ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yash Mother v/s Deepika Das: ಪೋಸ್ಟ್ ಮೂಲಕ ಯಶ್ ತಾಯಿ ಪುಷ್ಪಾಗೆ ಟಾಂಗ್ ನೀಡಿದ ನಟಿ ದೀಪಿಕಾ ದಾಸ್!

Deepika Das: ಪುಷ್ಪಾ ಅರುಣ್ ಕುಮಾರ್ ಅವರು ದೀಪಿಕಾ ದಾಸ್ ನಟನೆ, ಇತರ ವಿಚಾರದ ಬಗ್ಗೆ ಮನಬಂದಂತೆ ಹೇಳಿಕೆ ನೀಡಿದ್ದ ವಿರುದ್ಧ ನಟಿ ದೀಪಿಕಾ ದಾಸ್ ಅವರು ಕೂಡ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಯಶ್ ತಾಯಿ ಪುಷ್ಪ ಅವರು ತಮ್ಮ ಸಹೋದ ರಿಯ ಪುತ್ರಿ ದೀಪಿಕಾ ದಾಸ್ ಬಗ್ಗೆ ಹೇಳಿದ್ದ ಮಾತು ಹೊಸ ವಿವಾಧ ಹುಟ್ಟುಹಾಕುವಂತೆ ಮಾಡಿದೆ. ಅಷ್ಟಕ್ಕೂ ನಿರ್ಮಾಪಕಿ ಪುಷ್ಪ ಅವರು ಹೇಳಿದ್ದೇನು? ಇದಕ್ಕೆ ದೀಪಿಕಾ ದಾಸ್ ಅವರ ಪ್ರತಿಕ್ರಿಯೆ ಏನು? ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.

ಯಶ್ ತಾಯಿ ಪುಷ್ಪ ಹೇಳಿಕೆಗೆ ನಟಿ ದೀಪಿಕಾ ದಾಸ್ ಹೇಳಿದ್ದೇನು?

Profile Pushpa Kumari Aug 24, 2025 3:58 PM

ನವದೆಹಲಿ: ಕೊತ್ತಲವಾಡಿ ಸಿನಿಮಾ ರಿಲೀಸ್ ಗೂ ಮೊದಲೇ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ, ನಿರ್ಮಾಪಕಿ ಪುಷ್ಪಾ (Yash Mother Pushpa) ಅವರು ಭರ್ಜರಿ ಪ್ರಚಾರವನ್ನು ನೀಡಿ ದ್ದರು. ಯೂಟ್ಯೂಬ್ ಹಾಗೂ ಇತರ ಖಾಸಗಿ ಚಾನೇಲ್ ಗಳಿಗೆ ಸಂದರ್ಶನ ನೀಡಿದ್ದ ಇವರು ಸಿನಿಮಾ ಬಗ್ಗೆ ಹಾಗೂ ಇತರ ವಿಚಾರಗಳ ಬಗ್ಗೆ ಮಾತನಾಡಿ ಸಾಕಷ್ಟು ಟ್ರೋಲ್ ಗೆ ಕೂಡ ಗುರಿಯಾಗಿದ್ದರು. ಇತ್ತೀಚೆಗಷ್ಟೆ ಯಶ್ ತಾಯಿ, ನಿರ್ಮಾಪಕಿ ಪುಷ್ಪ ಅವರು ಯೂಟ್ಯೂಬ್ ಚಾನಲ್ ಗೆ ಸಂದರ್ಶನ ನೀಡಿದ್ದು ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ. ಕುಟುಂಬದಲ್ಲಿ ಇವರು ಸಂಬಂಧಿಕರಾಗಿದ್ದರೂ ಪುಷ್ಪಾ ಅರುಣ್ ಕುಮಾರ್ ಅವರು ದೀಪಿಕಾ ದಾಸ್ ನಟನೆ, ಇತರ ವಿಚಾರದ ಬಗ್ಗೆ ಮನಬಂದಂತೆ ಹೇಳಿಕೆ ನೀಡಿದ್ದ ವಿರುದ್ಧ ನಟಿ ದೀಪಿಕಾ ದಾಸ್ ಅವರು ಕೂಡ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಯಶ್ ತಾಯಿ ಪುಷ್ಪ ಅವರು ತಮ್ಮ ಸಹೋದರಿಯ ಪುತ್ರಿ ದೀಪಿಕಾ ದಾಸ್ ಬಗ್ಗೆ ಹೇಳಿದ್ದ ಮಾತು ಹೊಸ ವಿವಾಧ ಹುಟ್ಟುಹಾಕುವಂತೆ ಮಾಡಿದೆ. ಅಷ್ಟಕ್ಕೂ ನಿರ್ಮಾಪಕಿ ಪುಷ್ಪ ಅವರು ಹೇಳಿದ್ದೇನು? ಇದಕ್ಕೆ ದೀಪಿಕಾ ದಾಸ್ ಅವರ ಪ್ರತಿಕ್ರಿಯೆ ಏನು? ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.



ಇತ್ತೀಚಿನ ಯೂಟ್ಯೂಬ್ ಸಂದರ್ಶನದ ವೇಳೆಯಲ್ಲಿ ಯಶ್ ತಾಯಿ ಪುಷ್ಪ ಅವರಿಗೆ ಸಂದರ್ಶಕಿ ನಿಮ್ಮ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ದಾಸ್ ಅವರನ್ನು ಆಯ್ಕೆ ‌ಮಾಡುತ್ತೀರಾ?ನಿಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಅವಕಾಶ ಕೊಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ್ದ ಪುಷ್ಪ ಅವರು, ಯಾರಮ್ಮ ಅವಳು? ನಮಗೂ ಅವರಿಗೂ ಆಗಿ ಬರಲ್ಲ. ಅವಳು ಯಾವ ಹೀರೋ ಯಿನ್ ಅಂತ ಆಯ್ಕೆ ಮಾಡಬೇಕು? ಅವಳು ಸಿನಿಮಾದಲ್ಲಿ ಏನು ಸಾಧನೆ ಮಾಡಿದ್ದಾಳೆ? ಎಂದು ಹೇಳಿದ್ದಾರೆ.

ಅದಕ್ಕೆ ಸಂದರ್ಶಕಿ ಖಾಸಗಿ ವಾಹಿನಿಯ ಧಾರವಾಹಿ ಹಾಗೂ ಬಿಗ್ ಬಾಸ್ ಮೂಲಕ ಅವರು ಖ್ಯಾತರಾಗಿದ್ದಾರಲ್ಲ ಎಂದಿದ್ದಾರೆ. ಇರಬಹುದು ಆದರೆ ರಿಯಾಲಿಟಿ ಶೋ ನಲ್ಲಿ ಬಂದವರೆಲ್ಲ ಹೀರೋಯಿನ್ ಆಗುತ್ತಾರಾ? ಗುರುತಿಸಿಕೊಳ್ಳುವ ಸಿನಿಮಾ ಅವಳು ಮಾಡಿದ್ದಾಳಾ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ, ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಇದನ್ನು ನೋಡಿದರೆ ಬೈಯಲ್ವಾ? ಬೇರೆ ಹೀರೋಯಿನ್ಸ್‌ ಇಲ್ವಾ? ಅವರ ಬಗ್ಗೆ ಕೇಳಿ ಎಂದಿದ್ದಾರೆ.

ಈ ಸಂಬಂಧಿಸಿದಂತೆ ನಟಿ ದೀಪಿಕಾ ದಾಸ್ ಕೂಡ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಾನು ದೊಡ್ಡ ನಟಿ ಅಲ್ಲದಿದ್ದರೂ ಯಾವ ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಪೋಸ್ಟ್ ನಲ್ಲಿ ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿ ವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲಾರೆನು. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ಗೌರವ ಕೊಟ್ಟು ಗೌರವ ಪಡೆದು ಕೊಳ್ಳಿ ಎಂದು ದೀಪಿಕಾ ಖಡಕ್ ಆಗಿ ಟಾಂಗ್ ಕೂಡ ನೀಡಿದ್ದಾರೆ.

ಇದನ್ನು ಓದಿ:Devil Movie: ಡಿ ಬಾಸ್‌ ಫ್ಯಾನ್ಸ್‌ಗೆ ಡಬಲ್‌ ಧಮಾಕಾ! ಸಾಂಗ್‌ ಬಿಡುಗಡೆ ಬೆನ್ನಲ್ಲೇ ಡೆವಿಲ್‌ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ಬಳಿಕ ಈ ಬಗ್ಗೆ ಪುಷ್ಪ ಅವರಲ್ಲಿ ಮಾಧ್ಯಮದವರೆಲ್ಲ ಒಟ್ಟಾಗಿ ಸೇರಿ ಕೇಳಿದ್ದಾಗ ಅವರ ಪೋಸ್ಟ್ ಬಗ್ಗೆ ನಿರ್ಮಾಪಕಿ ಪುಷ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅವಳು ಇನ್ನು ಚಿಕ್ಕವಳು, ಆ ವಿಚಾರವನ್ನು ಯಾಕೆ ದೊಡ್ಡದು ಮಾಡುತ್ತೀರಿ. ನಾನು ಆ ಪೋಸ್ಟ್ ನೋಡಿದ್ದೇನೆ. ‌ಮನೆಗೆ ಹೋಗಿ ಈ ಬಗ್ಗೆ ಮಾತನಾಡುತ್ತೇನೆ. ಅವಳು ಈಗ ಮನೆಯಲ್ಲಿ ಇಲ್ಲ ಊರಿಗೆ ಹೋಗಿದ್ದಾಳೆ ಹೀಗಾಗಿ ಅವಳು ಬಂದ ಮೇಲೆ ಮಾತನಾಡುತ್ತೇನೆ. ಅವಳು ನಮ್ಮ ಮನೆ ಹುಡುಗಿ, ಸುಮ್ಮನೆಯಾಕೆ ಈ ವಿಚಾರ ದೊಡ್ಡದು ಮಾಡುತ್ತೀರಿ ಎಂದು ಮಾತನಾಡಿದ್ದಾರೆ. ಇದಕ್ಕೆ ದೀಪಿಕಾ ದಾಸ್ ಕೂಡ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ಸತ್ಯವನ್ನು ತಲೆ ಮೇಲೆ ಹೊಡೆದ ಹಾಗೆ ಹೇಳೊ ಬುದ್ಧಿ ಇದು. ಯಾರು ಎಲ್ಲೂ ಹೋಗಿಲ್ಲ, ಯಾರು ನಮ್ಮ ಹತ್ರ ಬರುವ ಅವಶ್ಯಕತೆ ಕೂಡ ಇಲ್ಲ. ಅನಾವಶ್ಯಕವಾಗಿ ನನ್ನ ಬಗ್ಗೆ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದು ಮಾತನಾಡಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ ಇನ್ನು ಈ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ.