ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kajal Aggarwal: ರಸ್ತೆ ಅಪಘಾತದಿಂದ ಕಾಜಲ್ ಅಗರ್ವಾಲ್ ಸ್ಥಿತಿ ಗಂಭೀರ? ನಟಿ ಹೇಳಿದ್ದೇನು ಗೊತ್ತಾ?

Kajal Aggarwal: ಇತ್ತೀಚೆಗಷ್ಟೇ ನಟಿ ಕಾಜಲ್‌ ಅಗರವಾಲ್‌ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಅವರು ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.. ಈ ಸುದ್ದಿ ಬಗ್ಗೆ ಸ್ವತಃ ಕಾಜಲ್ ಅಗರ್ವಾಲ್ ಅವರೆ ಹೇಳಿಕೆ ನೀಡಿದ್ದಾರೆ.

Kajal Aggarwal

ನವದೆಹಲಿ: ತಮಿಳು, ತೆಲುಗು, ಹಿಂದಿ ಚಲನಚಿತ್ರಗಳ ಮೂಲಕ ಖ್ಯಾತಿ ಪಡೆದ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಭಾರತೀಯ ಸಿನಿಮಾರಂಗದಲ್ಲಿ ಬಹುತೇಕ ಹಿಟ್ ಸಿನಿ ಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಕ್ಯೂಂ ಹೋಗಯಾ ನಾ ಸಿನಿಮಾ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ಲಕ್ಷ್ಮೀ ಕಲ್ಯಾಣಂ, ಮಗಧೀರ, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್ ಸೇರಿದಂತೆ ಅನೇಕ ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕೆಲವೇ ಸಿನಿಮಾದಲ್ಲಿ ಮಾತ್ರ ಇವರು ಕಾಣಿಸಿ ಕೊಂಡಿದ್ದರು ಇವರಿಗೆ ಇರುವ ಅಭಿಮಾನಿ ಬಳಗ ಈಗಲೂ ಹಾಗೇ ಇದೆ ಎಂದೇ ಹೇಳಬಹುದು. ಆದರೆ ಇತ್ತೀಚೆಗಷ್ಟೇ ನಟಿ ಕಾಜಲ್‌ ಅಗರವಾಲ್‌ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಅವರು ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿದೆ. ಈ ಸುದ್ದಿ ಬಗ್ಗೆ ಸ್ವತಃ ಕಾಜಲ್ ಅಗರ್ವಾಲ್ ಅವರೆ ಹೇಳಿಕೆ ನೀಡಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆನ್‌ ಲೈನ್‌ನಲ್ಲಿ ಅನೇಕ ಸುದ್ದಿಗಳು ಹರಡುತ್ತಿದ್ದು ಈ ಬಗ್ಗೆ ಅವರ ಅಭಿಮಾನಿಗಳು ಕೂಡ ಆತಂಕ ಗೊಂಡಿದ್ದಾರೆ. ಹೀಗಾಗಿ ಸ್ವತಃ ನಟಿ ಕಾಜಲ್ ಅಗರ್ವಾಲ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ನಟಿ ಕಾಜಲ್ ಅಗರ್ವಾಲ್ ಅವರು ಈ ಹೇಳಿಕೆಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ದೃಢಿಕರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ನಾನು ಅಪಘಾತ ಕ್ಕೀಡಾಗಿದ್ದೇನೆ ಎನ್ನುವ ಕೆಲವು ಆಧಾರರಹಿತ ಸುದ್ದಿಗಳು ಇತ್ತೀಚೆಗಷ್ಟೇ ವೈರಲ್ ಆಗಿದೆ. ಅದ ರಲ್ಲೂ ನಾನು ಮೃತಪಟ್ಟಿರುವುದಾಗಿ ಕೂಡ ಉಲ್ಲೇಖಿಸಿದ್ದಾರೆ. ಇದನ್ನು ಓದಿ ನನಗೆ ಆಶ್ಚರ್ಯ ವಾಯಿತು. ಇದು ತುಂಬಾ ತಮಾಷೆಯಾಗಿದೆ. ಬದುಕಿದ್ದ ನನನ್ನೇ ಅಪಘಾತದಲ್ಲಿ ಸಾಯಿಸಿ ಬಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ನಿಜವಾಗಿ ಹೇಳಬೇಕೆಂದರೆ ಅದು ಸುಳ್ಳು ಸುದ್ದಿ... ದೇವರ ದಯೆಯಿಂದ, ನಾನು ಕ್ಷೇಮವಾಗಿದ್ದೇನೆ. ಅಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ....ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ಜನರು ಇಂತಹ ಆಧಾರರಹಿತ ಊಹಾಪೋಹಗಳಿಗೆ ಮಣಿಯಬಾರದು. ದಯವಿಟ್ಟು ಈ ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ಕೇಳಿ ಕೊಳ್ಳು ವುದಾಗಿ ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನಟಿ ಕಾಜಲ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಹಾಗೂ ಹಿಂದೆ ಟ್ವಿಟರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ 8ರಂದು ನಟಿ ಕಾಜಲ್‌ ಅಗರ್ವಾಲ್ ಅವರಿಗೆ ಭೀಕರ ಅಪಘಾತವಾಗಿದೆ. ಗಂಭೀರ ಗಾಯ ಗಳಾಗಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿತ್ತು. ಅವರ ಅಭಿಮಾನಿಗಳು ಆತಂಕವಾಗಿ ಸಂತಾಪವನ್ನೂ ಕೂಡ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದ ನಟಿ ಸ್ಪಷ್ಟನೆ ನೀಡಿ ತನಗೆ ಯಾವ ಸಮಸ್ಯೆಯಾಗಿಲ್ಲ ನಾನು ಆರೋಗ್ಯವಾಗಿದ್ದೇನೆ ಎಂದು ಕೂಡ ಸ್ಪಷ್ಟೀಕರಿಸಿದ್ದಾರೆ.