ಬೆಂಗಳೂರು: ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ (Rachita Ram Birthday) ಅವರು ಶುಕ್ರವಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೆ ವೇಳೆ ಅಭಿಮಾನಿಗಳಿಗೆ ನಟಿ ಸಿಹಿ ಸುದ್ದಿ ನೀಡಿದ್ದು, ನಾನು ಖಂಡಿತವಾಗುವೆ. ಆದಷ್ಟು ಬೇಗ ಮದುವೆ ಆಗುತ್ತಾನೆ, ಮನೆಯಲ್ಲಿ ಹುಡುಗನ ಹುಡುಕ್ತಾಇದ್ದಾರೆ ಎಂದು ತಿಳಿಸಿದ್ದಾರೆ. ಆರ್ ಆರ್ ನಗರದ ನಿವಾಸದಲ್ಲಿ ನಟಿ ರಚಿತಾ ರಾಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಇದೆ ವೇಳೆ ಮೂಗು ಚುಚ್ಚಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿ, ಅಮ್ಮನಿಗೂ ಕೂಡ ಮೂಗು ಬೊಟ್ಟು ಚುಚ್ಚಿಸಲು ಆಸೆ ಇತ್ತು. ನವರಾತ್ರಿ ಸಂದರ್ಭದಲ್ಲಿ ಒಳ್ಳೆಯ ದಿನ ಎಂದು ಮೂಗು ಚುಚ್ಚಿಸಿಕೊಂಡಿದ್ದೇನೆ ಎಂದರು. ಈ ವೇಳೆ ಮಾಧ್ಯಮದವರು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಮಾಡಿದಾಗ, ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆ ಇಲ್ಲ, ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದರು.
ರಜನಿಕಾಂತ್ ಸರ್ ಕಾಲ್ ಮಾಡಿ ವಿಶ್ ಮಾಡಿದ್ರು. ಖುಷಿ ಆಯ್ತು. ಕೂಲಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ಸಿಗೋದಕ್ಕೆ ದರ್ಶನ್ ಕಾರಣ. ನಾನು ದರ್ಶನ್ ಅವರ ಜತೆ ಮಾತಾಡಿದಾಗ ಒಪ್ಪಿಕೋ ಎಂದು ಹೇಳಿದ್ದರು. ನೆನ್ನೆ ರಾತ್ರಿ ಕಾಂತಾರ ಬಗ್ಗೆ ಮಾತನಾಡಿದಾಗ ಮೈ ಜುಮ್ ಅನ್ನಿಸಿತ್ತು. ಲ್ಯಾಂಡ್ ಲಾರ್ಡ್ ಸಿನಿಮಾದ ಟೀಸರ್ ಅಷ್ಟೇ ಚೆನ್ನಾಗಿದೆ. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳ ತಾಯಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.
ನನಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಬೇರೆ ಇಂಡಸ್ಟ್ರಿಂದ ನೆಗೆಟಿವ್ ಪಾತ್ರಗಳೇ ಬರುತ್ತಿದೆ. ನಾನು ಮದುವೆಯಾದರೇ, ಅರೆಂಜ್ಡ್ ಮ್ಯಾರೇಜ್ ಆಗ್ತೀನಿ. ಸದ್ಯಕ್ಕೆ ಮನೆಯಲ್ಲಿ ಹುಡುಗನ ಹುಡುಕುತ್ತಿದ್ದಾರೆ. ಡ್ರೀಮ್ ಬಾಯ್ ಅಂತೇನು ಆಸೆಗಳು ಇಲ್ಲ. ನೋಡೋಣ ಕಂಕಣ ಭಾಗ್ಯ ಇದ್ದಾಗ ಮದುವೆ ಆಗುತ್ತೇನೆ. ಮೂಗು ಚುಚ್ಚಿಸಿರೋದಕ್ಕೂ ಮದುವೆಗೂ ಲಿಂಕ್ ಇಲ್ಲ ಎಂದು ಸ್ಯಾಂಡಲ್ ವುಡ್ ಕ್ವೀನ್ ರಚಿತ್ ರಾಮ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Kantara Chapter 1: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಇತಿಹಾಸ ಬರೆದ ʼಕಾಂತಾರ: ಚಾಪ್ಟರ್ 1'; ಮೊದಲ ದಿನ ಸೇಲ್ ಆದ ಟಿಕೆಟ್ ಎಷ್ಟು?
ಇನ್ನು ನಿನ್ನೆ ರಾತ್ರಿಯಿಂದಲೇ ರಚಿತಾ ನಿವಾಸದ ಬಳಿ ಅಭಿಮಾನಿಗಳ ದಂಡು ನೆರೆದಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ತಂಡದಿಂದ ರಚಿತಾ ರಾಮ್ ಹುಟ್ಟುಹಬ್ಬದ ಅದ್ಧೂರಿ ಆಚರಣೆಯನ್ನು ಮಾಡಲಾಗುತ್ತಿದೆ. ರಚಿತರಾಮ್ ನಿವಾಸದ ಬಳಿ ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ನಡೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.