ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 13th May 2026: ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ ಚಿನ್ನ ಬಲು ದುಬಾರಿ; ಇಂದು ಏರಿಕೆಯಾಗಿದ್ದು ಬರೋಬ್ಬರಿ 10 ಸಾವಿರ ರುಪಾಯಿ

Gold-Silver Price Today: ಇಂದು ಚಿನ್ನದ ದರದಲ್ಲಿ (ಮೇ 13) ಭಾರಿ ಹೆಚ್ಚಳವಾಗಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 1,275 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 15,390 ರುಪಾಯಿಗೆ ಏರಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 1,391 ರುಪಾಯಿ ಅಧಿಕವಾಗಿದ್ದು, 16,789 ರುಪಾಯಿಗೆ ಬಂದು ತಲುಪಿದೆ.

ನಿಮಿಕಾ ರತ್ನಾಕರ್‌ (ಇನ್‌ಸ್ಟಾಗ್ರಾಂ ಚಿತ್ರ)

ಬೆಂಗಳೂರು, ಮೇ 13: 1 ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಕರೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿ ಮೇಲಿನ ಒಟ್ಟು ಆಮದು ಸುಂಕವನ್ನು (Import Duty) ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡಾ 15ಕ್ಕೆ ಏರಿಸಿದೆ. ಹೀಗಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ಎದುರಾಗಿದೆ. ಇಂದು (ಮೇ 13) ಚಿನ್ನದ ದರದಲ್ಲಿಭಾರಿ ಹೆಚ್ಚಳ ಕಂಡು ಬಂದಿದೆ (Gold Price Today On 13th May 2026). ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 1,275 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 15,390 ರುಪಾಯಿಗೆ ಏರಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 1,391 ರುಪಾಯಿ ಅಧಿಕವಾಗಿದ್ದು, 16,789 ರುಪಾಯಿಗೆ ಬಂದು ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,12,920 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,41,150 ರುಪಾಯಿ ಹಾಗೂ 100 ಗ್ರಾಂಗೆ 14,11,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,23,184 ರುಪಾಯಿ, 10 ಗ್ರಾಂಗೆ 1,53,980 ರುಪಾಯಿ ಹಾಗೂ 100 ಗ್ರಾಂಗೆ 15,39,800 ರುಪಾಯಿ ಇದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,400 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,800 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,390 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,789 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,405 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,804 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,390 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,789 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,390 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,789 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 15,400 ರುಪಾಯಿ 16,800 ರುಪಾಯಿ
ಮುಂಬೈ 15,390 ರುಪಾಯಿ 16,789 ರುಪಾಯಿ
ದೆಹಲಿ 15,405 ರುಪಾಯಿ 16,804 ರುಪಾಯಿ
ಕೋಲ್ಕತ್ತಾ 15,390 ರುಪಾಯಿ 16,789 ರುಪಾಯಿ
ಹೈದರಾಬಾದ್‌ 15,390 ರುಪಾಯಿ 16,789 ರುಪಾಯಿ

ಚಿನ್ನ, ಬೆಳ್ಳಿ ಬಲು ದುಬಾರಿ; ಆಮದು ಸುಂಕ ಶೇ. 15 ಏರಿಕೆ ಮಾಡಿದ ಕೇಂದ್ರ

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿಯೂ ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 20 ರುಪಾಯಿ ಹೆಚ್ಚಾಗಿದ್ದು, 310 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 3,100 ರುಪಾಯಿ ಹಾಗೂ 1 ಕೆಜಿಗೆ 3,10,000 ರುಪಾಯಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author