೆಅಲೆಯಾಗಿ ತೇಲುತ್ತಾ ಹಾರಾಡು ತ್ತಿರುವ ತ್ರಿವರ್ಣ ಧ್ವಜ. ಬಾವುಟದ ಮೇಲೆ ಲವ್ ಆದ ಘಳಿಗೆ ಅದು. ಸ್ವಾತಂತ್ರ್ಯ ದಿನದಂದು ಮಲೆನಾಡಿನ ಸಾಗರದಂಥ ಊರಿನಲ್ಲಿ ಸದಾ ಮಳೆ. ಶಾಲೆಯ ಬಾವುಟ ಹಾರಾಡುತ್ತಿರಲಿಲ್ಲ. ಒದ್ದೆಮುದ್ದೆಯಾಗಿರುತ್ತಿತ್ತು.
ಗಣರಾಜ್ಯೋತ್ಸವದ ದಿನವಾದರೂ ಹಾರಾಡುವ ಬಾವುಟ ಕಾಣಬಹುದಾ ಅಂದರೆ ಆಗಲೂ ನಮ್ಮ ದುರದೃಷ್ಟಕ್ಕೆ ಹಾರಾಡುವ ಬಾವುಟದ ದೃಶ್ಯ ಸಿಗುತ್ತಲೇ ಇರಲಿಲ್ಲ. ದೂರದ ನೆಹರೂ ಮೈದಾನ ದಲ್ಲಿ, ಗಾಂಧಿ ಮಂದಿರದ ಎದುರು ದೊಡ್ಡ ಬಾವುಟಗಳು ಹಾರಾಡುತ್ತವಂತೆ ಅಂತ ಕೇಳಿದ್ದಷ್ಟೆ. ಹೀಗಾಗಿ ನಮ್ಮ ಪಾಲಿಗೆ ಈ ಹಾರಾಡುತ್ತಿದ್ದ ಬಾವುಟ ಅಂದರೆ ಅದು ಈ ಪದ್ಯದ ಜತೆಗಿದ್ದ ಚಿತ್ರವಷ್ಟೆ. ಆದರೆ ಇದೊಂದು ಮಾದರಿ ಚಿತ್ರವಾಗಿ ಬಿಟ್ಟಿತ್ತು.
ಇದನ್ನೂ ಓದಿ: Naveen Sagar Column: ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !
ಬಾವುಟದ ಚಿತ್ರ ಬಿಡಿಸಬೇಕು ಅಂದರೆ ನಮ್ಮ ಬಾವುಟ ಪದ್ಯದ ಚಿತ್ರವೇ ಸ್ಯಾಂಪಲ್. ಬೆಂಗಳೂರಿಗೆ ಬಂದಾಗ ವಿಧಾನ ಸೌಧದ ಎದುರು ಹಾರುತ್ತಿದ್ದ ಬಾವುಟ ನೋಡುವುದೇ ಒಂದು ಸಂಭ್ರಮ. ಇಸ್ರೋ ಕೆಲಸಕ್ಕೆ ಸೇರಿದ್ದಾಗಲೂ ಆ ಕಚೇರಿಯ ಮೇಲೆ ಹಾರುತ್ತಿದ್ದ ಬಾವುಟವೊಂದು ನನ್ನ ಪ್ರತಿದಿನದ ಆಕರ್ಷಣೆ. ಇಂದಿಗೂ ತಾರಾಲಯದ ಬಳಿ ಹಾದು ಹೋಗುವಾಗ ಅ ನಿಂತು ಅತಿ ಎತ್ತರದಲ್ಲಿ ಹಾರುವ ಬಾವುಟವನ್ನು ಒಂದರೆನಿಮಿಷವಾದರೂ ಕಣ್ತುಂಬಿಕೊಂಡು ಬರುತ್ತೇನೆ. ಚಂದ್ರಾ ಲೇಔಟಿನಲ್ಲಿ ಎರಡು ವರ್ಷಗಳ ಹಿಂದೆ ಒಂದು ಬೃಹತ್ ಧ್ವಜಸ್ತಂಭ ನಿಲ್ಲಿಸಿ ಧ್ವಜಾ ರೋಹಣ ಮಾಡಿದ್ದಾರೆ.
ನನ್ನ ಪಾಲಿನ ಪ್ರಮುಖ ಆಕರ್ಷಣೆ ಅದು. ಜಗತ್ತಿನ ಯಾವ ದೇಶದ ಧ್ವಜವೂ ನಮ್ಮ ಧ್ವಜದಷ್ಟು ಸುಂದರ ಅಲ್ಲ ಅಂತಲೇ ಅನಿಸುತ್ತದೆ. ಆಯಾ ದೇಶಗಳ ಪ್ರಜೆಗಳಿಗೆ ಅವರವರ ಧ್ವಜದ ಬಗ್ಗೆ ಹೀಗೆಯೇ ಅನಿಸಬಹುದೇನೋ. ಆದರೆ ನಮ್ಮ ಧ್ವಜ ಚಿತ್ರಿಸಲೂ ಸರಳ.
ನೋಡಲೂ ಸುಂದರ ಅನ್ನೋದರಲ್ಲಿ ಅನುಮಾನವೇ ಇಲ್ಲ. ಅದೆಷ್ಟೋ ದೇಶಗಳ ಧ್ವಜಗಳು ಭಾರತದ ಬಾವುಟವನ್ನೇ ಅಲ್ಪಸ್ವಲ್ಪ ಬದಲಿಸಿಕೊಂಡು ಬಂದಂತಿವೆ. ಏರುತಿಹುದು ಹಾರುತಿ ಹುದು... ಮತ್ತು ಝಂಡಾ ಊಂಚಾ ರಹೇ ಹಮಾರಾ.... ಈ ಎರಡು ಪದ್ಯಗಳು ನನ್ನ ಮಟ್ಟಿಗೆ ಈ ದೇಶದ ರಾಷ್ಟ್ರಧ್ವಜದ ಬಗೆಗಿನ ಅಭಿಮಾನವನ್ನು ಯಾವತ್ತೂ ಅಳಿಸಿ ಹೋಗದ ಹಾಗೆ ಭದ್ರವಾಗಿ ಕಾಯ್ದಿಟ್ಟಿವೆ. ಆದರೆ ಇಷ್ಟೂ ವರ್ಷಗಳಲ್ಲಿ ಈ ಬಾವುಟದ ನಿರ್ಮಾತೃ ಯಾರು? ಇದನ್ನು ಡಿಸೈನ್ ಮಾಡಿದ್ದು ಯಾರು? ಎಂಬ ಪ್ರಶ್ನೆ ನನ್ನೊಳಗೆ ಬಂದೇ ಇರಲಿಲ್ಲ.
ರಾಷ್ಟ್ರಧ್ವಜ ಅಧಿಕೃತವಾಗಿ ಎಲ್ಲಿ ತಯಾರಾಗುತ್ತದೆ ಎಂಬ ವಿಚಾರ ತಿಳಿದಿದ್ದು ಕೂಡ ದಶಕದ ಹಿಂದೆ ತೆರೆಕಂಡಿದ್ದ ವಿಷ್ಣುವರ್ಧನ್ ಅಭಿನಯದ ವೀರಪ್ಪ ನಾಯ್ಕ ಚಿತ್ರದಿಂದಲೇ. ಹುಬ್ಬಳ್ಳಿ ಧಾರವಾಡದ ಗರಗ ಮತ್ತು ಬೆಂಗೇರಿ ಬಗ್ಗೆ ತಿಳಿದುಕೊಂಡಿದ್ದೇ ಈ ಸಿನಿಮಾ ಬಂದ ನಂತರ. ಇಡೀ ರಾಷ್ಟ್ರಕ್ಕೆ ಅಧಿಕೃತ ರಾಷ್ಟ್ರಧ್ವಜ ತಯಾರಿಸಿಕೊಡೋದು ಕರ್ನಾಟಕ ಎಂದು ತಿಳಿದಾಗ ಒಂದು ಹೆಮ್ಮೆ. ಆದರೆ ರಾಷ್ಟ್ರಧ್ವಜ ವನ್ನು ರೂಪಿಸಿದ್ದು ಯಾರು ಎಂಬ ಪ್ರಶ್ನೆಯೂ ಮೂಡಿರಲಿಲ್ಲ.
ಒಂದೊಮ್ಮೆ ಯಾರಾದರೂ ಕೇಳಿದ್ದಿದ್ದರೆ ಗಾಂಽಜಿ ಅಂದುಬಿಡುತ್ತಿzನೇನೋ! ಈಗ ಮೂರು ವರ್ಷಗಳ ಹಿಂದೆ ಪ್ರಧಾನಿ ಮೋದಿ ದೇಶಕ್ಕೊಂದು ಸಂದೇಶ ನೀಡಿದ್ದರು. ಆಗ ಎರಡನೇ ತಾರೀಕು ದೇಶದ ಎಲ್ಲ ನೆಟ್ಟಿಗರು ತಮ್ಮ ಸೋಷಿಯಲ್ ಮೀಡಿಯಾದ ಕವರ್ ಪೇಜಲ್ಲಿ ಈ ಫೋಟೋ ಹಾಕಿಕೊಳ್ಳಿ ಎಂದು ಮನವಿ ಮಾಡಿದ್ದರು. ಯಾರ ಫೋಟೋ ಅದು? ಪಿಂಗಳಿ ವೆಂಕಯ್ಯನವರ ಫೋಟೋ. ಮೋದಿಯವರ ಆ ಸಂದೇಶದ ತನಕ ನನಗೂ ಸೇರಿದಂತೆ ಬಹಳಷ್ಟು ಜನರಿಗೆ ಆ ಹೆಸರೇ ಗೊತ್ತಿರಲಿಲ್ಲ.
ಹೌದು. ರಾಷ್ಟ್ರಧ್ವಜವನ್ನು ರೂಪಿಸಿದ ಆ ಪುಣ್ಯಾತ್ಮನ ಹೆಸರು ಪಿಂಗಳಿ ವೆಂಕಯ್ಯ. ಸ್ವತಂತ್ರ ಭಾರತದ ರಾಷ್ಟ್ರಧ್ವಜಕ್ಕೆ ಅಫಿಷಿಯಲಿ ಈಗ ಎಪ್ಪತ್ತೊಂಬತ್ತು ತುಂಬಿ ಎಂಬತ್ತು ತಲುಪುತ್ತಿದೆ. ಧ್ವಜದ ಜನನಕ್ಕೆ ಕಾರಣರಾದ ಪಿಂಗಳಿ ವೆಂಕಯ್ಯನವರ ಜನ್ಮದಿನ ಆಗ ಎರಡು. ಎಷ್ಟು ಕೃತಘ್ನ ರಲ್ಲವೇ ನಾವು? ರಾಷ್ಟ್ರಧ್ವಜ ಕೊಟ್ಟ ಮಹಾತ್ಮನನ್ನು ಬರೋಬ್ಬರಿ ಎಪ್ಪತ್ತೈದು ವರ್ಷಗಳ ನಂತರ ನೆನಪಿಸಿಕೊಳ್ಳುತ್ತಿದ್ದೇವೆ.
ಕೊನೆಯ ಬಾರಿ ಪಿಂಗಳಿ ವೆಂಕಯ್ಯನವರನ್ನು ನೆನಪಿಸಿಕೊಂಡದ್ದು ಯಾವಾಗ? 2009-10ರಲ್ಲಿ. ಅವರ ಸ್ಮರಣಾರ್ಥ ಒಂದು ಅಂಚೆಚೀಟಿ ಬಿಡುಗಡೆಯಾಗಿತ್ತಂತೆ. ಗಾಂಧಿ ನೆಹರೂಗಳಿಗೆ ದೇಶದ ತುಂಬ ರಸ್ತೆಗಳು, ಕ್ರೀಡಾಂಗಣಗಳು. ಏನೇನಕ್ಕೆಲ್ಲ ಅವರ ಹೆಸರಿಡಬಹುದೋ ಇಟ್ಟಿದ್ದೇವೆ. ಎಲ್ಲಿ ಪ್ರತಿಮೆ ನಿರ್ಮಿಸಬಹುದೋ ನಿರ್ಮಿಸಿದ್ದೇವೆ. ಆದರೆ ಪಿಂಗಳಿ ವೆಂಕಯ್ಯನವರನ್ನು ನೆನಪಿಸಿ ಕೊಳ್ಳೋಕೆ ಪುಸ್ತಕದಂದು ಪಾಠವಿಲ್ಲ, ಹೀಗಿದ್ದರು ಅನ್ನೋಕೊಂದು ಪ್ರತಿಮೆ ಇಲ್ಲ. ಅವರ ಸ್ಮರಣಾರ್ಥ ಕಟ್ಟಡ, ರಸ್ತೆ ಏನಂದ್ರೆ ಏನೂ ಇಲ್ಲ.
ಕಾಟಾಚಾರಕ್ಕೊಂದು ಅಂಚೆಚೀಟಿ ಬಿಡುಗಡೆ ಮಾಡಿ ಕೈತೊಳೆದುಕೊಂಡಿತ್ತು ಅಂದಿನ ಮನಮೋಹನ್ ಸರಕಾರ. ಹಾಗಂತ ಇಂದಿನ ಪ್ರಧಾನಿ ಮೋದಿಯೂ ಪಿಂಗಳಿ ವೆಂಕಯ್ಯನವರ ಗೌರವಾರ್ಥ ದೊಡ್ಡದೇನನ್ನೂ ಮಾಡಿಲ್ಲ. ಅವರು ಮಾಡಿದ ಮಹದುಪಕಾರ ಅಂದರೆ, ಆಗ 2, 2023ರಂದು ಸೋಷಿಯಲ್ ಮೀಡಿಯಾದ ಮೂಲಕ ಇಡೀ ದೇಶಕ್ಕೆ ಪಿಂಗಳಿ ವೆಂಕಯ್ಯನವರನ್ನು ಪರಿಚಯಿಸಿಕೊಟ್ಟಿದ್ದು. ಈ ಮೂರು ವರ್ಷಗಳಲ್ಲಿ ಪ್ರತಿ ಮಾಧ್ಯಮ, ಸಾಮಾಜಿಕ ಜಾಲತಾಣ ಪಿಂಗಳಿ ವೆಂಕಯ್ಯನವರನ್ನು ಗಟ್ಟಿಯಾಗಿ ದಾಖಲಿಸಿತು.
ಫಲವಾಗಿ ಲಕ್ಷಾಂತರ ಕೋಟ್ಯಂತರ ಜನರಿಗೆ ವೆಂಕಯ್ಯನವರ ಪರಿಚಯವಾಯಿತು. ಅವರ ಕೊಡುಗೆಗೆ ಕೊನೆಗೂ ಅಷ್ಟರಮಟ್ಟಿಗಿನ ಗೌರವ ಸಂದಿತು. ಪಿಂಗಳಿ ವೆಂಕಯ್ಯನವ್ರು ಹುಟ್ಟಿದ್ದು 1876 ಆಗ 2ರಂದು. ಮದರಾಸಿನ ಬ್ರಾಹ್ಮಣ ಕುಟುಂಬದಲ್ಲಿ ಜನಿಸೋ ವೆಂಕಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅ ಮುಗಿಸಿ, ಉನ್ನತ ಶಿಕ್ಷಣಕ್ಕೆ ಕೇಂಬ್ರಿಜ್ ಯೂನಿವರ್ಸಿಟಿಗೆ ಹೋದರು. ಜಿಯೋಲಜಿ, ಕೃಷಿ, ಶೈಕ್ಷಣಿಕ ಶಾಸ್ತ್ರ, ಭಾಷಾ ಶಾಸ್ತ್ರ ಇವೆಲ್ಲದರ ಕಡೆ ಆಸಕ್ತಿ ತೋರೋ ವೆಂಕಯ್ಯ ನವರು, ತಮ್ಮ ವಿದ್ಯಾಭ್ಯಾಸ ಮುಗಿಸಿದ ತಕ್ಷಣ ವಾಪಸ್ ಭಾರತಕ್ಕೆ ಬಂದರು. ಆ ಹೊತ್ತಿಗಿನ್ನೂ ಭಾರತ ಬ್ರಿಟಿಷರ ಬಿಗಿ ಹಿಡಿತದ ಇತ್ತು. ಆಗ ವೆಂಕಯ್ಯನವರು ಬ್ರಿಟಿಷ್ ಇಂಡಿಯನ್ ಆರ್ಮಿಗೆ ಭರ್ತಿ ಆಗ್ತಾರೆ. ಅದೇ ಅವರ ಜೀವನದಲ್ಲಿ ದೊಡ್ಡ ತಿರುವು ಕೂಡ ಆಗುತ್ತದೆ. ಆರ್ಮಿಯಿಂದ ಅವರನ್ನು ಯುದ್ಧಕಾರಣಕ್ಕಾಗಿ ದಕ್ಷಿಣ ಆಫ್ರಿಕಾಗೆ ಕಳಿಸಲಾಗುತ್ತೆ. ಅಲ್ಲಿ ಪ್ರಪ್ರಥಮ ಬಾರಿಗೆ ಅವ್ರು ಮೋಹನದಾಸ್ ಗಾಂಽಯವರನ್ನು ಭೇಟಿ ಮಾಡ್ತಾರೆ. ಗಾಂಧಿಯವರ ತತ್ತ್ವಗಳಿಂದ ಮತ್ತು ಜೀವನ ಶೈಲಿಗಳಿಂದ ತುಂಬ ಪ್ರಭಾವಕ್ಕೆ ಒಳಗಾಗುವ ವೆಂಕಯ್ಯ, ಆಲ್ಲಿಂದ ಮುಂದೆ ಗಾಂಧೀಜಿಯ ಅಪ್ಪಟ ಹಿಂಬಾಲಕರಾಗಿಬಿಡ್ತಾರೆ.
ಗಾಂಧೀಜಿಗಿಂತ ಕೇವಲ ಏಳು ವರ್ಷ ಚಿಕ್ಕವರಾದ್ರೂ, ಅವರನ್ನು ಗುರುಸ್ಥಾನದಲ್ಲಿಟ್ಟು ನೋಡ್ತಾರೆ ವೆಂಕಯ್ಯನವರು. 1913 ರಲ್ಲಿ ಆಂಧ್ರದ ವಿದ್ಯಾಸಂಸ್ಥೆಯಲ್ಲಿ, ಜಪಾನಿ ಭಾಷೆಯಲ್ಲಿ ಭಾಷಣ ಮಾಡುವ ವೆಂಕಯ್ಯನವರಿಗೆ ಭಯಂಕರ ಖ್ಯಾತಿ ಸಿಗುತ್ತದೆ. ಅಂದಿನಿಂದ ಅವರನ್ನು ಎಲ್ಲರೂ ಜಪಾನ್ ವೆಂಕಯ್ಯ ಅಂತ ಕರೆಯಲು ಪ್ರಾರಂಭಿಸುತ್ತಾರೆ. ತಮಾಷೆ ಅಂದರೆ ವೆಂಕಯ್ಯನವರಿಗೆ ಕಾಲದಿಂದ ಕಾಲಕ್ಕೆ ಹೊಸ ವಿಶೇಷಣ ಸೇರಿಕೊಳ್ಳುತ್ತಲೇ ಹೋಗುತ್ತದೆ.
ವಜ್ರದ ಗಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರನ್ನು ವಜ್ರಾಲ ವೆಂಕಯ್ಯ ಅಂತಲೂ ಕರೆಯು ತ್ತಿದ್ದರು. ಈ ಮಧ್ಯ ಅವ್ರು ಕಾಂಬೋಡಿಯಾದ ಹತ್ತಿ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಪಿಹೆಚ್.ಡಿ ಪಡೆದುಕೊಳ್ಳುತ್ತಾರೆ. ಆಗ ಮತ್ತೊಂದು ಹೊಸ ಬಿರುದು ಸೇರಿಕೊಳ್ಳುತ್ತದೆ. ಜನರೆಲ್ಲ ಅವರನ್ನು ಪತ್ತಿ ವೆಂಕಯ್ಯ ಎಂದು ಕರೆಯೋಕೆ ಶುರುವಿಡುತ್ತಾರೆ. ಪತ್ತಿ ಅಂದ್ರೆ ತೆಲುಗಲ್ಲಿ ಹತ್ತಿ ಎಂದರ್ಥ. ಇದೇ ಅಧ್ಯಯನ ಮುಂದೆ ಅವರಿಗೆ ಬಾವುಟ ರೂಪಿಸಲು ಪ್ರೇರಣೆ ಆಗಿಬಿಡುತ್ತದೆ. ರಾಷ್ಟ್ರಕ್ಕೊಂದು ಧ್ವಜ ಕೊಡಬೇಕು ಎಂಬ ಕನಸು ಮೊಳಕೆ ಒಡೆಯುತ್ತದೆ.
1916ರಲ್ಲಿ ಭಾರತಕ್ಕೊಂದು ರಾಷ್ಟ್ರಧ್ವಜ ಎಂಬ ಚಿಕ್ಕ ಪುಸ್ತಕವನ್ನು ಪ್ರಕಟಿಸುವ ವೆಂಕಯ್ಯನವ್ರು, 1919-1921ರ ಅವಧಿಯಲ್ಲಿ ಒಟ್ಟಾರೆ ಸುಮಾರು ಮೂವತ್ತು ವಿನ್ಯಾಸದ ಧ್ವಜ ತಯಾರು ಮಾಡಿ ಅಂದಿನ ನಾಯಕರ ಎದುರು ಇಡುತ್ತಾರೆ. ಕೇಸರಿ ಮತ್ತು ಹಸಿರು ಬಣ್ಣದಿಂದ ಕೂಡಿದ್ದ ಹಾಗೂ ಕಮಲದ ದಳಗಳನ್ನು ಹೊಂದಿದ್ದ ಬಹಳಷ್ಟು ವಿನ್ಯಾಸಗಳು ಒಂದ ಒಂದು ಕಾರಣಕ್ಕೆ ಅಪ್ರೂವ್ ಆಗುವುದೇ ಇಲ್ಲ. ವಿಶೇಷವಾಗಿ ಗಮನಿಸಬೇಕಾದ ಅಂಶ ಅಂದ್ರೆ, ಅಂದು ತಯಾರಾದ ಎಲ್ಲ ವಿನ್ಯಾಸಗಳಲ್ಲೂ ವಂದೇ ಮಾತರಂ ಎಂಬ ಘೋಷವಾಕ್ಯ ಇತ್ತು.
ಅಂದಿನ ಕಾಂಗ್ರೆಸ್ ನಾಯಕರು ಸುತರಾಂ ಆ ಧ್ವಜಗಳನ್ನು ಒಪ್ಪಿಕೊಳ್ಳಲಿಲ್ಲ. ಅಂತಿಮವಾಗಿ ವೆಂಕಯ್ಯನವ್ರು ಕೇಸರಿ ಮತ್ತು ಹಸಿರು ಬಣ್ಣದ ವಿನ್ಯಾಸ ತಯಾರು ಮಾಡಿದಾಗ, ಶಿಕ್ಷಣ ತಜ್ಞ ಮತ್ತು ಸ್ವಾತಂತ್ರ್ಯ ಹೋರಾಟಗಾರ ಲಾಲಾ ಹ ರಾಜ್ ಅವರು, ಬಾವುಟದ ಮಧ್ಯದಲ್ಲಿ ಒಂದು ಚಿಹ್ನೆ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆಗ ಬಾವುಟ ಮಧ್ಯದಲ್ಲಿ ಚಕ್ರ ಅಳವಡಿಸಲಾಗುತ್ತದೆ. ಈ ಬಾವುಟವನ್ನು ನೋಡುವ ಗಾಂಧಿ, ಅಂತಿಮವಾಗಿ ಒಂದು ಸಲಹೆ ಕೊಡುತ್ತಾರೆ... ಕೇಸರಿ ಹಸಿರು ಬಣ್ಣಗಳ ಮಧ್ಯೆ ಬಿಳಿ ಬಣ್ಣ ಬರಲಿ. ಬಿಳಿ ಬಣ್ಣದ ಮೇಲೆ ಚಕ್ರ ಬರಲಿ ಅಂತ!
ಗಾಂಧೀಜಿ ಮಾತನ್ನು ಗೌರವಿಸುವ ವೆಂಕಯ್ಯ, ನಡುವೆ ಚಕ್ರವಿರುವ ತ್ರಿವರ್ಣ ಧ್ವಜವನ್ನು ತಯಾರಿಸಿ ಗಾಂಧಿಯೆದುರು ಇಡುತ್ತಾರೆ. ಈ ಬಾವುಟವನ್ನು ಗಾಂಧಿ ಬಹಳ ಸಂತೋಷದಿಂದ ಒಪ್ಪಿ ಅಂತಿಮಗೊಳಿಸುತ್ತಾರೆ. 1947ರ ಜುಲೈ 22ರಂದು ಈ ಧ್ವಜಕ್ಕೆ ರಾಷ್ಟ್ರಧ್ವಜ ಎಂಬ ಅಧಿಕೃತ ಒಪ್ಪಿಗೆ ಸಿಗುತ್ತದೆ. ಪಿಂಗಳಿ ವೆಂಕಯ್ಯ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗುತ್ತಾರೆ.
ಬ್ರಿಟಿಷ್ ಸರಕಾರದ ಅಡಿಯಲ್ಲಿ ಹಲವಾರು ಕರ್ತವ್ಯಗಳನ್ನು ನಿಭಾಯಿಸುತ್ತಾರೆ. ರಾಷ್ಟ್ರಧ್ವಜ ವನ್ನೂ ರೂಪಿಸುತ್ತಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಎಂದಿಗೂ ಸುಖವನ್ನು ಕಾಣುವುದೇ ಇಲ್ಲ. ಬಡತನದ ತಮ್ಮ ಬದುಕನ್ನು ಮುಗಿಸಿಬಿಡ್ತಾರೆ. 1963 ಜುಲೈ ನಾಲ್ಕರಂದು ಪಿಂಗಳಿ ವೆಂಕಯ್ಯನವರ ದೇಹಾಂತ್ಯವಾಗುತ್ತದೆ. ದೇಶಕ್ಕೆ ಧ್ವಜ ರೂಪಿಸಿಕೊಟ್ಟ ಈ ಪುಣ್ಯಾತ್ಮನನ್ನು ದೇಶ ಅಂದೇ ಸಂಪೂರ್ಣವಾಗಿ ಮರೆತುಬಿಡುತ್ತದೆ. ಮತ್ತೆ ನೆನಪಿಸಿಕೊಂಡಿದ್ದು ಅವರು ತೀರಿಕೊಂಡ ನಲವತ್ತಾರು ವರ್ಷಗಳ ನಂತರ. ಅಂದ್ರೆ 2009ರಲ್ಲಿ. ಅಂಚೆಚೀಟಿ ಬಿಡುಗಡೆ ಮಾಡುವ ಮೂಲಕ. ಆನಂತರ ಮತ್ತೆ ನೆನಪಾಗಿದ್ದು, 2023ರಲ್ಲಿ.
ಸದ್ಯ ಅಂದಿನಿಂದ ನಿರಂತರವಾಗಿ ಪಿಂಗಳಿ ವೆಂಕಯ್ಯನವರ ಸ್ಮರಣೆಯಾಗುತ್ತಲಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳು, ಸ್ಟೋರಿಗಳು ಹರಿದಾಡುತ್ತಿವೆ. ಕೇಂದ್ರ ಸರಕಾರ ಆಗ ಎರಡ ರಂದು ವೆಂಕಯ್ಯನವರನ್ನು ನೆನಪಿಸಿಕೊಳ್ಳುವುದನ್ನು ಮರೆಯುತ್ತಿಲ್ಲ. ಧ್ವಜ ಅನ್ನೋದು ದೇಶದ ಉಡುಪಿದ್ದಂತೆ. ಉಡುಪು ಕೊಟ್ಟಾತನನ್ನು ದೇಶ ಮರೆಯಬಾರದಲ್ಲವೇ? ಬಾವುಟವನ್ನು ಪರಿಚಯಿ ಸುವುದರ ಜತೆಜತೆಗೆ ಪಠ್ಯದ ಮೂಲಕ ಪಿಂಗಳಿ ವೆಂಕಯ್ಯನವರನ್ನು ಚಿಕ್ಕಂದಿನಿಂದಲೇ ದೇಶದ ಪ್ರಜೆಗಳಿಗೆ ಪರಿಚಯಿಸಿಕೊಡಬೇಕಿದೆ. ಈ ದೇಶ ಅಂದರೆ ಕೇವಲ ಗಾಂಧಿ ನೆಹರೂ ಅಲ್ಲ ಎಂಬು ದನ್ನು ಇತಿಹಾಸದ ಇಂಥ ಪ್ರಮುಖ ವಿಷಯಗಳ ಮೂಲಕ ಮನಗಾಣಬೇಕಿದೆ.