ಬೆಂಗಳೂರು: ಹಣಕಾಸು ಮತ್ತು ಸ್ಟಾಕ್ ಬ್ರೋಕಿಂಗ್ ವಲಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಚಾಯ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (Choice International Ltd) 2026-27ರ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್) ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯು ಈ ಅವಧಿಯಲ್ಲಿ 319 ಕೋಟಿ ರುಪಾಯಿ ನಿವ್ವಳ ಆದಾಯ ಗಳಿಸಿದೆ. ಹಾಗೂ 61 ಕೋಟಿ ರುಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ. ಸರಕಾರಗಳಿಂದ ಹೊಸತಾಗಿ 191 ಕೋಟಿ ರುಪಾಯಿಗಳ ಆರ್ಡರ್‌ಗಳು ಲಭಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಚಾಯ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ಲಾಭದಲ್ಲಿ 26 ಪರ್ಸೆಂಟ್ ಏರಿಕೆಯನ್ನು ದಾಖಲಿಸಿದೆ. ಹಾಗೂ ಆದಾಯದಲ್ಲಿ 34 ಪರ್ಸೆಂಟ್ ಹೆಚ್ಚಳ ಕಂಡಿದೆ.
1992ರಲ್ಲಿ ಸ್ಥಾಪಿತವಾದ 'ಚಾಯ್ಸ್ ಗ್ರೂಪ್' ಒಂದು ಹಣಕಾಸು ಸಂಸ್ಥೆಯಾಗಿದ್ದು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಎದುರಾಗುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅಂತರವನ್ನು ಕಡಿಮೆ ಮಾಡುವಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ.
ಚಾಯ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು 214 ಶಾಖಾ ಕಚೇರಿಗಳನ್ನು ಒಳಗೊಂಡಿದೆ. 48 ಪ್ರಾಜೆಕ್ಟ್ ಆಫೀಸ್‌ಗಳನ್ನು ನಡೆಸುತ್ತಿದೆ. 258 ಇನ್ ಹೌಸ್ ತಂತ್ರಜ್ಞರನ್ನು ಒಳಗೊಂಡಿದೆ. 6.8 ಸಿಬ್ಬಂದಿಯ ಬಲ ಇದಕ್ಕಿದೆ. 16 ಲಕ್ಷಕ್ಕೂ ಹೆಚ್ಚು ಗ್ರಾಹಕರ ನೆಲೆಯನ್ನು ಹೊಂದಿದೆ. ಸ್ಟಾಕ್ ಬ್ರೋಕಿಂಗ್, ವೆಲ್ತ್ ಪ್ರಾಡಕ್ಟ್ಸ್, ವಿಮೆ ವಿತರಣೆ, ಎಂಎಸ್‌ಎಂಇ ಸಾಲ, ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಒದಗಿಸುತ್ತಿದೆ.