ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price: ಚಿನ್ನ ಖರೀದಿಗೆ ಕಾಯಬಹುದೇ? ಬೆಲೆ ಮತ್ತಷ್ಟು ಇಳಿಯಬಹುದೇ?

ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತ, ಭೌಗೋಳಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿ, ಕರೆನ್ಸಿ ಏರಿಳಿತಗಳಿಂದಾಗಿ ಭಾರತದಲ್ಲಿ ಚಿನ್ನದ ದರ ಕೂಡ ಅನಿಶ್ಚಿತವಾಗಿರುತ್ತದೆ. ಕಳೆದ ವಾರ ಬೆಲೆ ಏರಿಕೆಯಲ್ಲಿ ದಾಖಲೆ ಬರೆದಿದ್ದ ಚಿನ್ನದ ಬೆಲೆಯು ಈ ವಾರದ ಆರಂಭದಿಂದ ಕುಸಿಯಲು ಪ್ರಾರಂಭಿಸಿದೆ. ಹೀಗಾಗಿ ಇದು ಚಿನ್ನ ಖರೀದಿ ಮಾಡಲು ಅಥವಾ ಮಾರಾಟ ಮಾಡಲು ಸೂಕ್ತ ಸಮಯ ಹೌದೋ ಅಲ್ಲವೋ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿರುವ ಈ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸರಿಯೋ ಎನ್ನುವ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ. ಇದಕ್ಕೆ ಆರ್ಥಿಕ ತಜ್ಞರು ಹೇಳುವುದೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಲವು ದಿನಗಳಿಂದ ಚಿನ್ನದ ಬೆಲೆ (gold price) ನಿರಂತರವಾಗಿ ಕುಸಿಯುತ್ತಿದೆ. ಜಾಗತಿಕ ಮಾರುಕಟ್ಟೆ, ಭೌಗೋಳಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿ, ಕರೆನ್ಸಿ ಏರಿಳಿತಗಳು ಭಾರತದಲ್ಲಿ ಚಿನ್ನದ ದರಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(Indian Bullion and Jewellers Association) ಅಂಕಿಅಂಶದ ಪ್ರಕಾರ ಅಕ್ಟೋಬರ್‌ 28ರಂದು ಚಿನ್ನದ ಬೆಲೆ (Gold rate) 24 ಕ್ಯಾರೆಟ್‌ಗೆ 1,18,043 ರೂ.ಗಳಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1,08,127 ರೂ. ಆಗಿತ್ತು.

ಭಾರತದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಅಕ್ಟೋಬರ್‌ 27ರಂದು ಚಿನ್ನದ ಬೆಲೆ ಕುಸಿದಿದೆ. ಬೆಳಗ್ಗೆ 9:32ಕ್ಕೆ ಚಿನ್ನದ ಬೆಲೆ 10 ಗ್ರಾಂಗೆ ಶೇ. 0.78ರಷ್ಟು ಕುಸಿದಿದ್ದು, 1,22,490 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ ಶೇ. 1.07ರಷ್ಟು ಕುಸಿದಿದ್ದು, 1,45,898 ರೂ.ಗೆ ತಲುಪಿದೆ.

ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​ಅಂಕಿಅಂಶದ ಪ್ರಕಾರ ಅಕ್ಟೋಬರ್‌ 28ರಂದು ಚಿನ್ನದ ಬೆಲೆ 24 ಕ್ಯಾರೆಟ್ ಗೆ 1,18,043 ರೂ. ಆಗಿದ್ದು, 22 ಕ್ಯಾರೆಟ್ ಗೆ 1,08,127ರೂ. ಆಗಿತ್ತು. ಸೋಮವಾರ ಚಿನ್ನದ ಬೆಲೆಗಳು 24 ಕ್ಯಾರೆಟ್ ಗೆ 1,21,077 ರೂ. ಮತ್ತು 22 ಕ್ಯಾರೆಟ್‌ಗೆ 1,10,907 ರೂ. ಆಗಿತ್ತು.

ಇದನ್ನೂ ಓದಿ: ಕೊಟಕ್ 811 ರಿಂದ 3 ಇನ್ 1 ಸೂಪರ್ ಅಕೌಂಟ್ ಪ್ರಾರಂಭ: ಉಳಿತಾಯ, ವ್ಯಯ, ಸಾಲ ಮತ್ತು ಗಳಿಕೆ ಎಲ್ಲವೂ ಒಂದರಲ್ಲಿ

ವ್ಯಾಪಾರಿಗಳು ನಿಲುವುಗಳನ್ನು ಪರಿಷ್ಕರಿಸಿರುವುದರಿಂದ ಅಮೆರಿಕ ಫೆಡ್ ನೀತಿ ಸಭೆಗೂ ಮುಂಚಿತವಾಗಿಯೇ ಚಿನ್ನದ ಬೆಲೆ ಕುಸಿಯಲಾರಂಭಿಸಿದೆ.

ಚಿನ್ನದ ಬೆಲೆಗಳು ಕುಸಿಯಲು ಪ್ರಾರಂಭಿಸುವ ಮೊದಲು ಅಂದರೆ ಹಿಂದಿನ ವಾರ ಚಿನ್ನದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಧಂತೇರಾಸ್ ಹಬ್ಬದ ದಿನವಾದ ಅಕ್ಟೋಬರ್ 18ರಂದು ಚಿನ್ನದ ಬೆಲೆ 10 ಗ್ರಾಂಗೆ 1,30,000 ರೂ. ಏರಿದ್ದರೂ ಗ್ರಾಹಕರು ಅಪಾರ ಪ್ರಮಾಣದಲ್ಲಿ ಖರೀದಿ ಮಾಡಿದ್ದರು.

ಸಾಮಾನ್ಯವಾಗಿ ಒಮ್ಮೆ ಚಿನ್ನದ ದರ ಗರಿಷ್ಠ ಮಟ್ಟ ತಲುಪಿದ ಬಳಿಕ ಕುಸಿತವಾಗುವುದು ಸಾಮಾನ್ಯ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಹಬ್ಬದ ಋತುವಿನ ಬಳಿಕ ಬೇಡಿಕೆ ಕಡಿಮೆಯಾಗುತ್ತದೆ. ಹೂಡಿಕೆದಾರರು ಅಪಾಯದ ಕುರಿತು ಮರು ಮೌಲ್ಯಮಾಪನ ನಡೆಸಿ ಸುರಕ್ಷಿತ ಎಂದೆನಿಸಿಕೊಳ್ಳುತ್ತಿರುವಾಗಲೇ ಚಿನ್ನದ ದರದಲ್ಲಿ ತಾತ್ಕಾಲಿಕ ಕುಸಿತವಾಗಿದೆ. ಹೀಗಿರುವಾಗ ಕಾಯುವುದು ಈಗ ನಿರ್ಣಾಯಕವಾಗಿರುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಗಳು ಈಗಾಗಲೇ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 10ರಷ್ಟು ಇಳಿಕೆಯಾಗಿದೆ. ಕಳೆದ ಮೂರು ವರ್ಷಗಳ ಆದಾಯದಲ್ಲಿ ಗೋಲ್ಡ್-ಎಲ್‌ಎಂಬಿಎ ಸುಮಾರು ಶೇ. 41 ಸಿಎಜಿಆರ್ ಅನ್ನು ನೀಡಿದೆ. ಇದು ಅದರ ದೀರ್ಘಾವಧಿಯ ಆದಾಯವಾದ ಶೇ. 15ಕ್ಕಿಂತಲೂ ಹೆಚ್ಚು. ಆದ್ದರಿಂದ ಈಗ ಹೂಡಿಕೆದಾರರಿಗೆ ಉತ್ತಮ ಅವಕಾಶವಿದೆ ಎಂದು ಎಪ್ಸಿಲಾನ್‌ಮನಿಯ ಎವಿಪಿ ಇನ್ವೆಸ್ಟ್‌ಮೆಂಟ್ಸ್ ಸಿದ್ಧಾರ್ಥ್ ಅಲೋಕ್ ಹೇಳುತ್ತಾರೆ.

ಇದನ್ನೂ ಓದಿ: Chabahar Port: ಇರಾನ್‌ನ ಚಾಬಹಾರ್ ಬಂದರು ಪ್ರವೇಶಕ್ಕೆ ಭಾರತಕ್ಕೆ ಅಮೆರಿಕದ ನಿರ್ಬಂಧ ಅನ್ವಯಿಸುವುದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಅವರ ಪ್ರಕಾರ ಅಮೆರಿಕ ಈಕ್ವಿಟಿ ಮಾರುಕಟ್ಟೆಯ ಏರಿಕೆ ಮತ್ತು ಯುಎಸ್-ಚೀನಾ ವ್ಯಾಪಾರ ಉದ್ವಿಗ್ನತೆ ಕಡಿಮೆಯಾಗುತ್ತಿರುವುದು ಚಿನ್ನದ ಬೆಲೆ ಇಳಿಕೆಗೆ ಕಾರಣ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಚಿನ್ನದ ದರ 1,15,000– 1,16,000 ರೂ. ವರೆಗೂ ಇಳಿಯಬಹುದು. ಆದರೆ ಶೀಘ್ರದಲ್ಲೇ ಅದು 1,22,000 ರೂ.ಗೆ ಮರಳಿ ಬರಬಹುದು ಎಂದು ಮೀನಾ ಅಭಿಪ್ರಾಯ ಪಟ್ಟಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author