ಮೈಸೂರು: ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಜೈಲರ್ ಸಿನಿಮಾ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಇದೀಗ ಮೈಸೂರಿನಲ್ಲಿ ನಡೆಯುತ್ತಿದ್ದು, ತಲೈವಾ ಅರಮನೆ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಬಿಳಿಕೆರೆ ಗ್ರಾಮದ ಬಳಿ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ರಜನೀಕಾಂತ್ ಭಾಗವಹಿಸಿದ್ದಾರೆ. ರಜನೀಕಾಂತ್ ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರೀಕರಣದ ಬಳಿ ಸೇರಿದ್ದರು. ಈ ವೇಳೆ ನಟ ರಜನೀಕಾಂತ್ ಅವರು ಕಾರಿನಿಂದಲೇ ಅಭಿಮಾನಿಗಳತ್ತ ಕೈ ಬೀಸಿ, ನಮಸ್ಕಾರ ಮಾಡಿ ಮುಂದೆ ಸಾಗಿದ್ದಾರೆ. ಬಿಳಿಕೆರೆ ಬಳಿ ಚಿತ್ರೀಕರಣ ನಡೆಯುತ್ತಿದ್ದು, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರು ವಿಶೇಷ ಸೆಟ್ ನಿರ್ಮಿಸಿದ್ದಾರೆ.
ರಜನೀಕಾಂತ್ ವಿಡಿಯೊ ಇಲ್ಲಿದೆ
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್‌ಕುಮಾರ್ ಮತ್ತೆ ನಿರ್ದೇಶನ ಹೊಣೆಯಾಗಿದ್ದಾರೆ. ರಜನೀಕಾಂತ್ ಅವರ ಶೆಡ್ಯೂಲ್ ಗಟ್ಟಿಯಾಗಿದ್ದು, ಲುಕ್ ಹಾಗೂ ಕಥಾನಕದ ಕುರಿತಾಗಿ ಸ್ಟುಡಿಯೋದಲ್ಲಿ ಭಾರೀ ಸಿಕ್ಕಾಪಟ್ಟೆ ಸಜ್ಜುಗಳು ನಡೆಯುತ್ತಿವೆ. "ಜೈಲರ್ 2" ಸಿನಿಮಾ 2025ರ ಬಹುಶಃ ದೀಪಾವಳಿ ಬಿಡುಗಡೆಗೆ ನಿರೀಕ್ಷೆಯಿದೆ. ಅಭಿಮಾನಿಗಳಲ್ಲಿ ಈಗಿನಿಂದಲೇ ನಿರೀಕ್ಷೆ ಉಕ್ಕುತ್ತಿದೆ.
ಈ ಸುದ್ದಿಯನ್ನೂ ಓದಿ: Aamir Khan: ರಜನೀಕಾಂತ್ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸೋದು ಪಕ್ಕಾನಾ?