ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಇಂದಿನಿಂದ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇ ಷನ್ಸ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ  ಅಂಡ್ ಮಷಿನ್ ಲರ್ನಿಂಗ್, ಇನ್ಫಾರ್ಮೆಷನ್ ಸೈನ್ಸ್  ಇಂಜನ ಇಂಜನಿಯರಿಂಗ್ ವಿಭಾಗಗಳ ಸಹಯೋಗ ದಲ್ಲಿ ೬ನೇ ಅಂತರಾಷ್ಟ್ರೀ ಯ ತಾಂತ್ರಿಕ ಸಮ್ಮೇಳನ ನಡೆಯುತ್ತಿದೆ.

ಇಂದಿನಿಂದ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

-

Ashok Nayak Ashok Nayak Oct 24, 2025 1:22 AM

೧೪ ದೇಶಗಳ ವಿದ್ವಾಂಸರ  ೧೯೪ ಪ್ರಬಂಧಗಳ ಮಂಡನೆ : ಫಾಕ್ಸ್ ಕಾನ್ ಹೆಚ್.ಆರ್. ಸತೀಶ್ ಭಾಗಿ

ಚಿಕ್ಕಬಳ್ಳಾಪುರ : ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅ.೨೪ರಿಂದ ೨೬ರವರೆಗೆ ಮೂರು ದಿನಗಳ ಕಾಲ ಐಇಇಇ ೬ನೇ ಗ್ಲೋಬಲ್ ಕಾನ್ಫರೆನ್ಸ್ ಫಾರ್ ಅಡ್ವಾನ್ಸ್ಮೆಂಟ್ ಇನ ಟೆಕ್ನೋಲಜಿ -೨೦೨೫ ಎಂಬ ವಿಷಯದ ಮೇಲೆ ೩ ದಿನಗಳ ಕಾಲ ಅಂತರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಪ್ರಾಂಶುಪಾಲ ಡಾ. ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಬಗ್ಗೆ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರಕ್ಕೆ ಅತ್ಯುತ್ತಮ ಪ್ರದರ್ಶನ ಜಿಲ್ಲೆ ಪ್ರಶಸ್ತಿ: ದೆಹಲಿಯ ಕಾರ್ಯಕ್ರಮದಲ್ಲಿ ಪ್ರಶಂಸಾ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ನಾಗಾರ್ಜುನ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ೬ನೇ ಅಂತರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು ಮುಖ್ಯ ಅತಿಥಿಗಳಾಗಿ ಫಾಕ್ಸ್ಕಾನ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸತೀಶ್‌ಕುಮಾರ್, ವಿನಯಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎ.ನಾಗಪ್ಪನ್, ಪುಣೆಯ ಪ್ಲಾನಿಂಗ್ ಸಿದ್ಧಾಂತ್ ಗ್ರೂಫ್ ಆಫ್ ಇನ್‌ ಸ್ಟಿಟ್ಯೂಷನ್ಸ್ ಟಿಪಿಸಿ ವಿಭಾಗದ ನಿರ್ದೇಶಕ ಡಾ.ಚಾಣಾಕ್ಯ ಕುಮಾರ್ ಜಾ ಭಾಗವಹಿಸಲಿದ್ದಾರೆ.

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ  ಅಂಡ್ ಮಷಿನ್ ಲರ್ನಿಂಗ್, ಇನ್ಫಾರ್ಮೆಷನ್ ಸೈನ್ಸ್  ಇಂಜನ ಇಂಜನಿಯರಿಂಗ್ ವಿಭಾಗಗಳ ಸಹಯೋಗ ದಲ್ಲಿ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಭಾಗವಹಿ ಸಲು ದೇಶವಿದೇಶಗಳಿಂದ ೨೦೪೫ ಪ್ರಬಂಧಗಳು ಸಲ್ಲಿಕೆಯಾಗಿದ್ದವು.ಈ ಪೈಕಿ ಉತ್ಕೃಷ್ಟವಾದ ೧೯೪ ಪ್ರಬಂಧಗಳನ್ನು ಆಯ್ಕೆ ಮಾಡಿ ಅವವುಗಳನ್ನು ಪುಸ್ತಿಕೆ ರೂಪದಲ್ಲಿ ಹೊರತರಲಾಗುತ್ತಿದೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ನಾಗಾರ್ಜುನ ಸಂಸ್ಥೆಯ ಕಾರ್ಯದರ್ಶಿ ಶ್ರೀಚೈತನ್ಯವರ್ಮ, ಸದಸ್ಯರಾದ ಭಾನುಚೈತನ್ಯವರ್ಮ,ನಿರ್ದೇಶಕರಾದ ಡಾ.ಎಸ್.ಜಿ.ಗೋಪಲಕೃಷ್ಣ,ನಾಗಾರ್ಜುನ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ಸ್ ವಿಭಾಗದ ಮುಖ್ಯಸ್ಥ ಡಾ.ಹೆಚ್.ವೆಂಕಟೇಶ್ ಉಪಸ್ಥಿತರಿರುವರು ಎಂದು ತಿಳಿಸಿದರು.