ಇಂದು, ಭಾರತೀಯ ಉದ್ದಿಮೆದಾರರಿಗಾಗಿ ಲಾಮಾದ ಮೇಲೆ ನಿರ್ಮಾಣಗೊಂಡ ಉದ್ದಿಮೆ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited[1] (RIL))ನೊಂದಿಗೆ ಪ್ರಮುಖ ಜಂಟಿ ವ್ಯಾಪಾರವನ್ನು(JV)ರಚಿಸುವ ತನ್ನಉದ್ದೇಶವನ್ನು ಮೆಟಾ ಪ್ರಕಟಿಸುತ್ತಿದೆ.
ಎಐ ಸಬಲೀಕರಣಕ್ಕೆ ಒಂದು ದೂರದೃಷ್ಟಿ
ಭಾರತಕ್ಕೆ ಮೆಟಾದ ಅಚಲ ಬದ್ಧತೆ ಹಾಗೂ ಎಐ ತಂತ್ರಜ್ಞಾನವನ್ನು ಸಾರ್ವತ್ರಿಕಗೊಳಿಸಲು ರಿಲಯನ್ಸ್‌ನೊಂದಿಗೆ ತನ್ನ ಹಂಚಿಕೊಂಡ ಧ್ಯೇಯೋದ್ದೇಶ ಈ ಸಹಭಾಗಿತ್ವದ ಮೂಲದಲ್ಲಿದೆ. ಈ ಜಂಟಿ ವ್ಯಾಪಾರವು ಮಾರಾಟ, ಮಾರುಕಟ್ಟೆ, ಐಟಿ, ಗ್ರಾಹಕ ಸೇವೆಗಳು, ಹಣಕಾಸು ಹಾಗೂ ಇನ್ನೂ ಅನೇಕ ಕ್ಷೇತ್ರಗಳ ನಿರ್ದಿಷ್ಟ ವ್ಯಾಪಾರ ಅಗತ್ಯಗಳಿಗಾಗಿ ಎಐ ಪರಿಹಾರಗಳನ್ನು ಸೃಷ್ಟಿಸಲು ಮೆಟಾದ ಓಪನ್-ಸೋರ್ಸ್ ಲಾಮಾ ಮಾಡಲ್‌ಗಳನ್ನು ವರ್ಧಿಸುವ ಗುರಿ ಹೊಂದಿರುತ್ತದೆ. ಈ JV ಸಂಸ್ಥೆಗಳು ಜೆನೆರೇಟಿವ್ ಎಐ ಅಪ್ಲಿಕೇಶನ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಅನುಷ್ಠಾನಗೊಳಿಸಲು ಮತ್ತು ಕ್ರಾಸ್-ಕಾರ್ಯಾಚರಣೆ ಇರುವ ಮತ್ತು ಕೈಗಾರಿಕೆ-ನಿರ್ದಿಷ್ಟ ಬಳಕೆ ಸಂದರ್ಭಗಳೆರೆಡರ ಸಮಸ್ಯೆಯನ್ನೂ ಪರಿಹರಿಸುವುದಕ್ಕಾಗಿ ವಿನ್ಯಾಸಗೊಂಡ ಹಲವು ಪ್ರೀ-ಕಾನ್ಫಿಗರ್ಡ್ ಎಐ ಪರಿಹಾರ ಗಳನ್ನು ಒದಗಿಸುವುದಕ್ಕೆ ಸುಭದ್ರವಾದ ಫುಲ್-ಸ್ಟ್ಯಾಕ್ ಪರಿಸರವನ್ನು ಪರಿಚಯಿಸಲಿದೆ.
ಈ ಸಹಭಾಗಿತ್ವವನ್ನು ಘೋಷಿಸುತ್ತಾ, ಮೆಟಾದ ಸ್ಥಾಪಕ ಮತ್ತು ಸಿಇಒ ಮಾರ್ಕ್ ಜೂಕರ್ಬರ್ಗ್, “ಭಾರತೀಯ ಡೆವಲಪರ್ ಗಳು ಮತ್ತು ಉದ್ದಿಮೆಗಳಿಗಾಗಿ ಓಪನ್-ಸೋರ್ಸ್ ಎಐದ ಶಕ್ತಿಯನ್ನು ತರುವುದಕ್ಕೆ ರಿಲಯನ್ಸ್‌ನೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುವುದಕ್ಕೆ ನಮಗೆ ಉತ್ಸಾಹ ವೆನಿಸುತ್ತಿದೆ. ಈ ಜಂಟಿ ಉದ್ದಿಮೆಯ ಮೂಲಕ ನಾವು ಮೆಟಾದ ಲಾಮಾ ಮಾಡಲ್‌ಗಳ ಶಕ್ತಿಯನ್ನು ವಾಸ್ತವ-ಜಗತ್ತಿನ ಬಳಕೆಗೆ ಉಪಯೋಗಿಸುತ್ತಿದ್ದೇವೆ ಮತ್ತು ನಾವು ಒಂದುಗೂಡಿ ಹೊಸ ಸಾಧ್ಯತೆಗಳ ಅನಾವರಣ ಮಾಡುವ ಸಮಯದಲ್ಲೇ ಉದ್ದಿಮೆ ಕ್ಷೇತ್ರದಲ್ಲಿ ಮೆಟಾದ ಹೆಜ್ಜೆ ಗುರುತನ್ನು ವಿಸ್ತರಿಸಬೇಕೆಂಬ ಆಶಯ ಹೊಂದಿದ್ದೇವೆ.” ಎಂದು ಹೇಳಿದರು.
ಇದನ್ನೂ ಓದಿ: Shishir Hegde Column: ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು
ಡಿಜಿಟಲ್ ಮೂಲ ಸೌಕರ್ಯದಲ್ಲಿ ಮುಂದಾಳು ಸಂಸ್ಥೆಯಾದ ಆರ್ ಐಎಲ್‌ನೊಂದಿಗಿನ ಸಹಯೋಗವು, ಭಾರತೀಯ ಉದ್ದಿಮೆಗಳಿಗೆ ಎಐ ಪ್ರಯೋಜನಗಳನ್ನು ಹತ್ತಿರಕ್ಕೆ ತರುತ್ತದೆ. ಮೆಟಾದ ಲಾಮಾ ಮಾಡಲ್‌ಗಳನ್ನು ಆರ್ ಐಎಲ್‌ನ ಬಲಿಷ್ಟ ಡಿಜಿಟಲ್ ಅಡಿಪಾಯದೊಂದಿಗೆ ಅಡಚಣೆ ರಹಿತವಾಗಿ ಸಂಯೋಜಿಸುವ ಮೂಲಕ ಈ ಜೆವಿ ಅತ್ಯಲ್ಪ ವೆಚ್ಚದಲ್ಲಿ ಉನ್ನತ ಕಾರ್ಯಕ್ಷಮತೆಯ ಮಾಡಲ್‌ಗಳನ್ನು ವರ್ಧಿಸುವ ಸಾಧ್ಯತೆ ಹೊಂದುತ್ತದೆ. ಜಿಯೋದ ವ್ಯಾಪಕ ಸಂಪರ್ಕತೆ ಕಾರ್ಯ ಜಾಲ ಮತ್ತು ಆರ್ ಐಎಲ್‌ನ ಅತ್ಯಾಧುನಿಕ ಎಐ ಡೇಟಾ ಕೇಂದ್ರಗಳು, ಇನ್ಫರೆನ್ಸ್ ವೆಚ್ಚಗಳನ್ನು ಕಡಿಮೆ ಮಾಡಿ, ಸುಭದ್ರವಾದ, ಕಡಿಮೆ-ತಟಸ್ಥತೆ ಇರುವ ಎಐ ಅನುಷ್ಠಾನ ಗೊಳಿಸುವಲ್ಲಿ ಪ್ರಮುಖವಾಗಿರಲಿವೆ. ಹೆಚ್ಚುವರಿಯಾಗಿ ಈ ಜಂಟಿ ವ್ಯಾಪಾರವು ಕ್ಲೌಡ್, ಆನ್-ಪ್ರಿಮೈಸ್, ಹಾಗೂ ತನ್ನದೇ ಸ್ವಂತ ಮೂಲಸೌಕರ್ಯದಾದ್ಯಂತ ಪರಿಹಾರಗಳನ್ನು ಅನುಷ್ಠಾನ ಗೊಳಿಸಿ, ಮೂಲ ಸೌಕರ್ಯ ವೆಚ್ಚಗಳ ಸಮರ್ಥ ನಿರ್ವಹಣೆಗೆ ಅವಕಾಶ ಒದಗಿಸುವ ಪರಿವರ್ತನೀಯತೆಯನ್ನೂ ಹೊಂದಿರುತ್ತದೆ.
ಆವಿಷ್ಕಾರಕ್ಕೆ ಹಂಚಿಕೊಂಡ ಬದ್ಧತೆ
ತನ್ನ ಮಾಡಲ್‌ಗಳಿಗೆ ಮೇಟಾದ ನಿರಂತರ ಸುಧಾರಣೆಗಳು, ಸಂಶೋಧನೆಯಿಂದ ವಾಸ್ತವ-ಜಗತ್ತಿಗೆ ಸಲಿಲ ಪರಿವರ್ತನೆಗೆ ಅನುವು ಮಾಡಿಕೊಟ್ಟು ಭಾರತೀಯ ವ್ಯಾಪಾರ ಸಂಸ್ಥೆಗಳಿಗೆ ಅಗ್ರಮಾಣ್ಯ ಎಐ ತಂತ್ರಜ್ಞಾನವನ್ನು ತರಲಿವೆ. ಈ ಸಹಯೋಗವು ತಂತ್ರಜ್ಞಾನದಾಚೆ ಸಾಗುತ್ತದೆ; ಅದು, ವಿವಿಧ ಉದ್ದಿಮೆಗಲಾದ್ಯಂತ, ಅದರಲ್ಲೂ ನಿರ್ದಿಷ್ಟವಾಗಿ ಭಾರತದ ವಿಕಸನಗೊಳ್ಳುತ್ತಿರುವ ಸಣ್ಣ ವ್ಯಾಪಾರಗಳ ಆವಿಷ್ಕಾರ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ. ಅತ್ಯಾಧುನಿಕ ಎಐ ಸಾಧನಗಳಿಗೆ ಕಡಿಮೆ ಎಂಟ್ರಿ ವೆಚ್ಚಗಳು ಏರ್ಪಡುವುದರಿಂದ, ಎಸ್‌ಎಮ್‌ಬಿಗಳು, ಮತ್ತು ಸ್ಟಾರ್ಟ್‌ಅಪ್‌ಗಳು ಕೂಡಲೇ ಎಐ-ಚಾಲಿತ ಪರಿಹಾರಗಳನ್ನು ಅಳವಡಿಸಿಕೊಂಡು, ಸ್ಪರ್ಧಾತ್ಮಕ ಪರಿಸರಕ್ಕೆ ತಕ್ಕಂತೆ ಇದ್ದು ಇನ್ನೂ ಬೇಗನೇ ಆವಿಷ್ಕಾರ ನಡೆಸಲು ನೆರವಾಗಬಹುದು.
ಈ ಪ್ರಮುಖ ಸಹಭಾಗಿತ್ವದ ಮೂಲಕ ಮೇಟಾ ಕೇವಲ ಎಐ ತಂತ್ರಜ್ಞಾನವನ್ನು ಮುನ್ನಡೆಸುತ್ತಿರುವುದು ಮಾತ್ರವಲ್ಲದೆ, ಭಾರತದಲ್ಲಿ ಆವಿಷ್ಕಾರ ಮತ್ತು ಬೆಳವಣಿಗೆಯ ಹೊಸ ಯುಗಕ್ಕೆ ಮಾರ್ಗ ಕಲ್ಪಿಸುತ್ತಿದೆ.