ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಅಡುಗೆ ಮನೆಯಲ್ಲಿರುವ ಉಪ್ಪು ಜೀವನದಲ್ಲಿ ಯಶಸ್ಸು ತರುವುದು..

ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಮ್ಮದಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಪ್ರತಿ ಬಾರಿಯೂ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೆಲವೊಂದು ಬಾರಿ ಯಶಸ್ಸಿನ ಸಮೀಪಕ್ಕೆ ಬಂದು ಸೋಲುತ್ತೇವೆ. ಇದು ತುಂಬಾ ಬೇಸರವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಜೀವನದಲ್ಲೂ ಸಾಲು ಸಾಲು ಸೋಲುಗಳು ಎದುರಾಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ಮನೆಯ ಅಡುಗೆ ಕೋಣೆಯಲ್ಲಿ ಹುಡುಕಿ.

ಜೀವನದಲ್ಲಿ ನಿರಂತರ ಯಶಸ್ಸು ಸಿಗಬೇಕೇ ?

ಅಡುಗೆಯಲ್ಲಿ ಉಪ್ಪಿನ (vastu about salt) ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಉಪ್ಪು ಇಲ್ಲದಿದ್ದರೆ ಯಾವ ಅಡುಗೆಗೂ ರುಚಿಯೂ ಇರುವುದಿಲ್ಲ. ಅದನ್ನು ಅಡುಗೆಯಲ್ಲಿ ಹಿತಮಿತವಾಗಿ ಬಳಸಬೇಕು. ಉಪ್ಪು ಕೇವಲ ಅಡುಗೆಗೆ ಮಾತ್ರವಲ್ಲ ನಮ್ಮ ಮನೆ ಮತ್ತು ಜೀವನಕ್ಕೂ ತುಂಬಾ ಉಪಯುಕ್ತವೆಂದು ಪರಿಗಣಿಸಿದೆ ವಾಸ್ತು ಶಾಸ್ತ್ರ (vastu tips for money). ಇದನ್ನು ಮನೆಯ ನೆಲವನ್ನು ಸ್ವಚ್ಛಗೊಳಿಸಲು ಬಳಸುವುದರಿಂದ ನಕಾರಾತ್ಮಕ ಶಕ್ತಿಯು ಮನೆಯಿಂದ (vastu for home) ದೂರವಾಗುತ್ತದೆ. ಅದೇ ರೀತಿ ಅಡುಗೆ ಮನೆಯಲ್ಲಿ ನಾವು ಇರಿಸುವ ಉಪ್ಪಿನ ಸ್ಥಳದಿಂದ ನಮ್ಮ ಜೀವನದ ಯಶಸ್ಸು ನಿರ್ಧಾರವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ತುಂಬುವಲ್ಲಿ ಉಪ್ಪಿನ ಬಳಕೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಉಪ್ಪು ಮನೆಯ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಮನೆಯ ಅಡುಗೆ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಉಪ್ಪು ಇರಿಸುವುದರಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯಲ್ಲಿ ಎಂದಿಗೂ ಆಹಾರ ಮತ್ತು ಹಣದ ಕೊರತೆಯಾಗಬಾರದು ಎಂದಾದರೆ ಅಡುಗೆ ಮನೆಯಲ್ಲಿ ಉಪ್ಪು ವಾಸ್ತು ಶಾಸ್ತ್ರ ಹೇಳುವ ನಿಯಮಾನುಸಾರ ಇರಿಸಿ ಎನ್ನುತ್ತಾರೆ ವಾಸ್ತು ತಜ್ಞರಾದ ಡಾ. ಆರತಿ ದಹಿಯಾ.

sal

ಲೋಹದ ಪಾತ್ರೆಗಳಲ್ಲಿ ಇಡಬೇಡಿ

ಉಪ್ಪನ್ನು ಎಂದಿಗೂ ಲೋಹದ ಪಾತ್ರೆಯಲ್ಲಿ ಇರಿಸಬಾರದು. ಅದನ್ನು ಉಕ್ಕಿನ ಅಥವಾ ಕಬ್ಬಿಣದ ಪಾತ್ರೆಯಲ್ಲಿ ಇಟ್ಟರೆ ದೋಷವುಂಟಾಗುವುದು. ಪ್ಲಾಸ್ಟಿಕ್ ಡಬ್ಬಿಗಳು ಆರೋಗ್ಯಕ್ಕೆ ಸುರಕ್ಷಿತವಲ್ಲದ ಕಾರಣ ಉಪ್ಪನ್ನು ಮರದ, ಗಾಜಿನ ಅಥವಾ ಸಿರಾಮಿಕ್ ಡಬ್ಬಿಗಳಲ್ಲಿ ಸಂಗ್ರಹಿಸಿ. ಇದು ಮನೆಗೆ ಸಮೃದ್ಧಿಯನ್ನು ಆಹ್ವಾನಿಸುತ್ತದೆ.

ಕೆಂಪು ಬಟ್ಟೆ ಬಳಸಿ

ಜೀವನದಲ್ಲಿ ಹಣಕಾಸಿನ ಲಾಭಕ್ಕಾಗಿ,1.25 ಕೆಜಿ ಕಲ್ಲು ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅಡುಗೆಮನೆಯಲ್ಲಿ ಹೊರಗಿನವರು ನೋಡದ ಸ್ಥಳದಲ್ಲಿ ಇರಿಸಿ. ಇದರಿಂದ ಜೀವನದಲ್ಲಿ ಸಮೃದ್ಧಿ ಉಂಟಾಗುವುದು ಮತ್ತು ಸಂಪತ್ತು ಹೆಚ್ಚುವುದು.

ಈ ದಿಕ್ಕಿನಲ್ಲಿ ಇಡಬೇಡಿ

ಮನೆಯಲ್ಲಿ ಉಪ್ಪಿನ ಡಬ್ಬಿಯನ್ನು ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಇರಿಸಬಾರದು. ಇದು ಸಾಲಕ್ಕೆ ಕಾರಣವಾಗಬಹುದು. ಈ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಲ್ಲಿ ಉಪ್ಪನ್ನು ಇಡುವುದನ್ನು ನಿಷೇಧಿಸಲಾಗಿದೆ.

ಮನೆ ಸ್ವಚ್ಛತೆ ಬಳಸಿ

ಪ್ರತಿದಿನ ಮನೆಯನ್ನು ಉಪ್ಪಿನ ನೀರಿನಿಂದ ಒರೆಸಿದರೆ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಉಪ್ಪು ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಗುಣವಿದೆ. ಇದು ಮನೆಯ ವಾಸ್ತು ದೋಷಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ದಾನ ಮಾಡಬೇಡಿ

ಸಂಜೆ ವೇಳೆ ಯಾರಿಗೂ ಉಪ್ಪನ್ನು ದಾನ ಮಾಡಬಾರದು. ಯಾಕೆಂದರೆ ಇದು ಮಾನೆಯಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ಕೆಟ್ಟ ದೃಷ್ಟಿ ನಿವಾರಿಸಿ

ಉಪ್ಪು ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ. ಮನೆಯಲ್ಲಿ ಯಾರಿಗಾದರೂ ಕೆಟ್ಟ ದೃಷ್ಟಿ ಬಿದ್ದಿದೆ ಎಂದೆನಿಸಿದರೆ ಒಂದು ಹಿಡಿ ಉಪ್ಪಿನೊಂದಿಗೆ ಸಾಸಿವೆ ಬೀಜಗಳನ್ನು ಸೇರಿಸಿ ಕೆಟ್ಟ ದೃಷ್ಟಿ ಬಿದ್ದವರ ತಲೆಯ ಮೇಲೆ ಏಳು ಬಾರಿ ತಿರುಗಿಸಿ ದುಷ್ಟ ಕಣ್ಣಿನಿಂದ ಮುಕ್ತಿ ಪಡೆಯಲು ಪ್ರಾರ್ಥಿಸಿ ಬೆಂಕಿಗೆ ಹಾಕಿ. ಇದು ಅವರ ಆರೋಗ್ಯ ತೊಂದರೆಗಳನ್ನು ದೂರ ಮಾಡುತ್ತದೆ.