ಬೆಂಗಳೂರು, ಮೇ 1: ಮೇ ಮೊದಲ ದಿನವೇ ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು (ಮೇ 1) ಇಳಿಕೆಯಾಗಿದೆ (Gold Price Today On 1st May 2026). ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 35 ರುಪಾಯಿ ಕಡಿಮೆಯಾಗಿದ್ದು,ಆ ಮೂಲಕ 13,965 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 38 ರುಪಾಯಿ ಅಗ್ಗವಾಗಿದ್ದು, 15,235 ರುಪಾಯಿಗೆ ಬಂದು ತಲುಪಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,720 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,39,650 ರುಪಾಯಿ ಹಾಗೂ 100 ಗ್ರಾಂಗೆ 13,96,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,11,720 ರುಪಾಯಿ, 10 ಗ್ರಾಂಗೆ 1,39,650 ರುಪಾಯಿ ಹಾಗೂ 100 ಗ್ರಾಂಗೆ 13,96,500 ರುಪಾಯಿ ಇದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,050 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,328 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,980 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,250 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,965 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,235 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,050 ರುಪಾಯಿ | 15,328 ರುಪಾಯಿ |
| ಮುಂಬೈ | 13,965 ರುಪಾಯಿ | 15,235 ರುಪಾಯಿ |
| ದೆಹಲಿ | 13,980 ರುಪಾಯಿ | 15,250 ರುಪಾಯಿ |
| ಕೋಲ್ಕತ್ತಾ | 13,965 ರುಪಾಯಿ | 15,235 ರುಪಾಯಿ |
| ಹೈದರಾಬಾದ್ | 13,965 ರುಪಾಯಿ | 15,235 ರುಪಾಯಿ |
ತಮನ್ನಾ ಭಾಟಿಯಾ ಆಯ್ಕೆ ವಿವಾದದ ನಡುವೆಯೂ 2,016 ಕೋಟಿ ರುಪಾಯಿ ವಹಿವಾಟು ನಡೆಸಿದ ಮೈಸೂರು ಸ್ಯಾಂಡಲ್ ಸೋಪ್
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರುಪಾಯಿ ಏರಿಕೆಯಾಗಿದ್ದು, 255 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,550 ರುಪಾಯಿ ಹಾಗೂ 1 ಕೆಜಿಗೆ 2,55,000 ರುಪಾಯಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.