ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಥಮ ಶಾಸಕರೂ ಮಂತ್ರಿಯಾಗುವ ಸಾಧ್ಯತೆ, ಹಿರಿಯರಿಗೂ ಆದ್ಯತೆ

ಡಿಸೆಂಬರ್ ವೇಳೆಗೆ ನಡೆಯಬಹುದಾದ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಕೆಲವು ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಒದಗಿಸಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ವರಿಷ್ಠರು ಹೆಚ್ಚು ಹಿರಿಯರಿಗಿಂತ ಯುವ ನಾಯಕರಿಗೆ ಹಾಗೂ ಕೆಲವು ಹೊಸ ಮುಖಗಳಿಗೂ ಅವಕಾಶ ನೀಡುವಂತೆ ಪ್ರಾತಿನಿಧ್ಯ ಕಲ್ಪಿಸಿ ಎನ್ನುವ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಪ್ರಥಮ ಶಾಸಕರೂ ಮಂತ್ರಿಯಾಗುವ ಸಾಧ್ಯತೆ, ಹಿರಿಯರಿಗೂ ಆದ್ಯತೆ

ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ಪುನಾರಚನೆಗೆ ಕೈ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ಚಿಂತಿಸಿದೆ. ಅಷ್ಟೇ ಅಲ್ಲ. ಈ ಬಾರಿ ಸಂಪುಟಕ್ಕೆ ಕೆಲವು ಹೊಸ ಮುಖಗಳು, ಅದರಲ್ಲೂ ಪ್ರಥಮ ಬಾರಿಗೆ ಶಾಸಕರಾದವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.

ಸಂಪುಟಕ್ಕೆ ಈ ಬಾರಿ ಕಾಂಗ್ರೆಸ್ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ, ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ ಮುಂತಾದವರಿಗೆ ಅಧಿಕಾರದ ಕೊನೆಯ ಅವಕಾಶ ಕೊಡುವ ಬಗ್ಗೆ ಆಲೋಚನೆ ಇದೆ ಎನ್ನಲಾಗಿದೆ. ಇದಕ್ಕಿಂತ ಹೆಚ್ಚಾಗಿ ಬಹುತೇಕ ಹೊಸಬರಿಗೆ ಅಂದರೆ ಬಿ.ಕೆ. ಹರಿಪ್ರಸಾದ್, ಅಶೋಕ್ ಪಟ್ಟಣ್, ಟಿ ಬಿ. ಜಯಚಂದ್ರ, ಅಪ್ಪಾಜಿ ನಾಡಗೌಡ ಅವರ ಜತೆಗೆ ಯುವಶಕ್ತಿಗಳಾದ ಎನ್.ಎ. ಹ್ಯಾರೀಸ್, ಶರತ್ ಬಚ್ಚೇಗೌಡ, ರಾಘವೇಂದ್ರ ಹಿಟ್ನಾಳ್, ರೂಪಾ ಶಶಿಧರ್, ರಿಜ್ವಾನ್ ಅರ್ಷದ್, ಅಜಯ್ ಸಿಂಗ್, ರಘುಮೂರ್ತಿ ಅವರಂತಹ ಯುವ ಪಡೆಯನ್ನೇ ಸಂಪುಟಕ್ಕೆ ತರಬೇಕೆನ್ನುವ ಗಂಭೀರ ಚಿಂತನೆ ಕೂಡ ಹೈಕಮಾಂಡ್‌ನದ್ದಾಗಿದೆ.

ಈ ಬಾರಿ ಸಚಿವ ಸಂಪುಟ ಪುನಾರಚನೆಯ ವಿಶೇಷವೆಂದರೆ ಕನಿಷ್ಠ ಇಬ್ಬರಿಂದ ಮೂವರು ನೂತನ ಶಾಸಕರಿಗೆ (ಪ್ರಥಮ ಬಾರಿಗೆ ಆಯ್ಕೆಯಾದವರು) ಮಂತ್ರಿಸ್ಥಾನ ಸಿಗಬಹುದು ಎನ್ನಲಾಗಿದೆ.

ಇದನ್ನೂ ಓದಿ: Shishir Hegde Column: ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!

ಅದರಲ್ಲೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಪ್ರಥಮ ಪ್ರಯತ್ನದಲ್ಲೇ ಸಂಪುಟಕ್ಕೆ ಸೇರಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಈ ಬಾರಿ ಹೊಸ ಮುಖಗಳಿಗೆ ಏಕೆ ಅವಕಾಶ?

ಡಿಸೆಂಬರ್ ವೇಳೆಗೆ ನಡೆಯಬಹುದಾದ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಕೆಲವು ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಒದಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ವರಿಷ್ಠರು ಹೆಚ್ಚು ಹಿರಿಯರಿಗಿಂತ ಯುವ ನಾಯಕರಿಗೆ ಹಾಗೂ ಕೆಲವು ಹೊಸ ಮುಖಗಳಿಗೂ ಅವಕಾಶ ನೀಡುವಂತೆ ಪ್ರಾತಿನಿಧ್ಯ ಕಲ್ಪಿಸಿ ಎನ್ನುವ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಆದರೆ ಡಿ.14ರ ಬಿಹಾರ ಚುನಾವಣೆಯ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ವರಿಷ್ಠರಾದ ರಾಹುಲ್ ಗಾಂಽ ಅವರನ್ನು ಭೇಟಿ ಮಾಡಿ ಪುನಾರಚನೆ ವಿಷಯ ಪ್ರಸ್ತಾಪ ಮಾಡುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಇದಕ್ಕೆ ಸ್ಪಷ್ಟತೆ ಸಿಗಲಿದೆ. ಆಗ ಪಕ್ಷದವರಿಗೆ ಈ ಹಿಂದೆ ಸೂಚನೆ ನೀಡಿದ್ದಂತೆ ಯುವಕರು ಮತ್ತು ಹೊಸ ಮುಖಕ್ಕೆ ಅವಕಾಶ ನೀಡಬೇಕೆನ್ನುವುದನ್ನು ಮತ್ತೆ ಹೇಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಒಂದು ಪಕ್ಷದ ಹಿರಿಯರು ಹೇಳಿದ್ದಾರೆ.

ಈ ಶಾಸಕರಿಗೇಕೆ ಮಂತ್ರಿಭಾಗ್ಯ?

ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಶಾಸಕರಾದವರು 42 ಮಂದಿ. ಈ ಬಾರಿ ಪ್ರಥಮ ಶಾಸಕರೂ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಎ.ಎಸ್.ಪೊನ್ನಣ್ಣ ಊರಿಗೆ ಮಂತ್ರಿಯಾಗುವ ಅವಕಾಶವಿದೆ ಎನ್ನಲಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ ಕೊಡವ ಸಮಾಜಕ್ಕೆ ಕಳೆದ 20 ವರ್ಷಗಳಿಂದ ಅವಕಾಶ ಲಭಿಸಿಲ್ಲ. ಅಷ್ಟಕ್ಕೂ ಬಿಜೆಪಿಯ ಭದ್ರ ಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದು ಕೇಕೆ ಹಾಕುವಂತೆ ಮಾಡಿದ್ದು ಪೊನ್ನಣ್ಣ ಅವರು.

ಇದೆಲ್ಲಕ್ಕಿಂತ ಮುಖ್ಯವಾಗಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಮುಡಾ ಹಗರಣ, ವಾಲ್ಮೀಕಿ ಹಗರಣ ಹಾಗೂ ಕೃಷ್ಣಾ, ಕಾವೇರಿ ನದಿ ವಿವಾದಗಳ ಕಾನೂನು ಹೋರಾಟಗಳಲ್ಲಿ ಜಯ ಸಾಧಿಸು ವಂತೆ ಮಾಡಿದ್ದು ಪೊನ್ನಣ್ಣ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವರಿಷ್ಠರಿಗೆ ಇವರ ಮೇಲೆ ವಿಶೇಷ ಒಲವು ಮೂಡಿದ್ದು ಇದು ಫಲ ನೀಡುವ ಸಾಧ್ಯತೆ ಇದೆ. ಇದೇ ರೀತಿ ಮಾಯಕೊಂಡ ಶಾಸಕ ಬಸವಂತೆಪ್ಪಾ ಹಾಗೂ ಮೂಡಿಗೆರೆಯ ನಯನ ಮೋಟಮ್ಮ ರೇಸ್‌ನಲ್ಲಿದ್ದಾರೆ.