ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

Life Today Film Pressmeet: ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರ ಲೈಫ್ ಟುಡೇ (Life Today) ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ. ಇದೀಗ ಅದೇ ಹಾಡಿನ ಕನ್ನಡ ವರ್ಶನ್‌ "ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..." ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಯಾಗಿದ್ದಾರೆ.

ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌

-

Rakshita Karkera Rakshita Karkera Sep 4, 2025 5:41 PM

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡಿ ಸಬ್ಜೆಕ್ಟ್‌ನೊಂದಿಗೆ ಸದ್ದು ಮಾಡೋಕೆ ಮತ್ತೊಂದು ಸಿನಿಮಾವೊಂದು ರೆಡಿಯಾಗಿದೆ. ಜಲ್ಸಾ ಮತ್ತು ʼಇರುವುದೆಲ್ಲವ ಬಿಟ್ಟುʼ ಸಿನಿಮಾಗಳ ನಿರ್ದೇಶಕ ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರ ಲೈಫ್ ಟುಡೇ (Life Today) ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ. ಇದೀಗ ಅದೇ ಹಾಡಿನ ಕನ್ನಡ ವರ್ಶನ್‌ "ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..." ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಯಾಗಿದ್ದಾರೆ. ಇನ್ನು ಈ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ಪ್ರೇಮ್‌ ಮಾತನಾಡಿದರು.



ಹಾಡಿನ ಬಗ್ಗೆ ಮಾತನಾಡಿದ ಪ್ರೇಮ್‌, ಸಿಕ್ಕರೆ ಸಿಕ್ಕರೆ ಒಳ್ಳೆ ಹುಡುಗ್ರು ಸಿಕ್ಕರೇ ಎಂಬ ಹಾಡು ತುಂಬಾ ಇಷ್ಟ ಆಗಿತ್ತು. ಸಾಹಿತ್ಯ ತುಂಬಾ ಚೆನ್ನಾಗಿದೆ. ಹಾಗಾಗಿ ದೊಡ್ಡ ದೊಡ್ಡ ಸಿಂಗರ್‌ಗಳಿದ್ದಾರೆ, ಶಂಕರ್‌ ಮಹಾದೇವ್‌ ಅವರಂಥ ದೊಡ್ಡ ಗಾಯಕರಿದ್ದಾರೆ, ಅವರಲ್ಲಿ ಹಾಡಿಸಿ ಎಂದಿದ್ದೆ. ಆದರೆ ನಾನೇ ಹಾಡಬೇಕು ಎಂದು ಚಿತ್ರತಂಡದ ಬೇಡಿಕೆ ಆಗಿತ್ತು. ಸಂಗೀತ ಗೊತ್ತಿಲ್ಲ. ಆದರೆ ಸಂಗೀತ ಜ್ಞಾನ ಇದೆ ಎಂದರು.

ಇನ್ನು ಇದೇ ವೇಳೆ ಟ್ರೋಲ್‌ ಪೇಜ್‌ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿ ಒಬ್ಬರನ್ನು ಟ್ರೋಲ್‌ ಮಾಡೋದು ಸರಿಯಲ್ಲ. ಹಾಗಂತ ಟ್ರೋಲ್‌ ಮಾಡೋದೇ ತಪ್ಪು ಎಂದು ಹೇಳುತ್ತಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ಟ್ರೋಲ್‌ ಮಾಡೋವಾಗ ಎಚ್ಚರ ಇರಬೇಕು ಎಂದು ಅಭಿಪ್ರಾಯಪಟ್ಟರು.



ಅಮ್ಮನ ತೋಟದ ಬಗ್ಗೆ ಪ್ರೇಮ್‌ ಮನದಾಳದ ಮಾತು

ನಮ್ಮ ಬಳಿ 150ದೇಶೀಯ ತಳಿಗಳ ಜಾನುವಾರುಗಳಿವೆ. ನಾನೇ ಬೇರೆ ಬೇರೆ ಕಡೆಗಳಿಗೆ ಹೋಗಿ ಹಸುಗಳನ್ನು ಖರೀದಿ ಮಾಡುತ್ತೇನೆ. ಯಾವುದೇ ಕಲಬೆರಕೆ ಇಲ್ಲದೇ ಹಾಲು ತುಪ್ಪ ಎಲ್ಲರಿಗೂ ಸಲಭವಾಗಿ ಸಿಗಬೇಕೆಂಬುದೇ ನನ್ನ ಉದ್ದೇಶ. ನನ್ನದೊಂದು ಟ್ರಸ್ಟ್‌ ಇದೆ. ಹಾಗಾಗಿ ಅದರಿಂದ ಬರುವ ಸಂಪಾದನೆ ಆ ಟ್ರಸ್ಟ್‌ಗೆ ಹೋಗುತ್ತದೆ. ಅದರಿಂದ ಸಮಾಜಮುಖಿ ಕಾರ್ಯಗಳು ನಡೆಯುತ್ತವೆ ಎಂದರು.



ದರ್ಶನ್‌ ಬಗ್ಗೆ ಪ್ರೇಮ್‌ ಹೇಳಿದ್ದೇನು?

ದರ್ಶನ್‌ ವಿಚಾರವಾಗಿ ಮೀಡಿಯಾಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಹಾಗಂತ ದರ್ಶನ್‌ ನೋವಿನ ಬಗ್ಗೆಯೂ ನಾವು ಅರ್ಥ ಮಾಡಿಕೊಳ್ಳಬೇಕು. ಅವರ ನೋವು ಅವರಿಗೆ ದೊಡ್ಡದು. ಅವರು ಜೈಲಿಗೆ ಹೋಗುವ ಎರಡು ದಿನ ಮುನ್ನ ಭೇಟಿಯಾಗಿದ್ದೆ ಎಂದರು.

ಇನ್ನು ಮೇಘನಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪ್ರದೀಪ್ ನಿರ್ಮಿಸಿರುವ ಲೈಫ್ ಟುಡೇ ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಕಿರಣ್ ಆನಂದ್ ನಾಯಕನಾಗಿ ಎಂಟ್ರಿ ನೀಡುತ್ತಿದ್ದಾರೆ. ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ರಥರ್ವ, ತಬಲಾ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ ಕೂಡ ನಟಿಸಿದ್ದಾರೆ. ಛಾಯಾಗ್ರಹಣ ಗುರುಪ್ರಸಾದ್ ಎಂಜಿ ಅವರದ್ದಾಗಿದೆ.

ಇನ್ನೂ ನಿರ್ದೇಶಕ ಕಾಂತ ಕನ್ನಲ್ಲಿ, ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಮಾತಾಡಿ, ಪ್ರೇಮ್ ರವರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ರು.. ಹಾಗೇ ಈ ಸಿನಿಮಾ ಈ ಜನರೇಷನ್ ಮೆಚ್ಚುವಂತಹ ಕಂಟೆಂಟ್ ಮತ್ತು ಎಂಟ್ರಟೈನ್ಮೆಂಟ್ ನ ಒಳಗೊಂಡಿದೆ ಎಂದರು. ಈ ಹಾಡನ್ನ ಪ್ರೇಮ್ಸ್ ಅನುಭವಿಸಿ ಹಾಡಿದ್ದಾರೆ. ಈ ಹಾಡು ಕೇಳಿದಾಗ್ಲೇ ಇದು ಸೂಪರ್ ಹಿಟ್ ಆಗುತ್ತೆ ಎಂದ ಪ್ರೇಮ್, ಪ್ರೀತಿಯಿಂದ ಬಂದು ಹೊಸಬರ ಈ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.