ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bestie Movie: ‘ಬೆಸ್ಟಿ’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್

Bestie Movie: ಆರ್ಯ ಯೋಗೀಶ್ ನಿರ್ದೇಶನದ ʼಬೆಸ್ಟಿʼ ಚಿತ್ರದ ಶೀರ್ಷಿಕೆಯನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದ್ದಾರೆ. ಈ ಚಿತ್ರದ ನಾಯಕರಾಗಿ ಚೇತನ್ ಗೌಡ ನರೆಹಳ್ಳಿ ಹಾಗೂ ಸಾತ್ವಿಕ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಕರಿ ಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಈ ಕುರಿತ ವಿವರ ಇಲ್ಲಿದೆ.

‘ಬೆಸ್ಟಿ’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್

Profile Siddalinga Swamy Aug 22, 2025 9:20 PM

ಬೆಂಗಳೂರು: ಹೊಸತಂಡದ ಹೊಸಪ್ರಯತ್ನಕ್ಕೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಯಾವಾಗಲೂ ಮಾಡುತ್ತಾ ಬರುತ್ತಿದ್ದಾರೆ‌. ಇತ್ತೀಚೆಗೆ ಗಗನ್ ಸಾನಿಧ್ಯ ಲಾಂಛನದಲ್ಲಿ, ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರ ಅಶೀರ್ವಾದದೊಂದಿಗೆ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಸಹಕಾರದೊಂದಿಗೆ ಶ್ರೀನಿವಾಸ್, ಮಮತ ಶ್ರೀನಿವಾಸ್, ಸೋಮಶೇಖರ್ ಹಾಗೂ ಕೆ.ಎಂ.ನಟರಾಜ್ ಅವರು ನಿರ್ಮಿಸುತ್ತಿರುವ ನೂತನ‌ ಚಿತ್ರದ ಶೀರ್ಷಿಕೆಯನ್ನು ಶಿವರಾಜಕುಮಾರ್ ಅವರು ಸ್ವತಃ ತಾವೇ ಶೀರ್ಷಿಕೆ ಹೆಸರನ್ನು ಬರೆಯುವ ಮೂಲಕ ಅನಾವರಣ ಮಾಡಿದ್ದಾರೆ. ಈ ನೂತನ ಚಿತ್ರಕ್ಕೆ ʼಬೆಸ್ಟಿʼ (Bestie Movie) ಎಂದು ಹೆಸರಿಡಲಾಗಿದೆ‌. ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್ ಅವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ʼ45ʼ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಆರ್ಯ ಯೋಗೀಶ್ ʼಬೆಸ್ಟಿʼ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಶೋಯಬ್ (ಹೈದರಾಬಾದ್) ಛಾಯಾಗ್ರಹಣ, ಸನ್ನಿ ಅವರ ಸಂಗೀತ ನಿರ್ದೇಶನ, ಶಿವಕಾಂತ್ ಕಲಾ ನಿರ್ದೇಶನ ಹಾಗೂ ಸೂರಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ಚೇತನ್ ಗೌಡ ನರೆಹಳ್ಳಿ ಹಾಗೂ ಸಾತ್ವಿಕ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಕರಿ ಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ನಾಯಕಿಯ ಆಯ್ಕೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ | Festive Season Saree Shopping 2025: ಗೌರಿ ಹಬ್ಬಕ್ಕೆ ಹೆಚ್ಚಾಯ್ತು ಸೀರೆ ಖರೀದಿ

ನಾನು ಕಳೆದ ವರ್ಷ ತೆರೆಕಂಡ ʼಕೇದರನಾಥ ಕುರಿಫಾರಂʼ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಸ್ನೇಹಿತ ಆರ್ಯ ಯೋಗೇಶ್ ಹೇಳಿದ ʼಬೆಸ್ಟಿʼ ಚಿತ್ರದ ಕಥೆ ಬಹಳ ಇಷ್ಟವಾಯಿತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ʼಬೆಸ್ಟಿʼ ಒಂದು ಬೆಸ್ಟ್ ಪ್ರೇಮಕಥಾನಕವಾಗಿದೆ. ಜತೆಗೆ ಈಗಿನ ಯುವಜನತೆ ಅಧುನಿಕ ತಂತ್ರಜ್ಞಾನಗಳಿಂದ ಹೇಗೆಲ್ಲಾ ಮೋಸ ಹೋಗುತ್ತಾರೆ ಎಂಬ ವಿಷಯವನ್ನು ಈ ಚಿತ್ರದಲ್ಲಿ ನಿರ್ದೇಶಕರು ತೋರಿಸುತ್ತಿದ್ದಾರೆ. ಗಣೇಶನ ಹಬ್ಬದ ನಂತರ ಚಿತ್ರೀಕರಣ ಪ್ರಾರಂಭ ಮಾಡುತ್ತೇವೆ. ಶೀರ್ಷಿಕೆ ಅನಾವರಣ ಮಾಡಿಕೊಟ್ಟು ನಮಗೆ ಪ್ರೋತ್ಸಾಹ ನೀಡಿದ ಶಿವರಾಜಕುಮಾರ್ ಅವರಿಗೆ ಅನಂತ ಧನ್ಯವಾದಗಳು ಎನ್ನುತ್ತಾರೆ ನಿರ್ಮಾಪಕ ಶ್ರೀನಿವಾಸ್ (ಶೀನು ಸಾಗರ).‌