ನಾಳೆಯಿಂದ ಫಿಡೆ ಚೆಸ್ ವಿಶ್ವಕಪ್; ಗುಕೇಶ್, ಪ್ರಜ್ಞಾನಂದ ಮೇಲೆ ಭರವಸೆ
ಪ್ರತಿಯೊಂದು ಸುತ್ತು ಮೂರು ದಿನ ನಡೆಯಲಿದ್ದು, ಎರಡು ದಿನ ಒಂದೊಂದು ಕ್ಲಾಸಿಕಲ್ ಮಾದರಿಯ ಪಂದ್ಯಗಳು ನಡೆಯಲಿವೆ. ಸ್ಕೋರ್ ಸಮನಾದ ಪಕ್ಷದಲ್ಲಿ ಮೂರನೇ ದಿನವನ್ನು ಟೈಬ್ರೇಕ್ ಪಂದ್ಯಗಳಿಗೆ ಮೀಸಲಿಡಲಾಗಿದೆ. ಅಗ್ರ 50 ಮಂದಿ ಆಟಗಾರರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.