ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕ್ ವಾಯುದಾಳಿ ಖಂಡಿಸಿ ಭಾರತಕ್ಕೆ ಸಂದೇಶ ಕಳುಹಿಸಿದ ಅಫ್ಘಾನಿಸ್ತಾನ ಕ್ರಿಕೆಟಿಗ

Pakistan Air Strike: ಕ್ರಿಕೆಟಿಗ ನವಿನ್‌ ಉಲ್‌ ಹಕ್‌ ಕಾಬೂಲ್‌ ಮೇಲಿನ ಪಾಕಿಸ್ತಾನ ದಾಳಿಯನ್ನು ಖಂಡಿಸಿದ್ದಾರೆ. ಈಗಿನ ಪಾಕಿಸ್ತಾನದ ಆಡಳಿತವನ್ನು ಇಸ್ರೇಲ್‌ಗೆ ಹೋಲಿಸಿದ್ದು ಎರಡು ದೇಶಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗಿದೆ ಎಂದು ಹೇಳಿದ್ದರು.

ಪಾಕ್ ವಾಯುದಾಳಿ ಖಂಡಿಸಿ ಭಾರತಕ್ಕೆ ಸಂದೇಶ ಕಳುಹಿಸಿದ ಆಫ್ಘಾನ್‌ ಕ್ರಿಕೆಟಿಗ

Allah Ghaza -

Abhilash BC
Abhilash BC Mar 18, 2026 9:37 AM

ಕಾಬೂಲ್, ಮಾ.18: ಕಾಬೂಲ್‌ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನವು ವಾಯುದಾಳಿ(Pakistan Air Strike) ನಡೆಸಿದ ಪರಿಣಾಮ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಜಾಗತಿಕವಾಗಿ ಖಂಡನೆಗಳು ವ್ಯಕ್ತವಾಗಿವೆ. ಅಫ್ಗಾನಿಸ್ತಾನ ಕ್ರಿಕೆಟಿಗರು ಕೂಡ ಪಾಕ್‌ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಮಧ್ಯೆ ಅಫ್ಘಾನಿಸ್ತಾನದ ಸ್ಪಿನ್ನರ್ ಅಲ್ಲಾ ಗಜನ್ಫರ್(Allah Ghaza) ಭಾರತಕ್ಕೆ ವಿಶೇಷ ಸಂದೇಶ ಕಳುಹಿಸಿದ್ದಾರೆ.

ಪಾಕ್‌ನ ಈ ದಾಳಿಯನ್ನು ಖಂಡಿಸಿ ನ್ಯೂಸ್‌18 ಜತೆ ಮಾತನಾಡಿರುವ ಅಲ್ಲಾ ಗಜನ್ಫರ್, ಈ ದಾಳಿಗಳು ಸಾಮಾನ್ಯ ಜನರಿಗೆ ವಿನಾಶಕಾರಿಯಾಗಬಹುದು ಎಂದು ಹೇಳಿದರು. "ಅವರು(ಪಾಕಿಗಳು) ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಅವರು ಬಂದು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ, ಮತ್ತು ನಾವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಫ್ಘಾನಿಸ್ತಾನ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಗಜನ್ಫರ್ ಹೇಳಿದರು.

"ಅಫ್ಘಾನಿಸ್ತಾನದ ಇತಿಹಾಸ ಎಲ್ಲರಿಗೂ ತಿಳಿದಿದೆ" ಎಂದು ಅವರು ಎಚ್ಚರಿಸಿದರು. "ಆ ಇತಿಹಾಸ ಪುನರಾವರ್ತನೆಯಾದರೆ, ಅದು ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ."

"ಭಾರತ ನಮ್ಮ ಆಪ್ತ ಮಿತ್ರ. ಇಂತಹ ವಿಷಯಗಳು ಸಂಭವಿಸದಂತೆ ತಡೆಯಲು ನಾವು ಅವರೊಂದಿಗೆ ಸಂವಹನ ನಡೆಸಲು, ಈ ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇವೆ. ಇತರ ದೇಶಗಳಿಗೂ ಇದು ನಮ್ಮ ವಿನಂತಿ. ಇದು ಜನರಿಗೆ ಒಳ್ಳೆಯದಲ್ಲ. ಪ್ರಸ್ತುತ, ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಮತ್ತು ಇದು ಯಾರಿಗೂ ಒಳ್ಳೆಯದಲ್ಲ" ಎಂದು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿರುವ ಗಜನ್ಫರ್, ಭಾರತವು ಅಫ್ಘಾನಿಸ್ತಾನಕ್ಕೆ 'ಆಪ್ತ ಸ್ನೇಹಿತ' ಎಂದು ಹೇಳಿದರು.

ಇದಕ್ಕೂ ಮುನ್ನ ರಶೀದ್ ಖಾನ್ ಎಕ್ಸ್‌ನಲ್ಲಿ ಫೋಸ್ಟ್‌ ಮಾಡಿ ನಾಗರಿಕರ ಮನೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಯುದ್ಧಾಪರಾಧವಾಗಿದೆ ಆಕ್ರೋಶ ಹೊರಹಾಕಿದ್ದರು.

ಆರ್​ಸಿಬಿ ಖರೀದಿಗೆ ಅಂತಿಮ ಸುತ್ತಿನಲ್ಲಿ 2 ಕಂಪನಿಗಳ ನಡುವೆ ಪೈಪೋಟಿ!

'ಪವಿತ್ರಾ ರಂಜಾನ್‌ ತಿಂಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರಂತ, ಇದು ವಿಭಜನೆ ಮತ್ತು ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಕ್ರೂರ ಕೃತ್ಯದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ, ಹೊಣೆಗಾರರನ್ನು ಶಿಕ್ಷಿಸುವಂತೆ ವಿಶ್ವಸಂಸ್ಥೆ ಹಾಗೂ ಮಾನವ ಹಕ್ಕು ಸಂಸ್ಥೆಗಳಲ್ಲಿ ಮನವಿ ಮಾಡುತೇನೆ. ನಾವು ಗುಣಮುಖರಾಗುತ್ತೇವೆ ಮತ್ತು ರಾಷ್ಟ್ರವಾಗಿ ಮತ್ತೆ ಪುಟಿದೇಳುತ್ತೇವೆ' ಎಂದು ಬರೆದುಕೊಂಡಿದ್ದರು.

ಮತ್ತೊಬ್ಬ ಕ್ರಿಕೆಟಿಗ ನವಿನ್‌ ಉಲ್‌ ಹಕ್‌ ಕಾಬೂಲ್‌ ಮೇಲಿನ ಪಾಕಿಸ್ತಾನ ದಾಳಿಯನ್ನು ಖಂಡಿಸಿದ್ದಾರೆ. ಈಗಿನ ಪಾಕಿಸ್ತಾನದ ಆಡಳಿತವನ್ನು ಇಸ್ರೇಲ್‌ಗೆ ಹೋಲಿಸಿದ್ದು ಎರಡು ದೇಶಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗಿದೆ ಎಂದು ಹೇಳಿದ್ದರು.