ಶಿವಕುಮಾರ್ ಬೆಳ್ಳಿತಟ್ಟೆ
ಹೈಕಮಾಂಡ್ ಬಳಿ ಸಚಿವರು, ಸರಕಾರದ ಮೌಲ್ಯಮಾಪನ ವರದಿ
ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಸಾಧ್ಯತೆ ದೂರವಾಗಿದ್ದು, ಬದಲಾಗಿ ಮುಂದಿನ ವರ್ಷದಲ್ಲಾಗುವ ಮೌನ ಕ್ರಾಂತಿಯ ಸಿದ್ಧತೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಮೂರು ತಿಂಗಳ ಹಿಂದೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದಂತೆ ಹಾಗೂ ಕಳೆದ ಒಂದು ತಿಂಗಳಿನಿಂದ ತೀರಾ ಚರ್ಚೆಗೆ ಗ್ರಾಸವಾಗಿದ್ದ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ನಡೆಯುವ ಯಾವುದೇ ಲಕ್ಷಣಗಳು ರಾಜ್ಯ ರಾಜಕೀಯದಲ್ಲಿ ಕಾಣಿಸುತ್ತಿಲ್ಲ, ಕಾರಣ ನವೆಂಬರ್ 14ರ ವರೆಗೂ ಬಿಹಾರ ಚುನಾವಣೆ ಗುಂಗಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ನಂತರದಲ್ಲೂ ರಾಜ್ಯ ಕಾಂಗ್ರೆಸ್ ಸರಕಾರದ ವಿಚಾರಕ್ಕೆ ತಲೆ ಹಾಕುವ ಚಿಂತನೆಯಲ್ಲಿಲ್ಲ. ಇದರ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಬಹುತೇಕ ನವೆಂಬರ್ ಪ್ರವಾಸದಲ್ಲಿರುತ್ತಾರೆ. ಆದ ಕಾರಣ ಅಂತ್ಯದವರೆಗೂ ವಿದೇಶ ರಾಜ್ಯ ಕಾಂಗ್ರೆಸ್‌ನಲ್ಲಾಗಲಿ, ಕಾಂಗ್ರೆಸ್ ಸರಕಾರ ದಲ್ಲಾಗಲಿ ಭಾರೀ ಬದಲಾವಣೆಗಳು ನಡೆಯುತ್ತವೆ.
ದೊಡ್ಡ ಕ್ರಾಂತಿಯೇ ನಡೆದು ಹೋಗುತ್ತದೆ ಎನ್ನುವುದು ತುಂಬಾ ದೂರದ ಮಾತು ಎಂದು ಪಕ್ಷದ ದೆಹಲಿ ಮೂಲಗಳು ತಿಳಿಸಿವೆ. ಇನ್ನೂ ಡಿಸೆಂಬರ್ ೮ರ ನಂತರ ರಾಜ್ಯ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಆ ಸಂದರ್ಭದಲ್ಲೂ ರಾಜಕೀಯ ಕ್ರಾಂತಿಗಳಾಗುವ ಸಾಧ್ಯತೆ ಕ್ಷೀಣ. ಹಾಗೆಂದ ಮಾತ್ರಕ್ಕೆ ರಾಜ್ಯ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಬದಲಾವಣೆಯೇ ಆಗುವುದಿಲ್ಲ ಎಂದೇನೂ ಅಲ್ಲ, ಬದಲಾಗು ವುದು ನಿಶ್ಚಿತ, ಆದರೆ ಅದರೆ ಸದ್ಯಕ್ಕಿಲ್ಲ.
ಇದನ್ನೂ ಓದಿ: Ganesh Bhat Column: ಆರ್ಥಿಕತೆಯ ನಿರ್ಮಾತೃಗಳನ್ನು ಗುರಿಯಾಗಿಸುವುದು ಎಷ್ಟು ಸರಿ ?
ಬಹುಶಃ ಜನವರಿ ವೇಳೆಗೆ ಸರಕಾರದಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದರ ಎಳೆದಾಟ ಮಾರ್ಚ್ ತಿಂಗಳ ತನಕವೂ ನಡೆಯಬಹುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಹೀಗಾಗಿ ನವೆಂಬರ್ ಅಪ್ರಸ್ತುತವಾಗುತ್ತಿದ್ದು, ಕ್ರಾಂತಿಯ ಸದ್ಯದ ಚರ್ಚೆಗಳು ಶಾಂತ ದಿನಗಳೆದಂತೆ ರಾಜಕಾರಣ ಮುಂದುವರಿಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ನವೆಂಬರ್ ಕ್ರಾಂತಿ ಏಕೆ ನಡೆಯದು?
ಈಗಾಗಲೇ ನಿಗದಿಯಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ.೧೫ ರಂದು ದೆಹಲಿಗೆ ತೆರಳಲಿದ್ದು, ಅಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಂದೊಮ್ಮೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾದರೂ ಸಂಪುಟ ಪುನಾ ರಚನೆಯಾಗಲಿ,
ನಾಯಕತ್ವ ಬದಲಾವಣೆ ವಿಚಾರಗಳನ್ನಾಗಲಿ ಚರ್ಚಿಸುವ ಸಾಧ್ಯತೆ ತೀರಾ ಕಡಿಮೆ. ಅದರಲ್ಲೂ ಬಿಹಾರದಲ್ಲಿ ಕಾಂಗ್ರೆಸ್ ಸಾಧನೆ ಕಡಿಮೆಯಾದರೂ ರಾಹುಲ್ ಗಾಂಧಿ ಭೇಟಿ ಸಾಧ್ಯತೆಯೂ ಕ್ಷೀಣವಾಗಲಿದೆ ಎನ್ನುತ್ತದೆ ಕಾಂಗ್ರೆಸ್ ಉನ್ನತ ಮೂಲಗಳು. ಅಷ್ಟಕ್ಕೂ ರಾಹುಲ್ ಗಾಂಧಿ ಅವರು ನ.೧೪ ರಿಂದ ೨೨ರ ವರೆಗೂ ಪಿಲ್‌ಲ್ಯಾಂಡ್ ಸೇರಿದಂತೆ ವಿವಿಧೆಡೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಇದರ ಮಧ್ಯೆ ಮೂರು ದಿನಗಳ ದೆಹಲಿ ಪ್ರವಾಸ ಮಾಡಬೇಕಿದ್ದ ಮುಖ್ಯಮಂತ್ರಿ ಅವರು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದಾರೆ.
ಹೀಗಾಗಿ ನವೆಂಬರ್ ಅವಧಿಯಲ್ಲಿ ಕ್ರಾಂತಿ ನಡೆಯುತ್ತದೆ ಎನ್ನುವುದು ಅಸಾಧ್ಯ. ಆದರೆ ಡಿಸೆಂಬರ್ ನಂತರದಲ್ಲಿ ಸರಕಾರದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಇದಕ್ಕಾಗಿ ವರಿಷ್ಠರು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ಪಕ್ಷದ ದೆಹಲಿ ಮೂಲಗಳು ತಿಳಿಸಿವೆ.
ಬಿಹಾರ ಫಲಿತಾಂಶದಿಂದ ರಾಜ್ಯಕ್ಕೇನು?
ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆಯಲಿದ್ದು, ಅದರಲ್ಲೂ ಕಾಂಗ್ರೆಸ್ ಸರಕಾರದಲ್ಲಿ ಕ್ರಾಂತಿಯೇ ನಡೆದು ಹೋಗುತ್ತದೆ ಎನ್ನುವ ಚರ್ಚೆಗಳು ತೀರಾ ಚರ್ಚೆಗೆ ಗ್ರಾಸವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕಾಂಗ್ರೆಸ್‌ನಲ್ಲಿ ಬದಲಾವಣೆ ನಡೆಯಲಿದೆ ಎಂದು ಪ್ರತಿಪಕ್ಷ ಬಿಜೆಪಿಯೇ ಕಾತರ ದಿಂದ ಕಾಯುತ್ತಾ, ಅದನ್ನೇ ಕನವರಿಸುವಂತಾಗಿದೆ. ಆದರೆ ರಾಜಕೀಯ ವಿಶ್ಲೇಷಕರು ಹಾಗೂ ತಜ್ಞರ ಪ್ರಕಾರ ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಅಷ್ಟೇನೂ ಭಾರೀ ಪರಿಣಾಮವನ್ನೇನೋ ಉಂಟು ಮಾಡಲಾರದು. ಅಂದರೆ ಬಿಹಾರದಲ್ಲಿ ಆರ್ ಜೆಡಿ ಪಕ್ಷ ಅಧಿಕಾರಕ್ಕೆ ಬಂದರೆ ಅದರಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿ ಸರಕಾರದಲ್ಲಿ ಭಾಗಿಯಾದರೆ ಕಾಂಗ್ರೆಸ್ ವರಿಷ್ಠರು ಇನ್ನಷ್ಠು ಬಲಿಷ್ಟರಾಗಲಿದ್ದಾರೆ. ಆ ಹುಮ್ಮಸ್ಸಿನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲೂ ಅನೇಕ ನಿಷ್ಠುರ ನಿರ್ಧಾರಗಳನ್ನು ಕೈಗೊಳ್ಳಲಿದೆ.
ನಾಯಕತ್ವ ಬದಲಾವಣೆಗೂ ಕೈ ಹಾಕಿದರೂ ಅಚ್ಚರಿ ಇಲ್ಲ ಎನ್ನುವ ಮಟ್ಟಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ದೇಶದ ಬಲಿಷ್ಠ ಸರಕಾರ ಇರುವ ಏಕೈಕ ರಾಜ್ಯ ಕರ್ನಾಟಕದಲ್ಲಿ ದಿಢೀರ್ ಕ್ರಾಂತಿ ನಡೆಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಎನ್ನಲಾಗಿದೆ.
ಬದಲಾಗಿ ಅಹಿಂದ ಜತೆಗೆ ಪ್ರಬಲ ಜಾತಿಗಳನ್ನೂ ತನ್ನತ್ತ ಸೆಳೆದು ಮುಂಬರುವ 2028ರ ಚುನಾವಣೆಗೆ ಈಗಲೇ ಸಜ್ಜಾಗಬೇಕಾದ ಸವಾಲಿನ ಚಿಂತನೆಯಲ್ಲಿದೆ. ಇದರ ಮಧ್ಯೆ ರಾಜ್ಯ ಸರಕಾರದ ಪ್ರಗತಿ ಹಾಗೂ ಫಲಿತಾಂಶದ ವರದಿಯನ್ನು ತರಿಸಿಕೊಂಡಿ ರುವ ವರಿಷ್ಠರು, ಸಚಿವರ ಸಾಧನೆ ಕುರಿತ ಮಾಹಿತಿಯನ್ನೂ ತರಿಸಿಕೊಂಡಿದ್ದಾರೆ. ಇದನ್ನಾ ಧರಿಸಿ ಪಕ್ಷ ವರಿಷ್ಠರು, ಸರಕಾರದಲ್ಲಿ ಅನೇಕ ಅನಿರೀಕ್ಷಿತ ನಿರ್ಧಾರಗಳೂ ಸೇರಿದಂತೆ ಭಾರೀ ಬದಲಾವಣೆಗಳು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕ್ರಾಂತಿ ಹೆಸರಿನಲ್ಲಿ ಅನಗತ್ಯ ಪ್ರಯೋಗ ನಡೆಸಿ ಅದರ ಪರಿಣಾಮಗಳ ಹೋರಾಡುವ ಗೋಜಿಗೆ ಹೋಗುವ ಸಾಧ್ಯತೆಗಳು ಸದ್ಯಕ್ಕೆ ಕ್ಷೀಣ ಎನ್ನಲಾಗಿದೆ.