Web Series: ಪುಷ್ಪಾ, ಬಾಹುಬಲಿ ಸಿನಿಮಾಗಿಂತಲೂ ಬಿಗ್ ಬಜೆಟ್ ವೆಬ್ ಸೀರಿಸ್ ಇದು! ಆದ್ರೂ ರಿಲೀಸ್ ಯಾಕೆ ಆಗಿಲ್ಲ?
ಕೆಲವು ವೆಬ್ ಸೀರೀಸ್‌ಗಳು ಸಿನಿಮಾವನ್ನು ಮೀರಿಸುವ ಕೌತುಕದ ಕಥಾಹಂದರ ಹೊಂದಿದ್ದು ಅನೇಕ ಜನರನ್ನು ಆಕರ್ಷಿಸಿ ಬಿಡುತ್ತದೆ. ಹೀಗಾಗಿ ಒಟಿಟಿ ಪ್ಲ್ಯಾಟ್ ಫಾರ್ಮ್ ಗಳು ಕೂಡ ವೆಬ್ ಸರಣಿ ಚೆನ್ನಾಗಿ ಮೂಡಿಬರಲು ಕೋಟಿ ಕೋಟಿ ವ್ಯಯಿಸಲು ಕೂಡ ಸಿದ್ದ ಇರುತ್ತವೆ. ಪ್ರಬಲ ಒಟಿಟಿ ಪ್ಲ್ಯಾಟ್ ಫಾರ್ಮ್ ಆದ ನೆಟ್ ಫ್ಲಿಕ್ಸ್ ವೆಬ್ ಸೀರಿಸ್‌ವೊಂದನ್ನು 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿದ್ದ ಮಾಡಿತ್ತು.


ನವದೆಹಲಿ: ಇತ್ತೀಚೆಗೆ ಸಿನಿಮಾ ಮಂದಿರದಲ್ಲಿ ತೆರೆ ಕಾಣುವ ಚಿತ್ರಗಳಿಗಿಂತ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ತೆರೆ ಕಾಣುವ ಸಿನಿಮಾಗಳಿಗೆ ಬಹುಬೇಡಿಕೆ ಇದೆ.ಮನೆಯಲ್ಲಿಯೇ ಫ್ಯಾಮಿಲಿ ಸಮೇತ ಒಟಿಟಿ ಮೂಲಕ ವೆಬ್ ಸೀರಿಸ್ (web series) ನೋಡುವುದನ್ನು ಇತ್ತೀಚಿನ ಜನಸಮೂಹ ಬಹಳ ಇಷ್ಟ ಪಡುತ್ತದೆ. ಅದರಲ್ಲೂ ಕೆಲವು ವೆಬ್ ಸೀರೀಸ್‌ಗಳು ಸಿನಿಮಾವನ್ನು ಮೀರಿಸುವ ಕೌತುಕದ ಕಥಾಹಂದರ ಹೊಂದಿದ್ದು ಅನೇಕ ಜನರನ್ನು ಆಕರ್ಷಿಸಿಬಿಡುತ್ತದೆ. ಹೀಗಾಗಿ ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳು ಕೂಡ ವೆಬ್ ಸೀರಿಸ್ ಚೆನ್ನಾಗಿ ಮೂಡಿಬರಲು ಕೋಟಿ ಕೋಟಿ ವ್ಯಯಿಸಲು ಕೂಡ ಸಿದ್ದ ಇರುತ್ತವೆ. ಪ್ರಬಲ ಒಟಿಟಿ ಪ್ಲ್ಯಾಟ್ ಫಾರ್ಮ್ ಆದ ನೆಟ್ ಫ್ಲಿಕ್ಸ್ ವೆಬ್ ಸೀರಿಸ್ ವೊಂದನ್ನು 300 ಕೋಟಿ ರೂಪಾಯಿ ಬಜೆಟ್ ಹಾಕಿ ಸಿದ್ದ ಮಾಡಿತ್ತು. ಇಷ್ಟೆಲ್ಲ ಖರ್ಚು ಮಾಡಿಯೂ ಬಳಿಕ ಒಂದೇ ಒಂದು ಸಂಚಿಕೆಯನ್ನು ಕೂಡ ಸ್ಟ್ರಿಮಿಂಗ್ ಮಾಡದೆ ವೆಬ್ ಸೀರಿಸ್ ಅನ್ನೇ ರದ್ದುಗೊಳಿಸಿದೆ ಎಂದರೆ ನಿಜಕ್ಕೂ ಆಶ್ಚರ್ಯವಾಗಬಹುದು.
ಭಾರತದಲ್ಲಿ ಒಟಿಟಿ ಆರಂಭಿಕ ಹಂತದಲ್ಲಿ ಅಷ್ಟು ಪ್ರಬಲವಾಗಿ ಇರಲಿಲ್ಲ. ಹೀಗಾಗಿ ಲೋ ಬಜೆಟ್ ನಲ್ಲಿಯೇ ಸಣ್ಣ ಪುಟ್ಟ ಸ್ಟ್ರೀಮಿಂಗ್ ಬಂದಿತ್ತು. ಆದರೆ ಬರು ಬರುತ್ತಾ ಸಿನಿಮಾ ರೇಂಜ್ ನಲ್ಲಿ ಒಟಿಟಿ ವೆಬ್ ಸೀರಿಸ್ ಭರ್ಜರಿಯಾಗಿ ತಯಾರಿಯಾಗಿತ್ತು. ಹೀಗಾಗಿ ವೆಬ್ ಸೀರಿಸ್ ಕೂಡ ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಅನ್ನೊ ಮಟ್ಟಕ್ಕೆ ಬೆಳೆದುಬಂದವು. 2018ರಲ್ಲಿ ನೆಟ್ ಫ್ಲಿಕ್ಸ್ ಹೊಸ ವೆಬ್ ಸೀರಿಸ್‌ವೊಂದನ್ನು ಆರಂಭಿಸುದಾಗಿ ಘೋಷಿಸಿತ್ತು. ಆನಂದ್ ನೀಲಕಂಠನ್ ಅವರ ಕಾದಂಬರಿಗಳಾದ ದಿ ರೈಸ್ ಆಫ್ ಶಿವಗಾಮಿ, ಚತುರಂಗ ಮತ್ತು ಕ್ವೀನ್ ಆಫ್ ಮಹಿಷ್ಮತಿಯನ್ನೇ ಆಧರಿಸಿಕೊಂಡು ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್ ಎಂಬ ಹೆಸರಿನೊಂದಿಗೆ ವೆಬ್ ಸೀರಿಸ್ ಆರಂಭಿಸಲಾಯಿತು
ಬಾಹುಬಲಿ ಸಿನಿಮಾ ಖ್ಯಾತ ನಿರ್ದೇಶಕ ಎಸ್. ರಾಜಮೌಳಿ ಅವರೇ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳ್ತಾರೆ ಎಂಬ ಮಾತು ಸಹ ಕೇಳಿ ಬಂದಿತ್ತು. ಆದರೆ ಅವರು ನಿರ್ದೇಶನದ ಬದಲು ನೆಟ್‌ಫ್ಲಿಕ್ಸ್ ಜೊತೆಗೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದರು. ಆರಂಭಿಕ ಹಂತದಲ್ಲಿ ಸುಮಾರು 100 ಕೋಟಿ ಬಜೆಟ್ ನಲ್ಲಿ ಈ ವೆಬ್ ಸೀರಿಸ್ ಬಾಹುಬಲಿಗಿಂತ ಪೂರ್ವ ಭಾಗದ ಕಥೆಯನ್ನಾಧರಿಸಿದ್ದು ಯುವ ಶಿವಗಾಮಿಯ ಸಾಹಸ ಗಾಥೆ, ಕಟಪ್ಪನ ಆಳ್ವಿಕೆ, ಬಿಜ್ಜಳದೇವನನ್ನು ಹೇಗೆ ಮದುವೆಯಾದಳು ಎಂಬಿತ್ಯಾದಿ ಸಂಗತಿಯನ್ನು ತಿಳಿಸಲು ಯೋಜನೆ ರೂಪಿಸಲಾಗಿತ್ತು. 2018 ರ ಸೆಪ್ಟೆಂಬರ್ ನಲ್ಲಿ ಮೃಣಾಲ್ ಠಾಕೋರ್ ಅವರನ್ನು ಶಿವಗಾಮಿಯಾಗಿ ಆಯ್ಕೆ ಮಾಡಲಾಯ್ತು. ದೇವ ಕಟ್ಟಾ ಮತ್ತು ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ ಶೂಟಿಂಗ್ ಕೂಡ ಅದ್ಧೂರಿ ಸೆಟ್‌ನಲ್ಲಿಯೇ ನಡೆಯಿತು.
ಸ್ಕ್ರಿಪ್ಟ್, ತಾರಾಗಣ ಮತ್ತು ತಾಂತ್ರಿಕ ತಂಡ ಎಲ್ಲ ಸಿದ್ಧತೆಯೂ ನಡೆದು ಬಳಿಕ 9 ಕಂತುಗಳಂತೆ ಎರಡು ಸೀಸನ್ ಗಳಲ್ಲಿ ಈ ವೆಬ್ ಸೀರಿಸ್ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ 2019ರ ಅಂತ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹರಡಿದ್ದ ಕಾರಣ ಶೂಟಿಂಗ್ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿತು. ಬಳಿಕ 2021ರಲ್ಲಿ ಮತ್ತೆ 200 ಕೋಟಿ ಬಜೆಟ್ ನಲ್ಲಿ ಈ ವೆಬ್ ಸೀರಿಸ್ ಚಿತ್ರೀಕರಣ ಆಗ್ತಿದೆ ಎಂಬ ಅನೇಕ ಸುದ್ದಿ ವೈರಲ್ ಆಗಿತ್ತು. ಕೆಲವೊಂದು ಕಾಸ್ಟಿಂಗ್ ಬದಲಾವಣೆಯ ಜೊತೆಗೆ ನಿರ್ದೇಶಕರನ್ನು ಸಹ ಬದಲಾಯಿಸಲಾಯ್ತು. ಈ ಮೂಲಕ ಹೊಸ ನಿರ್ದೇಶಕರಾಗಿ ಕುನಾಲ್ ದೇಶಮುಖ್ ಅವರನ್ನು ನೇಮಿಸಲಾಯಿತು.
ಇದನ್ನು ಓದಿ: Kannada New Movie: ಹೊಸಕಥೆ ಆಧಾರಿತ ʼದಿʼ ಚಿತ್ರ ಮೇ 16ರಂದು ತೆರೆಗೆ
2022ರಲ್ಲಿ ಈ ವೆಬ್ ಸೀರಿಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರಿಮಿಂಗ್ ಮಾಡುವ ಭರವಸೆ ಇತ್ತು ಆದರೆ ಕಾರಣಾಂತರಗಳಿಂದ ನಿರ್ದೇಶಕ ಕುನಾಲ್ ದೇಶಮುಖ್ ಯೋಜನೆಯಿಂದ ಹೊರಗುಳಿದರು. 2024 ರ ಹೊತ್ತಿಗೆ ಮೊದಲ ಸೀಸನ್ ಚಿತ್ರೀಕರಣವನ್ನು ಪೂರ್ಣ ಗೊಳಿಸಲು ಸಹ ಸಾಧ್ಯವಾಗದೆ ಈ ವೆಬ್ ಸರಣಿಯನ್ನು ಸ್ಥಗಿತಗೊಳಿಸಲಾಯಿತು. ಈ ಮೂಲಕ ಬಾಹುಬಲಿ ಸಿನಿಮಾಕ್ಕೆ 250 ಕೋಟಿ ರೂಪಾಯಿ , ಪಠಾಣ್ ಸಿನಿಮಾಕ್ಕೆ 220 ಕೋಟಿ ಹಾಗೂ ಪುಷ್ಪ ದಿ ರೈಸ್ ಸಿನಿಮಾಕ್ಕೆ 250 ಕೋಟಿ ವ್ಯಯಿಸಿ ಬಿಗ್ ಬಜೆಟ್ ನಲ್ಲಿ ಈ ಸಿನಿಮಾಗಳು ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಬರೋಬ್ಬರಿ ಈ ವೆಬ್ ಸೀರಿಸ್ ಇದುವರೆಗೆ 300 ಕೋಟಿ ವ್ಯಯಿಸಿದ್ದರು ಸ್ಟ್ರಿಮಿಂಗ್ ಮೂಲಕ ಒಂದು ಸಂಚಿಕೆ ಸಹ ಪ್ರಸಾರವಾಗದೆ ಉಳಿದುಬಿಟ್ಟಿದೆ ಎಂಬುದೆ ದೊಡ್ಡ ವಿಪರ್ಯಾಸ ಎನ್ನಬಹುದು.