ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಮೇಳೈಸಿದ 'ವಿಂಟೇಜ್' ವೈಭವ; ಹಳೆಯ ನೆನಪುಗಳನ್ನು ಮರುಕಳಿಸಿದ ಜಾವಾ-ಯೆಜ್ಡಿ ದಿನಾಚರಣೆ

International Jawa-Yezdi Day: ಬೆಂಗಳೂರಿನಲ್ಲಿ 'ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ' ವನ್ನು ಭಾನುವಾರ ಅದ್ಧೂರಿಯಾಗಿ ಆಚರಿಸಲಾಯಿತು. ನೂರಾರು ಯೆಜ್ಡಿ ಪ್ರಿಯರು 24ನೇ ಆವೃತ್ತಿಯ ಈ ಸಂಭ್ರಮದಲ್ಲಿ ಪಾಲ್ಗೊಂಡರು. ನಗರದ ರಿಚ್‌ಮಂಡ್‌ ಟೌನ್‌ನ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ಮೈದಾನಕ್ಕೆ ಬೈಕ್‌ ರೈಡಿಂಗ್‌ ಮೂಲಕ ಬಂದು ಸೇರಿದ ನೂರಾರು ರೈಡರ್‌ಗಳು, ಇಡೀ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು.

ಬೆಂಗಳೂರಿನಲ್ಲಿ 'ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ' ವನ್ನು ಭಾನುವಾರ ಆಚರಿಸಲಾಯಿತು.

ಬೆಂಗಳೂರು, ಜು.13: ಮೋಟಾರ್‌ ಸೈಕಲ್ ಜಗತ್ತಿನ ಅತಿ ದೊಡ್ಡ ಮತ್ತು ಸುದೀರ್ಘ ಸಂಪ್ರದಾಯಗಳಲ್ಲಿ ಒಂದಾಗಿರುವ 'ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ' ವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನಲ್ಲಿಯೂ ನೂರಾರು ಯೆಜ್ಡಿ ಪ್ರಿಯರು 24ನೇ ಆವೃತ್ತಿಯ ಈ ಸಂಭ್ರಮದಲ್ಲಿ ಪಾಲ್ಗೊಂಡರು. ಬೆಂಗಳೂರಿನ ರಿಚ್‌ಮಂಡ್‌ ಟೌನ್‌ನ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ಮೈದಾನಕ್ಕೆ ಬೈಕ್‌ ರೈಡಿಂಗ್‌ ಮೂಲಕ ಬಂದು ಸೇರಿದ ನೂರಾರು ರೈಡರ್‌ಗಳು, ಇಡೀ ದಿನವನ್ನು ಹಬ್ಬದ ರೀತಿಯಲ್ಲಿ ಕಳೆದರು. ಹಿರಿ-ಕಿರಿಯರು ಇಲ್ಲಿಗೆ ಬಂದಿದ್ದ, ಪ್ರದರ್ಶನಕ್ಕೆ ಇಟ್ಟಿದ್ದ ಹಳೆಯ ಕ್ಲಾಸಿಕ್‌ ಯೆಜ್ಡಿ ಬೈಕ್‌ಗಳನ್ನು ಕಂಡು ಪುಳಕಿತಗೊಂಡರು. ಅವುಗಳ ಜತೆ ಫೋಟೋ ತೆಗೆಸಿಕೊಂಡು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಜಾವಾ ಮತ್ತು ಯೆಜ್ಡಿ ಬೈಕ್ ಮಾಲೀಕರ ಒಂದು ಸಣ್ಣ ಗುಂಪಿನಿಂದ ಪ್ರಾರಂಭವಾದ ಈ ಆಚರಣೆ ಇಂದು ಜಾಗತಿಕ ಮಟ್ಟಕ್ಕೆ ಹಬ್ಬಿದೆ. ಬೈಕಿಂಗ್, ಪರಂಪರೆ ಮತ್ತು ಸಮುದಾಯದ ಮೇಲಿನ ಪ್ರೀತಿಯ ಮೂಲಕ ಇದು ಹಲವು ತಲೆಮಾರುಗಳ ರೈಡರ್‌ಗಳನ್ನು ಬೆಸೆಯುತ್ತಿದೆ.

ಪ್ರತಿ ವರ್ಷ ಜುಲೈ ಎರಡನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ದಶಕಗಳ ಹಿಂದಿನ ಹಳೆಯ ವಿಂಟೇಜ್ ಜಾವಾ ಮತ್ತು ಯೆಜ್ಡಿ ಬೈಕ್‌ಗಳು ಇಂದಿನ ಆಧುನಿಕ ಬೈಕ್‌ಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಸ್ತೆಯಲ್ಲಿ ಸಾಗುವುದೇ ಈ ದಿನದ ವಿಶೇಷವಾಗಿದೆ. ಕೇವಲ ಬೈಕ್‌ಗಳ ಪ್ರದರ್ಶನ ಮಾತ್ರವಲ್ಲದೆ, ಬೈಕಿಂಗ್ ಮೇಲಿನ ಅದೇ ಹಳೆಯ ಒಲವು ಈ ಎರಡೂ ತಲೆಮಾರುಗಳನ್ನು ಒಟ್ಟಿಗೆ ಸೇರಿಸುತ್ತದೆ.

ಗಡಿಗಳನ್ನು ಮೀರಿದ 7,500+ ಸವಾರರ ಸಂಭ್ರಮ

ಈ ವರ್ಷದ ಆಚರಣೆಯು ಎಂದಿಗಿಂತಲೂ ಹೆಚ್ಚು ಅದ್ಧೂರಿಯಾಗಿತ್ತು. ಭಾರತದ 150ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಈ ಆಚರಣೆಯಲ್ಲಿ 40ಕ್ಕೂ ಹೆಚ್ಚು ಬೈಕ್ ಕ್ಲಬ್‌ಗಳ ಜತೆಗೆ ಬರೋಬ್ಬರಿ 7,500ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡು ಇತಿಹಾಸ ನಿರ್ಮಿಸಿದರು. ಇಷ್ಟೇ ಅಲ್ಲದೆ, ಗಡಿಗಳನ್ನು ದಾಟಿ ವಿಶ್ವದ 11 ದೇಶಗಳಿಗೂ ಈ ಸಂಭ್ರಮ ಹಬ್ಬಿತ್ತು. ಅಲ್ಲಿನ ರೈಡರ್‌ಗಳು ಸ್ಥಳೀಯ ರೈಡ್‌ಗಳು, ಸಮುದಾಯ ಕೂಟಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಈ ದಿನವನ್ನು ಆಚರಿಸಿದರು.

ಕೇವಲ ಬೈಕ್‌ ರೈಡ್‌ ಮಾತ್ರವಲ್ಲ. ತಲೆಮಾರುಗಳಿಂದ ಜಾವಾ-ಯೆಜ್ಡಿ ಉತ್ಸಾಹವನ್ನು ಜೀವಂತವಾಗಿರಿಸಿರುವ ಪರಸ್ಪರ ಸ್ನೇಹ, ನೆನಪುಗಳು ಮತ್ತು ಕಥೆಗಳನ್ನು ರೈಡರ್‌ಗಳು ಇಲ್ಲಿ ಮೆಲುಕು ಹಾಕಿದರು. ಜಗತ್ತಿನಾದ್ಯಂತ ಇರುವ ಜಾವಾ ಸಮುದಾಯಗಳು ಭಾರತದ ರೈಡಿಂಗ್ ಕ್ಲಬ್‌ಗಳೊಂದಿಗೆ ಒಂದೇ ವೇದಿಕೆಯಡಿ ಕೈಜೋಡಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ʼಇದು ಸವಾರರಿಂದ, ಸವಾರರಿಗಾಗಿಯೇ ಇರುವ ಹಬ್ಬʼ

ಈ ಆಚರಣೆಯ ಕುರಿತು ಮಾತನಾಡಿದ 'ಕ್ಲಾಸಿಕ್ ಲೆಜೆಂಡ್ಸ್'ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ʼಇಪ್ಪತ್ತನಾಲ್ಕು ವರ್ಷಗಳ ಹಿಂದೆ, ತಾವು ಇಷ್ಟಪಡುವ ಮೋಟಾರ್‌ಸೈಕಲ್‌ಗಳನ್ನು ಸಂಭ್ರಮಿಸಲು ಮುಂದಾದ ಸವಾರರ ಒಂದು ಸಣ್ಣ ಪ್ರಯತ್ನದಿಂದ ಈ 'ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ' ಶುರುವಾಯಿತು. ಇಂದು, ಇದು ದೇಶ-ವಿದೇಶಗಳ ಗಡಿ ಮತ್ತು ತಲೆಮಾರುಗಳನ್ನು ಮೀರಿದ ಜಾಗತಿಕ ಸಂಪ್ರದಾಯವಾಗಿ ಬೆಳೆದಿದೆ. ಈ ಆಚರಣೆ ಸಂಪೂರ್ಣವಾಗಿ ಬೈಕ್ ಸವಾರರಿಗೆ ಸೇರಿದ್ದು ಎಂಬುದು ಇದರ ದೊಡ್ಡ ವೈಶಿಷ್ಟ್ಯ. ಪ್ರತಿಯೊಂದು ರೈಡ್, ಪ್ರತಿಯೊಂದು ಕೂಟ ಮತ್ತು ಹಂಚಿಕೊಂಡ ಪ್ರತಿಯೊಂದು ಕಥೆಯು ಈ ಪರಂಪರೆಯನ್ನು ಜೀವಂತವಾಗಿರಿಸುತ್ತದೆ. ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿರುವ ಈ ಚಳುವಳಿಯ ಭಾಗವಾಗಲು ನಮಗೆ ಅತೀವ ಹೆಮ್ಮೆಯಾಗುತ್ತಿದೆʼ ಎಂದು ಸಂತಸ ಹಂಚಿಕೊಂಡರು.

ವೈರಲ್ 'ದುಬೈ ಚಾಕೊಲೇಟ್'ಗೆ ಈಗ ಫುಲ್‌ ಡಿಮ್ಯಾಂಡ್‌; ಬೆಂಗಳೂರಿಗರ ಚಾಕೊಲೇಟ್ ಕ್ರೇಜ್‌ ಬಿಚ್ಚಿಟ್ಟ ಇನ್‌ಸ್ಟಾಮಾರ್ಟ್‌!

ಭಾರತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿಷ್ಠಿತ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳನ್ನು ಮರುಪರಿಚಯಿಸುವ ಉದ್ದೇಶದೊಂದಿಗೆ 'ಕ್ಲಾಸಿಕ್ ಲೆಜೆಂಡ್ಸ್' ಕಂಪನಿಯನ್ನು ಸ್ಥಾಪಿಸಲಾಗಿದ್ದು, ಸದ್ಯ ಈ ಕಂಪನಿಯು ಜಾವಾ, ಯೆಜ್ಡಿ ಮತ್ತು ಬಿಎಸ್‌ಎನಂತಹ ಐತಿಹಾಸಿಕ ಬ್ರ್ಯಾಂಡ್‌ಗಳನ್ನು ಹೊಂದಿದೆ. ಅತ್ಯುತ್ತಮ ಬೈಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ನೈಜ ಮೋಟಾರ್‌ಸೈಕ್ಲಿಂಗ್ ಲೈಫ್‌ಸ್ಟೈಲ್ ಅನುಭವವನ್ನು ನೀಡುವುದು ಹಾಗೂ ಕ್ಲಾಸಿಕ್ ಬೈಕ್‌ಗಳ ಮಾರುಕಟ್ಟೆಗೆ ಮರುಜೀವ ತುಂಬುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ.