ಭಾರತದಿಂದ ಇ-ಕಾಮರ್ಸ್ ರಫ್ತುವಿಭಾಗ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡ ಅಮೆಜಾನ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಶನ್ಸ್
ಅಮೆಜಾನ್ ಮತ್ತು ಎಫ್ಐಇಓ ಜಂಟಿಯಾಗಿ ಭಾರತದಾದ್ಯಂತ ಇರುವ ಎಂಎಸ್ಎಂಇಗಳಿಗೆ ಜಾಗೃತಿ ಕಾರ್ಯಕ್ರಮ ಮತ್ತು ಸಾಮರ್ಥ್ಯ ಹೆಚ್ಚಳ ಕಾರ್ಯಾಗಾರಗಳನ್ನು ನಡೆಸಲಿವೆ. ಈ ಸಹಬಾಗಿತ್ವವು 2030ರ ವೇಳೆಗೆ ಭಾರತದಿಂದ ಒಟ್ಟು $80 ಬಿಲಿಯನ್ ನಷ್ಟು ಇ- ಕಾಮರ್ಸ್ ರಫ್ತು ಸಾಧಿಸುವ ಅಮೆಜಾನ್ ನ ಗುರಿ ಸಾಧನೆಯಲ್ಲಿ ಬಹಳ ಮಹತ್ವದ ಹೆಜ್ಜೆಯಾಗಿದೆ.


ನವದೆಹಲಿ: ಅಮೆಜಾನ್ ಇಂಡಿಯಾ ಇಂದು ಭಾರತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ರಫ್ತು ವಿಭಾಗವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಫೆಡರೇ ಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಶನ್ಸ್ (ಎಫ್ಐಇಓ) ಜೊತೆಗೆ ಒಂದು ಒಡಂಬಡಿಕೆಗೆ ಸಹಿ ಹಾಕಿದೆ.
ಈ ಒಪ್ಪಂದದ ಪ್ರಕಾರ ಅಮೆಜಾನ್ ಮತ್ತು ಎಫ್ಐಇಓ ಸಂಸ್ಥೆಗಳು ಜಂಟಿಯಾಗಿ ಒಂದು ಇ- ಕಾಮರ್ಸ್ ರಫ್ತು ಕಾರ್ಯಪಡೆಯನ್ನು ಸ್ಥಾಪಿಸಲಿದ್ದು, ಈ ವಿಭಾಗವು ಮಾರಾಟಗಾರರಿಗೆ ನೆರವಾಗ ಬಲ್ಲ ನೀತಿ ನಿರೂಪಣೆ ಮತ್ತು ಮೂಲಸೌಕರ್ಯ ಸ್ಥಾಪನೆ ಕುರಿತ ಯೋಜನೆಯನ್ನು ಅಭಿವೃದ್ಧಿ ಪಡಿಸಲಿದೆ. ಜೊತೆಗೆ ವಿಶೇಷವಾಗಿ ಭಾರತದಾದ್ಯಂತ ಎಂಎಸ್ಎಂಇಗಳಲ್ಲಿ ಇ- ಕಾಮರ್ಸ್ ರಫ್ತು ಅವಕಾಶಗಳ ಕುರಿತು ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಲಿದೆ. ಈ ಪಾಲುದಾರಿಕೆಯು ಭಾರತದಾದ್ಯಂತ ಸಣ್ಣ ಉದ್ಯಮಗಳು ಮತ್ತು ತಯಾರಕರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.
ಇದನ್ನೂ ಓದಿ: Amazon: ಅಮೆಜಾನ್ ಗ್ರಾಹಕರಿಗೆ ಬಿಗ್ ಶಾಕ್; 5 ರೂ. ಪ್ಲಾಟ್ ಫಾರ್ಮ್ ಶುಲ್ಕ ವಿಧಿಸಿದ ಕಂಪನಿ
ಸಹಿ ಸಮಾರಂಭದಲ್ಲಿ ಮಾತನಾಡಿದ ಡಾ. ಅಜಯ್ ಸಹಾಯ್ ಡಿಜಿ ಫೆಡರೇಶನ್ ಆಫ್ ಇಂಡಿ ಯನ್ ಎಕ್ಸ್ಪೋರ್ಟ್ ಆರ್ಗನೈಸೇಷನ್ಸ್ (ಎಫ್ಐಇಒ) ಈ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು, "ಭಾರತದ ಎಂಎಸ್ಎಂಇ ವಲಯವು ಜಾಗತಿಕ ವ್ಯಾಪಾರಕ್ಕೆ ಕೊಡುಗೆ ನೀಡಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಅಮೆಜಾನ್ ಜೊತೆ ಪಾಲುದಾರಿಕೆ ಮಾಡುವ ಮೂಲಕ, ಕುಶಲಕರ್ಮಿಗಳು, ನೇಕಾರರು ಮತ್ತು ತಯಾರಕರು ಸೇರಿದಂತೆ ಅಂತರರಾಷ್ಟ್ರೀಯ ಉದ್ಯಮಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಎಂಎಸ್ಎಂಇಗಳು ಸಾಂಪ್ರ ದಾಯಿಕ ರಫ್ತು ಅಡೆತಡೆಗಳನ್ನು ನಿವಾರಿಸಲು ಮತ್ತು ಸ್ಪರ್ಧಾತ್ಮಕ ಜಾಗತಿಕ ಆಟಗಾರರಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎಂಒಯು ಒಂದು ಪ್ರಮುಖ ಹೆಜ್ಜೆಯಾಗಿದೆ.
ಇ-ಕಾಮರ್ಸ್ ರಫ್ತಿಗೆ ಸಕ್ರಿಯಗೊಳಿಸುವ ಮತ್ತು ಬೆಂಬಲಿಸುವ ಪರಿಸರ ವ್ಯವಸ್ಥೆಗೆ ಸಂಬಂಧವನ್ನು ಸಾಂಸ್ಥಿಕಗೊಳಿಸುವ ಉದ್ದೇಶದಿಂದ ಎಫ್ಐಇಒ ಮತ್ತು ಅಮೆಜಾನ್ ಎರಡಕ್ಕೂ ಎಂಒಯು ಒಂದು ಮೈಲಿಗಲ್ಲು ಎಂದು ಡಾ ಸಹಾಯ್ ಹೇಳಿದರು. ಪಾಲುದಾರಿಕೆಯು ಜಾಗತಿಕವಾಗಿ ಭಾರ ತೀಯ ಉತ್ಪನ್ನಗಳ ಗೋಚರತೆಯನ್ನು ಇನ್ನಷ್ಟು ಸಹಾಯ ಮಾಡುತ್ತದೆ ಮತ್ತು ಸಮಸ್ಯೆಗಳನ್ನು ಗುರುತಿಸಲು ಮತ್ತು ಸರ್ಕಾರವು ಹೊಸ ಯೋಜನೆಗಳನ್ನು ಪರಿಹರಿಸಲು ಅವರು ಹೊಸ ಯೋಜನೆ ಯನ್ನು ರೂಪಿಸಲು ಸಹಾಯ ಮಾಡುತ್ತದೆ. ಇ-ಕಾಮರ್ಸ್ ಹಬ್, ಇದು ದೇಶದ ಒಟ್ಟಾರೆ ರಫ್ತು ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಇಂಡಿಯಾದ ಮುಖ್ಯಸ್ಥರಾದ ಶ್ರೀನಿಧಿ ಕಲ್ವಪುಡಿ ಅವರು, "ಸುಸ್ಥಿರ ರಫ್ತು ಬೆಳವಣಿಗೆ ಸಾಧಿಸಲು ಜಾಗತಿಕ ಬೇಡಿಕೆಯಿರುವ ಉತ್ತಮ ಉತ್ಪನ್ನಗಳಿಗಿಂತಲೂ ಮೀರಿ ದ್ದೇನೋ ಬೇಕಾಗುತ್ತದೆ. ಇದಕ್ಕೆ ಸಹಯೋಗ, ಜಾಗೃತಿ ಮತ್ತು ಮಾರಾಟಗಾರರಿಗೆ ನೆರವಾಗುವಂತಹ ಜಾಲಗಳ ಅಗತ್ಯವಿದೆ. ಎಫ್ಐಇಓ ಜೊತೆಗಿನ ಅಮೆಜಾನ್ ನ ಪಾಲುದಾರಿಕೆಯು ಭಾರತೀಯ ಉದ್ಯಮಗಳಿಗೆ ಇರುವ, ಸುಲಭವಾಗಿ ಲಭ್ಯವಾಗಬಹುದಾದ, ಬೆಳೆಯಬಹುದಾದ ವ್ಯವಸ್ಥೆ ನಿರ್ಮಾಣದ ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ಅಮೆಜಾನ್ ನ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಎಫ್ಐಇಓನ ಪರಿಣತಿಯ ಜೊತೆಗೆ ಸಂಯೋ ಜಿಸುವ ಮೂಲಕ ಕಾರ್ಯಾ ಚರಣೆಯ ಸಮಸ್ಯೆಗಳನ್ನು ಕಡಿಮೆ ಮಾಡಲು, ರಫ್ತು ಸಿದ್ಧತೆಯನ್ನು ಹೆಚ್ಚಿಸಲು ಮತ್ತು ಎಂಎಸ್ಎಂಇಗಳು ಹಾಗೂ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಗಳನ್ನು ಪ್ರವೇಶಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಈ ಪಾಲು ದಾರಿಕೆಯು 2030ರ ವೇಳೆಗೆ ಭಾರತದಿಂದ ಒಟ್ಟು $80 ಬಿಲಿಯನ್ ಇ-ಕಾಮರ್ಸ್ ರಫ್ತನ್ನು ಸಾಧಿಸುವ ಅಮೆಜಾನ್ ನ ಗುರಿ ಸಾಧನೆಗೆ ಪೂರಕವಾಗಿದೆ" ಎಂದು ಹೇಳಿದರು.
ಒಪ್ಪಂದದ ಭಾಗವಾಗಿ ಅಮೆಜಾನ್ ಮತ್ತು ಎಫ್ಐಇಓ ಸಂಸ್ಥೆಗಳು ಪ್ರಮುಖ ರಫ್ತು ಉತ್ಪನ್ನ ವಿಭಾಗಗಳಾದ ಹೋಮ್ ಲೆನಿನ್ ಮತ್ತು ಗೃಹಾಲಂಕಾರ, ಹೆಲ್ತ್ ಆಂಡ್ ಪರ್ಸನಲ್ ಕೇರ್, ಉಡುಗೆ, ಆಟಿಕೆಗಳು ಇತ್ಯಾದಿ ವಿಭಾಗಗಳಲ್ಲಿ ರಫ್ತುದಾರರ ಸಾಮರ್ಥ್ಯ ಹೆಚ್ಚಿಸಲು ತರಬೇತಿ ಕಾರ್ಯಾಗಾರ ಗಳನ್ನು ನಡೆಸಲಿದೆ. ಈ ಯೋಜನೆಯು ಆಫ್ ಲೈನ್ ನಲ್ಲಿ ಮಾರಾಟಗಾರರ ರಫ್ತು ಯೋಜನೆಗೆ ನೆರವಾಗುವಂತಹ ಸ್ಥಳೀಯ ವ್ಯಕ್ತಿಗಳ ಜಾಲಗಳನ್ನು ರಚಿಸಲಿದೆ. ಈ ಜಾಲಗಳು ನೇರ ಸಹಾಯ, ಕಲಿಕೆಯ ಅವಕಾಶಗಳು ಮತ್ತು ಸೇವಾ ಪೂರೈಕೆದಾರರಿಗೆ ಸುಲಭವಾಗಿ ಲಭ್ಯವಾಗುವಂತಹ ಸೌಲಭ್ಯಗಳನ್ನು ಒದಗಿಸುತ್ತವೆ.
ಎಫ್ಐಇಓ ಸಂಸ್ಥೆಯು ಕರಕುಶಲ, ಹೋಮ್ ಟೆಕ್ಸ್ ಟೈಲ್ಸ್, ಯೋಗಕ್ಷೇಮ ಉತ್ಪನ್ನಗಳು ಮತ್ತು ಪ್ಯಾಕೇಜ್ಡ್ ಆಹಾರಗಳಂತಹ ರಫ್ತು ಪ್ರಧಾನ ಉತ್ಪನ್ನ ವಿಭಾಗಗಳಲ್ಲಿ ಉನ್ನತ ಸಾಮರ್ಥ್ಯ ಹೊಂದಿ ರುವ ಮಾರಾಟಗಾರರು ಮತ್ತು ತಯಾರಕರನ್ನು ನಾಮನಿರ್ದೇಶನ ಮಾಡಲಿದ್ದು, ಅಮೆಜಾನ್ ಈ ಉದ್ಯಮಗಳಿಗೆ ಆನ್ ಬೋರ್ಡಿಂಗ್ ನೆರವು, ಕಾನೂನುಬದ್ಧತೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಬೆಳೆಸುವ ವಿಚಾರದಲ್ಲಿ ಮಾರ್ಗದರ್ಶನ ನೀಡಲಿದೆ.