ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 20 June 2026: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದು ಹೆಚ್ಚಾಗಿದ್ದು ಇಷ್ಟು

Gold Silver Price Today: ಚಿನ್ನದ ದರ ಶನಿವಾರ (ಜೂನ್‌ 20) ಮತ್ತೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 20 ರುಪಾಯಿ ಏರಿಕೆಯಾಗಿದ್ದು, 13,390 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 22 ರುಪಾಯಿ ಹೆಚ್ಚಾಗಿದ್ದು, 14,608 ರುಪಾಯಿ ಇದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 20: ಶುಕ್ರವಾರ ಕಡಿಮೆಯಾಗಿದ್ದ ಚಿನ್ನದ ದರ ಶನಿವಾರ (ಜೂನ್‌ 20) ಮತ್ತೆ ಹೆಚ್ಚಾಗಿದೆ (Gold Price Today On 20 June 2026). ಆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತಷ್ಟು ಹೊರೆ ಎದುರಾದಂತಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 20 ರುಪಾಯಿ ಏರಿಕೆಯಾಗಿದ್ದು, 13,390 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 22 ರುಪಾಯಿ ಹೆಚ್ಚಾಗಿದ್ದು, 14,608 ರುಪಾಯಿ ಇದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,07,120 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,33,900 ರುಪಾಯಿ ಹಾಗೂ 100 ಗ್ರಾಂಗೆ 13,39,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,16,864 ರುಪಾಯಿ, 10 ಗ್ರಾಂಗೆ 1,46,080 ರುಪಾಯಿ ಹಾಗೂ 100 ಗ್ರಾಂಗೆ 14,60,800 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,600 14,837
ಮುಂಬೈ 13,390 14,608
ದೆಹಲಿ 13,405 14,623
ಕೋಲ್ಕತಾ 13,390 14,608
ಹೈದರಾಬಾದ್‌ 13,390 14,608

ತಿಂಗಳ ಸಂಬಳ ಪಡೆಯುವವರು ಹೂಡಿಕೆ ಯೋಜನೆ ಮಾಡುವುದು ಹೇಗೆ? ಏನಂತಾರೆ ತಜ್ಞರು ?

ಬೆಳ್ಳಿ ದರ

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,500 ರುಪಾಯಿ ಹಾಗೂ 1 ಕೆಜಿಗೆ 2,50,000 ರುಪಾಯಿ ಕಂಡು ಬಂದಿದೆ.

Ramesh Ballamoole

View all posts by this author