ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತುರ್ತಾಗಿ ಕಾಮಗಾರಿ ಮುಗಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಿ ಎಂದು ಹೋರಾಟದ ಎಚ್ಚರಿಕೆ ನೀಡಿದ ಮುಖಂಡರು

ಕಾಂಗಾರಿ ನಡೆಸಿರುವ ಎಂಜಿ.ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ದಟ್ಟಣೆಯಿರುವುದು ಹೆದ್ಧಾರಿ ಕಾಮಗಾರಿ ತುರ್ತಾಗಿ ನಡೆಸಲು ತೊಂದರೆ ಎದುರಾಗಿದೆ. ಸಂಚಾರ ಸಮಸ್ಯೆ ನಿಭಾಯಿಸ ಬೇಕಾದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಎನ್ನುವುದು ನಾಗರೀಕರ ಆರೋಪವಾಗಿದೆ.

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗವಾಗಿ ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 69ರ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆಯುತ್ತಿದ್ದರೂ ಆಮೆಗತಿಯಲ್ಲಿ ಸಾಗಿರುವುದರಿಂದಾಗಿ ನಗರದಲ್ಲಿ ಏಕಮುಖ ಸಂಚಾರದ ಕಿರಿಕಿರಿಯ ಜತೆಗೆ,ಕೆಸರು ಮತ್ತು ಧೂಳಿನಿಂದಾಗಿ ನಗರವಾಸಿಗಳು ಹೈರಾಣಾಗುವಂತೆ ಆಗಿರುವುದು ಸಾರ್ವಜನಿಕರ ತೀವ್ರ ಅಸಹನೆಗೆ ಕಾರಣವಾಗಿರುವಂತೆ ಸಂಘಟನೆಗಳ ಮುಖಂಡರ ಅಸಹನೆಗೆ ಕಾರಣವಾಗಿದ್ದು ಹೋರಾಟದ ಎಚ್ಚರಿಕೆ ನೀಡಿದರು.

ಹೌದು ನಗರದ ಪ್ರಮುಖ ವಾಣಿಜ್ಯ ರಸ್ತೆಯಾದ ಎಂಜಿ ರಸ್ತೆಯಲ್ಲಿ ಜಿಲ್ಲಾಸ್ಪತ್ರೆ  ಎ.ಪಿ.ಎಂ.ಸಿ ಮಾರುಕಟ್ಟೆ, ಸರಕಾರಿ ಪ್ರಥಮದರ್ಜೆ ಕಾಲೇಜು, ಶಾಲಾಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ, ಜನವಸತಿ ಪ್ರದೇಶವಾದ ಪ್ರಶಾಂತ್ ನಗರ, ಪೊಲೀಸ್ ಕ್ವಾರ್ಟರ್ಸ್ ಇದೆ. ಮೇಲಾಗಿ ಇದೇ ಮಾರ್ಗದಲ್ಲಿ ಆಸ್ಪತ್ರೆ ಇರುವುದರಿಂದ ಇಶಾ ಪೌಂಡೇಷನ್ ಇರುವುದರಿಂದಾಗಿ ನಿತ್ಯವೂ ಸಂಚಾರ ದಟ್ಟಣೆಗೆ ಹೆಚ್ಚಾಗಿ ನಗರವಾಸಿಗಳು , ರೈತರು, ರೋಗಿಗಳು, ವಿದ್ಯಾರ್ಥಿಗಳು, ನಾಗರೀಕರು, ಇಶಾ ಪೌಂಡೇಷನ್‌ಗೆ ಬಂದು ಹೋಗುವ ಪ್ರವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಅಪಾಯದಲ್ಲಿರುವ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯುವ ಆಂಬುಲೆನ್ಸ್ ವಾಹನ ಸಂಚರಿಸಲೂ ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Chikkaballapur News: ಇಂದಿನಿಂದ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

ಕಾಂಗಾರಿ ನಡೆಸಿರುವ ಎಂಜಿ.ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ದಟ್ಟಣೆಯಿರುವುದು ಹೆದ್ಧಾರಿ ಕಾಮಗಾರಿ ತುರ್ತಾಗಿ ನಡೆಸಲು ತೊಂದರೆ ಎದುರಾಗಿದೆ. ಸಂಚಾರ ಸಮಸ್ಯೆ ನಿಭಾಯಿಸ ಬೇಕಾದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಎನ್ನುವುದು ನಾಗರೀಕರ ಆರೋಪವಾಗಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆಯಿಂದಾಗಿ ಅಪಘಾತಗಳು ಹೆಚ್ಚಾಗಿ, ಜನತೆ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಮಳೆ ಬಂತೆಂದರೆ ಸಾಕು ಒಳಚರಂಡಿ ಸರಿಯಾಗಿ ಮಾಡದ ಕಾರಣವಾಗಿ ನೀರೆಲ್ಲಾ ರಸ್ತೆಯ ಮೇಲೆ ನಿಂಲ್ಲುವುದರಿಂದ ಇದು ರಸ್ತೆಯೆಲ್ಲಿದೆ, ಹಳ್ಳಿ ಎಲ್ಲಿಗೆ ಎಂಬ ಅನುಮಾನ ವಾಹನ ಸವಾರರಿಗೆ ಮೂಡುತ್ತಾ ಹಳ್ಳಗಳಲ್ಲಿ ಗಾಡಿಗಳನ್ನು ಬಿಟ್ಟು ಅಪಾಯಕ್ಕೀಡಾಗು ತ್ತಿರುವುದು ಜತೆಯ ಆಕ್ರೋಶಕ್ಕೆ ಕಾರಣವಾಗಿದೆ.

ನಗರ, ಪಟ್ಟಣ ಪ್ರದೇಶದಂತಹ ಜನವಸತಿ ಪ್ರದೇಶಗಳಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತುರ್ತಾಗಿ ಮಾಡಬೇಕು ಎಂಬ ಬಗ್ಗೆ ಸರಕಾರಿ ನಿಯಮವೇ ಇದೆ. ಇದನ್ನೆಲ್ಲಾ ಮೀರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ನಿಯಮಗಳನ್ನು ಗಾಳಿಗೆ ತೂರಿ ಆಮೆಗತಿಯಲ್ಲಿ ನಡೆಸುತ್ತಾ ಜನತೆಯ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವುದು ನಾಗರೀಕರು ಮತ್ತು ಸಂಘಸಂಸ್ಥೆಗಳ ಅಸಹನೆಗೆ ಕಾರಣವಾಗಿದೆ.

cbpm3

ನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ಸಾಗಿರುವುದರಿಂದಾಗಿ ಬಿಎಸ್‌ಎನ್‌ಎಲ್ ಕೇಬಲ್ ವೈರ್‌ಗಳು ತುಂಡಾಗಿರುವುದು, ಜಕ್ಕಲಮೊಡಗು ಕುಡಿಯುವ ನೀರಿನ ಪೈಪುಗಳು ಒಡೆದು ರಸ್ತೆಯ ಮೇಲೆ ನೀರುಕ್ಕಿ ಹರಿವುದು ಸಾಮಾನ್ಯವಂಬತಾಗಿದ್ದರೂ ಈ ಭಾಗದ ನಗರಸಭಾ ಆಡಳಿತ ವಾಗಲಿ, ಶಾಸಕ ಸಂಸದರಾಗಲಿ ಇತ್ತ ಕಾಳಜಿ ತೋರಿ ಹೆದ್ಧಾರಿ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದಂತೆ ಕಾಣುತ್ತಿಲ್ಲ. ಪರಿಣಾಮವಾಗಿ ನಿಷ್ಪಾಪಿ ಜನತೆ, ರೈತರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ತುತ್ತಾಗುವಂತೆ ಆಗಿದೆ.

ನಗರದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾರಣವಾಗಿ ಎಂ.ಜಿ.ರಸ್ತೆ ಯ ಇಕ್ಕೆಲಗಳಲ್ಲಿರುವ ಕಟ್ಟಡಗಳು, ಅಂಗಡಿ ಮುಂಗಟ್ಟೆ ಮತ್ತು ಮನೆಗಳಿಗೆ ಮಾರ್ಕಿಂಗ್ ಮಾಡಿದ್ದ ಲ್ಲದೆ, ರಸ್ತೆ ಅಗಲೀಕರಣದ ಭಾಗವಾಗಿ ಕಟ್ಟಡಗಳನ್ನು ಕೆಡವಿ ವರ್ಷಗಳೇ ಕಳೆದಿವೆ. ಇದರ ಭಾಗವಾಗಿ ಮಧ್ಯ ರಸ್ತೆಯಿಂದ ೩೦ ಅಡಿ ಎಡಕ್ಕೆ ೩೦ ಅಡಿ ಬಲಕ್ಕೆ ವಿಸ್ತರಣೆ ಆಗಬೇಕಿದೆ. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನಸೋಯಿಚ್ಚೆ ಒಂದೊಂದೆಡೆ ಒಂದೊಂದು ರೀತಿಯಲ್ಲಿ ಅಗಲೀಕರಣಕ್ಕೆ ಅನುಮತಿ  ಮಾಡಿರುವುದರಿಂದ ತಿಪ್ಪೇನಹಳ್ಳಿ ಸಮೀಪ ಇದ್ದಷ್ಟು ಅಗಲ ನಗರದ ಎಂ.ಜಿ ರಸ್ತೆಯಲ್ಲಿ ಇಲ್ಲವಾಗಿದೆ.ಇದರಿಂದಾಗಿ ರಸ್ತೆ ಕಿರಿದಾಗಿ ನಿತ್ಯವೂ ಸಂಚಾರ ದಟ್ಟಣೆ ಹೆಚ್ಚಾ ಗಿದೆ. ಶಾಲಾ ಕಾಲೇಜು ಮಕ್ಕಳು ತಡವಾಗಿ ಶಾಲೆಗಳಿಗೆ ಹೋಗಿವಂತಾಗಿದೆ.

ಧೂಳೋ ಧೂಳು..
ನಗರದ ಹೃದಯಭಾಗದಲ್ಲಿ ಹೆದ್ದಾರಿ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪರಿಣಾಮ ರಸ್ತೆಯನ್ನು ಕಿತ್ತಿರುವ ಜಾಗದಲ್ಲಿ ಗಾಳಿಬಂದಾಗ ಮಾತ್ರವಲ್ಲದೆ, ವಾಹನಗಳು ಸಂಚಾರ ಮಾಡುವಾಗಲೆಲ್ಲಾ ಧೂಳು ಮೇಲೆದ್ದು ಹಿಂಬದಿ ವಾಹನಗಳು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೆ ತುತ್ತಾಗುವಂತೆ ಆಗಿದೆ.ವಾಹನಗಳಿಂದ ಮೇಲೇಳುವ ಧೂಳು ಬೇಕರಿ, ಅಂಗಡಿ ಮುಂಗಟ್ಟೆ, ಹೋಟೆಲ್‌ಗಳು, ಔಷಧಿ ಅಂಗಡಿ, ಟೀ ಕಾಫಿ ಹೋಟೆಲ್‌ಗಳ ಮೇಲೆಲ್ಲಾ ತುಂಬಿ ಬದುಕು ಅಸಹನೀಯವಾಗುವಂತೆ ಮಾಡಿದೆ ಎನ್ನುವುದು ಅಂಗಡಿ ಮಾಲಿಕರ ದೂರಾಗಿದೆ.

ಏನೇ ಆಗಲಿ ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಹೆದ್ದಾರಿ ಕಾಮಗಾರಿ ಮುಗಿಸಲು ೨ ವರ್ಷಗಳ ಕಾಲ ತೆಗೆದುಕೊಂಡಿರುವುದು ಸರಿಯಲ್ಲ.ಜನತೆಯ ಅನುಕೂಲಕ್ಕಾಗಿಯೇ ನಿರ್ಮಾಣ ಮಾಡುತ್ತಿರುವ ಹೆದ್ದಾರಿ ಕಾಮಗಾರಿ ಆದಷ್ಟು ಬೇಗ ಮುಗಿಸಿ ಸುಗಮ ಸಂಚಾರಕ್ಕೆ ಹೆದ್ದಾರಿ ಪ್ರಾಧಿಕಾರ ಅನುಕೂಲ ಮಾಡಿಕೊಡುವುದೋ ಇಲ್ಲವೋ ಎಂಬುದು ಯಕ್ಷಪ್ರಶ್ನೆಯಾಗಿದೆ.

*
ನಗರದಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ೨ ವರ್ಷವಾದರೂ ಮುಗಿದಿಲ್ಲ. ಗುತ್ತಿಗೆದಾರರು ಅಧಿಕಾರಿಗಳು ಜನಪ್ರತಿನಿಧಿಗಳ ನಡುವೆ ವ್ಯವಹಾರ ಕುದುರಿದಂತೆ ಕಾಣುತ್ತಿಲ್ಲ. ಕುದುರಿದ್ದರೆ ಇಷ್ಟೊತ್ತಿಗಾಗಲೇ ಇದು ಮುಗಿದು ಜನತೆ ನಿರಾಳರಾಗಬೇಕಿತ್ತು. ಭ್ರಷ್ಟಾಚಾರದ ಕಾರಣವಾಗಿ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದೆ.ಕಾಲ ಮಿಂಚಿಹೋಗುವ ಮುನ್ನ, ಜನತೆಯ ಸಿಟ್ಟು ರಟ್ಟೆಗೆ ಬರುವ ಮೊದಲು ಗುತ್ತಿಗೆದಾರರು, ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸಿ ಬೇಗ ಮುಗಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಕಾಮಗಾರಿ ತಡೆದು ರಸ್ತೆಯ ಮೇಲೆಯೇ ಪ್ರತಿಭಟನೆ ನಡೆಸಿ ತಕ್ಕ ಶಾಸ್ತಿ ಕಲಿಸಬೇಕಾಗುತ್ತದೆ.
ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷರು, ಮಹಾನಾಯಕ ಅಂಬೇಡ್ಕರ್ ಸೇನೆ ಕರ್ನಾಟಕ

*

ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವು ದರಿಂದ ನಗರವಾಸಿಗಳು, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಹೊತ್ತು ತರುವ ರೈತಾಪಿಗಳು, ವಿದ್ಯೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ.ಒಂದು ಮಗ್ಗುಲಲ್ಲಿ ರಸ್ತೆ ಕಾಮಗಾರಿ ನಡೆದರೆ ಮತ್ತೊಂದು ಮಗ್ಗುಲಲ್ಲಿ ವಾಹನಗಳು, ಮತ್ತು ಜನತೆ ಒಟ್ಟಿಗೆ ಸಂಚಾರ ಮಾಡುವ ಸ್ಥಿತಿಯಿರುವುದರಿಂದ ಅಪಘಾತಗಳು  ಹೆಚ್ಚಾಗುತ್ತಿವೆ. ಆದ್ದರಿಂದ ಶಾಸಕ ಸಂಸದರು ಇತ್ತ ಗಮನ ಹರಿಸಿ ಬೇಗೆ ಕಾಮಗಾರಿ ಮುಗಿಯುವಂತೆ ಮಾಡಬೇಕು. ಅಲ್ಲಿಯ ತನಕ ಇಶಾ ವಾಹನಗಳು ನಗರದ ಮೂಲಕ ಹಾದುಹೋಗದಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ.