ಬೆಂಗಳೂರಿನ ಇಸ್ಕಾನ್ ದೇಗುಲ ಯಾರಿಗೆ ಸೇರಿದ್ದು? ಕೋರ್ಟ್ ಹೇಳಿದ್ದೇನು?
ಬೆಂಗಳೂರಿನ ಪ್ರಮುಖ ಭಕ್ತಿ ಸ್ಥಳವಾದ ಇಸ್ಕಾನ್ ದೇವಾಲಯದ ನಿಯಂತ್ರಣಕ್ಕಾಗಿ ಬೆಂಗಳೂರು ಹಾಗೂ ಮುಂಬೈ ಬಣಗಳ ನಡುವೆ ನಡೆಯುತ್ತಿದ್ದ ದೀರ್ಘಕಾಲದ ಜಟಾಪಟಿಗೆ ಇಂದು ತೆರೆ ಬಿದ್ದಿದೆ. ಇಸ್ಕಾನ್ ಮುಂಬೈ ಬಣಕ್ಕೆ ಅನುಕೂಲಕರವಾಗಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ.