ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪದ್ಮಭೂಷಣ ಪುರಸ್ಕೃತ ನಟ ಅನಂತನಾಗ್‌ ಅವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ಪದ್ಮಭೂಷಣ ಪುರಸ್ಕೃತ ಡಾ. ಅನಂತನಾಗ್ ಅವರೊಂದಿಗೆ 'ಒಂದು ಕಲಾತ್ಮಕ ಸಂಜೆ' ಕಾರ್ಯಕ್ರಮದಲ್ಲಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಗೌರವಿಸಿ, ಸನ್ಮಾನಿಸಿದರು. ಈ ವೇಳೆ ಅನಂತನಾಗ್ ಅವರ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದೆ ಗಾಯತ್ರಿ ಅನಂತನಾಗ್ ಉಪಸ್ಥಿತರಿದ್ದರು.

ಪದ್ಮಭೂಷಣ ಪುರಸ್ಕೃತ ನಟ ಅನಂತನಾಗ್‌ರನ್ನು ಸನ್ಮಾನಿಸಿದ ಪ್ರಲ್ಹಾದ್‌ ಜೋಶಿ

Profile Siddalinga Swamy Aug 22, 2025 10:51 PM

ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ಪದ್ಮಭೂಷಣ ಪುರಸ್ಕೃತ ಡಾ. ಅನಂತನಾಗ್ (Dr Anantnag) ಅವರೊಂದಿಗೆ 'ಒಂದು ಕಲಾತ್ಮಕ ಸಂಜೆ' ಕಾರ್ಯಕ್ರಮದಲ್ಲಿ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಗೌರವಿಸಿ, ಸನ್ಮಾನಿಸಿದರು.

75ರ‌ ವಯಸ್ಸಿನಲ್ಲೂ ಅನಂತನಾಗ್ ಅವರು ಚಿತ್ರರಂಗದಲ್ಲಿ ಉತ್ಸಾಹಿಯಾಗಿ, ಕ್ರಿಯಾಶೀಲರಾಗಿದ್ದಾರೆ. ಅನಂತನಾಗ್ ಅತ್ಯುತ್ತಮ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದು, ಸಿನಿ ರಸಿಕರನ್ನು ರಂಜಿಸಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅನಂತನಾಗ್ ಅವರ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದೆ ಗಾಯತ್ರಿ ಅನಂತನಾಗ್ ಹಾಗೂ ಗಣಪತಿ ಭಟ್ ಸೇರಿದಂತೆ ಚಿತ್ರರಂಗದ ಕಲಾವಿದರು ಉಪಸ್ಥಿತರಿದ್ದರು.‌

ಈ ಸುದ್ದಿಯನ್ನೂ ಓದಿ | Pralhad Joshi: ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಿದೆ ಕಾಂಗ್ರೆಸ್ ಸರ್ಕಾರ: ಜೋಶಿ ಆರೋಪ