ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jason Sanjay: ನಟ ವಿಜಯ್ ಪುತ್ರ ಜೇಸನ್ ಹೊಸ ಚಿತ್ರದ ನಿರ್ದೇಶನದಲ್ಲಿ ಫುಲ್ ಬ್ಯುಸಿ; ವಿಡಿಯೊ ವೈರಲ್

ಸಾಮಾನ್ಯವಾಗಿ ಸ್ಟಾರ್‌ಗಳ ಮಕ್ಕಳು ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ತಮಿಳು ಸೂಪರ್‌ಸ್ಟಾರ್‌, ದಳಪತಿ ವಿಜಯ್ ಪುತ್ರ ಜೇಸನ್ ನಟನೆಯ ಬದಲು ನಿರ್ದೇಶನ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾವನ್ನು ಜೇಸನ್ ನಿರ್ದೇಶಿಸುತ್ತಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಚಿತ್ರೀಕರಣದಲ್ಲಿ ಜೇಸನ್ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಡೈರಕ್ಷನ್‌ ಕ್ಯಾಪ್‌ ತೊಟ್ಟ ನಟ ದಳಪತಿ ವಿಜಯ್ ಪುತ್ರ ಜೇಸನ್

Jason Sanjay

Profile Pushpa Kumari Jul 24, 2025 5:03 PM

ಚೆನ್ನೈ: ತಮಿಳು ಸೂಪರ್ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಸಾಕಷ್ಟು ಹಿಟ್ ಸಿನಿಮಾ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಅವರು ರಾಜಕೀಯಕ್ಕೆ ಧುಮುಕಿದ್ದು, ತಮ್ಮ ಕೊನೆಯ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ ಅವರ ಪುತ್ರ ಜೇಸನ್ ಸಂಜಯ್ (Jason Sanjay) ಕೂಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಮಕ್ಕಳು ನಾಯಕನಾಗಿ ಎಂಟ್ರಿ ನೀಡಿದರೆ ವಿಜಯ್ ಪುತ್ರ ಜೇಸನ್ ಮಾತ್ರ ನಟನೆಯ ಬದಲು ನಿರ್ದೇಶನ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಆ್ಯಕ್ಷನ್ ಸಿನಿಮಾವನ್ನು ಜೇಸನ್ ನಿರ್ದೇಶಿಸುತ್ತಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಚಿತ್ರೀಕರಣದ ಕೆಲಸ ಕಾರ್ಯದಲ್ಲಿ ವಿಜಯ್ ಪುತ್ರ ಜೇಸನ್ ಬ್ಯುಸಿಯಾಗಿದ್ದಾರೆ. ಅವರು ಶೂಟಿಂಗ್‌ನಲ್ಲಿ ಪಾಲ್ಗೊಂಡ ವಿಡಿಯೊ ವೈರಲ್ ಆಗುತ್ತಿದೆ.

ಈ ಸಿನಿಮಾಕ್ಕೆ ಸದ್ಯಕ್ಕೆ ʼಜೆಎಸ್ 01ʼ ಎಂದು ಹೆಸರಿಡಲಾಗಿದೆ. ಇದೊಂದು ಮಾಸ್ ಆ್ಯಕ್ಷನ್ ಸಿನಿಮಾವಾಗಿದ್ದು, ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.‌ ಜತೆಗೆ ಈ ವರ್ಷವೇ ರಿಲೀಸ್‌ ಆಗುವ ಸಾಧ್ಯತೆ ಇದೆ.

ವೈರಲ್ ಆದ ವಿಡಿಯೊದಲ್ಲಿ ಜೇಸನ್‌ ಚಿತ್ರೀಕರಣದ ತೊಡಗಿಕೊಂಡಿರುವುದು ಕಂಡು ಬಂದಿದೆ. ಬ್ಲ್ಯಾಕ್‌ ಟಿ-ಶರ್ಟ್ ಮತ್ತು ಕಂದು ಬಣ್ಣದ ಕಾರ್ಗೋ ಪ್ಯಾಂಟ್ ಧರಿಸಿದ್ದ ಜೇಸನ್ ಸಂಜಯ್ ಸ್ಟೂಲಿಶ್‌ ಆಗಿ ಕಂದು ಬಂದಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದರೂ ಚಿತ್ರದ ಸೆಟ್‌ನಲ್ಲಿ ಸಾಕಷ್ಟು ಅನುಭವ ಉಳ್ಳ ನಿರ್ದೇಶಕನಂತೆ ಕಂಡಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.



ಈ ಸಿನಿಮಾದ ಹೆಸರು ಇನ್ನು ಕೂಡ ಫೈನಲ್ ಆಗಿಲ್ಲ. ಲೈಕಾ ಪ್ರೊಡೆಕ್ಷನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮೇ 7ರಂದು ಸಂದೀಪ್ ಕಿಶನ್ ಅವರ ಹುಟ್ಟುಹಬ್ಬದಂದು ಲೈಕಾ ನಿರ್ಮಾಣ ಸಂಸ್ಥೆಯು ಚಿತ್ರದ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿರುವ ಒಂದು ವಿಡಿಯೊವನ್ನು ಹಂಚಿಕೊಂಡಿತ್ತು. ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ವಿಶೇಷ ಕ್ಯಾಪ್ಶನ್ ಜತೆಗೆ ಚಿತ್ರತಂಡ ವಿಡಿಯೊ ಹಂಚಿಕೊಂಡಿತ್ತು.

ಇದನ್ನು ಓದಿ:The Devil Movie: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ʼದಿ ಡೆವಿಲ್‌ʼ ಚಿತ್ರದ ಮೋಷನ್‌ ಪೋಸ್ಟರ್‌ ಔಟ್‌

ಇದೊಂದು ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾಗಲಿದ್ದು, ಈ ಚಿತ್ರಕ್ಕೆ ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು ನಿರೀಕ್ಷೆ ಹೆಚ್ಚಿಸುತ್ತಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ನಟ ವಿಜಯ್ ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇದೀಗ ಅವರ ಪುತ್ರ ನಟನೆಯ ಹೊರತಾಗಿ ನಿರ್ದೇಶನಕ್ಕೆ ಮುಂದಾಗಿದ್ದಾರೆ.