ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai: ಆಪರೇಶನ್‌ ಸಿಂದೂರಕ್ಕೆ ವಿಶಿಷ್ಟ ಲುಕ್‌ ಮೂಲಕ ನಮನ ಸಾರಿದ ಐಶ್ವರ್ಯ ರೈ

ಕ್ಯಾನ್-‌ 2025 ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ರಾಯಲ್ ಬಿಳಿ ಸೀರೆ ಹಾಗೂ ಕುಪ್ಪಸದಲ್ಲಿ ಕಾಣಿಸಿಕೊಂಡರು. ಮುಖ್ಯವಾಗಿ ಅವರು ಹಣೆಯಲ್ಲಿ ಧರಿಸಿದ ಉದ್ದದ ಸಿಂದೂರ ಎಲ್ಲರ ಗಮನ ಸೆಳೆಯಿತು. ಆನ್‌ಲೈನ್‌ನಲ್ಲಿ ಚರ್ಚೆಗೂ ನಾಂದಿ ಹಾಡಿತು.

ಆಪರೇಶನ್‌ ಸಿಂದೂರಕ್ಕೆ ವಿಶಿಷ್ಟ ಲುಕ್‌ ಮೂಲಕ ನಮನ ಸಾರಿದ ಐಶ್ವರ್ಯ ರೈ

ಕ್ಯಾನ್‌ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ

ಹರೀಶ್‌ ಕೇರ ಹರೀಶ್‌ ಕೇರ May 22, 2025 7:53 AM

ನವದೆಹಲಿ: ಪಾಕ್‌ ಭಯೋತ್ಪಾದಕರ (Terrorists) ವಿರುದ್ಧ ಭಾರತ ಸಾರಿದ ಆಪರೇಶನ್‌ ಸಿಂದೂರಕ್ಕೆ (Operation Sindoor) ಬಾಲಿವುಡ್‌ನ (Bollywood) ಅನೇಕ ನಟನಟಿಯರು ಬೆಂಬಲ ಸಾರಿದ್ದಾರೆ. ನಟಿ ಐಶ್ವರ್ಯ ರೈ (Aishwarya Rai) ಕೂಡ ತಮ್ಮ ವಿಶಿಷ್ಟ ಲುಕ್‌ ಮೂಲಕ ಇದೀಗ ಆಪರೇಶನ್‌ ಸಿಂದೂರಕ್ಕೆ ಗೌರವ ಸಲ್ಲಿಸಿದ್ದಾರೆ. ಕ್ಯಾನ್‌-2025 (Cannes 2025) ಚಲನಚಿತ್ರೋತ್ಸವದಲ್ಲಿ ಐಶ್‌ ಈ ರೀತಿ ವಿಶಿಷ್ಟವಾಗಿ ಕಾಣಿಸಿಕೊಂಡರು. ಆ ಮೂಲಕ ಅವರು ಆಪರೇಶನ್‌ ಸಿಂದೂರಕ್ಕೆ ತಮ್ಮದೇ ಆದ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ ಎಂದು ನೆಟಿಜನ್‌ಗಳು ಗುರುತಿಸಿದ್ದಾರೆ.

ಕ್ಯಾನ್-‌ 2025 ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ರಾಯಲ್ ಬಿಳಿ ಸೀರೆ ಹಾಗೂ ಕುಪ್ಪಸದಲ್ಲಿ ಕಾಣಿಸಿಕೊಂಡರು. ಮುಖ್ಯವಾಗಿ ಅವರು ಹಣೆಯಲ್ಲಿ ಧರಿಸಿದ ಉದ್ದದ ಸಿಂದೂರ ಎಲ್ಲರ ಗಮನ ಸೆಳೆಯಿತು. ಆನ್‌ಲೈನ್‌ನಲ್ಲಿ ಚರ್ಚೆಗೂ ನಾಂದಿ ಹಾಡಿತು. ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿದದ್ದಕ್ಕಾಗಿ ಅನೇಕರು ಅವರನ್ನು ಹೊಗಳಿದ್ದಾರೆ. ಅವರ ಲುಕ್‌ನಲ್ಲಿ ಆಳವಾದ ಸಂಕೇತ ಇರಬಹುದು ಎಂದು ಹಲವರು ವ್ಯಾಖ್ಯಾನಿಸಿದರು.

ಐಶ್ವರ್ಯಾ ಅವರ ಸಿಂದೂರವು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೈನ್ಯ ಸಾರಿದ ಆಪರೇಷನ್ ಸಿಂದೂರ್‌ಗೆ ಸೂಕ್ಷ್ಮವಾದ ಆದರೆ ಶಕ್ತಿಯುತವಾದ ಗೌರವ ಆಗಿದೆ ಎಂದು ಆನ್‌ಲೈನ್‌ನಲ್ಲಿ ಹಲವಾರು ಮಂದಿ ಹೇಳಿದ್ದಾರೆ. ಮೇ 7 ಮತ್ತು 8 ರ ನಡುವೆ ನಡೆದ ಸಿಂದೂರ್‌ ಕಾರ್ಯಾಚರಣೆ, 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನ ಜೀವವನ್ನು ಬಲಿತೆಗೆದುಕೊಂಡ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿದೆ.



ಐಶ್ವರ್ಯಾ ಕ್ಯಾನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕೆಂಪು ಸಿಂದೂರದೊಂದಿಗೆ ಕಾಣಿಸಿಕೊಂಡಿದ್ದು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಯಿತು. ಒಬ್ಬ ಬಳಕೆದಾರರು "ಐಶ್‌ ಆಪರೇಷನ್ ಸಿಂದೂರವನ್ನು ಪ್ರತಿನಿಧಿಸುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. "ಅವರು ಈ ಲುಕ್‌ ಅನ್ನು ಆಪರೇಷನ್ ಸಿಂದೂರಕ್ಕೆ ಅರ್ಪಿಸಿದ್ದಾರೆ. ಆಕೆ ಸುಂದರ ಮಹಿಳೆ." "ನನಗೆ ಐಶ್ವರ್ಯಾ ರೈ ಬಗ್ಗೆ ತುಂಬಾ ಹೆಮ್ಮೆಯಿದೆ. ಅವರು ಎಂದಿನಂತೆ ಪವರ್‌ಫುಲ್‌ ಆಗಿ ಮತ್ತು ಸುಂದರವಾಗಿ ಕಾಣಿಸಿಕೊಂಡರು. ಆಪರೇಷನ್ ಸಿಂದೂರವನ್ನು ಬೆಂಬಲಿಸಿದರು" ಎಂದೆಲ್ಲ ಮೆಚ್ಚಿದ್ದಾರೆ.

ಇತ್ತೀಚೆಗೆ ಗಂಡ ಅಭಿಷೇಕ್ ಬಚ್ಚನ್ ಅವರೊಂದಿಗಿನ ದಾಂಪತ್ಯದಲ್ಲಿ ಐಶ್‌ ಬಿರುಕು ಅನುಭವಿಸುತ್ತಿದ್ದಾರೆ ಎಂಬ ವದಂತಿಯೂ ಇದೆ. 2024ರಿಂದ ಈ ದಂಪತಿಯ ಬಗ್ಗೆ ತೀವ್ರ ಸಾರ್ವಜನಿಕ ವದಂತಿಗಳಿವೆ. ಊಹಾಪೋಹಗಳು ಚಾಲ್ತಿಯಲ್ಲಿವೆ. ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಸೋಶಿಯಲ್‌ ಮೀಡಿಯಾ ಚಟುವಟಿಕೆಯನ್ನು ಸೀಮಿತಗೊಳಿಸಿದ್ದರಿಂದಾಗಿ ಗಾಸಿಪ್ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಜಂಟಿ ಪ್ರವಾಸ ಮಾಡುವ ಮೂಲಕ ದಂಪತಿ ತಾವು ಒಟ್ಟಿಗಿದ್ದೇವೆ ಎಂದು ಸಾರಿದ್ದಾರೆ.

ಇನ್ನು ಕೆರಿಯರ್‌ ವಿಚಾರಕ್ಕೆ ಬಂದರೆ, ಐಶ್ವರ್ಯಾ ಕೊನೆಯ ಬಾರಿಗೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: II ನಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದರು. ಬೇರೆ ಯಾವುದೇ ಪ್ರಾಜೆಕ್ಟ್‌ ಅವರ ಬಳಿ ಇಲ್ಲ. ಅಭಿಷೇಕ್ ಬಚ್ಚನ್ ಅಮೆಜಾನ್ ಪ್ರೈಮ್‌ನ ಬಿ ಹ್ಯಾಪಿ ಸೀರೀಸ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Aishwarya-Abhishek: ಡಿವೋರ್ಸ್‌ ವದಂತಿ ನಡುವೆಯೇ ಜತೆಯಾಗಿ ಕಾಣಿಸಿಕೊಂಡ ಐಶ್ವರ್ಯ-ಅಭಿಷೇಕ್‌ ದಂಪತಿ; ಬಿಗ್‌ ಬಿ ಕೂಡ ಸಾಥ್‌!