ಬೆಂಗಳೂರು: ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Shivarajkumar) ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳಿಂದ ಬಿಗ್ ಅಪ್‌ಡೇಟ್‌ಗಳು ಸಿಗುತ್ತಿವೆ. ಹೊಸ ಸಿನಿಮಾಗಳ ಅಧಿಕೃತ ಘೋಷಣೆಗಳ ಜತೆಗೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳಿಂದಲೂ ಹೊಸ ವಿಷಯಗಳು ಹೊರಬರುತ್ತಿವೆ. ಅದರಂತೆ, ʼಶ್ರಿತಿಕ್ ಮೋಷನ್ ಪಿಕ್ಚರ್ಸ್ʼ (Shritik Motion Pictures) ಬ್ಯಾನರ್‌ನಡಿಯೂ ಶಿವಣ್ಣಅವರ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ.
ʼಶ್ರಿತಿಕ್ ಮೋಷನ್ ಪಿಕ್ಚರ್ಸ್ʼ ಬ್ಯಾನರ್ ಮೂಲಕ ಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಅವರು ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬಾಲಾಜಿ ಮಾಧವನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನೂ ಅವರೇ ಬರೆದಿದ್ದಾರೆ.
ಮರ್ಡರ್ ಮಿಸ್ಟ್ರಿ ಶೈಲಿಯ ಈ ಸಿನಿಮಾದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಈ ಸಿನಿಮಾದ ಅಧಿಕೃತ ಶೀರ್ಷಿಕೆ ಘೋಷಣೆಯಾಗಲಿದೆ. ಚಿತ್ರದ ಚಿತ್ರೀಕರಣವನ್ನು ಈ ವರ್ಷಾಂತ್ಯದಲ್ಲಿ ಪ್ರಾರಂಭಿಸುವ ಪ್ಲಾನ್ ಚಿತ್ರತಂಡದ್ದು ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Ashada Sale 2025: ಆಫರ್... ಆಫರ್! ಆಷಾಡಕ್ಕೆ ಭರ್ಜರಿ ಸೇಲ್