ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishnuvardhan Memorial: ವಿಷ್ಣುವರ್ಧನ್ ಹೆಸರಲ್ಲಿ ಕಿಚ್ಚ ನಿರ್ಮಿಸಲಿರುವ ಸ್ಮಾರಕ ಹೇಗಿರಲಿದೆ?

ನಟ ವಿಷ್ಣುವರ್ಧನ್ ಸ್ಮಾರಕ ವಿಚಾರ ಇನ್ನು ಇತ್ಯರ್ಥ ಆಗುವ ಮುನ್ನವೇ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳು, ಸಿನಿಮಾ ಇಂಡಸ್ಟ್ರಿಯ ಮೇರು ಕಲಾವಿದರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಟ ಕಿಚ್ಚ ಸುದೀಪ್ ಕೂಡ ಸಮಾಧಿ ದ್ವಂಸ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ... ಇದೀಗ ವಿಷ್ಣುವರ್ಧನ್ ಹೆಸರಲ್ಲಿ ಸ್ಮಾರಕ ನಿರ್ಮಾಣಕ್ಕೆ ನಟ ಕಿಚ್ಚ ಸುದೀಪ್ ಜಾಗ ಖರೀದಿಸಿದ್ದಾರೆ.

ನವದೆಹಲಿ: ಸಾಹಸಿಂಹ ಡಾಕ್ಟರ್ ವಿಷ್ಣುವರ್ಧನ್ (Vishnuvardhan) ಎಂದಾಗ ಅವರ ಖಡಕ್ ಲುಕ್, ಅದ್ಭುತ ಅಭಿನಯ ಒಮ್ಮೆಲೆ ನೆನಪಾಗುತ್ತದೆ. ಯಜಮಾನ, ಕೋಟಿಗೊಬ್ಬ, ವೀರಪ್ಪ ನಾಯಕ, ಸಿಂಹಾ ದ್ರಿಯ ಸಿಂಹ, ಜಯಸಿಂಹ, ಆಪ್ತ ಮಿತ್ರ, ಆಪ್ತ ರಕ್ಷಕ, ಕಿಟ್ಟುಪುಟ್ಟು ಸೇರಿದಂತೆ ಅನೇಕ ಹಿಟ್ ಸಿನಿಮಾ ನೀಡಿ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಅವರು ನಮ್ಮನ್ನಗಲಿ 15 ವರ್ಷವೇ ಕಳೆದಿದ್ದರೂ ಅವರ ನಟನೆಯ ಸಿನಿಮಾ ಮಾತ್ರ ಎಂದೆಂದಿಗೂ ಜೀವಂತವಾಗಿ ಉಳಿಯುವಂತೆ ಮಾಡಿದೆ‌. ಅವರಿಗಾಗಿ ಮೈಸೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಪುಟ್ಟ ಸ್ಮಾರಕ ಮಾಡುವುದು ಅಭಿಮಾನಿಗಳ ಬಹುದೊಡ್ಡ ಆಸೆಯಾಗಿತ್ತು. ಆದರೆ ಸ್ಮಾರಕ ನಿರ್ಮಾಣ ಕನಸು ಈಡೇರುವ ಮುನ್ನವೇ ನಟ ಬಾಲಕೃಷ್ಣ ಕುಟುಂಬಸ್ಥರು ಸಮಾಧಿ ನೆಲಸಮ ಮಾಡಿಸಿದ್ದಾರೆ. ಹೀಗಾಗಿ ಇದು ರಾಜ್ಯದಲ್ಲಿ ದೊಡ್ಡ ವಿವಾದಕ್ಕೂ ಕಾರಣವಾಗಿದ್ದು, ರಾತ್ರೋರಾತ್ರಿ ಅವರ ಸಮಾಧಿ ನೆಲಸಮ ಮಾಡಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ. ಇದರ ಬೆನ್ನಲ್ಲೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಿದೆ. ಅದರೊಂದಿಗೆ ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಂಗೇರಿ ಬಳಿ ಮತ್ತೊಂದು ಸ್ಮಾರಕ ತಲೆ ಎತ್ತಲಿದೆ ಎಂದು ಸಹ ಹೇಳಲಾಗುತ್ತಿದೆ.

ಹೇಗಿರಲಿದೆ ಈ ಸ್ಮಾರಕ?

ಕೆಂಗೇರಿ ಬಳಿಯ ಸ್ಮಾರಕದಲ್ಲಿ ನಟ ವಿಷ್ಣುವರ್ಧನ್ ಅವರ 25 ಅಡಿ ಪುತ್ಥಳಿ ಇರುತ್ತದೆ. ಜೊತೆಗೆ ಒಂದು ಗ್ರಂಥಾಲಯ ಇರುತ್ತದೆ. ಅವರ ಸಿನಿಮಾ ಗಾಥೆ ಸಾರುವ ಫೋಟೊ ಗ್ಯಾಲರಿ, ಅವರಿಗೆ ಇಷ್ಟವಾದ ಕೆಲ ವಸ್ತು ಸಂಗ್ರಹಾಲಯ ಇತ್ಯಾದಿ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವೂ ಮಾಡಬೇಕು ಎಂದು ವೀರಕಪುತ್ರ ಶ್ರೀನಿವಾಸ್ ಅವರು ಹೇಳಿದ್ದಾರೆ. ಸೆಪ್ಟೆಂಬರ್ 18ಕ್ಕೆ ವಿಷ್ಣು ವರ್ಧನ್ ಹುಟ್ಟು ಹಬ್ಬವಿದ್ದ ಕಾರಣ ಅದೇ ದಿನ ಈ ಸ್ಮಾರಕದ ಕೆಲವು ಮುಖ್ಯ ವಿಚಾರಗಳ ಬಗ್ಗೆಯೂ ನಿರ್ಣಯಿಸುವ ಸಾಧ್ಯತೆ ಕೂಡ ಇದೆ ಎನ್ನಬಹುದು.

ನಟ ವಿಷ್ಣುವರ್ಧನ್ ಸ್ಮಾರಕ ವಿಚಾರ ಇನ್ನು ಇತ್ಯರ್ಥ ಆಗುವ ಮುನ್ನವೇ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳು, ಸಿನಿಮಾ ಇಂಡಸ್ಟ್ರಿಯ ಮೇರು ಕಲಾ ವಿದರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಟ ಕಿಚ್ಚ ಸುದೀಪ್ ಕೂಡ ಸಮಾಧಿ ದ್ವಂಸ ಮಾಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಅವರು ಇತ್ತೀಚೆಗಷ್ಟೇ ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಮಾತನಾಡಿದ್ದಾರೆ. ಈ ಮೂಲಕ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ನಾವು ಸಿದ್ಧ. ಅದಕ್ಕಾಗಿ ಕೋರ್ಟ್‌ಗೆ ಹೋಗಲು ಕೂಡ ನಾವು ಹಿಂದೇಟು ಹಾಕಲಾರೆವು. ಹಣಕಾಸಿನ ನೆರವಿಗೂ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ. ಅದಕ್ಕೂ ಮೊದಲೆ ಕೆಂಗೇರಿ ಬಳಿ ವಿಷ್ಣು ವರ್ಧನ್ ಹೆಸರಿನಲ್ಲಿ ದರ್ಶನ ಕೇಂದ್ರ ಸ್ಥಾಪನೆಗೆ ಸುದೀಪ್ ಮುಂದಾಗಿದ್ದಾರೆ ಎಂಬ ಮಾಹಿತಿ ವೈರಲ್ ಆಗಿದೆ.

ನಟ ವಿಷ್ಣುವರ್ಧನ್ ಸಮಾಧಿ ದ್ವಂಸ ಮಾಡಿದ್ದ ಬೆನ್ನಲ್ಲೇ ವಿಷ್ಣುಸೇನಾ ಸಮಿತಿ ವತಿಯಿಂದ ಸುದ್ದಿಗೋಷ್ಠಿ ಕೂಡ ಮಾಡಲಾಗಿದೆ. ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿ ಜಾಗದ ಕುರಿತು ಅಭಿಮಾನಿಗಳ ಕಾನೂನಾತ್ಮಕ ಹೋರಾಟ ನಿಲ್ಲಲಾರದು. ಅವರ ಹುಟ್ಟುಹಬ್ಬ ಇತರ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎಲ್ಲಿಗೆ ಹೋಗಬೇಕು. ಎಲ್ಲರಿಗೂ ಮೈಸೂರಿಗೆ ಹೋಗಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಕೆಂಗೇರಿ ಬಳಿ ಸ್ಮಾರಕ ನಿರ್ಮಾಣ ಮಾಡಲಿದ್ದೇವೆ. ಅದಕ್ಕೆ ಸುದೀಪ್ ಸರ್ ಕೈ ಜೋಡಿಸಿದ್ದಾರೆ ಎಂದು ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Hacche Movie: ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ʼಹಚ್ಚೆʼ ಚಿತ್ರದ ಟ್ರೇಲರ್ ಔಟ್‌

ಅಭಿಮಾನಿಗಳ ಬೆಂಬಲ:

ನಟ ಸುದೀಪ್ ಅವರ ಈ ನಿರ್ಣಯಕ್ಕೆ ವಿಷ್ಣುವರ್ಧನ್ ಅಭಿಮಾನಿಗಳು ಬೆಂಬಲಿಸಿದ್ದಾರಂತೆ. ಅಭಿಮಾನ್ ಸ್ಟುಡಿಯೋದಿಂದ ಸ್ವಲ್ಪ ದೂರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನಟ ಕಿಚ್ಚ ಸುದೀಪ್ ಅವರು ಈಗಾಗಲೇ ಅರ್ಧ ಎಕರೆ ಜಾಗ ಕೂಡ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 18ರಂದು ವಿಷ್ಣು ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದ್ದು ಮುಂದಿನ ದಿನದಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿ ಸಿಗುತ್ತದೆ ಎಂದು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.