ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohanlal And Mammootty: ಸ್ಟಾರ್‌ ನಟರ ಬಾಂಧವ್ಯ ಹೇಗಿದೆ ಗೊತ್ತಾ? ಮಮ್ಮುಟಿ-ಮೋಹನ್ ಲಾಲ್ ಫೋಟೊ ಫುಲ್‌ ವೈರಲ್!

Mohanlal And Mammootty: ನಟ ಮಮ್ಮುಟ್ಟಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಅವರು ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅವರು ಜೊತೆಗೆ ಕಾಣಿಸಿಕೊಂಡ ಫೋಟೊ ಕೂಡ ವೈರಲ್ ಆಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಮಮ್ಮುಟ್ಟಿ ಅವರ ಕೆನ್ನೆಗೆ ಮುತ್ತಿಡುತ್ತಿ ರುವುದನ್ನು ಕಾಣಬಹುದು. ಪೇಟ್ರಿ ಯಾಟ್ ಮತ್ತು ಕಲಾಂಕಾ ವಲ್ ಸಿನಿಮಾ ಮೂಲಕ ನಟ ಮಮ್ಮುಟ್ಟಿ ಅವರು ಸಿನಿಮಾ ರಂಗಕ್ಕೆ ತೆರೆ ಮೇಲೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಮ್ಮುಟಿ-ಮೋಹನ್ ಲಾಲ್ ಫೋಟೊ ಫುಲ್‌ ವೈರಲ್!

Profile Pushpa Kumari Aug 20, 2025 1:27 PM

ನವದೆಹಲಿ: ಮಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಮಮ್ಮುಟ್ಟಿ (Mammootty) ಅವರಿಗೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಿನ ಅಭಿಮಾನಿ ಬಳಗವಿದೆ. 90ರ ದಶಕ ದಿಂದಲೂ ಮಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ 'ಒರು ಒಡಕ್ಕನ್ ವೀರಗಾಥಾ', 'ಅಮರನ್', ' ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್', 'ವಿಧೇಯನ್' ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದ ನಟ ಮಮ್ಮುಟ್ಟಿ ಅವರು ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ ಎನ್ನಬಹುದು. ಅವರ ವಯಸ್ಸು 72ಆಗಿದ್ದರೂ ಕೂಡ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಚಾಕಚಕ್ಯತೆ ಅವರಲ್ಲಿದೆ ಎನ್ನಬಹುದು. ಅಂತೆಯೇ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ಅದನ್ನು ಕೇಳಿ ಅಭಿಮಾನಿಗಳು, ಸಿನಿಮಾ ಸೆಲೆಬ್ರಿಟಿಗಳಿಗೆ ಈ ವಿಚಾರ ದೊಡ್ಡ ಆಘಾತವಾಗಿತ್ತು. ಹೀಗಾಗಿ ನಟ ಮಮ್ಮುಟ್ಟಿ ಅವರು ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರು ರಂಜಾನ್ ಉಪವಾಸದ ಕಾರಣಕ್ಕೆ ಚಿತ್ರೀಕರಣಕ್ಕೆ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಇದೀಗ ನಟ ಮೋಹನ್ ಲಾಲ್ ಅವರು ಆರೋಗ್ಯದ ಸ್ಥಿತಿಯಲ್ಲಿ ಚೇತರಿಕೆ ಕಂಡಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ.

ನಟ ಮಮ್ಮುಟ್ಟಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಅವರು ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅವರು ಜೊತೆಗೆ ಕಾಣಿಸಿಕೊಂಡ ಫೋಟೊ ಕೂಡ ವೈರಲ್ ಆಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಮಮ್ಮುಟ್ಟಿ ಅವರ ಕೆನ್ನೆಗೆ ಮುತ್ತಿಡುತ್ತಿರುವುದನ್ನು ಕಾಣಬಹುದು. ಪೇಟ್ರಿ ಯಾಟ್ ಮತ್ತು ಕಲಾಂಕಾವಲ್ ಸಿನಿಮಾ ಮೂಲಕ ನಟ ಮಮ್ಮುಟ್ಟಿ ಅವರು ಸಿನಿಮಾ ರಂಗಕ್ಕೆ ತೆರೆ ಮೇಲೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಮೋಹನ್ ಲಾಲ್ ಅವರು ಮಮ್ಮುಟ್ಟಿ ಜೊತೆಗೆ ಇರುವ ಪೋಸ್ಟ್ ಒಂದನ್ನು ಹಂಚಿ ಕೊಂಡಿದ್ದು, ಅದನ್ನು ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮಲಯಾಳಂ ಚಿತ್ರರಂಗದ ಇಬ್ಬರು ದೊಡ್ಡ ತಾರೆಯರ ನಡುವಿನ ಸಹೋದರತ್ವದ ಭಾವನೆ ಸಾರುವ ಈ ಫೋಟೊ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೊ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಈ ಸುದ್ದಿಯನ್ನೂ ಓದಿ:Sholay Movie: ʼಶೋಲೆʼ ಸಿನಿಮಾಕ್ಕೆ 50ರ ಸಂಭ್ರಮ: ಹಿರಿಯ ನಟ ಸಚಿನ್ ಪಿಲ್ಗಾಂವ್ಕರ್ ಹೇಳಿದ್ದೇನು?

ಆರೋಗ್ಯದ ಬಗ್ಗೆ ತಿಂಗಳುಗಟ್ಟಲೆ ಅನೇಕ ಊಹಾಪೋಹಗಳ ನಂತರ ಅವರ ಸಂಪೂರ್ಣ ಚೇತರಿಕೆಯನ್ನು ಹೊಂದಿದ್ದಾರೆ ಎಂದು ಅವರ ಆಪ್ತರೆ ದೃಢಿಕರಿಸಿದ್ದಾರೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸ್ನೇಹಿತರಾಗಿ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಹೀಗಾಗಿ ಇವರ ಫೋಟೊಗಳು ಕೂಡ ಅಭಿಮಾನಿಗಳಿಗೆ ನಟ ಮಮ್ಮುಟ್ಟಿ ಚೇತರಿಸಿಕೊಂಡಿದ್ದಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ.

ನಟ ಮಮ್ಮುಟ್ಟಿ ಅವರು ಸೆಪ್ಟೆಂಬರ್‌ನಲ್ಲಿ ಮಹೇಶ್ ನಾರಾಯಣನ್ ಅವರ ಪೇಟ್ರಿಯಾಟ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರಂತೆ. ಅದೇ ಚಿತ್ರದಲ್ಲಿ ಮೋಹನ್ ಲಾಲ್ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಇತ್ತೀಚಿನ ಕೆಲ ವರ್ಷಗಳಲ್ಲಿ ಮಲಯಾಳಂ ಚಿತ್ರ ರಂಗದ ಸ್ಟಾರ್ ನಟರ ಸಹಯೋಗದಿಂದ ಬಂದ ಚಿತ್ರ ಇದಾಗಲಿದೆ. ಇದರ ಜೊತೆಗೆ ಅವರು ವಿನಾಯಕನ್ ಜೊತೆ ಕಲಾಂಕಾವಲ್ ಚಿತ್ರದಲ್ಲಿಯೂ ನಟಿಸಲಿದ್ದು ಈಗಾ ಗಲೇ ಈ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಕೂಡ ಇದೆ.