RBI: ಅಗ್ಗವಾಗಲಿದೆ ಗೃಹ, ವಾಹನ ಸಾಲ: RBI ಬಂಪರ್ ಗಿಫ್ಟ್!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ವರ್ಷಗಳ ಬಳಿಕ ಮೊದಲ ಬಾರಿಗೆ ತನ್ನ ರೆಪೊ ದರವನ್ನು 6.5%ರಿಂದ 6.25% ಕ್ಕೆ ಇಳಿಸಿದೆ. ಇದರ ಪರಿಣಾಮ ನಿಮ್ಮ ಹೋಮ್ ಲೋನ್, ವಾಹನ ಸಾಲದ ಬಡ್ಡಿ ದರಗಳು ಇಳಿಕೆಯಾಗಲಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ದಿಮೆಗಳನ್ನು ಮಾಡುವವರಿಗೆ ಕೂಡ ಸಾಲದ ಬಡ್ಡಿ ದರ ತಗ್ಗಲಿದೆ.
![RBI (1)](https://cdn-vishwavani-prod.hindverse.com/media/images/RBI_1.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ವರ್ಷಗಳ ಬಳಿಕ ಮೊದಲ ಬಾರಿಗೆ ತನ್ನ ರೆಪೊ ದರವನ್ನು 6.5%ರಿಂದ 6.25% ಕ್ಕೆ ಇಳಿಸಿದೆ. ಇದರ ಪರಿಣಾಮ ನಿಮ್ಮ ಹೋಮ್ ಲೋನ್, ವಾಹನ ಸಾಲದ ಬಡ್ಡಿ ದರಗಳು ಇಳಿಕೆಯಾಗಲಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ದಿಮೆಗಳನ್ನು ಮಾಡುವವರಿಗೆ ಕೂಡ ಸಾಲದ ಬಡ್ಡಿ ದರ ತಗ್ಗಲಿದೆ. ಕೇಂದ್ರ ಸರಕಾರ 2025ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆಗೆ ಆದಾಯ ತೆರಿಗೆಯಲ್ಲಿ 12 ಲಕ್ಷ ರುಪಾಯಿ ತನಕ ಟ್ಯಾಕ್ಸ್ ರಿಲೀಫ್ ನೀಡಿದ ಬಳಿಕ ಇದೀಗ ಆರ್‌ಬಿಐ ಕೂಡ ಬಡ್ಡಿ ದರ ಇಳಿಸಿ ಎರಡನೇ ರಿಲೀಫ್ ಕೊಟ್ಟಿದೆ. ಇದರ ಮತ್ತಷ್ಟು ವಿವರಗಳನ್ನು ನೋಡೋಣ.
ಆರ್‌ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೊ ರೇಟ್ ಅನ್ನು ಈಗಿನ 6.50%ರಿಂದ 6.25% ಕ್ಕೆ ಇಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಕ್ಯಾಶ್ ರಿಸರ್ವ್ ರೇಶಿಯೊವನ್ನು ಕೂಡ 4%ಕ್ಕೆ ಇಳಿಸಿದ್ದಾರೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ಹೆಚ್ಚಿನ ಹಣ ಸಿಗಲಿದ್ದು, ಸಾಲದ ಬಡ್ಡಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ. ಆರ್‌ಬಿಐ 2024-25ರ ಸಾಲಿಗೆ 7.2% ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ವಿಶೇಷವೇನೆಂದರೆ ಈ ವರ್ಷ ಹಣದುಬ್ಬರ ಅಥವಾ ಬೆಲೆ ಏರಿಕೆ ಇಳಿಯಲಿದೆ ಎಂದು ಗುಡ್ ನ್ಯೂಸ್ ನೀಡಿದೆ.
ಹಣದುಬ್ಬರವು ಪ್ರಸಕ್ತ ಸಾಲಿನಲ್ಲಿ ಸರಾಸರಿ 4.2%ಕ್ಕೆ ಇಳಿಯಲಿದೆ ಎಂದು ತಿಳಿಸಿದೆ. ಹಾಗಾದ್ರೆ ಏನಿದು ರೆಪೊ ದರ? ಅಂತ ನೋಡೋಣ.
ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆಯುವ ಸಾಲಕ್ಕೆ ಆರ್‌ಬಿಐ ವಿಧಿಸುವ ಬಡ್ಡಿಯೇ ರೆಪೊ ದರ. ಈ ರೆಪೊ ದರ ಇಳಿಕೆಯಾದಾಗ, ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಸಿಗುವ ಫಂಡ್‌ಗೆ ತಗಲುವ ಬಡ್ಡಿಯ ಖರ್ಚು ಕಡಿಮೆಯಾಗುತ್ತದೆ. ಹೀಗಾಗಿ ಹೋಮ್ ಲೋನ್ ಸೇರಿದಂತೆ ನಾನಾ ಸಾಲಗಳ ಬಡ್ಡಿ ದರ ಇಳಿಯುತ್ತದೆ. ಜನರಿಗೆ ಅನುಕೂಲವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಚುರುಕಾಗುತ್ತದೆ.
ಈ ಸುದ್ದಿಯನ್ನೂ ಓದಿ:Interest Rate: ಫೆಬ್ರವರಿಯಲ್ಲಿ ನಿಮ್ಮ ಗೃಹ ಸಾಲ ಬಡ್ಡಿ ಇಳಿಕೆ? ಆರ್‌ಬಿಐನಿಂದ ಸಿಆರ್‌ಆರ್ ಕಟ್
ಹಾಗಾದರೆ, ರೆಪೊ ರೇಟ್ ಕಡಿತಕ್ಕೆ ಪೂರಕವಾಗಿರುವ ಸನ್ನಿವೇಶ ಏನು?
ಕೇಂದ್ರ ಸರಕಾರ 2025ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ತೆರಿಗೆದಾರರಿಗೆ 12 ಲಕ್ಷ ರುಪಾಯಿ ತನಕದ ಆದಾಯಕ್ಕೆ ತೆರಿಗೆಯನ್ನು ಮುಕ್ತಗೊಳಿಸಿದ್ದು, ಜನರ ಕೈಯಲ್ಲೊ ದುಡ್ಡು ಉಳಿಯುವಂತೆ ಮಾಡಿದೆ. ಇದರಿಂದ ಜನರು ಖರ್ಚು ಮಾಡುತ್ತಾರೆ ಅಥವಾ ಹಣವನ್ನು ಎಲ್ಲೋ ಇನ್ವೆಸ್ಟ್ ಮಾಡ್ತಾರೆ. ಹೀಗೆ ವ್ಯವಸ್ಥೆಯಲ್ಲಿ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಕೊಡು-ಕೊಳ್ಳುವಿಕೆಯ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಇದಕ್ಕೆ ಪೂರಕವಾಗಿ ಆರ್‌ಬಿಐ ತನ್ನ ರೆಪೊ ದರವನ್ನು ಕಡಿತಗೊಳಿಸುವ ನಿರೀಕ್ಷೆ ಇದೆ.
ಅಮೆರಿಕದ ಟ್ರೇಡ್ ವಾರ್ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆಯ ಅನಿಶ್ಚಿತತೆ ಉಂಟಾಗಿದೆ. ಹೀಗಾಗಿಯೂ ಆರ್‌ಬಿಐ, ತನ್ನ ಜನರ ಹಿತ ದೃಷ್ಟಿಯಿಂದ ರೆಪೊ ದರ ಕಡಿತಕ್ಕೆ ಮುಂದಾಗಬಹುದು. ಒಟ್ಟಾರೆಯಾಗಿ, ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲು ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸುತ್ತದೆ. ಕ್ಯಾಶ್ ರಿಸರ್ವ್ ರೇಶಿಯೊ ಎಂದರೆ ಬ್ಯಾಂಕ್‌ಗಳು ತಮ್ಮ ವಹಿವಾಟು ನಡೆಸಲು ಆರ್ ಬಿಐನಲ್ಲಿ ಇಡಬೇಕಾದ ಠೇವಣಿ. ಇದನ್ನೂ ಕಡಿಮೆ ಮಾಡಿರುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆಗೆ ಫಂಡ್ ಹೆಚ್ಚು ಸಂಗ್ರಹವಾಗುತ್ತದೆ. ಲಿಕ್ವಿಡಿಟಿ ಹೆಚ್ಚುತ್ತದೆ. ಇದರಿಂದ ಸಾಲದ ಬಡ್ಡಿ ದರ ತಗ್ಗಲಿದೆ