ತಿರುವನಂತಪುರಂ: ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಕೇರಳ ಕೊಟ್ಟಿಯೂರ್ ಕ್ಷೇತ್ರಕ್ಕೆ ನಟ ದರ್ಶನ್(Actor Darshan) ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಸಮೇತ ಕೇರಳದ ಕೊಟ್ಟಿಯೂರ್‌ನಲ್ಲಿರುವ ಶಿವನ ದೇವಸ್ಥಾನಕ್ಕೆ ದರ್ಶನ್ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಧನ್ವೀರ್ ಕೂಡ ಸಾಥ್ ಕೊಟ್ಟಿದ್ದಾರೆ. ನೀರಿನಲ್ಲಿ ಓಡಾಡಿ ದೇವರ ಮೊರೆ ಹೋಗಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಭಾಗವಾಗಿರುವ ಮತ್ತು ತಲಶ್ಶೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿರುವ ವಾವಲಿ ಅಥವಾ ಬಾವಲಿ ನದಿ ತಟದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯವು ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ವಿಶ್ವ ವಿಖ್ಯಾತವಾಗಿದ್ದು ದಕ್ಷಿಣ ಕಾಶಿ ಎಂದೂ ಸಹಾ ಪ್ರಸಿದ್ಧವಾಗಿದೆ. ಇದೇ ಸ್ಥಳದಲ್ಲೇ ಪರ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ತಂದೆ ದಕ್ಷನು ಯಾಗವನ್ನು ಮಾಡಿ ಆ ಯಾಗಕ್ಕೆ ಸ್ಮಶಾನವಾಸಿ ಭಸ್ಮಧಾರಿ ಶಿವವನ್ನು ಆಹ್ವಾನಿಸದೇ ಇದ್ದಾಗ ಬೇಸರಗೊಂಡ ದಾಕ್ಷಾಯಿಣಿ ಅದೇ ಯಜ್ಞ ಕುಂಡದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಸ್ಮರಣೆಗಾಗಿ ಪ್ರತೀ ವರ್ಷ ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ಇಲ್ಲಿರುವ ಒಂದು ದೇವಾಲಯವು ತೆರೆದಿದ್ದು ಅಲ್ಲಿ ನಡೆಯುವ ವೈಶಾಖ ಪೂಜೆಯ ಭಾಗವಾಗಲು ಪ್ರಪಂಚಾದ್ಯಂತ ಇರುವ ಲಕ್ಷಾಂತರ ಭಕ್ತಾದಿಗಳು ಇಲ್ಲಿ ಬರುತ್ತಾರೆ.
ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್ ವೈರ್! ವಿಡಿಯೊ ಫುಲ್ ವೈರಲ್
ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ಯುವಕರು
ಕೇರಳದ (Kerala) ಭಾರಿ ಪ್ರಸಿದ್ದಿ ಪಡೆದ ಕೊಟ್ಟಿಯೂರು ದೇವಾಲಯದ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಹೊಸದುರ್ಗ ಚಿತ್ತಾರಿ ನಿವಾಸಿ ಅಭಿಜಿತ್ (30) ಮತ್ತು ಕೋಯಿಕೋಡ್ ಅನ್ನೋಳಿ ನಿವಾಸಿ ನಿಶಾದ್ (40) ಅಲ್ಲಿನ ಹೊಳೆಯಲ್ಲಿ ಕೊಚ್ಚಿಹೋಗಿದ್ದಾರೆ.ಪೊಲೀಸರು ಹುಡುಕಾಟ ನಡೆಸಿದ್ದರೂ ಸುಳಿವು ಲಭಿಸಿಲ್ಲ. ನಿಶಾದ್ ಅವರು ಕುಟುಂಬ ಸಮೇತ ಭಾನುವಾರ ಕೊಟ್ಟಿಯೂರಿಗೆ ತೆರಳಿದ್ದರು. ಹೊಳೆಗಿಳಿದು ಸ್ನಾನಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಇನ್ನೊಂದು ಘಟನೆಯಲ್ಲಿ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.