ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Personal Loan: ಆಧಾರ್‌ ಕಾರ್ಡ್‌ ನೆರವಿನಿಂದ ಸುಲಭವಾಗಿ 10 ಸಾವಿರ ರೂ. ಸಾಲ ಪಡೆಯಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಸದ್ಯ ದುಬಾರಿ ಜೀವನ ವಿಧಾನಗಳಿಂದ ಸಾಮಾನ್ಯ ವರ್ಗದವರು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಕೆಲವೊಮ್ಮೆ ಸುದೀರ್ಘ ಪ್ರಕ್ರಿಯೆಯಿಂದಾಗಿ ತ್ವರಿತವಾಗಿ ಸಾಲ ಮಂಜೂರಾಗುವುದಿಲ್ಲ. ಆದರೆ ಚಿಂತಿಸಬೇಕಾಗಿಲ್ಲ. ಆಧಾರ್‌ ಕಾರ್ಡ್‌ ಇದ್ದರೆ ಸಾಕು 10 ಸಾವಿರ ರೂ.ವರೆಗೆ ಸಣ್ಣ ಮೊತ್ತದ ಸಾಲ ಪಡೆಯಬಹುದು. ಅದು ಹೇಗೆ ಎನ್ನುವ ವಿವರಿಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚ ದುಬಾರಿಯಾಗುತ್ತಿದ್ದು, ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ ಮನೆ ನಿರ್ಮಾಣ / ಖರೀದಿ, ವಾಹನ ಖರೀದಿ, ಶಿಕ್ಷಣ, ಕೃಷಿ ಅಭಿವೃದ್ಧಿ ಮುಂತಾದ ಅಗತ್ಯಗಳಿಗೆ ಸಾಮಾನ್ಯ ವರ್ಗದವರು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಪರ್ಸನಲ್‌ ಲೋನ್‌, ಹೋಮ್‌ ಲೋನ್‌, ಎಜ್ಯುಕೇಷನ್‌ ಲೋನ್‌ ಹೀಗೆ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಸಾಲ ಲಭ್ಯ. ಆದರೆ ಕೆಲವೊಮ್ಮೆ ಸಾಲ ಮಂಜೂರು ಪ್ರಕ್ರಿಯೆ ದೀರ್ಘವಾಗಿರುತ್ತದೆ. ಇದರಿಂದ ತಕ್ಷಣಕ್ಕೆ ಹಣ ಲಭಿಸದೆ ಕಿರಿಕಿರಿ ಉಂಟಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೆಲವರು ಅತಿ ಹೆಚ್ಚು ಬಡ್ಡಿಗೆ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯಲು ಮುಂದಾಗುತ್ತಾರೆ. ಆದರೆ ನಿಮಗೆ ತಿಳಿದರಿ ಆಧಾರ್‌ ಕಾರ್ಡ್‌ (Aadhaar Card) ಇದ್ದರೆ ಸಾಕು ತ್ವರಿತವಾಗಿ 10 ಸಾವಿರ ರೂ.ವರೆಗೆ ವೈಯಕ್ತಿಕ ಸಾಲ (Personal Loan) ಪಡೆಯಬಹುದು.

ಹೌದು, ಆಧಾರ್‌ನ ಆಧಾರದಲ್ಲಿ ಕಡಿಮೆ ಮೊತ್ತದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸುಲಭ ವಿಧಾನ ಎನಿಸಿಕೊಂಡಿದೆ. ಇದು ದೀರ್ಘ ಪ್ರಕ್ರಿಯೆಯಿಂದ ಮುಕ್ತಿ ನೀಡುತ್ತದೆ. ಈ ವಿಧಾನದಲ್ಲಿ ಸಾಲ ಮಂಜೂರಾತಿಗೆ ಕನಿಷ್ಠ ದಾಖಲೆ ಇದ್ದರೆ ಸಾಕು. ಇದು ನಿಮ್ಮ ಆಧಾರ್ ಕಾರ್ಡ್‌ ಅನ್ನು ಪ್ರಾಥಮಿಕ ಪರಿಶೀಲನಾ ದಾಖಲೆಯಾಗಿ ಬಳಸುವ ವೈಯಕ್ತಿಕ ಸಾಲದ ವಿಧಾನ. ಅಲ್ಲದೆ ದಾಖಲೆಗಳನ್ನು ಹೊಂದಿಸುವ ನಿಮ್ಮ ಸಮಯವನ್ನು ಉಳಿಸುತ್ತದೆ. ಈಗ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿ (Non-Banking Financial Company) ಮತ್ತು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಸರಳ ಅರ್ಹತಾ ಮಾನದಂಡಗಳು ಮತ್ತು ಕನಿಷ್ಠ ದಾಖಲಾತಿಗಳೊಂದಿಗೆ ಸಣ್ಣ ಪ್ರಮಾಣದ ಸಾಲ ನೀಡುತ್ತವೆ.

ಈ ಸುದ್ದಿಯನ್ನೂ ಓದಿ: Money Tips: ಸಾಲ ಮಾಡಿಯೂ ನಿಶ್ಚಿಂತೆಯಿಂದ ಇರಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಸರಳ ವಿಧಾನ

ಆಧಾರ್ ಆಧಾರಿತ ಸಾಲಗಳು ಆನ್‌ಲೈನ್ ಪರಿಶೀಲನೆಯ ಮೂಲಕ ತ್ವರಿತವಾಗಿ ಅನುಮೋದನೆಯಾಗುತ್ತವೆ. ಗುರುತು, ವಿಳಾಸ ಮತ್ತು ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಯ ನಿರ್ವಹಿಸುವುದರಿಂದ ಕಡಿಮೆ ದಾಖಲೆಗಳು ಸಾಕಾಗುತ್ತವೆ. ಅರ್ಜಿಗಳನ್ನು ಮೊಬೈಲ್ ಅಪ್ಲಿಕೇಶನ್‌ ಅಥವಾ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಸಲ್ಲಿಸಬಹುದು.

ಅರ್ಹತೆ

10 ಸಾವಿರ ರೂ. ಸಾಲ ಪಡೆಯಲು ಅಗತ್ಯವಾದ ಅರ್ಹತೆಗಳೇನು ಎನ್ನವ ವಿವರ ಇಲ್ಲಿದೆ:

  • ವಯಸ್ಸು: ಸಾಲ ನೀಡುವ ಸಂಸ್ಥೆಗಳಿಗೆ ಅನುಗುಣವಾಗಿ 21ರಿಂದ 55 ವರ್ಷ ಅಥವಾ 18-60 ವರ್ಷ.
  • ಮಾಸಿಕ ಸಂಬಳ: ಸಾಲ ನೀಡುವ ಸಂಸ್ಥೆಗಳಿಗೆ ಅನುಗುಣವಾಗಿ 12,000 ರೂ. ಅಥವಾ 15,000 ರೂ. ಮಾಸಿಕ ವೇತನ ಹೊಂದಿರಬೇಕು.
  • ಕ್ರೆಡಿಟ್‌ ಸ್ಕೋರ್:‌ ಕೆಲವು ಸಂಸ್ಥೆಗಳು 700 ಅಥವಾ ಅದಕ್ಕಿಂತ ಹೆಚ್ಚು ಕೇಳಿದರೆ ಇನ್ನು ಕೆಲವು ಸಂಸ್ಥೆಗಳಿಗೆ 650 ಸ್ಕೋರ್‌ ಇದ್ದರೆ ಸಾಕಾಗುತ್ತದೆ.
  • ಉದ್ಯೋಗದ ವಿಧ: ವೇತನ ಹೊಂದಿರುವ ಉದ್ಯೋದಲ್ಲಿರುವವರು ಮತ್ತು ಸ್ವದ್ಯೋಗ ಮಾಡುತ್ತಿರುವವರೂ ಅರ್ಹರು.
  • ಕಾರ್ಯಾನುಭವ: ಕನಿಷ್ಠ 1 ವರ್ಷ.

ಅರ್ಜಿ ಸಲ್ಲಿಸುವ ವಿಧಾನ

  • ಆಧಾರ್ ಕಾರ್ಡ್‌ಗಳ ಮೇಲೆ ರೂ. 10,000 ರೂ. ಸಾಲವನ್ನು ನೀಡುವ NoBroker InstaCash ಅಥವಾ Credmudraನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಆಯ್ಕೆ ಮಾಡಿ.
  • ಈ ಸಾಲದಾತ ಸಂಸ್ಥೆಗಳ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್‌ಗೆ ತೆರಳಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಮತ್ತು ಕೆವೈಸಿ ಪೂರ್ಣಗೊಳಿಸಿ.
  • ಬಳಿಕ ನಿಮ್ಮ ಅರ್ಜಿ ಸಲ್ಲಿಸಿ.
  • ಒಂದುವೇಳೆ ನೀವು ಸಾಲ ಪಡೆಯಲು ಅರ್ಹರಾಗಿದ್ದಲ್ಲಿ 2-3 ದಿನಗಳಲ್ಲಿ ಹಣ ನಿಮ್ಮ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತದೆ.

ಅಗತ್ಯ ದಾಖಲೆಗಳು

  • ಆಧಾರ್‌ ಕಾರ್ಡ್‌
  • ಪ್ಯಾನ್‌ ಕಾರ್ಡ್‌
  • ಸ್ಯಾಲರಿ ಸ್ಲಿಪ್‌
  • ಬ್ಯಾಂಕ್‌ ಖಾತೆಯ ದಾಖಲೆಗಳು