ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suryaghar: ಮನೆ ಬೆಳಗುವ ಸೂರ್ಯಘರ್‌ಗೆ ಹೆಚ್ಚಿದ ಆಸಕ್ತಿ

ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿದ್ದ ಸೂರ್ಯಘರ್ ಯೋಜನೆಯಲ್ಲಿ ಸಬ್ಸಿಡಿ ದರದಲ್ಲಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗುತ್ತದೆ. ಆದರೆ ಆರಂಭದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ‘ಗೃಹಜ್ಯೋತಿ’ ಯೋಜನೆಯಿಂದ ಅನೇಕರು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಹೆಚ್ಚು ಆಸಕ್ತಿ ತೋರಿಸಿರಲಿಲ್ಲ.

ಅಪರ್ಣಾ ಎ.ಎಸ್ ಬೆಂಗಳೂರು

ಗೃಹಜ್ಯೋತಿ ಅನರ್ಹ ಗ್ರಾಹಕರಿಗೆ ಅನುಕೂಲ

ಬೆಸ್ಕಾಂ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಸೋಲಾರ್ ಪ್ಯಾನೆಲ್

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಫಲವಾಗಿ ಕೇಂದ್ರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಸೂರ್ಯ ಘರ್ ಯೋಜನೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಎನ್ನುವ ಆರೋಪದ ಹೊರತಾಗಿಯೂ ಕಳೆದ ಮೂರು ನಾಲ್ಕು ತಿಂಗಳಲ್ಲಿ ಸೂರ್ಯಘರ್ ಯೋಜನೆಗೆ ವೇಗ ಸಿಕ್ಕಿದೆ ಎನ್ನುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.

ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿದ್ದ ಸೂರ್ಯಘರ್ ಯೋಜನೆಯಲ್ಲಿ ಸಬ್ಸಿಡಿ ದರದಲ್ಲಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗುತ್ತದೆ. ಆದರೆ ಆರಂಭದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ‘ಗೃಹಜ್ಯೋತಿ’ ಯೋಜನೆಯಿಂದ ಅನೇಕರು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಹೆಚ್ಚು ಆಸಕ್ತಿ ತೋರಿಸಿರಲಿಲ್ಲ.

ಆದರೀಗ ಇಂಧನ ಇಲಾಖೆಯ ಸೂರ್ಯಘರ್ ಯೋಜನೆಯನ್ನು ಹೆಚ್ಚು ಜನರಿಗೆ ತಲುಪಿಸಲು ಜಾಗೃತಿ ಮೂಡಿಸಿದ ಪರಿಣಾಮ ಬೆಸ್ಕಾಂ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಿವಾಸಗಳಿಗೆ ಯೋಜನೆಯನ್ನು ತಲುಪಿಸಲಾಗಿದೆ.

ಆರಂಭಿಕ ಹಂತದಲ್ಲಿ ಕೇಳಿ ಬಂದಿದ್ದ ನಿರಾಸಕ್ತಿಯ ಹೊರತಾಗಿಯೂ ಸದ್ಯ ಸೂರ್ಯಘರ್ ಯೋಜನೆಗೆ ಭರ್ಜರಿ ಬೇಡಿಕೆ ಉಂಟಾಗಿದ್ದು, ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನದಲ್ಲಿ ಪ್ರಗತಿ ಕಂಡು ಬಂದಿದೆ. ಅಧಿಕಾರಿಗಳ ಪ್ರಕಾರ, ಸೂರ್ಯಘರ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಮತ್ತು ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆ ತಗ್ಗಿಸುವ ಪ್ರಮುಖ ಗುರಿ ಈ ಯೋಜನೆಯದ್ದಾಗಿದೆ.

ಇದನ್ನೂ ಓದಿ: Vishweshwar Bhat Column: ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !

ಮನೆಯಲ್ಲಿಯೇ ವಿದ್ಯುತ್ ಉತ್ಪಾದಿಸಿ ಸರಕಾರಕ್ಕೆ ಮಾರಾಟ ಮಾಡುವ ವ್ಯವಸ್ಥೆಯೂ ಇದರಲ್ಲಿದೆ. ಸೂರ್ಯ ಘರ್ ಯೋಜನೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಿದರೆ ಇನ್ನೂ ಹಲವರು ಈ ಯೋಜನೆ ಲಾಭಪಡೆದುಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಇಲ್ಲದವರಿಂದ ಸೂರ್ಯಘರ್ ಅನುಷ್ಠಾನ: ರಾಜ್ಯ ಸರಕಾರದ ಗೃಹಜ್ಯೋತಿ ಯೋಜನೆಯೂ 200 ಯುನಿಟ್‌ಗೆ ಸೀಮಿತವಾಗಿರುವುದರಿಂದ ಈಯೋಜ ನೆಯ ಫಲಾನುಭವಿಗಳಾಗದವರು ಗಮನದಲ್ಲಿರಿಸಿ ಕೊಂಡು ಬೆಸ್ಕಾಂ ಸೂರ್ಯಘರ್ ಯೋಜನೆ ಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದರೊಂದಿಗೆ ಸೂರ್ಯಘರ್ ಯೋಜನೆ ದೀರ್ಘಾ ವಧಿ ಲಾಭದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಆದ್ದರಿಂದ ಹೆಚ್ಚೆಚ್ಚು ಜನ ಈ ಯೋಜನೆಯತ್ತ ಗಮನಹರಿಸುತ್ತಿದ್ದಾರೆ ಎನ್ನಲಾಗಿದೆ. ಸೂರ್ಯಘರ್ ಯೋಜನೆಯಲ್ಲಿರುವವರು 25 ವರ್ಷ ಕಾಲ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿರುವುದಿಲ್ಲ. ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ನೀಡಲು ಅವಕಾಶವಿದ್ದು, ಈ ವಿದ್ಯುತ್ತಿಗೆ ಬೆಸ್ಕಾಂ ವತಿಯಿಂದ ಹಣ ಪಾವತಿಸಲಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯು ತ್ತಿದೆ.

ಇದರ ಪರಿಣಾಮ ಬೆಸ್ಕಾಂ ವ್ಯಾಪ್ತಿಯ 4476 ಮನೆಗಳಲ್ಲಿ ಸೂರ್ಯಘರ್ ಯೋಜನೆಯಡಿ ಸೋಲಾರ್ ವಿದ್ಯುತ್ ಪ್ಯಾನಲ್ ಗಳನ್ನು ಅಳವಡಿಸಿ ಜುಲೈ ಅಂತ್ಯದ ವೇಳೆಗೆ ಸುಮಾರು 20.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದಕ್ಕಾಗಿ 30.96 ಕೋಟಿ ರು. ಸಬ್ಸಿಡಿಯನ್ನು ಗ್ರಾಹಕರಿಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

30 ಸಾವಿರ ಸಬ್ಸಿಡಿ

ದೇಶದ ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಫಲಕ ಅಳವಡಿಸಲು ಈ ಯೋಜನೆ ಯನ್ನು ಆರಂಭಿಸಲಾಗಿದ್ದು, ಈ ಯೋಜನೆಯಲ್ಲಿ ಸೋಲಾರ್ ರೂಫ್ ಹಾಕಿಸಿಕೊಂಡರೆ ಒಂದು ಕೆ.ವಿ‌ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30000 ರು. ಸಬ್ಸಿಡಿ ದೊರೆಯುತ್ತಿದ್ದು, ಎರಡು ಕೆವಿ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60000 ರು. ಸಬ್ಸಿಡಿ ನಿಗದಿ ಪಡಿಸಲಾಗಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78000 ರು. ದೊರೆಯಲಿದೆ.

ಗ್ರಿಡ್ ಸಂಪರ್ಕದ ಲಾಭವೇನು?

ಮನೆಯಲ್ಲಿಯೇ ಮನೆಗೆ ಅಗತ್ಯವಿರುವ ವಿದ್ಯುತ್ ಅನ್ನು ಉತ್ಪಾದಿಸಬಹುದು ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯವಿಲ್ಲ. ಮನೆ ಬಳಕೆಯ ಬಳಿಕ ಹೆಚ್ಚುವರಿ ವಿದ್ಯುತ್ ಇದ್ದರೆ ಇಂಧನ ಇಲಾಖೆಯೇ ಖರೀದಿಸಲು ಅವಕಾಶ ನಿರ್ವಹಣೆ ವೆಚ್ಚ ತೀರಾ ಕಡಿಮೆ ಒಂದು ಕೆ.ವಿ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30000 ರು. ಸಬ್ಸಿಡಿ ಪರಿಸರ ಸ್ನೇಹಿ ಯಾದ ಸೂರ್ಯ ಘರ್ ಯೋಜನೆ ದೀರ್ಘ ಕಾಲ ಬಾಳಿಕೆ ಬರುತ್ತದೆ.

*

ಜತೆಗೆ ಹಣ ಉಳಿತಾಯ ಆಗುವುದರಿಂದ ನಗರ ಪ್ರದೇಶಗಳಲ್ಲಿ ಜನರು ಒಲವು ತೋರುತ್ತಿದ್ದು, ಸಬ್ಸಿಡಿಯ ಲಾಭ ಪಡೆಯುತ್ತಿದ್ದಾರೆ. ಹೆಚ್ಚಿನ ಜನರು ಪ್ರಯೋಜನ ಪಡೆಯಬೇಕೆಂಬುದು ನಮ್ಮ ಉದ್ದೇಶ. - ಕೆ.ಜೆ.ಜಾರ್ಜ್, ಇಂಧನ ಸಚಿವರು