ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wealth Creation Guide: ನಿಮ್ಮ ಹಣ ಡಬಲ್‌ ಮಾಡುತ್ತೆ ರೂಲ್‌ 72; ಏನಿದು ಫಾರ್ಮ್ಯುಲಾ? ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ಸಂಪೂರ್ಣ ವಿವರ

Rule of 72: ಚಕ್ರಬಡ್ಡಿಯಲ್ಲಿ ನಿಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗುತ್ತದೆ ಎಂಬುದನ್ನು ತಿಳಿಯಲು ತಜ್ಞರು ಶಿಫಾರಸು ಮಾಡುವ ಸೂತ್ರವೇ 72. ಈ ಫಾರ್ಮ್ಯುಲಾದಿಂದ ಹೂಡಿಕೆದಾರರು ತಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗಬಲ್ಲುದು ಎಂಬುದನ್ನು ತಿಳಿಯಬಹುದು. ಈ ಬಗ್ಗೆ ಉದಾಹರಣೆ ಸಮೇತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ದೆಹಲಿ, ನ. 21: ಚಕ್ರಬಡ್ಡಿ ಅಥವಾ ಕಂಪೌಂಡಿಂಗ್‌ (Compounding) ಇಂಟರೆಸ್ಟ್‌ ಅನ್ನು ಜಗತ್ತಿನ 8ನೇ ಅದ್ಭುತ ಎಂದು ಖ್ಯಾತ ವಿಜ್ಞಾನಿ ಅಲ್ಬರ್ಟ್‌ ಐನ್‌ಸ್ಟೀನ್‌ ಕರೆದಿದ್ದರು. ಈ ಚಕ್ರಬಡ್ಡಿ ಇದ್ದಾಗ ನಿಮ್ಮ ಹೂಡಿಕೆ ಬೇಗನೆ ಇಮ್ಮಡಿಯಾಗುತ್ತದೆ. ಹೀಗಾಗಿ ಹೂಡಿಕೆ ಎಷ್ಟು ವೇಗವಾಗಿ ಇಮ್ಮಡಿ ಆಗುತ್ತದೆ ಎಂಬ ಕುತೂಹಲ ಸಾಮಾನ್ಯ. ಇದನ್ನು ಸುಲಭವಾಗಿ ಪತ್ತೆ ಹಚ್ಚಲು ಹಣಕಾಸು ವಲಯದಲ್ಲಿ 72ರ ನಿಯಮ (Rule of 72) ಇದೆ. ಏನಿದು? ಇಲ್ಲಿದೆ ವಿವರ.

ಇದೊಂದು ಶಾರ್ಟ್‌ ಕಟ್‌ ಲೆಕ್ಕಾಚಾರ ಎನ್ನಬಹುದು. ಹೂಡಿಕೆದಾರರಿಗೆ ಸಂಪತ್ತಿನ ಸೃಷ್ಟಿ ಎಂದರೆ ಮುಂದಿನ ದೊಡ್ಡ ಅವಕಾಶವನ್ನು ಬೆನ್ನಟ್ಟುವುದು ಮಾತ್ರವಲ್ಲ, ಸಮಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಚಕ್ರಬಡ್ಡಿಯ ಮಹತ್ವವನ್ನು ತಿಳಿಯುವುದು. ಇಲ್ಲಿ ನಿಮ್ಮ ಅಸಲು ಮಾತ್ರವಲ್ಲದೆ, ಬಡ್ಡಿ ಕೂಡ ಬಡ್ಡಿಯನ್ನು ಸಂಪಾದಿಸುತ್ತದೆ. ಆದ್ದರಿಂದ ವೇಗವಾಗಿ ಬೆಳೆದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ. ಸರಳ ಬಡ್ಡಿಯಲ್ಲಿ ಬೆಳವಣಿಗೆ ಅತಿ ನಿಧಾನ.

ರೂಲ್‌ 72 ಕುರಿತಾದ ವಿವರ:



ಚಕ್ರಬಡ್ಡಿಯಲ್ಲಿ ನಿಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗುತ್ತೆ ಎಂಬುದನ್ನು ತಿಳಿಯಲು ತಜ್ಞರು ಶಿಫಾರಸು ಮಾಡುವ ಸೂತ್ರವೇ 72. ಈ ಫಾರ್ಮ್ಯುಲಾದಿಂದ ಹೂಡಿಕೆದಾರರು ತಮ್ಮ ಹೂಡಿಕೆ ಎಷ್ಟು ಬೇಗ ಇಮ್ಮಡಿಯಾಗಬಲ್ಲುದು ಎಂಬುದನ್ನು ತಿಳಿಯಬಹುದು. ಇದೊಂದೇ ನಿಯಮ ನಿಮ್ಮನ್ನು ಉಳಿತಾಯದಿಂದ ಹೂಡಿಕೆದಾರರಾಗಿ ಬದಲಿಸಬಲ್ಲುದು.

ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಸ್ಥಗಿತಗೊಳಿಸಲಿದೆಯೇ?

ಚಾರ್ಟರ್ಡ್‌ ಅಕೌಂಟೆಂಟ್‌ ಮಾಧವ್‌ ನಾಯಕ್‌ ಅವರ ಪ್ರಕಾರ ಕಂಪೌಂಡಿಂಗ್‌ ಇಂಟರೆಸ್ಟ್‌ ಬಗ್ಗೆ ತಿಳಿಯಲು 72ರ ನಿಯಮ ಅತ್ಯುತ್ತಮ ವಿಧಾನ. ಇದು ಅತ್ಯಂತ ಸರಳ ಕೂಡ. ಅದು ಹೀಗಿದೆ:

72 ÷ ವಾರ್ಷಿಕ ಆದಾಯ (%) = ನಿಮ್ಮ ಹೂಡಿಕೆ ಡಬಲ್‌ ಆಗಲು ತಗಲುವ ವರ್ಷಗಳು. ಉದಾಹರಣೆಗೆ ನಿಮ್ಮ ಹೂಡಿಕೆಗೆ 8% ಬಡ್ಡಿ ಇದೆ ಎಂದು ಇಟ್ಟುಕೊಳ್ಳಿ. 72 ಅನ್ನು 8ರಿಂದ ಭಾಗಿಸಿದರೆ 9 ಸಿಗುತ್ತದೆ. ಅಂದರೆ 9 ವರ್ಷದಲ್ಲಿ ನಿಮ್ಮ ಹೂಡಿಕೆ ಡಬಲ್‌ ಆಗುತ್ತದೆ.

ಈ ರೀತಿಯ ಲೆಕ್ಕದಲ್ಲಿ 2% ಬಡ್ಡಿ ಇದ್ದರೆ ನಿಮ್ಮ ಹೂಡಿಕೆ ಇಮ್ಮಡಿಯಾಗಲು 36 ವರ್ಷಗಳು ಬೇಕಾಗುತ್ತದೆ. 4 % ಬಡ್ಡಿ ಇದ್ದರೆ 18 ವರ್ಷ ಬೇಕು. 8% ಬಡ್ಡಿ ಇದ್ದರೆ 9 ವರ್ಷಗಳು ಬೇಕು. 10% ಬಡ್ಡಿ ಇದ್ದರೆ 7.2 ವರ್ಷ ಅಗತ್ಯ. 12% ಬಡ್ಡಿ ಇದ್ದರೆ 6 ವರ್ಷಗಳಲ್ಲಿ ಇಮ್ಮಡಿಯಾಗುತ್ತದೆ. ಇಲ್ಲಿ ನೀವು 8% ಮತ್ತು 12% ಬಡ್ಡಿಯ ನಡುವೆ ರಿಟರ್ನ್‌ನಲ್ಲಿ ಎಷ್ಟು ಗಣನೀಯವಾದ ವ್ಯತ್ಯಾಸ ಉಂಟಾಗುತ್ತದೆ ಎಂಬುದನ್ನು ಗಮನಿಸಬಹುದು.

ಮದುವೆ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?

ಕೊನೆಯದಾಗಿ ಕಂಪೌಂಡಿಂಗ್‌ ಇಂಟರೆಸ್ಟ್‌ ಎಂದರೆ ಕೇವಲ ಹಣದ ವಿಚಾರವಲ್ಲ. ಇಲ್ಲಿ ಶಿಸ್ತುಬದ್ಧ ಹೂಡಿಕೆ ಮತ್ತು ಅಗಾಧವಾದ ತಾಳ್ಮೆಯ ಅಗತ್ಯ ಇದೆ. ಸಮಯದ ಬೆಲೆಯನ್ನು ಇಲ್ಲಿ ಕೊಡುವುದು ಅಗತ್ಯ. ಬುದ್ಧಿವಂತಿಕೆಯಿಂದ ಇಲ್ಲಿ ಹೂಡಿಕೆ ಮಾಡಬೇಕು. ಭಾವುಕತೆಯಿಂದ ಅಲ್ಲ. ದೀರ್ಘಾವಧಿಯ ಮತ್ತು ಚಕ್ರಬಡ್ಡಿ ಇರುವ ಹೂಡಿಕೆಯಲ್ಲಿ ಒಂದು ಪರ್ಸೆಂಟ್‌ ಬಡ್ಡಿ ಹೆಚ್ಚಳವಾದರೂ, ದೊಡ್ಡ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಆದರೆ ಅದಕ್ಕಗಿ ತಾಳ್ಮೆಯಿಂದ ಹೂಡಿಕೆ ಮುಂದುವರಿಸುವ ಶಿಸ್ತು ಅಗತ್ಯ.