ಬೆಂಗಳೂರು, ಫೆ. 28: ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ದರ ಇಂದು ಕೂಡ ಗಗನಮುಖಿಯಾಗಿದೆಯಾಗಿದೆ. ಶನಿವಾರ (ಫೆಬ್ರವರಿ 28) ಆಭರಣಪ್ರಿಯರ ನಿದ್ದೆಗೆಡಿಸಿ ಹಳದಿಲೋಹದ ಬೆಲೆ ಭಾರಿ ಹೆಚ್ಚಳ ಕಂಡಿದೆ (Gold Price Today On 28th February 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 290 ರುಪಾಯಿ ಏರಿಕೆಯಾಗಿ 15,100 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 316 ಅಧಿಕವಾಗಿದ್ದು, 16,473 ರುಪಾಯಿ ಇದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,20,800 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,51,000 ರುಪಾಯಿ ಹಾಗೂ 100 ಗ್ರಾಂಗೆ ನೀವು 15,10,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,31,784 ರುಪಾಯಿ ಹಾಗೂ 10 ಗ್ರಾಂಗೆ ನೀವು 1,64,730 ರುಪಾಯಿ ಹಾಗೂ 100 ಗ್ರಾಂಗೆ ನೀವು 16,47,300 ರುಪಾಯಿ ನೀಡಬೇಕಾಗುತ್ತದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,200 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,582 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,115 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,488 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,100 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,473 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 15,200 ರುಪಾಯಿ | 16,582 ರುಪಾಯಿ |
| ಮುಂಬೈ | 15,100 ರುಪಾಯಿ | 16,473 ರುಪಾಯಿ |
| ದೆಹಲಿ | 15,115 ರುಪಾಯಿ | 16,488 ರುಪಾಯಿ |
| ಕೋಲ್ಕತ್ತಾ | 15,100 ರುಪಾಯಿ | 16,473 ರುಪಾಯಿ |
| ಹೈದರಾಬಾದ್ | 15,100 ರುಪಾಯಿ | 16,473 ರುಪಾಯಿ |
ಪರಿಷ್ಕರಣೆ ಬಳಿಕ ಜಿಡಿಪಿ ಇಳಿದರೂ, ನಿರೀಕ್ಷೆ ಮೀರಿದ ಶೇಕಡಾ 7.8ರ ಪ್ರಗತಿ
ಬೆಳ್ಳಿ ದರ
ಬೆಳ್ಳಿ ದರದಲ್ಲಿಯೂ ಇಂದು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 10 ರುಪಾಯಿ ಹೆಚ್ಚಾಗಿದ್ದು, 295 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 2,950 ರುಪಾಯಿ ಹಾಗೂ 1 ಕೆಜಿಗೆ 2,95,000 ರುಪಾಯಿ ಇದೆ.