ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monk The Young Movie: ವಿಭಿನ್ನ ಕಥಾಹಂದರವುಳ್ಳ ‘ಮಾಂಕ್ ದಿ ಯಂಗ್’ ಚಿತ್ರದ ‘ಮಾಯೆ’ ಹಾಡು ಕೇಳಿ!

Monk The Young Movie: ವಿಂಟೇಜ್ ಫ್ಯಾಂಟಸಿ ಜಾನರ್‌ನ ಕಥಾಹಂದರ ಹೊಂದಿರುವ ಸರೋವರ್ ಅಭಿನಯದ ‘ಮಾಂಕ್ ದಿ ಯಂಗ್’ ಚಿತ್ರದ ‘ಮಾಯೆ’ ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ.

‘ಮಾಂಕ್ ದಿ ಯಂಗ್’ ಚಿತ್ರದ ‘ಮಾಯೆ’ ಹಾಡು ಬಿಡುಗಡೆ

ಬೆಂಗಳೂರು: ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರದಿಂದ (Monk The Young Movie) ʼಮಾಯೆʼ ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. ʼಮಾಯೆʼ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಎನ್‌ಜಿಓ ಉಷಾ ಅವರು ಮುಖ್ಯ ಅತಿಥಿಯಾಗಿ ‌ಆಗಮಿಸಿದ್ದರು.



ಆರಂಭದಿಂದಲೂ ನಮ್ಮ ಚಿತ್ರಕ್ಕೆ ಮಾಧ್ಯಮದ ಮಿತ್ರರು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಋಣಿ. ಇಂದು ನಮ್ಮ ಚಿತ್ರದ ʼಮಾಯೆʼ ಹಾಡು‌ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಫೆಬ್ರವರಿ ಮಧ್ಯ ಅಥವಾ ಕೊನೆವಾರದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದಾರೆ‌. ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಪ್ಯಾನ್ ಇಂಡಿಯಾ ಮೂವೀ ಆಗಿದೆ. ಏಕೆಂದರೆ ಈ ಚಿತ್ರಕ್ಕೆ ನಾವು ಐದು ಜನ ನಿರ್ಮಾಪಕರು. ಐದು ಜನರು‌ ಬೇರೆಬೇರೆ ರಾಜ್ಯದವರು ಎಂದು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್, ಗೋಪಿಚಂದ್ ಹಾಗೂ ಲಾಲ್ ಚಂದ್ ಖತಾರ್ ತಿಳಿಸಿದರು. ಇವರೊಟ್ಟಿಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ ಹಾಗೂ ಸರೋವರ್ ಅವರು ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

ʼಮಾಂಕ್ ದಿ ಯಂಗ್ʼ ವಿಂಟೇಜ್ ಫ್ಯಾಂಟಸಿ ಜಾನರ್‌ನ ಕಥಾಹಂದರ ಹೊಂದಿರುವ ಚಿತ್ರ. 1869 ನೇ ಇಸವಿಯಿಂದ ಚಿತ್ರದ ಕಥೆ ಆರಂಭವಾಗುತ್ತದೆ. ವಿವಿಧ ಕಾಲಘಟ್ಟಗಳ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ. ಪ್ರೇಕ್ಷಕ ಸ್ವಲ್ಪ ಯೋಚಿಸಿದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ಮಾಸ್ಚಿತ್ ಸೂರ್ಯ ತಿಳಿಸಿದರು.

ಈಗಾಗಲೇ ಟೀಸರ್ ಹಾಗೂ‌ ಹಾಡುಗಳ ಮೂಲಕ ಜನರ‌ ಮನಸ್ಸಿಗೆ ಹತ್ತಿರವಾಗಿರುವ ʼಮಾಂಕ್ ದಿ ಯಂಗ್ʼ ಚಿತ್ರದಲ್ಲಿ ನನ್ನ ಪಾತ್ರ ವಿಶೇಷವಾಗಿದೆ. ನನ್ನ ಪಾತ್ರ ಹಾಗೂ ಚಿತ್ರ ಎರಡು ಎಲ್ಲರಿಗೂ ಮೆಚ್ಚುಗೆಯಾಗುತ್ತದೆ ಎಂಬ ಭರವಸೆ ಇದೆ ಎಂದರು ಚಿತ್ರದ ನಾಯಕ ಸರೋವರ್.

ಈ ಸುದ್ದಿಯನ್ನೂ ಓದಿ | Stars Sankranti Celebration 2025: ಟ್ರೆಡಿಷನಲ್ ಲುಕ್‌ನಲ್ಲಿ ಸಂಕ್ರಾಂತಿ ಆಚರಿಸಿದ ಸೆಲೆಬ್ರಿಟಿಗಳು

ನಾಯಕಿ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ‌ ಗಾಯಕಿ ಸಿರಿ ಕಟ್ಟೆ, ಗಾಯಕ‌ ರೋಹಿತ್,‌ ಗೀತರಚನೆಕಾರ ಪ್ರತಾಪ್ ಭಟ್, ಕಲಾವಿದರಾದ ಕೃತಿ, ರವಿ ಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್, ಶಿವಪ್ಪ ಮುಂತಾದವರು ʼಮಾಂಕ್ ದಿ ಯಂಗ್ʼ ಚಿತ್ರದ ಕುರಿತು ಮಾತನಾಡಿದರು‌.