ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್: ಪ್ರಹ್ಲಾದ್ ಜೋಶಿ
ರಾಹುಲ್ ಗಾಂಧಿ ಜತೆ ಹೋದರೆ ನಾವು ವಿಫಲರಾಗುತ್ತೇವೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೂ ಗೊತ್ತಿದೆ. ಆದರೆ, ರಾಹುಲ್ ಪಕ್ಷದ ನಾಯಕ ಎನ್ನುವ ಕಾರಣಕ್ಕೆ ಅನಿವಾರ್ಯವಾಗಿ ಅವರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಸಿದ್ಧಾಂತ, ಭಾಷೆ, ನೀತಿಗಳ ವಿಚಾರದಲ್ಲಿ ಭಿನ್ನತೆ ಇದೆ. ಆದರೆ, ರಾಹುಲ್ ಗಾಂಧಿ ತಾವು ಮುಳುಗುವುದರೊಂದಿಗೆ ತಮ್ಮೊಂದಿಗಿರುವ ಇತರರನ್ನು ಮುಳುಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ ಜೋಶಿ.