ಚೆನ್ನೈ: ಕನ್ನಡ ಬಗ್ಗೆ ವಿವಾವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಕರ್ನಾಟಕ ಬಿಟ್ಟು ಉಳಿದೆಡೆ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗ್ತಿದ್ದಂತೆ ಅದರ ಮೊದಲ ವಿಮರ್ಷಣೆ ಕೂಡ ಹೊರಬಿದ್ದಿದೆ. ಕಮಲ್ ಹಾಸನ್ ಫ್ಯಾನ್ಸ್ ಬಹಳ ಖುಷಿಯಿಂದಲೇ ಫಸ್ಟ್ ಡೇ ಫಸ್ಟ್ ಶೋ ನೋಡಲು ಮುಗಿ ಬಿದ್ದಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಅಂತೆ. ಫಸ್ಟ್ ಶೋ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಹೊರಬಿದ್ದಿದೆ.
ಸಿನಿಮಾದ ಕಥೆ ಅತ್ಯಂತ ಕಳಪೆಯಾಗಿದೆ. ಯಾವುದೇ ಪಾತ್ರಗಳಿಗೆ ಸರಿಯಾದ ನ್ಯಾಯ ದೊರಕಿಲ್ಲ. ಟೈಟಲ್‌ಗೂ ಪಾತ್ರಗಳಿಗೂ ಸಿನಿಮಾದ ಕಥೆಗೂ ಯಾವುದೇ ಸಂಬಂಧ ಇಲ್ಲ. ಚಿತ್ರಮಂದಿರದಲ್ಲಿ ಎರಡೂವರೆ ಗಂಟೆ ಕಳೆಯುವುದಕ್ಕಿಂತ ಮನೆಯಲ್ಲಿ ಮಲಗಬಹುದಿತ್ತು. ವಿಫಲ ಪ್ರಯತ್ನಗಳು, ಚಿತ್ರಕಥೆ ತುಂಬಾ ಅಸ್ಪಷ್ಟವಾಗಿದೆ. ನಾಯಕನ್ ಚಾರ್ಮಿಂಗ್ ಮತ್ತೆ ಸಿಗಲು ಸಾಧ್ಯವೇ ಇಲ್ಲ ಒಬ್ಬ ಪೋಸ್ಟ್ ಮಾಡಿದ್ದಾರೆ
ಯಾವುದೇ ಭಾವನೆಗಳಿಲ್ಲ, ಸೇಡು ಮತ್ತು ದ್ರೋಹಕ್ಕೆ ಸರಿಯಾದ ಬರವಣಿಗೆ ಇಲ್ಲ, ಸಂಗೀತ ಮತ್ತು 2 ಆಕ್ಷನ್ ಬ್ಲಾಕ್‌ಗಳು ಮಾತ್ರ ಚೆನ್ನಾಗಿದ್ದವು ಎಂದು ಮತ್ತೊಬ್ಬ ಬರೆದಿದ್ದಾರೆ. ಬೇರೊಬ್ಬರು, ಇಡೀ ಚಿತ್ರ ಅಸ್ಪಷ್ಟವಾಗಿದೆ. ಒಂದಕ್ಕೊಂದು ಸಂಬಂಧವೇ ಇಲ್ಲ ಎಂದೆನಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
ಸಿನಿಮಾ ಬಹಳ ಲೆಂಧಿ ಅನಿಸುತ್ತದೆ. ಕಮಲ್ ಹಾಸನ್ ಬಹಳ ಚೆನ್ನಾಗಿ ನಟಿಸಿದ್ದಾರೆ. ಆದರೂ ಅವರ ಮುಗಿಯದ ಸ್ವಗತಗಳು ಪ್ರೇಕ್ಷಕನನ್ನು ಸುಸ್ತು ಮಾಡುತ್ತದೆ. ಸಿಂಬು ಪಾತ್ರ ಬಹಳ ಚೆನ್ನಾಗಿ ಇದೆ. ಮಣಿರತ್ನಂ ಸ್ಪಾರ್ಕ್ ಎಲ್ಲಿಯೂ ಕಾಣ ಸಿಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಥಗ್ ಲೈಫ್ ಬಗ್ಗೆ
ಐಕಾನಿಕ್ ಚಿತ್ರ ನಾಯಕನ್ (1987) ನಂತರ ಇದೀಗ ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಚಿತ್ರ ಥಗ್‌ಲೈಫ್. ಚಿತ್ರದಲ್ಲಿ ಸಿಲಂಬರಸನ್ ಟಿಆರ್, ತ್ರಿಶಾ ಕೃಷ್ಣನ್, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ನಾಸರ್, ಅಲಿ ಫಜಲ್ ಮತ್ತು ರೋಹಿತ್ ಸರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.