ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಮಾಲೀಕರಿಗೆ ಗುಡ್ ನ್ಯೂಸ್: 9 ದಿನಗಳ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಮೇ 23ರಿಂದ ಆರಂಭ

Legends Care Camp: ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ದೇಶಾದ್ಯಂತ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಎಂಬ ವಿಶೇಷ ಸೇವಾ ಶಿಬಿರವನ್ನು ಆರಂಭಿಸಿದೆ. ಮೇ 23 ರಿಂದ ಮೇ 31, 2026ರವರೆಗೆ ಒಟ್ಟು 9 ದಿನಗಳ ಕಾಲ ಈ ಸರ್ವಿಸ್ ಕ್ಯಾಂಪ್ ನಡೆಯಲಿದೆ. ದೇಶದ ಎಲ್ಲಾ ಅಧಿಕೃತ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಶೋರೂಮ್‌ಗಳಲ್ಲಿ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯಿಂದ ಮೇ 23ರಿಂದ 'ಲೆಜೆಂಡ್ಸ್ ಕೇರ್ ಕ್ಯಾಂಪ್' ವಿಶೇಷ ಸೇವಾ ಶಿಬಿರ.

ಬೆಂಗಳೂರು, ಮೇ 22: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಬೈಕ್‌ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು 'ಕ್ಲಾಸಿಕ್ ಲೆಜೆಂಡ್ಸ್' ಕಂಪನಿಯು ದೇಶಾದ್ಯಂತ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಎಂಬ (Legends Care Camp) ವಿಶೇಷ ಸೇವಾ ಶಿಬಿರವನ್ನು ಆರಂಭಿಸಿದೆ. ಮೇ 23 ರಿಂದ ಮೇ 31, 2026ರವರೆಗೆ ಒಟ್ಟು 9 ದಿನಗಳ ಕಾಲ ಈ ಸರ್ವಿಸ್ ಕ್ಯಾಂಪ್ ನಡೆಯಲಿದೆ. ದೇಶದ ಎಲ್ಲಾ ಅಧಿಕೃತ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಶೋರೂಮ್‌ಗಳಲ್ಲಿ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

ಬೈಕ್‌ನ 72 ಅಂಶಗಳ ಉಚಿತ ತಪಾಸಣೆ!

ಸಾಮಾನ್ಯವಾಗಿ ಸರ್ವಿಸ್ ಸೆಂಟರ್‌ಗಳಿಗೆ ಹೋದರೆ ಬೈಕ್‌ನ ಮೇಲ್ನೋಟದ ತಪಾಸಣೆ ಮಾಡಲಾಗುತ್ತದೆ. ಆದರೆ ಈ ಕ್ಯಾಂಪ್‌ನ ವಿಶೇಷತೆ ಎಂದರೆ, ಕಂಪನಿಯು ತರಬೇತಿ ನೀಡಿದ ಪರಿಣತ ತಾಂತ್ರಿಕ ಸಿಬ್ಬಂದಿ ಬೈಕ್‌ನ ಪ್ರತಿಯೊಂದು ಭಾಗವನ್ನೂ ಸೂಕ್ಷ್ಮವಾಗಿ ಪರೀಕ್ಷಿಸಲಿದ್ದಾರೆ.

ಎಂಜಿನ್ ಕಾರ್ಯಕ್ಷಮತೆ, ಬ್ರೇಕ್ ಸಿಸ್ಟಮ್, ಕ್ಲಚ್, ಎಲೆಕ್ಟ್ರಿಕಲ್ ವೈರಿಂಗ್, ಟೈರ್‌ಗಳು, ಸಸ್ಪೆನ್ಷನ್ ಮತ್ತು ಬ್ಯಾಟರಿ ಕಂಡೀಷನ್ ಸೇರಿದಂತೆ ಒಟ್ಟು 72 ಪ್ರಮುಖ ಅಂಶಗಳನ್ನು ಕೇರ್‌ ಕ್ಯಾಂಪ್‌ನಲ್ಲಿ ತಪಾಸಣೆ ಮಾಡಲಾಗುತ್ತದೆ. ಇದು ಬೈಕ್‌ನ ಆಯಸ್ಸನ್ನು ಹೆಚ್ಚಿಸುವುದರ ಜತೆಗೆ, ಸವಾರರಿಗೆ ಸುರಕ್ಷಿತ ಪ್ರಯಾಣದ ಖಾತರಿ ನೀಡಲಿದೆ.

ಗ್ರಾಹಕರಿಗೆ ಏನೆಲ್ಲಾ ಲಾಭ?

ಈ 9 ದಿನಗಳ ಅಭಿಯಾನದ ಅವಧಿಯಲ್ಲಿ ಶೋರೂಮ್‌ಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಹಲವು ಪ್ರಯೋಜನಗಳಿವೆ. ಸರ್ವಿಸ್‌ಗೆ ತಗುಲುವ ಕಾರ್ಮಿಕರ ಶುಲ್ಕ, ಬಿಡಿಭಾಗಗಳು ಹಾಗೂ ಅಸಲಿ ಬಿಡಿಭಾಗಗಳ ಮೇಲೆ ವಿಶೇಷ ರಿಯಾಯಿತಿ ಸಿಗಲಿದೆ. ಜತೆಗೆ ಮುಂಗಾರು ಆರಂಭವಾಗುತ್ತಿರುವುದರಿಂದ ಮಳೆಗಾಲದಲ್ಲಿ ಬೈಕ್ ಅನ್ನು ಹೇಗೆ ನಿರ್ವಹಣೆ ಮಾಡಬೇಕು, ಜಾರಿಬೀಳದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ತಜ್ಞರು ಸಲಹೆ ನೀಡಲಿದ್ದಾರೆ.

ಈ ಕ್ಯಾಂಪ್‌ನಲ್ಲಿ ಕೇವಲ ಬೈಕ್ ಸರ್ವಿಸ್ ಮಾತ್ರವಲ್ಲದೆ, ಹೊಸ ಬೈಕ್ ಖರೀದಿಸುವವರಿಗೆ ಆಕರ್ಷಕ ಫೈನಾನ್ಸ್ ಸೌಲಭ್ಯ ಹಾಗೂ ಹಳೆಯ ಬೈಕ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಈ ಸೇವಾ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕ್ಲಾಸಿಕ್ ಲೆಜೆಂಡ್ಸ್‌ನ ರಾಷ್ಟ್ರೀಯ ವ್ಯವಹಾರ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಜಯಪ್ರದೀಪ್ ವಾಸುದೇವನ್, ʼನಮ್ಮ ಕಂಪನಿಗೆ ಗ್ರಾಹಕರ ತೃಪ್ತಿಯೇ ಮೊದಲ ಆದ್ಯತೆ. 'ಲೆಜೆಂಡ್ಸ್ ಕೇರ್ ಕ್ಯಾಂಪ್' ಮೂಲಕ ನಮ್ಮ ಗ್ರಾಹಕರಿಗೆ ಉತ್ತಮ ಸರ್ವಿಸ್ ನೀಡುವುದು ನಮ್ಮ ಗುರಿ. ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳು ತಮ್ಮ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿವೆ. ನಮ್ಮ ಬೈಕ್‌ಗಳು ಯಾವತ್ತಿಗೂ ಅದೇ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶʼ ಎಂದು ತಿಳಿಸಿದರು.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಚಾಲೆಂಜರ್ 2026' ಭರ್ಜರಿ ತಾಲೀಮು

ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್ ಹೊಂದಿರುವ ಗ್ರಾಹಕರು ತಕ್ಷಣವೇ ತಮ್ಮ ಹತ್ತಿರದ ಅಧಿಕೃತ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡಿ ಈ 9 ದಿನಗಳ ಸರ್ವಿಸ್ ಕ್ಯಾಂಪ್‌ನ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.